ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಸಂತಸದ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-1 ಚಿತ್ರದಿಂದ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಗುತ್ತಿದೆ. ಇಂದು ಸಂಜೆ ಚಾಪ್ಟರ್ -1 ಚಿತ್ರದ ಒರಿಜಿನಲ್ ಸೌಂಡ್ ಟ್ರ್ಯಾಕ್ ವಾಲ್ಯೂಮ್-2 ರಿಲೀಸ್ ಆಗುತ್ತಿದೆ. ಸಂಜೆ 6.30ಕ್ಕೆ ಯೂಟ್ಯೂಬ್ ನಲ್ಲಿ ಚಾಪ್ಟರ್-1 ಚಿತ್ರದ ಸೌಂಡ್ ಟ್ರ್ಯಾಕ್ ಬಿಡುಗಡೆಯಾಗುತ್ತಿದೆ.

ಒಂದು ತಿಂಗಳ ಹಿಂದೆಯಷ್ಟೆ ಕೆಜಿಎಫ್-1 ಚಿತ್ರದ ವಾಲ್ಯೂಮ್-1 ರಿಲೀಸ್ ಆಗಿತ್ತು. ಕೆಜಿಎಫ್ ಚಿತ್ರ ಸೂಪರ್ ಹಿಟ್ ಆಗಲು ಸಂಗೀತ ಕೂಡ ಪ್ರಮುಖ ಕಾರಣವಾಗಿದೆ. ಚಿತ್ರಕ್ಕೆ ಸಂಗೀತ ನಿರ್ದೇಶಕ ರವಿ ಬಸ್ರೂರು ಹಿನ್ನಲೆ ಸಂಗೀತ ನೀಡಿದ್ದಾರೆ. ಕೆಜಿಎಫ್ ಚಿತ್ರದ ಹಾಡುಗಳು ಎಲ್ಲರ ಮೆಚ್ಚುಗೆ ಪಡೆದಿದೆ.

Yash Starrer KGF Chapter-1 Original Soundtrack Volume-2 Will Release Today

ಅಂದ್ಹಾಗೆ ಕೆಜಿಎಫ್-2 ಚಿತ್ರದ ಚಿತ್ರೀಕರಣ ಈಗ ಭರ್ಜರಿಯಾಗಿ ನಡೆಯುತ್ತಿದೆ. ಈಗಾಗಲೆ ಬಾಲಿವುಡ್ ಮುನ್ನಾಭಾಯ್, ಸಂಜಯ್ ದತ್ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ನಡೆಯುತ್ತಿತ್ತು. ಆದ್ರೀಗ ಹೈದರಾಬಾದ್ ನ ಚಿತ್ರೀಕರಣ ಮಾಡಿ ಮುಗಿಸಿ ಮುಂದಿನ ಹಂತದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ ಚಿತ್ರತಂಡ.

ಪಾರ್ಟ್-1 ಗಿಂತ ಎರಡನೇ ಭಾಗ ಮತ್ತಷ್ಟು ರೋಚಕವಾಗಿರಲಿದೆಯಂತೆ. ಸಂಜಯ್ ದತ್, ರವಿನಾ ಟಂಡನ್ ಪಾರ್ಟ್-2ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್ ಕೊನೆಯಲ್ಲಿ ಚಿತ್ರೀಕರಣ ಮುಗಿಸುವ ಪ್ಲಾನ್ ಮಾಡಿರುವ ಚಿತ್ರತಂಡ, ಮುಂದಿನ ವರ್ಷ ಬೆಸಿಗೆ ರಜೆಯ ಸಮಯದಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದೆ.

More from Filmibeat

English summary
Kannada actor Yash starrer KGF chapter-1 Original Soundtrack Volume-2 will release today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X