For Quick Alerts
  ALLOW NOTIFICATIONS  
  For Daily Alerts

  ನೇಪಾಳದಲ್ಲಿ 'ಕೆಜಿಎಫ್-2' ಕ್ರೇಜ್: ಯಶ್ ಹವಾ ನೋಡಿ ಅಭಿಮಾನಿಗಳು ಫಿದಾ

  |

  ಕೆಜಿಎಫ್ ಈ ಹೆಸರಲ್ಲೇ ಒಂದು ಪವರ್, ಕ್ರೇಜ್ ಮತ್ತು ಅಭಿಮಾನವಿದೆ. ಕೆಜಿಎಫ್ ಚಾಪ್ಟರ್ -2 ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ನಿರೀಕ್ಷೆ, ಕುತೂಹಲ ಹುಟ್ಟಿಸಿದೆ. ಗಡಿ, ಭಾಷೆಗೂ ಮೀರಿದ ಕ್ರೇಜ್ ನೋಡಿ ಕನ್ನಡ ಚಿತ್ರಾಭಿಮಾನಿಗಳು ಹೆಮ್ಮೆ ಪಡುತ್ತಿದ್ದಾರೆ. ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ನೇಪಾಳ.

  ನೇಪಾಳದಲ್ಲಿ ಹೆಚ್ಚಾಯ್ತು KGF 2 ಹವಾ | Yash | Filmibeat Kannada

  ನೇಪಾಳ ಪ್ರಜೆಗಳು ಸಹ ಯಶ್ ಅಭಿನಯದ ಕೆಜಿಎಫ್-2 ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂದರೆ ಕೆಜಿಎಫ್-2 ಎಂದು ಬರೆದಿರುವ ಲಾರಿ ಫೋಟೋ ವೈರಲ್ ಆಗಿರುವುದು. ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಕೆಜಿಎಫ್-2ಗಾಗಿ ಕಾತರಿಂದ ಕಾಯುತ್ತಿದ್ದಾರೆ ಎನ್ನುವುದನ್ನು ವೈರಲ್ ಆಗಿರುವ ಈ ಫೋಟೋ ಹೇಳುತ್ತಿದೆ.

  ಕೆಜಿಎಫ್ ಚಿತ್ರಕ್ಕಾಗಿ ಅಣ್ಣಾವ್ರನ್ನು ಅನುಸರಿಸಿದ ರಾಕಿಂಗ್ ಸ್ಟಾರ್ ಯಶ್?ಕೆಜಿಎಫ್ ಚಿತ್ರಕ್ಕಾಗಿ ಅಣ್ಣಾವ್ರನ್ನು ಅನುಸರಿಸಿದ ರಾಕಿಂಗ್ ಸ್ಟಾರ್ ಯಶ್?

  ನೇಪಾಳದ ಯಶ್ ಅಭಿಮಾನಿಯೊಬ್ಬರು ಲಾರಿ ಮೇಲೆ 'ಕೆಜಿಎಫ್-2 ಸದ್ಯದಲ್ಲೇ ಬರ್ತಿದೆ' ಎಂದು ಬರೆದುಕೊಂಡಿದ್ದಾರೆ. ಯಶ್ ಮೇಲಿನ ಅಭಿಮಾನಕ್ಕೆ ಹೀಗೆ ಬರೆಯಲಾಗಿದ್ದು, ಇದನ್ನು ನೋಡಿ ಯಶ್ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಕೆಜಿಫ್-2 ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿತರವಾಗಿದೆ. ಇತ್ತೀಚಿಗಷ್ಟೆ ನಿರ್ದೇಶಕ ಪ್ರಶಾಂತ್ ನೀಲ್, ಯಶ್ ಡಬ್ಬಿಂಗ್ ನಲ್ಲಿ ಭಾಗಿಯಾಗಿರುವ ಫೋಟೋವನ್ನು ಹಂಚಿಕೊಂಡಿದ್ದರು. ಮೊದಲ ಭಾಗಕ್ಕಿಂತ ಎರಡನೇ ಭಾಗದ ಮೇಲೆ ನಿರೀಕ್ಷೆ, ಕುತೂಹಲ ಹೆಚ್ಚಾಗಿದ್ದು, ಪಾರ್ಟ್-2ನಲ್ಲಿ ರವೀನಾ ಟಂಡನ್, ಸಂಜಯ್ ದತ್ ಮತ್ತು ಪ್ರಕಾಶ್ ರೈ ಕಾಣಿಸಿಕೊಂಡಿದ್ದಾರೆ.

  ಇತ್ತೀಚಿಗೆ ಯಶ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾದ ಪುಟ್ಟ ಟೀಸರ್ ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೋಟಿಗಟ್ಟಲೇ ವೀಕ್ಷಣೆ ಪಡೆದಿದೆ. ಸದ್ಯ ಅಭಿಮಾನಿಗಳು ಟ್ರೈಲರ್ ಮತ್ತು ಹಾಡುಗಳಿಗಾಗಿ ಕಾಯುತ್ತಿದ್ದಾರೆ. ಬಹುನಿರೀಕ್ಷೆಯ ಸಿನಿಮಾ ಜುಲೈ 16ರಂದು ಬಿಡುಗಡೆಯಾಗುತ್ತಿದೆ.

  English summary
  Yash starrer KGF-2 movie name on lorry in Nepal. KGF-2 set to release on July 16th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X