For Quick Alerts
  ALLOW NOTIFICATIONS  
  For Daily Alerts

  ಯಶ್ ಅಭಿಮಾನಿಗಳಿಗೆ ಸಂತಸದ ಸುದ್ದಿ: ದಸರಾ ಹಬ್ಬಕ್ಕೆ KGF-1 ರೀ-ರಿಲೀಸ್

  |

  ಈಗಾಗಲೇ ಬಿಡುಗೆಯಾಗಿರುವ ಸಿನಿಮಾಗಳಿಗೆ ಈಗ ಮತ್ತೊಂದು ಅವಕಾಶ ಒದಗಿಬಂದಿದೆ. ಲಾಕ್ ಡೌನ್ ಬಳಿಕ ಚಿತ್ರಮಂದಿರಗಳು ರೀ ಓಪನ್ ಆಗಿದ್ದು ಸುಮಾರು 7 ತಿಂಗಳ ಬಳಿಕ, ಸರ್ಕಾರದ ಮಾರ್ಗಸೂಚಿಯಂತೆ ಸಿನಿಮಾ ಪ್ರದರ್ಶನವಾಗುತ್ತಿದೆ. ಆದರೆ ಹೊಸ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಹಾಗಾಗಿ ಈಗಾಗಲೇ ರಿಲೀಸ್ ಆಗಿರುವ ಸಿನಿಮಾಗಳನ್ನು ರೀ ರಿಲೀಸ್ ಮಾಡಿ ಪ್ರೇಕ್ಷಕರನ್ನು ಸಿನಿಮಾಮಂದಿರಗಳತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದೆ.

  ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳು ರೀ ರಿಲೀಸ್ ಆಗಲು ಸಿದ್ಧವಾಗಿದೆ. ಲಾಕ್ ಡೌನ್ ಗೂ ಮೊದಲು ರಿಲೀಸ್ ಆದ ಸಿನಿಮಾಗಳಿಗೆ ರೀ ರಿಲೀಸ್ ಮಾಡಲು ಮೊದಲು ಅವಕಾಶ ನೀಡಲಾಗಿದೆ. ಈಗಾಗಲೇ ದಿಯಾ, ಲವ್ ಮಾಕ್ಟೇಲ್, ಶಿವಾರ್ಜುನ ಸಿನಿಮಾಗಳು ಸೇರಿದಂತೆ ಸಾಕಷ್ಟು ಸಿನಿಮಾಗಳು ಮತ್ತೆ ಬೆಳ್ಳಿ ಪರದೆ ಮೇಲೆ ರಾರಾಜಿಸುತ್ತಿವೆ.

  'ಕೆಜಿಎಫ್-2 ಟೀಸರ್ ಬೇಕು'...: ಟ್ವಿಟ್ಟರ್‌ನಲ್ಲಿ #WeNeedKGF2Teaser ಅಭಿಯಾನ

  ವಿಶೇಷ ಅಂದರೆ ಸ್ಯಾಂಡಲ್ ವುಡ್ ನ ಬ್ಲಾಕ್ ಬಸ್ಟರ್ ಕೆಜಿಎಫ್-1 ಸಿನಿಮಾ ಕೂಡ ರೀ ರಿಲೀಸ್ ಆಗುತ್ತಿದೆ. ಅಕ್ಟೋಬರ್ 23ರಿಂದ 29ರ ವರೆಗೆ ಕೆಜಿಎಫ್-1 ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗಲಿದೆ. ಐನಾಕ್ಸ್, ಪಿವಿಆರ್, ಸಿನಿಪೊಲಿಸ್ ಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಸಿನಿಮಾ ಕೆಜಿಎಫ್-1 ಸಿನಿಮಾ ರೀ ರಿಲೀಸ್ ಆಗಿದೆ.

  ಕೆಜಿಎಫ್-1 ಸಿನಿಮಾ 2018 ಡಿಸೆಂಬರ್ 21ರಂದು ದೇಶ ಮತ್ತು ವಿದೇಶಗಳಲ್ಲಿ ತೆರೆಗೆ ಬಂದಿತ್ತು. ಭಾರತೀಯ ಸಿನಿಮಾರಂಗದಲ್ಲಿ ಕೆಜಿಎಫ್-1 ಸಂಚಲನ ಮೂಡಿಸಿತ್ತು. ಕನ್ನಡದ ಸಿನಿಮಾವೊಂದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಮೊದಲ ಭಾಗದ ಸಕ್ಸಸ್ ಬಳಿಕ ಇದೀಗ ಕೆಜಿಎಫ್-2 ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಇದೀಗ ಕೊನೆಯ ಹಂತದ ಚಿತ್ರೀಕರಣದಲ್ಲಿ ನಿರತವಾಗಿದೆ. ಮೊದಲ ಭಾಗಕ್ಕಿಂತ ಪಾರ್ಟಿ-2 ಮತ್ತಷ್ಟು ಭಯಾನಕವಾಗಿರಲಿದೆ ಎನ್ನಲಾಗುತ್ತಿದೆ. ಭಾರತೀಯ ಸಿನಿಮಾ ಪ್ರೇಕ್ಷಕರು ಉಸಿರು ಬಿಡಿ ಹಿಡಿದು ಕಾಯುತ್ತಿರುವ ಕೆಜಿಎಫ್-2 ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ.

  English summary
  Rocking star Yash-starrer KGF Chapter 1 to be re-released on October 23rd and 29th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X