For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್-2' ಸಿನಿಮಾ ಟೀಸರ್ ರಿಲೀಸ್ ಗೆ ಡೇಟ್ ಫಿಕ್ಸ್

  |
  KGF 2 ಬಗ್ಗೆ ಬ್ರೇಕಿಂಗ್ ಸುದ್ದಿ ಕೊಟ್ಟ ಯಶ್.

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷೆಯ ಕೆಜಿಎಫ್-2 ಚಿತ್ರಕ್ಕೆ ಇಡೀ ದೇಶವೆ ಕಾತರದಿಂದ ಕಾಯುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ, ರಾಕಿ ಭಾಯ್ ಮತ್ತು ಅಧೀರನ ಕಾದಾಟ ನೋಡಲು ಚಿತ್ರಪ್ರೇಮಿಗಳು ಉಸಿರು ಬಿಡಿ ಹಿಡಿದು ಕಾಯುತ್ತಿದ್ದಾರೆ. ಕೆಜಿಎಫ್-2 ಚಿತ್ರದ ಬಗ್ಗೆ ಇದುವರೆಯೂ ಯಾವ ಅಪ್ ಡೇಟ್ ಕೂಡ ಸಿಕ್ಕಲಿಲ್ಲ.

  ಹಾಗಾಗಿ ಅಭಿಮಾನಿಗಳು ಚಿತ್ರತಂಡವನ್ನು ಪೀಡಿಸುತ್ತಿದ್ದಾರೆ. ಕೆಜಿಎಫ್-2 ಬಗ್ಗೆ ಅಪ್ ಡೇಟ್ ನೀಡುವಂತೆ ಅಭಿಮಾನಿಗಳು ನಿರ್ದೇಶಕರ ಮತ್ತು ನಿರ್ಮಾಪಕರ ಬೆನ್ನು ಬಿದ್ದಿದ್ದಾರೆ. ಅಭಿಮಾನಿಗಳ ಆಸೆ, ಬೇಡಿಕೆಯಂತೆ ಇದೆ ತಿಂಗಳು ಚಿತ್ರದ ಫಸ್ಟ್ ಲುಕ್ ರಿಲಿಸೀ ಆಗುತ್ತಿದೆ. ಇದರ ಬೆನ್ನಲ್ಲೆ ಚಿತ್ರತಂಡ ಚಿತ್ರದ ಟೀಸರ್ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದೆ. ಅಂದ್ಹಾಗೆ ಬಹುನಿರೀಕ್ಷೆಯ ಟೀಸರ್ ಮುಂದಿನ ವರ್ಷಾರಂಭದಲ್ಲಿ ಅಭಿಮಾನಿಗಳ ಮುಂದೆ ಬರುತ್ತಿದೆ.

  ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್-2 ಟೀಸರ್

  ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್-2 ಟೀಸರ್

  ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್-2 ಚಿತ್ರತಂಡದ ಕಡೆಯಿಂದ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ಸಿಗುತ್ತಿದೆ. ಅಂದ್ಹಾಗೆ ರಾಕಿ ಭಾಯ್ ಹುಟ್ಟುಹಬ್ಬ ಮುಂದಿನ ವರ್ಷಾರಂಭದಲ್ಲಿ ಅಂದರೆ ಜನವರಿ 8ಕ್ಕೆ. ಯಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಮುಂದೆ ಕೆಜಿಎಫ್-2 ಚಿತ್ರದ ಟೀಸರ್ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ.

  ಡಿಸೆಂಬರ್ 21ಕ್ಕೆ 'ಕೆಜಿಎಫ್' ಅಭಿಮಾನಿಗಳಿಗೆ 'ಬಿಗ್' ನ್ಯೂಸ್ಡಿಸೆಂಬರ್ 21ಕ್ಕೆ 'ಕೆಜಿಎಫ್' ಅಭಿಮಾನಿಗಳಿಗೆ 'ಬಿಗ್' ನ್ಯೂಸ್

  ಟೀಸರ್ ರಿಲೀಸ್ ಬಗ್ಗೆ ಯಶ್ ಹೇಳಿದ್ದನು?

  ಟೀಸರ್ ರಿಲೀಸ್ ಬಗ್ಗೆ ಯಶ್ ಹೇಳಿದ್ದನು?

  ಇತ್ತೀಚಿಗೆ ಯಶ್ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಅಭಿಮಾನಿಗಳು, ನಿರ್ದೇಶಕರು ಮತ್ತು ನಿರ್ಮಾಪಕರನ್ನು ಪೀಡಿಸುವಂತೆ ಯಶ್ ಅವರ ಬಳಿಯೂ ಕೆಜಿಎಫ್-2 ಚಿತ್ರದ ಬಗ್ಗೆ ಅಪ್ ಡೇಟ್ ನೀಡುವಂತೆ ಒತ್ತಾಯ ಮಾಡಿದ್ದಾರೆ. ಒಂದಿಷ್ಟು ಅಭಿಮಾನಿಗಳು ಚಿತ್ರದ ಟೀಸರ್ ಯಾವಾಗ ಬರುತ್ತೆ ಎಂದು ಕೇಳಿದ್ದಾರೆ. ಇದಕ್ಕೆ ಯಶ್ ಜನವರಿ 8ಕ್ಕೆ ಚಿತ್ರದ ಟೀಸರ್ ರಿಲೀಸ್ ಆಗಲಿದೆ ಎಂದು ಹೇಳಿ ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದಾರೆ.

  ಡಿಸೆಂಬರ್ 21ಕ್ಕೆ ಫಸ್ಟ್ ಲುಕ್

  ಡಿಸೆಂಬರ್ 21ಕ್ಕೆ ಫಸ್ಟ್ ಲುಕ್

  ಕೆಜಿಎಫ್ ಚಾಪ್ಟರ್ 2 ಚಿತ್ರದ ಫಸ್ಟ್ ಲುಕ್ ಅಥವಾ ಯಶ್ ಅವರ ಗೆಟಪ್ ಹೇಗಿರುತ್ತೆ ಎಂಬ ಪೋಸ್ಟರ್ ರಿಲೀಸ್ ಮಾಡಿ ಎಂದು ಅಭಿಮಾನಿಗಳು ಬೇಡಿಕೆಯಿಟ್ಟಿದ್ದರು. ಇದೀಗ, ಅಭಿಮಾನಿಗಳಿಗೆ ಖುಷಿ ಪಡಿಸಲು ಕೆಜಿಎಫ್ ಚಾಪ್ಟರ್ 2 ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗುತ್ತಿದೆ. ಡಿಸೆಂಬರ್ 21ಕ್ಕೆ ಅಂದರೆ ನಾಳೆಯೆ ಅಧಿಕೃತವಾಗಿ ಪಾರ್ಟ್ 2 ಫಸ್ಟ್ ಲುಕ್ ಬರ್ತಿದೆ.

  ಕೋಲಾರದಿಂದ ಹೈದರಾಬಾದ್ ಗೆ ಶಿಫ್ಟ್ ಆದ 'ಕೆಜಿಎಫ್-2' ಚಿತ್ರತಂಕೋಲಾರದಿಂದ ಹೈದರಾಬಾದ್ ಗೆ ಶಿಫ್ಟ್ ಆದ 'ಕೆಜಿಎಫ್-2' ಚಿತ್ರತಂ

  ಡಿಸೆಂಬರ್ 21 ಯಾಕೆ?

  ಡಿಸೆಂಬರ್ 21 ಯಾಕೆ?

  ಡಿಸೆಂಬರ್ 21ಕ್ಕೆ ಫಸ್ಟ್ ಲುಕ್ ಯಾಕೆ ಎಂದು ಗಮನಿಸಿದಾಗ, ಅದೇ ದಿನದಲ್ಲಿ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿತ್ತು. ಡಿಸೆಂಬರ್ 21, 2018 ರಂದು ಕೆಜಿಎಫ್ ಐದು ಭಾಷೆಯಲ್ಲಿ ಬಿಡುಗಡೆಯಾಗಿ, ಸಕ್ಸಸ್ ಕಂಡಿತ್ತು. ಈಗ ಅದೇ ಸೆಂಟಿಮೆಂಟ್ ಮೊರೆ ಹೋಗಿರುವ ಚಿತ್ರತಂಡ ಅದೇ ದಿನಕ್ಕೆ ಚಾಪ್ಟರ್ 2 ಅಪ್ಡೇಟ್ ನೀಡಲು ನಿರ್ಧರಿಸಿದ್ದಾರೆ .

  ಬಾಂಗ್ಲಾದೇಶ ಅಭಿಮಾನಿಯ ಈ ಕಾಮೆಂಟ್ ನೋಡಿದ್ರೆ ಯಶ್ ಖುಷ್ ಆಗೋದು ಪಕ್ಕಾ!ಬಾಂಗ್ಲಾದೇಶ ಅಭಿಮಾನಿಯ ಈ ಕಾಮೆಂಟ್ ನೋಡಿದ್ರೆ ಯಶ್ ಖುಷ್ ಆಗೋದು ಪಕ್ಕಾ!

  English summary
  Rocking star Yash starrer most expected KGF-2 movie teaser release date fix. KGF-2 teaser will release on January 8th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X