KGF 2 Trailer Launch Event : ಕೆಜಿಎಫ್ 2 ಟ್ರೈಲರ್ ರಿಲೀಸ್ ಕಾರ್ಯಕ್ರಮ ಹೇಗಿರಲಿದೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿರುವ 'ಕೆಜಿಎಫ್ 2' ಸಿನಿಮಾ ಏಪ್ರಿಲ್ 14ರಂದು ವರ್ಲ್ಡ್ ವೈಡ್ ರಿಲೀಸ್ ಆಗುತ್ತಿದೆ. ಚಿತ್ರ ರಿಲೀಸ್‌ಗೂ ಮೊದಲೇ ಚಿತ್ರದ ದೊಡ್ಡ ಮಟ್ಟದಲ್ಲಿ ಪ್ರಮೋಷನ್ ಮಾಡಲು ನಿರ್ಧರಿಸಿದ್ದಾರೆ.

ಇದೇ ಕಾರಣಕ್ಕೆ ಇತ್ತೀಚೆಗೆ ಚಿತ್ರದ ಮೊದಲ ಲಿರಿಕಲ್ ಹಾಡು ತೂಫಾನ್ ರಿಲೀಸ್ ಮಾಡಲಾಗಿದೆ. ಈ ಹಾಡು ಮಾಡಿದ ದಾಖಲೆ ಅಷ್ಟಿಷ್ಟಲ್ಲ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್‌ನಲ್ಲಿ ನಂ 1 ಆಗಿತ್ತು.

ಚಿತ್ರತಂಡ ಈಗಾಗಲೇ ಅನೌನ್ಸ್ ಮಾಡಿದಂತೆ ಮಾರ್ಚ್ 27ಕ್ಕೆ 'ಕೆಜಿಎಫ್ 2' ಸಿನಿಮಾದ ಟ್ರೈಲರ್ ರಿಲೀಸ್ ಮಾಡುತ್ತಿದೆ. ಈ ಟ್ರೈಲರ್ ರಿಲೀಸ್ ಮಾಡಲು ಚಿತ್ರತಂಡ ದೊಡ್ಡ ಪ್ಲಾನ್ ಮಾಡಿಕೊಂಡಿದ್ದೆ. ಹಾಗಿದ್ರೆ ಟ್ರೈಲರ್ ರಿಲೀಸ್ ಕಾರ್ಯಕ್ರಮ ಹೇಗಿರುತ್ತೆ? ಅನ್ನೋ ಮಾಹಿತಿಗಾಗಿ ಮುಂದೆ ಓದಿ.

ಏನೆಲ್ಲಾ ವಿಶೇಷತೆ ಇರುತ್ತೆ ಗೊತ್ತಾ?

ಏನೆಲ್ಲಾ ವಿಶೇಷತೆ ಇರುತ್ತೆ ಗೊತ್ತಾ?

'ಕೆಜಿಎಫ್ 2' ಸಿನಿಮಾದ ಪ್ರತಿ ಅಪ್‌ಡೇಟ್‌ಗೂ ಅಭಿಮಾನಿಗಳು ಕಾದು ಕುಳಿತ್ತಿದ್ದಾರೆ. 'ಕೆಜಿಎಫ್ 2' ಆರಂಭ ಆದಾಗಿನಿಂದಲೂ ಯಶ್ ಅಭಿಮಾನಿಗಳು ಸೇರಿದಂತೆ ಇಡೀ ಚಿತ್ರರಂಗವೇ 'ಕೆಜಿಎಫ್ 2' ಹೇಗಿರಬಹುದು? ಏನೆಲ್ಲಾ ಟ್ವಿಸ್ಟ್‌ಗಳು ಎದುರಾಗಬಹುದು ಎಂಬ ಬಗ್ಗೆ ತಲೆಕೆಡಿಸಿಕೊಂಡಿದೆ. ಚಿತ್ರ ರಿಲೀಸ್ ಅನೌನ್ಸ್ ಆಗಿದ್ರು ಕೂಡ ಕೆಲ ದಿನ ಪ್ರಮೋಷನ್ ಬಗ್ಗೆ ಚಿತ್ರತಂಡ ಯಾವುದೇ ಅಪ್‌ಡೇಟ್‌ ಅನ್ನು ಜನರಿಗೆ ನೀಡಿರಲಿಲ್ಲಾ. ಈ ಹಿಂದೆ ರಿಲೀಸ್ ಆಗಿದ್ದ 'ಕೆಜಿಎಫ್ 2' ಟೀಸರ್ ಬಿಟ್ಟರೇ ಕಳೆದ ವಾರವಷ್ಟೇ 'ತೂಫಾನ್' ಹಾಡು ರಿಲೀಸ್ ಆಗಿತ್ತು. ಈ ಹಾಡನ್ನು ನೋಡಿದ ಸಂಭ್ರಮದಲ್ಲಿದ್ದ ಫ್ಯಾನ್ಸ್‌ಗೆ ಮತ್ತೊಂದು ಸಪ್ರೈಸ್ ನೀಡಲು ಚಿತ್ರತಂಡ ಮುಂದಾಗಿದೆ. ಅದುವೇ 'ಕೆಜಿಎಫ್ 2' ಟ್ರೇಲರ್.

ಹೇಗಿರಲಿದೆ ಕಾರ್ಯಕ್ರಮದ ರೂಪುರೇಷೆ

ಹೇಗಿರಲಿದೆ ಕಾರ್ಯಕ್ರಮದ ರೂಪುರೇಷೆ

'ಕೆಜಿಎಫ್ 2'ಟ್ರೈಲರ್‌ ಮಾರ್ಚ್ 27 ಕ್ಕೆ ರಿಲೀಸ್ ಮಾಡೋದಾಗಿ ಚಿತ್ರತಂಡ ಅನೌನ್ಸ್ ಮಾಡಿಕೊಂಡಿದೆ. ಟ್ರೈಲರ್ ರಿಲೀಸ್‌ಗೆ ಇದೀಗ ಇಡೀ ಚಿತ್ರತಂಡವೇ ಸಿದ್ಧತೆಯನ್ನು ಮಾಡಿಕೊಂಡಿದೆ. 'ಕೆಜಿಎಫ್ 2' ಟ್ರೇಲರ್‌ ನಗರದ ಸ್ಟಾರ್ ಹೋಟೆಲ್‌ನಲ್ಲಿ ಬಹಳ ಅದ್ಧೂರಿಯಾಗಿ ನೆರವೇರಲಿದ್ದು, ಸುದ್ದಿ ಗೋಷ್ಠಿಯನ್ನು ಮಾಡಿ ಟ್ರೈಲರ್ ಲಾಂಚ್ ಮಾಡಲಿದೆ ಚಿತ್ರತಂಡ. ಇನ್ನು 'ಕೆಜಿಎಫ್ 2' ಟ್ರೈಲರ್‌ ಲಾಂಚ್ ಕಾರ್ಯಕ್ರಮದಲ್ಲಿ ಬೇರೆ ಬೇರೆ ಭಾಷೆಯ 200ಕ್ಕೂ ಹೆಚ್ಚು ಪತ್ರಕರ್ತರು ಭಾಗಿ ಆಗಲಿದ್ದು, ಚಿತ್ರತಂಡ ಹಾಗೂ ಮಾಧ್ಯಮದವರ ಸಂವಾದ ಕೂಡ ನಡೆಯಲಿದೆ.

ರಾಜಕಾರಣಿಗಳು ಯಾರು ಬರ್ತಾರೆ

ರಾಜಕಾರಣಿಗಳು ಯಾರು ಬರ್ತಾರೆ

ಮಾರ್ಚ್ 27 ಸಂಜೆ 6.45ಕ್ಕೆ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದ್ದು, ಅಂದು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಮತ್ತು ಶಿವರಾಜ್‌ಕುಮಾರ್ ಭಾಗವಹಿಸುತ್ತಿದ್ದು, ಸಿನಿಮಾದ ಕಲಾವಿದರಾದ ಬಾಲಿವುಡ್ ನಟ ಸಂಜಯ್ ದತ್, ಮಲಯಾಳಂ ಹೆಸರಾಂತ ನಟ ಪೃಥ್ವಿರಾಜ್, ಬಾಲಿವುಡ್ ನಟಿ ರವೀನಾ ಟಂಡನ್, ನಟ ಯಶ್, ನಟಿ ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ಮಾಪಕ ವಿಜಯ ಕಿರಗಂದೂರು ಕೂಡ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ.

'ಕೆಜಿಎಫ್ 2' ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದೇನು?

'ಕೆಜಿಎಫ್ 2' ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದೇನು?

ಇನ್ನು 'ಕೆಜಿಎಫ್ 2' ಸಿನಿಮಾ ಏಪ್ರೀಲ್ 14ರಂದು ರಿಲೀಸ್‌ಗೆ ಸಜ್ಜಾಗಿದ್ದು ವಿಶ್ವದಾದ್ಯಂತ 7000 ಥಿಯೇಟರ್‌ನಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಬಗ್ಗೆ ಖಾಸಗಿ ಮಾಧ್ಯಮಕ್ಕೆ ಹೇಳಿಕೆ ನೀಡಿರುವ 'ಕೆಜಿಎಫ್ 2' ನಿರ್ಮಾಪಕ ವಿಜಯ್ ಕಿರಗಂದೂರು "ಕನ್ನಡ, ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಬಿಡುಗಡೆ ಆಗುತ್ತಿದ್ದು, ವಿಶ್ವದಾದ್ಯಂತ ಏಳು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಪ್ಲ್ಯಾನ್ ಮಾಡಲಾಗಿದೆ. ಕರ್ನಾಟಕದಲ್ಲೇ 450ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದರೆ, ತಮಿಳಿನಲ್ಲಿ ಸಾವಿರಕ್ಕೂ ಹೆಚ್ಚು ಸ್ಕ್ರೀನ್ಸ್‌ನಲ್ಲಿ 'ಕೆಜಿಎಫ್ 2' ಪ್ರದರ್ಶನ ಕಾಣಲಿದೆ. ಹಾಗೆಯೇ ವಿವಿಧ ಭಾಷೆಗಳಲ್ಲಿ ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಈ ಸಿನಿಮಾ ರಿಲೀಸ್ ಮಾಡಲು ತೀರ್ಮಾನಿಸಿದ್ದೇವೆ." ಎಂದಿದ್ದಾರೆ.

More from Filmibeat

English summary
Kgf 2 release trailer launch at March 27th. here is special guest list for trailer launch event.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X