Don't Miss!
- News
ಮಂಗೇಶ್, ಲೀಲಾಬಾಯಿ, ವೆಂಕಣ್ಣ, ಸುಬ್ಬಯ್ಯ- ಉ.ಕ. ಸ್ವಾತಂತ್ರ್ಯ ಹೋರಾಟಗಾರರ ರೋಚಕ ಕಥೆಗಳು
- Sports
ಭಾರತದ ವಿರುದ್ಧ ಏಕದಿನ ಸರಣಿ ಗೆಲ್ಲಲಿದ್ದೇವೆ ಎಂದು ಭವಿಷ್ಯ ನುಡಿದ ಜಿಂಬಾಬ್ವೆ ಆಟಗಾರ
- Technology
ಭಾರತದಲ್ಲಿ ರಿಯಲ್ಮಿ 9i 5G ಫೋನ್ ಬಿಡುಗಡೆ ದಿನಾಂಕ ಬಹಿರಂಗ!
- Finance
ಉದ್ಯಮಿ ರಾಕೇಶ್ ಎಲ್ಲೆಲ್ಲಿ ಎಷ್ಟೆಷ್ಟು ಹೂಡಿಕೆ? ಮೌಲ್ಯ ಎಷ್ಟು?
- Automobiles
ಆಕರ್ಷಕ ವಿನ್ಯಾಸದ ಹೊಸ ಹೋಂಡಾ ಸಿಬಿ300ಎಫ್ ಬೈಕ್ ರಿವ್ಯೂ
- Lifestyle
ಆಗಸ್ಟ 14ರಿಂದ ಆಗಸ್ಟ 20ರ ವಾರ ಭವಿಷ್ಯ: ಮಿಥುನ, ಕರ್ಕ, ಕನ್ಯಾ ರಾಶಿಯವರಿಗೆ ಆರ್ಥಿಕ ಲಾಭದ ಸಾಧ್ಯತೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
41 ದಿನದಲ್ಲಿ ಇಷ್ಟೊಂದು ಇಳಿಕೆ ಕಂಡೇ ಇಲ್ಲ: 'ಕೆಜಿಎಫ್ 2' ಕಲೆಕ್ಷನ್ ಡ್ರಾಪ್ ಆಗಿದ್ದೇಕೆ?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' 50 ದಿನಗಳತ್ತ ಮುನ್ನುಗ್ಗುತ್ತಿದೆ. ಸಿನಿಮಾ ಬಿಡುಗಡೆಯಾದ 40 ದಿನವೂ ಬಾಕ್ಸಾಫೀಸ್ನಲ್ಲಿ 'ಕೆಜಿಎಫ್ 2' ಸದ್ದು ಮಾಡುತ್ತಲೇ ಇತ್ತು. ಇನ್ನೇನು 50ನೇ ದಿನದ ಹೊತ್ತಿಗೆ ಇನ್ನೊಂದಿಷ್ಟು ದಾಖಲೆಗಳನ್ನು ಬರೆಯುತ್ತೆ ಎಂದೇ ನಂಬಲಾಗಿತ್ತು. ಆದ್ರೀಗ ಆ ಲೆಕ್ಕಾಚಾರವೆಲ್ಲಾ ತಲೆಕೆಳಗಾಗುವ ಸಾಧ್ಯತೆಯಿದೆ.
'ಕೆಜಿಎಫ್ 2' ಕನ್ನಡ ಚಿತ್ರರಂಗದ ಅತ್ಯದ್ಭುತ ಸಾಧನೆ. ಹಿಂದೆಂದೂ ಇಂತಹದ್ದೊಂದು ದಾಖಲೆ ಗಳಿಕೆ ಮಾಡಿದ್ದೇ ಇಲ್ಲ. ಈ ಕಾರಣಕ್ಕೆ 'ಕೆಜಿಎಫ್ 2' ಸಿನಿಮಾದ ಪ್ರತಿ ದಿನದ ಗಳಿಕೆಯನ್ನೂ ಚಿತ್ರರಂಗ ಕಣ್ಣಲ್ಲಿ ಕಣ್ಣಿಟ್ಟು ವೀಕ್ಷಣೆ ಮಾಡುತ್ತಲೇ ಇತ್ತು. ಆದರೆ, 41ನೇ ದಿನ 'ಕೆಜಿಎಫ್ 2' ಕಲೆಕ್ಷನ್ ಕೊಂಚ ನಿರಾಸೆ ಮಾಡಿದೆ.
'KGF
2',
'ಸಲಾರ್',
'NTR
31'
ಈ
3
ಸಿನಿಮಾದ
ಪೋಸ್ಟರ್
ಸ್ಟೈಲ್
ಒಂದೇ:
'ಬಘೀರ'
ಬಿಟ್ಟಿದ್ಯಾಕೆ?
ಎಲ್ಲಾ ದಾಖಲೆಗಳನ್ನು ಒಂದೊಂದಾಗೇ ಉಡೀಸ್ ಮಾಡಿಕೊಂಡು ಬಂದಿದ್ದ 'ಕೆಜಿಎಫ್ 2' 41ನೇ ದಿನಕ್ಕೆ ತಣ್ಣಗಾಗಿದೆ. ಹಿಂದೆಂದಿಗಿಂತಲೂ ಅತೀ ಕಡಿಮೆ ಕಲೆಕ್ಷನ್ ಮಾಡಿದೆ. ಈ ಮೂಲಕ 'ದಂಗಲ್' ಹಾಗೂ 'ಬಾಹುಬಲಿ 2' ಸಿನಿಮಾದ ಗಳಿಕೆಯನ್ನು ಬೀಟ್ ಮಾಡಬಹುದು ಎಂಬ ಲೆಕ್ಕಾಚಾರವೆಲ್ಲಾ ತಲೆಕೆಳಗಾಗುತ್ತಾ? ಅನ್ನುವ ಆತಂಕ ಯಶ್ ಅಭಿಮಾನಿಗಳಲ್ಲಿದೆ.

41ನೇ ದಿನ ಡ್ರಾಪ್ ಬಾಕ್ಸಾಫೀಸ್ನಲ್ಲಿ ಇಳಿಕೆ
ಕನ್ನಡ ಚಿತ್ರರಂಗವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು 'ಕೆಜಿಎಫ್ 2'. ಸಿನಿಮಾ ಬಿಡುಗಡೆಯಾದಲ್ಲಿಂದ 40ನೇ ದಿನದವರೆಗೂ 'ಕೆಜಿಎಫ್ 2' ಎದುರು ನಿಲ್ಲುವುದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ, 41ನೇ ದಿನ 'ಕೆಜಿಎಫ್ 2' ಗಳಿಕೆಯಲ್ಲಿ ಅರ್ಧಕ್ಕೆ ಅರ್ಧ ಇಳಿಕೆ ಕಂಡಿದೆ. 41ನೇ ದಿನ ವಿಶ್ವದಾದ್ಯಂತ ಗಳಿಕೆ ಕೇವಲ ₹1.87 ಕೋಟಿ ಆಗಿದೆ. ಇಷ್ಟು ಕಡಿಮೆ ಕಲೆಕ್ಷನ್ ಕಳೆದ 40 ದಿನಗಳಲ್ಲೂ ಆಗಿರಲಿಲ್ಲ. ಈ ಕಾರಣಕ್ಕೆ ಇನ್ನೆರಡು ದಾಖಲೆಗಳ ಬಗ್ಗೆ ಅಭಿಮಾನಿಗಳಿಗೆ ಚಿಂತೆ ಕಾಡುತ್ತಿದೆ.
'ಕೆಜಿಎಫ್
2'
ಅರಗಿಣಿ
ಶ್ರೀನಿಧಿ
ಶೆಟ್ಟಿಯ
ಮೂರನೇ
ಸಿನಿಮಾ
ರಿಲೀಸ್
ಡೇಟ್
ಅನೌನ್ಸ್!

'ಕೆಜಿಎಫ್ 2' 41 ದಿನಗಳ ಕಲೆಕ್ಷನ್ ರಿಪೋರ್ಟ್
'ಕೆಜಿಎಫ್
2'ಗೆ
ದಾಖಲೆಗಳೇನು
ಹೊಸದಲ್ಲ.
ಪ್ರತಿ
ದಿನವೂ
ಒಂದಲ್ಲ
ಒಂದು
ದಾಖಲೆಗಳನ್ನು
ಮಾಡುತ್ತಲೇ
ಇದೆ.
ಕಳೆದ
40
ದಿನಗಳಲ್ಲೂ
'ಕೆಜಿಎಫ್
2'
ಕಲೆಕ್ಷನ್
ಆಯಾ
ದಿನಕ್ಕೆ
ತಕ್ಕಂತೆ
ಇತ್ತು.
41ನೇ
ದಿನ
ಕೊಂಚ
ಇಳಿಕೆ
ಕಂಡಿದ್ದರೂ,
ಮುಂದಿನ
ದಿನಗಳಲ್ಲಿ
ಹೆಚ್ಚಾಗುವ
ನಿರೀಕ್ಷೆಯಿದೆ.
ಈ
41
ದಿನಗಳಲ್ಲಿ
'ಕೆಜಿಎಫ್
2'
ಕಲೆಕ್ಷನ್
₹1227.68
ಕೋಟಿ
ಆಗಿದೆ.
ಮನೋಬಲಾ
ವಿಜಯಬಾಲನ್
ಪ್ರಕಾರ,
'ಕೆಜಿಎಫ್
2'
ಕಲೆಕ್ಷನ್
ರಿಪೋರ್ಟ್
ಹೀಗಿದೆ.
'ಕೆಜಿಎಫ್ 2' ವಿಶ್ವದಾದ್ಯಂತ ಕಲೆಕ್ಷನ್ ರಿಪೋರ್ಟ್
1
ರಿಂದ
5ನೇ
ವಾರದ
ಗಳಿಕೆ
₹
1210.53
ಕೋಟಿ
6ನೇ
ವಾರ
ಮೊದಲ
ದಿನ
₹
3.10
ಕೋಟಿ
ಎರಡನೇ
ದಿನ
₹
3.48
ಕೋಟಿ
ಮೂರನೇ
ದಿನ
₹
4.02
ಕೋಟಿ
ನಾಲ್ಕನೇ
ದಿನ
₹
4.68
ಕೋಟಿ
ಐದನೇ
ದಿನ
₹
1.87
ಕೋಟಿ
ಒಟ್ಟು ₹ 1227.68 ಕೋಟಿ

'ಕೆಜಿಎಫ್ 2' ಕಲೆಕ್ಷನ್ ಡ್ರಾಫ್ ಆಗಿದ್ದೇಕೆ?
'ಕೆಜಿಎಫ್ 2' ರಿಲೀಸ್ ಎರಡು ವಾರಗಳ ಬಳಿಕ ಥಿಯೇಟರ್ಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿತ್ತು. ಯಾವುದೇ ಸಿನಿಮಾ ಆದರೂ, ಬಿಡುಗಡೆಯಾಗಿ ಒಂದೊಂದು ವಾರ ಕಳೆಯುತ್ತಿದ್ದಂತೆ ಥಿಯೇಟರ್ ಸಂಖ್ಯೆಯನ್ನು ಕಡಿಮೆ ಮಾಡುತ್ತಾ ಬರುತ್ತೆ. ಹೀಗಾಗಿ ವಾರದಿಂದ ವಾರಕ್ಕೆ ಕಲೆಕ್ಷನ್ ಡ್ರಾಪ್ ಆಗುವುದು ಕಾಮನ್. ಆದರೆ, ಕಳೆದ ಐದು ವಾರದಿಂದ 'ಕೆಜಿಎಫ್ 2' ಆ ಎಲ್ಲಾ ಲೆಕ್ಕವನ್ನೂ ತಲೆಕೆಳಗೆ ಮಾಡಿತ್ತು. ಈಗ ಇನ್ನೊಂದು ವೀಕೆಂಡ್ನಲ್ಲಿ ಕಲೆಕ್ಷನ್ ಎಷ್ಟಾಗುತ್ತೆ ಎನ್ನುವುದರ ಮೇಲೆ 'ಕೆಜಿಎಫ್ 2' ಅಂತಿಮವಾಗಿ ಎಷ್ಟು ಕೋಟಿ ಗಳಿಸಬಹುದು ಅಂದಾಜು ಮಾಡಬಹುದು.
'ಸಲಾರ್'
ಸಿನಿಮಾದ
ಅದ್ಧೂರಿ
ಆಕ್ಷನ್
ಸೀನ್ಗೆ
ಪ್ರಶಾಂತ್
ನೀಲ್
ಸಜ್ಜು:
ಪ್ರಭಾಸ್
ಎಂಟ್ರಿ
ಯಾವಾಗ?
|
'ಭುಲ್ ಭುಲಯ್ಯ 2' ಕಲೆಕ್ಷನ್ ಎಷ್ಟು?
ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾಣಿ ಅಭಿನಯದ 'ಭುಲ್ ಭೂಲಯ್ಯ 2' ಬಾಕ್ಸಾಫೀಸ್ನಲ್ಲಿ ಸೂಪರ್ ಕಲೆಕ್ಷನ್ ಮಾಡಿದೆ. ವೀಕ್ ಡೇಸ್ನಲ್ಲೂ ಕಲೆಕ್ಷನ್ನಲ್ಲಿ ಹಿಂದೆ ಬಿದ್ದಿಲ್ಲ. ಮೇ 24ರಂದು ಸುಮಾರು ₹ 9.56 ಕೋಟಿ ಗಳಿಸಿದೆ. 'ಕೆಜಿಎಫ್ 2'ಗೆ 41ನೇ ದಿನಕ್ಕೆ ಬಾಲಿವುಡ್ ಸಿನಿಮಾವೊಂದು ಟಕ್ಕರ್ ಕೊಡುತ್ತಿದ್ದು, ಮತ್ತೆ ಯಾವಾಗ ಬೇಕಿದ್ದರೂ ಸಿಡಿದೇಳುವ ಸಾಧ್ಯತೆಯಿದೆ.