For Quick Alerts
  ALLOW NOTIFICATIONS  
  For Daily Alerts

  'KGF-2' ಟೀಸರ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ: ಚಿತ್ರತಂಡ ಹೇಳಿದ್ದೇನು?

  |

  ದೇಶದ ಗಮನ ಸೆಳೆದ ಕೆಜಿಎಫ್ ಸಿನಿಮಾದ ಪಾರ್ಟ್-2ಗಾಗಿ ಇಡೀ ಭಾರತೀಯ ಚಿತ್ರರಂಗ ಎದುರು ನೋಡುತ್ತಿದೆ. ಸದ್ಯ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿರುವ ಚಿತ್ರತಂಡ, ಚಿತ್ರದ ಟೀಸರ್ ಮತ್ತು ಟ್ರೈಲರ್ ಯಾವಾಗ ರಿಲೀಸ್ ಮಾಡಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  ರುದ್ರ್ ಜೊತೆಗೆ ಹೇಗೆ ಕಾಲ ಕಳೆಯುತ್ತಿದ್ದಾರೆ ಗೊತ್ತಾ ಗ್ಲಾಮ್ ಮಾ | Filmibeat Kannada

  ಟೀಸರ್ ಯಾವಾಗ, ಟ್ರೈಲರ್ ಯಾವಾಗ ಎಂದು ಯಶ್ ಫ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಕೆಜಿಎಫ್-2 ಸಿನಿಮಾ ಸದ್ಯ ಲಾಕ್ ಡೌನ್ ನ ಸಮಯದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡುತ್ತಿದೆ. ಈ ಸಮಯದಲ್ಲಾದ್ದರು ಚಿತ್ರದ ಟೀಸರ್ ರಿಲೀಸ್ ಮಾಡಿ ಎಂದು ಅಭಿಮಾನಿಗಳು ಚಿತ್ರತಂಡದ ಬೆನ್ನುಬಿದ್ದಿದ್ದಾರೆ. ಆದ್ರೀಗ ಅಭಿಮಾನಿಗಳಿಗೆ ನಿರಾಸೆಯ ಪ್ರತಿಕ್ರಿಯೆ ಚಿತ್ರತಂಡದ ಕಡೆಯಿಂದ ಸಿಕ್ಕಿದೆ. ಮುಂದೆ ಓದಿ..

  'KGF-2' ಟೀಸರ್ ಬಿಡುಗಡೆಗೆ ಅಭಿಮಾನಿಗಳ ಅಭಿಯಾನ: ಟ್ವಿಟ್ಟರ್ ನಲ್ಲಿ ಟ್ರೆಂಡ್'KGF-2' ಟೀಸರ್ ಬಿಡುಗಡೆಗೆ ಅಭಿಮಾನಿಗಳ ಅಭಿಯಾನ: ಟ್ವಿಟ್ಟರ್ ನಲ್ಲಿ ಟ್ರೆಂಡ್

  ಟೀಸರ್ ಗಾಗಿ ಅಭಿಮಾನಿಗಳ ಅಭಿಯಾನ

  ಟೀಸರ್ ಗಾಗಿ ಅಭಿಮಾನಿಗಳ ಅಭಿಯಾನ

  ಅಭಿಮಾನಿಗಳ ನಿರೀಕ್ಷೆ ಪ್ರಕಾರ ಯಶ್ ಹುಟ್ಟುಹಬ್ಬಕ್ಕೆ ಚಿತ್ರದ ಟೀಸರ್ ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಟೀಸರ್ ಬಿಡುಗಡೆಯಾಗಿರಲ್ಲಿ. ಆದರೆ ಹುಟ್ಟುಹಬ್ಬ ಆಗಿ ನಾಲ್ಕು ತಿಂಗಳು ಕಳೆದರು ಟೀಸರ್ ಪತ್ತೆಕ್ಕಿಲ್ಲ. ಕಾದು ಕಾದು ಸುಸ್ತಾದ ಅಭಿಮಾನಿಗಳು ಟೀಸರ್ ರಿಲೀಸ್ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಮಾಡುತ್ತಿದ್ದಾರೆ. WeWantKGFChapter2TeaserUpdate ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡುತ್ತಿದ್ದಾರೆ.

  ಅಭಿಮಾನಿಗಳ ಮನವಿ

  ಅಭಿಮಾನಿಗಳ ಮನವಿ

  "ಪ್ರೀತಿಯ ಹೊಂಬಾಳೆ ಫಿಲ್ಮ್, ಕಾರ್ತಿಕ್ ಗೌಡ ಮತ್ತು ಪ್ರಶಾಂತ್ ನೀಲ್ ಅವರೆ, ನಾವು ಯಶ್ ಅವರ ಅಪ್ಪಟ ಅಭಿಮಾನಿಗಳಾಗಿದ್ದು, ಕೆಜಿಎಫ್-2 ಚಿತ್ರದ ಟೀಸರ್ ಗಾಗಿ ಬಹಳ ತಿಂಗಳಿಂದ ಕಾಯುತ್ತಿದ್ದೇವೆ. ದಯವಿಟ್ಟು ಟೀಸರ್ ದಿನಾಂಕ ಘೋಷಿಸಿ ಅಭಿಮಾನಿಗಳ ಆಸೆ ಈಡೇರಿಸಿ" ಎಂದು ಚಿತ್ರತಂಡಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

  ಟೀಸರ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ

  ಟೀಸರ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ

  ಟೀಸರ್ ರಿಲೀಸ್ ಮಾಡಿ ಬೇಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಹೊಂಬಾಳೆ ಸಂಸ್ಥೆಯ ಕಾರ್ತಿಕ್ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಾರ್ತಿಕ್ "ಕೆಜಿಎಫ್-2 ಟೀಸರ್ ಸಧ್ಯದಲ್ಲೇ ರಿಲೀಸ್ ಆಗುವುದಿಲ್ಲ. ಸಿನಿಮಾ ರಿಲೀಸ್ ಸಮಯದಲ್ಲಿ ಟೀಸರ್ ಮತ್ತು ಟ್ರೈಲರ್ ಎರಡು ಬರಲಿದೆ. ಮನೆಯಲ್ಲಿಯೇ ಇರಿ ಮತ್ತು ಸುರಕ್ಷಿತವಾಗಿ ಮುಂದೆ ಸಾಗೋಣ" ಎಂದು ಹೇಳಿದ್ದಾರೆ.

  ಅಭಿಮಾನಿಗಳ ಪ್ರಶ್ನೆಗೆ ಪ್ರಶಾಂತ್ ನೀಲ್ ಉತ್ತರ: ಪ್ರಭಾಸ್, ದಳಪತಿ, ಸುದೀಪ್ ಬಗ್ಗೆ ಹೇಳಿದ್ದೇನು?ಅಭಿಮಾನಿಗಳ ಪ್ರಶ್ನೆಗೆ ಪ್ರಶಾಂತ್ ನೀಲ್ ಉತ್ತರ: ಪ್ರಭಾಸ್, ದಳಪತಿ, ಸುದೀಪ್ ಬಗ್ಗೆ ಹೇಳಿದ್ದೇನು?

  ಅಕ್ಟೋಬರ್ ನಲ್ಲಿ ಸಿನಿಮಾ ರಿಲೀಸ್

  ಅಕ್ಟೋಬರ್ ನಲ್ಲಿ ಸಿನಿಮಾ ರಿಲೀಸ್

  'ಕೆಜಿಎಫ್ ಚಾಪ್ಟರ್ 2' ಚಿತ್ರ 2020ರ ಅಕ್ಟೋಬರ್ 23ರಂದು ವಿಶ್ವವ್ಯಾಪಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಬಹು ನಿರೀಕ್ಷಿತ ಕೆಜಿಎಫ್ ಚಿತ್ರದ ಬಿಡುಗಡೆಯ ದಿನಾಂಕ ಪಕ್ಕಾ ಆಗಿದ್ದು, ದಸರಾ ಹಬ್ಬದ ಸಂದರ್ಭದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಅಭಿಮಾನಿಗಳು ಆ ದಿನಕ್ಕಾಗಿ ಕಾರತರದಿಂದ ಕಾಯುತ್ತಿದ್ದಾರೆ.

  English summary
  Kannada Actor Yash starrer KGF-2 film teaser won't be anytime soon Karthik Gowda said.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X