twitter
    For Quick Alerts
    ALLOW NOTIFICATIONS  
    For Daily Alerts

    ತಮಿಳುನಾಡಿನಲ್ಲಿ ದಾಖಲೆ ಗಳಿಕೆ ಕಂಡ ಮೊದಲ ಕನ್ನಡ ಸಿನಿಮಾ 'ಕೆಜಿಎಫ್ 2': ಕಲೆಕ್ಷನ್ ಎಷ್ಟು ಗೊತ್ತಾ?

    |

    ಎಲ್ಲೇ ಹೋಗಿ ಬಾಕ್ಸಾಫೀಸ್‌ನಲ್ಲಿ 'ಕೆಜಿಎಫ್ 2' ದೊಡ್ಡ ಬಿರುಗಾಳಿಯನ್ನೇ ಎಬ್ಬಿಸುತ್ತಿದೆ. ರಿಲೀಸ್ ಆದ ಎಲ್ಲಾ ಭಾಷೆಯಲ್ಲೂ ಪ್ರೇಕ್ಷಕರು ಸೂಪರ್‌ ರೆಸ್ಪಾನ್ಸ್ ಕೊಟ್ಟಿದ್ದಾರೆ. ಹಿಂದಿ ಬೆಲ್ಟ್ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ 'ಕೆಜಿಎಫ್ 2' ಸಿನಿಮಾ ದೊಡ್ಡ ದೊಡ್ಡ ದಾಖಲೆಗಳನ್ನೇ ಮಾಡಿದೆ. ಬಾಕ್ಸಾಫೀಸ್‌ನಲ್ಲಿ ಊಹಿಸಲು ಅಸಾಧ್ಯವೇನಿಸುವಷ್ಟು ಹಣವನ್ನು ಲೂಟಿ ಮಾಡಿದೆ.

    'ಕೆಜಿಎಫ್ 2' ಈಗ ಕೇವಲ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಉಳಿದಿಲ್ಲ. ವಿಶ್ವದೆಲ್ಲೆಡೆ ಪ್ಯಾನ್ ಇಂಡಿಯಾ ಸಿನಿಮಾ ಸದ್ದು ಮಾಡುತ್ತಿರುವುದರಿಂದ 'ಕೆಜಿಎಫ್ 2' ಲೆವೆಲ್ ಬೇರೆ ಎಲ್ಲೋ ಹೋಗಿದೆ. ಸಿನಿಮಾ ಬಿಡುಗಡೆಯಾದ ಈ 11 ದಿನಗಳಲ್ಲಿ 'ಕೆಜಿಎಫ್ 2' ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಆದರೆ, ಇಲ್ಲೊಂದು ದಾಖಲೆ ಮಾತ್ರ ಕನ್ನಡಿಗರಿಗೆ ತೀರಾ ವಿಶೇಷ ಎನಿಸಿದೆ. ಯಾಕಂದ್ರೆ, ಕನ್ನಡ ಸಿನಿಮಾವೊಂದು ತಮಿಳುನಾಡಿನಲ್ಲಿ ದಾಖಲೆ ಗಳಿಕೆ ಮಾಡಿ ಎಲ್ಲರ ಹುಬ್ಬೇರಿಸಿದೆ.

    'ಕೆಜಿಎಫ್ 2' ಒಂದು ವಾರದಲ್ಲಿ ಸೃಷ್ಟಿಸಿದ ದಾಖಲೆಗಳ ಪಟ್ಟಿಯಲ್ಲಿ ಏನೇನಿದೆ?'ಕೆಜಿಎಫ್ 2' ಒಂದು ವಾರದಲ್ಲಿ ಸೃಷ್ಟಿಸಿದ ದಾಖಲೆಗಳ ಪಟ್ಟಿಯಲ್ಲಿ ಏನೇನಿದೆ?

    ತಮಿಳುನಾಡಿನಲ್ಲಿ 'ಕೆಜಿಎಫ್ 2' ದಾಖಲೆ ಗಳಿಕೆ

    ತಮಿಳುನಾಡಿನಲ್ಲಿ 'ಕೆಜಿಎಫ್ 2' ದಾಖಲೆ ಗಳಿಕೆ

    'ಕೆಜಿಎಫ್ 2' ಹಿಂದಿ ಬೆಲ್ಟ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಅದರಂತೆ, ದಕ್ಷಿಣ ಭಾರತದಲ್ಲೂ ರಾಕಿ ಭಾಯ್ ಹವಾ ಜೋರಾಗಿದೆ. ಕನ್ನಡ ಹಾಗೂ ತೆಲುಗಿನಲ್ಲಿ 'ಕೆಜಿಎಫ್ 2' ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುತ್ತೆ ಎಂದು ಊಹೆ ಮಾಡಲಾಗಿತ್ತು. ಅದರಂತೆ ಎರಡೂ ಭಾಷೆಯಲ್ಲೂ ನೂರು ಕೋಟಿ ಗಳಿಕೆ ಮಾಡಿದೆ. ಆದರೆ, ತಮಿಳುನಾಡಿನಲ್ಲಿ ದಳಪತಿ ವಿಜಯ್ ಸಿನಿಮಾ 'ಬೀಸ್ಟ್' ಮುಂದೆ 'ಕೆಜಿಎಫ್ 2' ಕಲೆಕ್ಷನ್ ಡಲ್ ಹೊಡೆಯಬಹುದು ಎಂದು ಗೆಸ್ ಮಾಡಲಾಗಿತ್ತು. ಆದರೆ, ಆ ಲೆಕ್ಕಾಚಾರವೆಲ್ಲಾ ತಲೆಕೆಳಗಾಗಿದೆ. ಕನ್ನಡ ಸಿನಿಮಾ ತಮಿಳುನಾಡಿನಲ್ಲಿ ದಾಖಲೆ ಗಳಿಕೆ ಮಾಡಿ, ಹೊಸ ಇತಿಹಾಸವನ್ನು ಸೃಷ್ಟಿಸಿದೆ.

    8 ದಿನ 'ಕೆಜಿಎಫ್ 2' ದೋಚಿದ್ದೆಷ್ಟು? ಆಮಿರ್ ಖಾನ್ 'PK' ದಾಖಲೆ ಮುರಿಯೋಕೆ ಆಗುತ್ತಾ?8 ದಿನ 'ಕೆಜಿಎಫ್ 2' ದೋಚಿದ್ದೆಷ್ಟು? ಆಮಿರ್ ಖಾನ್ 'PK' ದಾಖಲೆ ಮುರಿಯೋಕೆ ಆಗುತ್ತಾ?

    'ಕೆಜಿಎಫ್ 2' ಗಳಿಕೆ ತಮಿಳುನಾಡು ಕಲೆಕ್ಷನ್ ಎಷ್ಟು?

    ದಳಪತಿ ವಿಜಯ್ ಸಿನಿಮಾದ ಮುಂದೆ 'ಕೆಜಿಎಫ್ 2' ಕಲೆಕ್ಷನ್ ಹೆಚ್ಚಂದ್ರೆ, 10 ಕೋಟಿ ದಾಟಬಹುದು ಎಂದು ಊಹೆ ಮಾಡಲಾಗಿತ್ತು. ಆದರೆ, ಆ ಲೆಕ್ಕಾಚಾರವೆಲ್ಲಾ ತಲೆಕೆಳಗಾಗಿದೆ. ರಾಕಿ ಬಾಯ್ ತಮಿಳುನಾಡಿನಲ್ಲೂ ರಾಕ್ ಮಾಡಿದ್ದು, 11 ದಿನಗಳಲ್ಲಿ ಬರೋಬ್ಬರಿ 75 ಕೋಟಿ ಗಳಿಕೆ ಮಾಡಿದೆ. ಕನ್ನಡದ ಸಿನಿಮಾ ತಮಿಳುನಾಡಿನಲ್ಲಿ ಈ ಮಟ್ಟಿಗೆ ಕಲೆಕ್ಷನ್ ಮಾಡಿದ್ದೇ ಇಲ್ಲ. ಸ್ಯಾಂಡಲ್‌ವುಡ್‌ ಮಟ್ಟಿಗೆ ಇದೂ ಒಂದು ವಿಶೇಷವಾದ ದಾಖಲೆಯೇ ಸರಿ. ಟ್ರೇಡ್ ಅನಲಿಸ್ಟ್ ಮನೋಬಾಲ ವಿಜಯಬಾಲನ್ ಪ್ರಕಾರ, 'ಕೆಜಿಎಫ್ 2' 11 ದಿನಗಳಲ್ಲಿ ಸುಮಾರು 76.42 ಕೋಟಿ ಕಲೆಕ್ಷನ್ ಮಾಡಿದೆ.

    7 ದಿನಗಳಲ್ಲಿ 700 ಕೋಟಿ ಗಡಿ ದಾಟಿದ 'ಕೆಜಿಎಫ್ 2': ಆಂಧ್ರದಲ್ಲಿ 100 ಕೋಟಿ, ಕರ್ನಾಟಕದಲ್ಲೆಷ್ಟು?7 ದಿನಗಳಲ್ಲಿ 700 ಕೋಟಿ ಗಡಿ ದಾಟಿದ 'ಕೆಜಿಎಫ್ 2': ಆಂಧ್ರದಲ್ಲಿ 100 ಕೋಟಿ, ಕರ್ನಾಟಕದಲ್ಲೆಷ್ಟು?

    'ಕೆಜಿಎಫ್ 2' ಮುಂದೆ 'ಬೀಸ್ಟ್' ಕಲೆಕ್ಷನ್ ಡಲ್

    'ಕೆಜಿಎಫ್ 2' ಮುಂದೆ 'ಬೀಸ್ಟ್' ಕಲೆಕ್ಷನ್ ಡಲ್

    ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಇದೇ ಮೊದಲ ಬಾರಿಗೆ ತಮಿಳುನಾಡಿನಲ್ಲಿ ಇತಿಹಾಸ ರಚಿಸಿದೆ. ತಮಿಳುನಾಡಿನಲ್ಲಿ ತಮಿಳು ಸಿನಿಮಾವನ್ನು ಕಲೆಕ್ಷನ್‌ನಲ್ಲಿ ಹಿಂದಿಕ್ಕಿದೆ. ದಳಪತಿ ವಿಜಯ್ ಅಭಿನಯದ ಸಿನಿಮಾ ಒಂದು ದಿನ ಮುಂಚೆ ರಿಲೀಸ್ ಆಗಿದ್ದರೂ, ಕಲೆಕ್ಷನ್ ವಿಚಾರದಲ್ಲಿ 'ಬೀಸ್ಟ್'ಗಿಂತ ಹಿಂದಿದೆ. ಬೀಸ್ಟ್ 9 ದಿನಗಳ ಒಟ್ಟು ಗಳಿಕೆ 61.17 ಕೋಟಿ ಗಳಿಸಿದ್ದರೆ, ಇತ್ತ 'ಕೆಜಿಎಫ್ 2' 8 ದಿನಗಳಲ್ಲಿ 64.04 ಕೋಟಿ ಗಳಿಸಿದೆ.

    70-80ರ ದಶಕದ ನೆನೆಪು

    70-80ರ ದಶಕದ ನೆನೆಪು

    70-80ರ ದಶಕದಲ್ಲಿ ಕನ್ನಡ ಚಿತ್ರರಂಗದ ಕಣ್ಣು ಎಲ್ಲರ ಮೇಲೂ ಇರುತ್ತಿತ್ತು. ಯಾವುದೇ ಸಿನಿಮಾ ರಿಲೀಸ್ ಆದರೂ, ತಮಿಳುನಾಡಿನ ಜನಪ್ರಿಯ ನಿರ್ದೇಶಕರು ಕರ್ನಾಟಕಕ್ಕೆ ಬಂದು ಸಿನಿಮಾ ನೋಡಿ ಹೋಗುತ್ತಿದ್ದರು. ಇಷ್ಟ ಆದರೆ, ಕನ್ನಡ ಸಿನಿಮಾವನ್ನು ತಮಿಳಿನಲ್ಲಿ ರಿಮೇಕ್ ಮಾಡುತ್ತಿದ್ದರು. ಆದರೆ, ಇತ್ತೀಚೆಗಿನ ದಿನಗಳಲ್ಲಿ ಇದು ಉಲ್ಟಾ ಆಗಿತ್ತು. ಈಗ ಮತ್ತೆ ಕನ್ನಡ ಸಿನಿಮಾವೊಂದು ತಮಿಳುನಾಡಿನ ಗಡಿದಾಟಿ ದಾಖಲೆ ಬರೆದಿದೆ. ಇದೇ ಮುಂದುವರೆದರೆ, ಕನ್ನಡ ಸಿನಿಮಾ ಭವಿಷ್ಯ ಬದಲಾಗುವುದರಲ್ಲಿ ಡೌಟೇ ಇಲ್ಲ.

    English summary
    Yash Starrer KGF Chapter 2 Becomes First Kannada Movie to Cross Rs 75 Crore in Tamil Nadu, Know More.
    Monday, April 25, 2022, 16:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X