ಜಪಾನ್‌ಗೆ ಹೊರಟ ರಾಕಿಭಾಯ್: ಜಪಾನಿ ಭಾಷೆ ಮಾತಾಡಿ ರೀನಾ ಏನಂದ್ರು ನೋಡಿ
ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಸಿನಿಮಾ 'KGF'. ಎರಡು ಭಾಗಗಳಾಗಿ ತೆರೆಗಪ್ಪಳಿಸಿದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕೋಟಿ ಕೋಟಿ ಕೊಳ್ಳೆ ಹೊಡೆದು ದಾಖಲೆ ಬರೀತು. ಕನ್ನಡ ಸಿನಿಮಾಗಳು 100 ಕೋಟಿ ಗಳಿಸೋದೇ ಕಷ್ಟ ಎನ್ನುವ ಸಮಯದಲ್ಲಿ 1000 ಕೋಟಿ ರೂ. ಗಡಿ ದಾಟಿ ಇತಿಹಾಸ ನಿರ್ಮಿಸಿತ್ತು.
ಹೊಂಬಾಳೆ ಸಂಸ್ಥೆ ಈಗಾಗಲೇ 'KGF'- 3 ಮಾಡೋದಾಗಿಯೂ ಹೇಳಿದೆ. ಪ್ರಶಾಂತ್ ನೀಲ್ ಟೇಕಿಂಗ್, ಯಶ್, ಪರ್ಫಾರ್ಮೆನ್ಸ್, ರವಿ ಬಸ್ರೂರು ಮ್ಯೂಸಿಕ್ ಎಲ್ಲಾ ಸೇರಿ ಈ ಸಿನಿಮಾ ಅಬ್ಬರಿಸಿತ್ತು. ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಲ್ಲಿ ಸಿನಿಮಾ ದೊಡ್ಡಮಟ್ಟಕ್ಕೆ ಸಕ್ಸಸ್ ಕಂಡಿತ್ತು. ತೆಲುಗು, ಹಿಂದಿಯಲ್ಲೇ ಕೊಂಚ ಜಾಸ್ತಿ ರೆಸ್ಪಾನ್ಸ್ ಸಿಕ್ಕಿತ್ತು. ಈ ಸಿನಿಮಾ ಬಳಿಕ ಪರಭಾಷಿಕರು ಕನ್ನಡ ಸಿನಿಮಾಗಳನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿದೆ.

'KGF' ತಂಡದಲ್ಲಿ ಕೆಲಸ ಮಾಡಿದ ಎಲ್ಲಾ ತಂತ್ರಜ್ಞರು, ಕಲಾವಿದರಿಗೆ ಭಾರೀ ಹೆಸರು ತಂದುಕೊಟ್ಟಿತ್ತು. ಈ ಸಕ್ಸಸ್ ಹೊಂಬಾಳೆ ಸಂಸ್ಥೆ 3000 ಕೋಟಿ ರೂ. ಬಂಡವಾಳವನ್ನು ಮನರಂಜನೆ ಕ್ಷೇತ್ರದ ಮೇಲೆ ತೊಡಗಿಸುವಂತೆ ಮಾಡಿದೆ. ಮೊದಲ ಚಿತ್ರದಲ್ಲೇ ಸೋಲಿನ ಕಹಿ ಉಂಡ ಸಂಸ್ಥೆ KGF ಚಿತ್ರದಿಂದ ಭಾರತೀಯ ಚಿತ್ರರಂಗದ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಯ ಸಾಲಿಗೆ ಸೇರಿಕೊಂಡಿದೆ.
'KGF' ಸರಣಿ ಜಪಾನ್ ಭಾಷೆಗೆ ಡಬ್
ದೇಶ ವಿದೇಶಗಳಲ್ಲಿ ಭರ್ಜರಿ ಪ್ರದರ್ಶನ ಕಂಡ 'KGF' ಸಿನಿಮಾ ಇದೀಗ ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದೆ. ಕನ್ನಡ ಸಿನಿಮಾಗಳು ಜಪಾನ್ ಹಾಗೂ ಚೀನಾದಂತಹ ದೇಶಗಳಲ್ಲಿ ರಿಲೀಸ್ ಆಗಿದ್ದು ಬಹಳ ಕಮ್ಮಿ. ಆದರೆ 'KGF' ಸರಣಿಯ ಎರಡೂ ಸಿನಿಮಾಗಳನ್ನು ಇದೀಗ ಜಪಾನ್ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಶುರುವಾಗಿದೆ. ದೊಡ್ಡಮಟ್ಟದಲ್ಲಿ ಪ್ರಚಾರ ಮಾಡಿ ಚಿತ್ರವನ್ನು ತೆರೆಗೆ ತರುವ ಆಲೋಚನೆಯಲ್ಲಿದೆ ಹೊಂಬಾಳೆ ಸಂಸ್ಥೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಶೀಘ್ರದಲ್ಲೇ ಸಿಗಲಿದೆ.

'RRR' ಹಾದಿಯಲ್ಲಿ 'KGF'
ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಜಪಾನ್ ಭಾಷೆಗೆ ಡಬ್ ಆಗಿ ಸೂಪರ್ ಹಿಟ್ ಆಗಿದೆ. ಜಪಾನ್ ದೇಶದಲ್ಲಿ ಶತದಿನೋತ್ಸವ ಆಚರಿಸಿಕೊಂಡಿತ್ತು. ಈ ಹಿಂದೆ ರಜನಿಕಾಂತ್ ನಟನೆಯ 'ಮುತ್ತು' ಸಿನಿಮಾ ಜಪಾನ್ ಬಾಕ್ಸಾಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಕಂಡಿತ್ತು. ಆ ದಾಖಲೆಯನ್ನು ರಾಮ್- ಭೀಮ್ ಮುರಿದಿದ್ದರು. 10 ಲಕ್ಕಕ್ಕೂ ಹೆಚ್ಚು ಟಿಕೆಟ್ ಮಾರಾಟವಾಗಿ ದಾಖಲೆಯಾಗಿತ್ತು. ನವೆಂಬರ್ 21ಕ್ಕೆ ರಿಲೀಸ್ ಆಗಿದ್ದ ಸಿನಿಮಾ 200 ದಿನಗಳ ಕಾಲ ಪ್ರದರ್ಶನ ಕಂಡಿತ್ತು.
ಶ್ರೀನಿಧಿ ಶೆಟ್ಟಿ ಮಾತು
'KGF' ಸರಣಿ ಸಿನಿಮಾಗಳು ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗುತ್ತಿರುವ ಕುರಿತು ನಾಯಕಿ ಶ್ರೀನಿಧಿ ಶೆಟ್ಟಿ ಮಾತನಾಡಿದ್ದಾರೆ. ಎಲ್ಲರಿಗೂ ನಮಸ್ಕಾರ ಎಂದು ಜಪಾನೀಸ್ ಭಾಷೆಯಲ್ಲಿ ಮಾತು ಆರಂಭಿಸಿರುವ ಶ್ರೀನಿಧಿ, ನಂತರ ಇಂಗ್ಲೀಷ್‌ನಲ್ಲಿ ಮಾತು ಮುಂದುವರೆಸಿದ್ದಾರೆ. "ಹಾಯ್ ಜಪಾನ್. ನಾನು ಶ್ರೀನಿಧಿ ಶೆಟ್ಟಿ. ನಮ್ಮ 'KGF' ಚಾಪ್ಟರ್ -1 ಹಾಗೂ 'KGF' ಚಾಪ್ಟರ್ -2 ಎರಡೂ ಜಪಾನ್‌ನಲ್ಲಿ ರಿಲೀಸ್ ಆಗುತ್ತಿದೆ. ನಿಮಗೆಲ್ಲಾ ಇಷ್ಟವಾಗುತ್ತದೆ ಎಂದುಕೊಂಡಿದ್ದೇನೆ. ಆದಷ್ಟು ಬೇಗ ಥಿಯೇಟರ್‌ಗಳಲ್ಲಿ ಸಿಗೋಣ" ಎಂದಿದ್ದಾರೆ.
ಜಪಾನ್ ದೇಶಕ್ಕೆ ಯಶ್?
ರಾಜಮೌಳಿ, ಜ್ಯೂ. ಎನ್‌ಟಿಆರ್ ಹಾಗೂ ರಾಮ್‌ಚರಣ್ ಜಪಾನ್ ದೇಶಕ್ಕೆ ಹೋಗಿ ಅಲ್ಲಿ 'RRR' ಸಿನಿಮಾ ಪ್ರಚಾರ ಮಾಡಿದ್ದರು. ಇದೀಗ 'KGF' ಕೂಡ ಪ್ರಚಾರಕ್ಕಾಗಿ ಅಲ್ಲಿಗೆ ಹೋಗುವ ಸಾಧ್ಯತೆಯಿದೆ. ದೇಶದ ಮೂಲೆ ಮೂಲೆ ಸುತ್ತಿ 'KGF' ಸರಣಿ ಸಿನಿಮಾಗಳ ಪ್ರಚಾರ ಮಾಡಿದ್ದ ರಾಕಿಂಗ್ ಸ್ಟಾರ್ ಜಪಾನ್ ಫ್ಲೈಟ್ ಏರುತ್ತಾರಾ? ಕಾದು ನೋಡಬೇಕಿದೆ.


Click it and Unblock the Notifications











