twitter
    For Quick Alerts
    ALLOW NOTIFICATIONS  
    For Daily Alerts

    18ನೇ ದಿನ ಆದರೂ ನಿಲ್ಲದ 'ಕೆಜಿಎಫ್ 2' ಓಟ: ಅಜಯ್, ಟೈಗರ್ ಲೆಕ್ಕಕ್ಕಿಲ್ಲ

    |

    ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಬಾಕ್ಸಾಫೀಸ್‌ನಲ್ಲಿ ಅಬ್ಬರಿಸುವುದನ್ನು ನಿಲ್ಲಿಸಿಲ್ಲ. ಸಿನಿಮಾ ರಿಲೀಸ್ ಆಗಿ ಮೂರು ವಾರವೇ ಆಗಿವೆ. ಆದರೂ ಹಿಂದಿ ಬೆಲ್ಟ್‌ನಲ್ಲಿ ತನ್ನ ನಾಗಾಲೋಟವನ್ನು ಮುಂದುವರೆಸಿದೆ. 18ನೇ ದಿನವೂ 'ಕೆಜಿಎಫ್ 2' ಸಿನಿಮಾದ ಕಲೆಕ್ಷನ್ ಅದ್ಭುತವಾಗಿದೆ.

    'ಕೆಜಿಎಫ್ 2' ಮುಂದೆ ಮೂರನೇ ವೀಕೆಂಡ್‌ನಲ್ಲೂ ಜಗ್ಗದೆ ಮುನ್ನುಗ್ಗುತ್ತಿದೆ. ಈ ಮೂಲಕ ಬಾಲಿವುಡ್ ಸಿನಿಮಾಗಳು ಮೂರನೇ ವಾರವೂ 'ಕೆಜಿಎಫ್ 2' ಮುಂದೆ ಮಂಡಿಯೂರಿದೆ. ಈಗಾಗಲೇ 1000 ಕೋಟಿ ಕ್ಲಬ್ ಸೇರಿರುವ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಸದ್ದಿಗೆ ಬಾಲಿವುಡ್ ಸೈಲೆಂಟ್ ಆಗಿದೆ.

     'ಕೆಜಿಎಫ್ 2' ಒಂದು ವಾರದಲ್ಲಿ ಸೃಷ್ಟಿಸಿದ ದಾಖಲೆಗಳ ಪಟ್ಟಿಯಲ್ಲಿ ಏನೇನಿದೆ? 'ಕೆಜಿಎಫ್ 2' ಒಂದು ವಾರದಲ್ಲಿ ಸೃಷ್ಟಿಸಿದ ದಾಖಲೆಗಳ ಪಟ್ಟಿಯಲ್ಲಿ ಏನೇನಿದೆ?

    Recommended Video

    KGF 2 Collection | 18 ನೇ ದಿನವು ಕಲೆಕ್ಷಷನ್ ವಿಚಾರದಲ್ಲಿ ಜಗ್ಗದ 'KGF 2' | Yash | Prashanth Neel

    'ಈದ್' ವೇಳೆ ತೆರೆಕಂಡು ಬಾಲಿವುಡ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತ ಉದಾಹರಣೆಗಳು ತೀರಾ ಕಡಿಮೆ. ಅಜಯ್ ದೇವಗನ್ ನಟನೆಯ 'ರನ್‌ ವೇ 34', ಟೈಗರ್‌ ಶ್ರಾಫ್ ಅಭಿನಯದ 'ಹೀರೋಪಂತಿ 2' ಸಿನಿಮಾಗಳೂ ಗಲ್ಲಾಪೆಟ್ಟಿಗೆಯಲ್ಲಿ ಹೇಳಿಕೊಳ್ಳುವಂತಹ ಚಮತ್ಕಾರ ಮಾಡಿಲ್ಲ. ವೀಕೆಂಡ್‌ನಲ್ಲೂ 'ಕೆಜಿಎಫ್ 2' ಮುಂದೆ ಬಾಲಿವುಡ್‌ ಸಿನಿಮಾಗಳ ಆಟ ನಡೆಯುತ್ತಿಲ್ಲ.

    'ಕೆಜಿಎಫ್ 2' 1000 ಕೋಟಿ ಕಲೆಕ್ಷನ್ ಆಯ್ತಾ? ಟ್ರೇಡ್ ಅನಲಿಸ್ಟ್‌ಗಳ ಗೊಂದಲದ ರಿಪೋರ್ಟ್! 'ಕೆಜಿಎಫ್ 2' 1000 ಕೋಟಿ ಕಲೆಕ್ಷನ್ ಆಯ್ತಾ? ಟ್ರೇಡ್ ಅನಲಿಸ್ಟ್‌ಗಳ ಗೊಂದಲದ ರಿಪೋರ್ಟ್!

    18 ದಿನಗಳಲ್ಲಿ 'ಕೆಜಿಎಫ್ 2' ಕಲೆಕ್ಷನ್ ಎಷ್ಟು?

    18 ದಿನಗಳಲ್ಲಿ 'ಕೆಜಿಎಫ್ 2' ಕಲೆಕ್ಷನ್ ಎಷ್ಟು?

    ರಾಕಿ ಭಾಯ್ ಹಾಗೂ ಪ್ರಶಾಂತ್ ನೀಲ್ ಚಮತ್ಕಾರ ಇನ್ನೂ ಮುಂದುವರೆದಿದೆ. 'ಕೆಜಿಎಫ್ 2' ಮೂರನೇ ವೀಕೆಂಡ್‌ನಲ್ಲಿ ಬಾಲಿವುಡ್‌ ಸಿನಿಮಾಗಳಿಗೆ ಬೀಟ್ ಮಾಡಲು ಸಾಧ್ಯವಾಗುತ್ತಿಲ್ಲ. ಮೂರನೇ ವಾರದಲ್ಲಿ ಸಾವಿರ ಕೋಟಿ ದಾಟಿರುವ 'ಕೆಜಿಎಫ್ 2', 18ನೇ ದಿನವೂ ಮೋಡಿ ಮಾಡಿದೆ. ಏಪ್ರಿಲ್ 14 ರಿಂದ ಇಲ್ಲಿವರೆಗೂ ಮೂರು ವಾರಗಳ ಕಾಲ 'ಕೆಜಿಎಫ್ 2' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ಮೂಲಗಳ ಪ್ರಕಾರ, ಇಲ್ಲಿವರೆಗೂ ಸುಮಾರು 1040 ಕೋಟಿ ಕಲೆಕ್ಷನ್ ಮಾಡಿದ ಎನ್ನಲಾಗುತ್ತಿದೆ.

    'ಕೆಜಿಎಫ್ 2' ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ?

    'ಕೆಜಿಎಫ್ 2' ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ?

    'ಕೆಜಿಎಫ್ 2' ಕೆಲಕ್ಷನ್ ಏಟಕ್ಕೆ ಬ್ರೇಕ್ ಹಾಕಲು ಎಲ್ಲಾ ಚಿತ್ರರಂಗವೂ ಶತಪ್ರಯತ್ನ ನಡೆದಿದೆ. ಅದರಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿರುವುದು ತೆಲುಗು ಚಿತ್ರರಂಗ ಮಾತ್ರ. ಮೂರನೇ ವೀಕೆಂಡ್, ಅಂದರೆ, 18ನೇ ದಿನ ವರ್ಲ್ಡ್ ವೈಡ್ ಕಲೆಕ್ಷನ್ ಸುಮಾರು 32 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಬಾಲಿವುಡ್ ಸಿನಿಮಾಗಳೇ ಮಾಡುತ್ತಿಲ್ಲ. ಇದು ಬಾಲಿವುಡ್ ಆತಂಕಕ್ಕೆ ಕಾರಣವಾಗಿದೆ.

    ಅಜಯ್, ಟೈಗರ್ ಸಿನಿಮಾಗಳಲ್ಲಿ ಖಾಸ್‌ಬಾತ್ ಇಲ್ಲ

    ಅಜಯ್, ಟೈಗರ್ ಸಿನಿಮಾಗಳಲ್ಲಿ ಖಾಸ್‌ಬಾತ್ ಇಲ್ಲ

    ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಅಜಯ್ ದೇವಗನ್ ನಟಿಸಿದ 'ರನ್‌ವೇ 34' ಹಾಗೂ ಟೈಗರ್ ಶ್ರಾಫ್ ಅಭಿನಯದ 'ಹೀರೊಪಂತಿ 2' ಈ ಎರಡೂ ಸಿನಿಮಾಗಳೂ ಹೇಳಿಕೊಳ್ಳುವಂತಹ ಚಮತ್ಕಾರ ಮಾಡಿಲ್ಲ. ಹಿಂದಿ ಬೆಲ್ಟ್‌ನಲ್ಲಿ 'ಕೆಜಿಎಫ್ 2' ಕಲೆಕ್ಷನ್ 11.25 ಕೋಟಿ ಗಳಿಸಿದ್ದರೆ, ಇನ್ನೊಂದು ಕಡೆ 'ರನ್‌ವೇ 34' ಹಾಗೂ 'ಹೀರೊಪಂತಿ 2' ಹಿಂದಿ ಬೆಲ್ಟ್‌ನಲ್ಲೇ ಜಾದು ಮಾಡುವುದಕ್ಕೆ ಆಗಿಲ್ಲ. ಭಾನುವಾರ (ಮೇ 2)ದಂದು ಅಜಯ್ ದೇವಗನ್ ಸಿನಿಮಾ 'ರನ್‌ವೇ 34' 7.25 ಕೋಟಿ ಹಾಗೂ 'ಹೀರೊಪಂತಿ 2' 4.25 ಕೋಟಿ ಗಳಿಕೆ ಕಂಡಿದೆ.

    ಎಷ್ಟು ಥಿಯೇಟರ್‌ನಲ್ಲಿ 'ಕೆಜಿಎಫ್ 2' ಹೌಸ್‌ಫುಲ್ ?

    ಎಷ್ಟು ಥಿಯೇಟರ್‌ನಲ್ಲಿ 'ಕೆಜಿಎಫ್ 2' ಹೌಸ್‌ಫುಲ್ ?

    ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಬಿಡುಗಡೆಯಾದ ಮೂರನೇ ಭಾನುವಾರವೂ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ವಿಶ್ವದಾದಾದ್ಯಂತ ಸುಮಾರು 64 ನೈಟ್‌ ಶೋಗಳು ಯಶಸ್ವಿ ಪ್ರದರ್ಶನ ಕಂಡಿದೆ. ಇದರೊಂದಿಗೆ ತೆಲುಗಿನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಆಚಾರ್ಯ ಸಿನಿಮಾ ರಿಲೀಸ್ ಆಗಿದ್ದರೂ, ತೆಲಂಗಾಣದಲ್ಲಿ 43 ಲಕ್ಷ, ಆಂಧ್ರದಲ್ಲಿ 1.22 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ.

    English summary
    Rana Daggubhati presenting 777 Charlie movie in Telugu. He said he watched the movie and it is very good.
    Monday, May 2, 2022, 16:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X