Don't Miss!
- News
ಮಹಾರಾಷ್ಟ್ರ ಬಿಜೆಪಿಯೊಳಗೆ ಗುರುತರ ಬದಲಾವಣೆ ಸಾಧ್ಯತೆ; ಫಡ್ನವಿಸ್ ಕೈ ಕಟ್ಟಿಹಾಕುವ ಯೋಜನೆ
- Technology
ಒಪ್ಪೋ ರೆನೋ 8 ಫೋನ್ ಎಂಟ್ರಿಗೆ ದಿನಾಂಕ ನಿಗದಿ!..ಸ್ಟೋರೇಜ್ ಆಯ್ಕೆ ಎಷ್ಟು?
- Finance
ಜಿಯೋ ಗ್ರಾಹಕರಿಗೆ ಉಚಿತ ನೆಟ್ಫ್ಲಿಕ್ಸ್ ಆಫರ್: ಇಲ್ಲಿದೆ ವಿವರ
- Lifestyle
ಈ ಆಹಾರಗಳನ್ನು ಒಟ್ಟಿಗೆ ಸೇವಿಸಬೇಡಿ, ಡೆಡ್ಲಿ ಕಾಂಬಿನೇಷನ್ ಆಹಾರಗಳಿವು!
- Automobiles
ಇವಿ ಕಾರು ಮಾರಾಟ: ಜೂನ್ ಅವಧಿಯ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಟಾಟಾ
- Sports
ಲಂಡನ್ನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿ; ಎಂಎಸ್ಡಿ ಭಾರತದ ಐಕಾನ್ ಎಂದ ವಿಂಬಲ್ಡನ್
- Education
NIMHANS Recruitment 2022 : ರಿಸರ್ಚ್ ಅಸೋಸಿಯೇಟ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಬೆಂಗಳೂರಿನಿಂದ ವಾರಾಂತ್ಯದಲ್ಲಿ ಭೇಟಿ ಕೊಡಬಹುದಾದ 60 ಪ್ರವಾಸಿ ತಾಣಗಳು
33ನೇ ದಿನ 1200 ಕೋಟಿ ಕ್ಲಬ್ ಸೇರಿದ 'ಕೆಜಿಎಫ್ 2': ಬಾಕ್ಸಾಫೀಸ್ನಲ್ಲಿ ಜಗ್ಗೋ ಮಾತೇ ಇಲ್ಲ
'ಕೆಜಿಎಫ್ 2' ಸಿನಿಮಾ ಬಿಡುಗಡೆಯಾದ 33ನೇ ದಿನವೂ ಬಾಕ್ಸಾಫೀಸ್ನಲ್ಲಿ ಜಗ್ಗುತ್ತಲೇ ಇಲ್ಲ. ರಿಲೀಸ್ ಆದ ದಿನದಿಂದ ಅಬ್ಬರಿಸಲು ಶುರು ಮಾಡಿದ್ದ 'ಕೆಜಿಎಫ್ 2' ಸಿನಿಮಾ ಕಲೆಕ್ಷನ್ ನಿಲ್ಲಿಸೋ ಮಾತೇ ಇಲ್ಲ. ದಿನದಿಂದ ದಿನಕ್ಕೆ ಒಂದೊಂದು ಹೊಸ ದಾಖಲೆಗಳನ್ನು ಬರೆಯುತ್ತಲೇ ಇದೆ.
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ವಿಶ್ವ ಮಟ್ಟದಲ್ಲಿ ಬೇಜಾನ್ ಸದ್ದು ಮಾಡುತ್ತಿದ್ದು, ಹೊಸ ದಾಖಲೆಯೊಂದನ್ನು ಬರೆದಿದೆ. 33ನೇ ದಿನಕ್ಕೆ 'ಕೆಜಿಎಫ್ 2' ಸಿನಿಮಾ 1200 ಕೋಟಿ ಕ್ಲಬ್ ಸೇರಿದ್ದು, ಮತ್ತೆ ವಿಶ್ವದ ಗಮನ ಸೆಳೆಯುತ್ತಿದೆ. ಈಗ ತಾನೇ ಬಿಡುಗಡೆಯಾದ ಸಿನಿಮಾಗಳಿಗೆ ಸೆಡ್ಡು ಹೊಡೆದ ಥಿಯೇಟರ್ನಲ್ಲಿ ಗಟ್ಟಿಯಾಗಿ ನೆಲೆಯೂರಿದೆ.
ವಿಜಯ್
ಕಿರಗಂದೂರು,
ಕಾರ್ತಿಕ್
ಗೌಡ
ಹೇಳಿಕೆಯಲ್ಲಿ
ಈ
ಗೊಂದಲವೇಕೆ?
ಸದ್ಯಕ್ಕಿಲ್ವಂತೆ
'ಕೆಜಿಎಫ್
3
ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಅಕ್ಷರಶ: ಮೋಡಿ ಮಾಡುತ್ತಿದೆ. ದಿನ ಕಳೆದಂತೆ ಸಿನಿಮಾ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. 33ನೇ ದಿನವೂ ಕೆಜಿಎಫ್ 2 ಕಲೆಕ್ಷನ್ ಉತ್ತಮವಾಗಿಯೇ ಇದೆ. ಒಟಿಟಿಗೆ 'ಕೆಜಿಎಫ್ 2' ಸಿನಿಮಾ ಲಗ್ಗೆ ಇಟ್ಟ ಬಳಿಕ ಸಿನಿಮಾದ ಕಲೆಕ್ಷನ್ ಕೊಂಚ ಕಡಿಮೆಯಾಗಿದೆ. ಹಾಗಿದ್ದರೆ, 33ನೇ ದಿನ 'ಕೆಜಿಎಫ್ 2' ಸಿನಿಮಾದ ಗಳಿಕೆ ಎಷ್ಟು? ಹೊಸದಾಗಿ ಬರೆದ ದಾಖಲೆ ಏನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.


33ನೇ ದಿನ 'ಕೆಜಿಎಫ್ 2' ಗಳಿಸಿದ್ದೆಷ್ಟು?
'ಕೆಜಿಎಫ್ ಚಾಪ್ಟರ್ 2' ಭಾರತದ ಸಿನಿಮಾ ಮಂದಿಗೆ ಅಚ್ಚರಿ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ಬಾಕ್ಸಾಫೀಸ್ನಲ್ಲಿ ಈ ಮಟ್ಟಿಗೆ ಸದ್ದು ಮಾಡುತ್ತಿರುವುದಕ್ಕೆ ದಿಗ್ಗಜರೇ ಬೆರಗಾಗಿದ್ದಾರೆ. ಅದೆಷ್ಟೇ ಹೊಸ ಹೊಸ ಸಿನಿಮಾಗಳು ರಿಲೀಸ್ ಆದರೂ, ಬಾಕ್ಸಾಫೀಸ್ನಲ್ಲಿ ಗದ್ದಲ ಎಬ್ಬಿಸಲು ಸೋತಿವೆ. 33ನೇ ದಿನವೂ 'ಕೆಜಿಎಫ್ 2' ಕಲೆಕ್ಷನ್ನಲ್ಲಿ ಹಿಂದೆ ಬಿದ್ದಿಲ್ಲ. ವಿಶ್ವದಾದ್ಯಂತ ಈ ಸಿನಿಮಾ ಸುಮಾರು 9.52 ಕೋಟಿ ಕಲೆಕ್ಷನ್ ಮಾಡಿದ್ದು, ಒಟ್ಟು ಇದೂವರೆಗೂ 1200 ಕೋಟಿ ಗಳಿಕೆ ಕಂಡಿದೆ.
1200
ಕೋಟಿಗೆ
ಇನ್ನೆಷ್ಟು
ಬೇಕು?
ಕೆಜಿಎಫ್
31ನೇ
ದಿನದ
ಕಲೆಕ್ಷನ್
ಇಷ್ಟು?

1200 ಕೋಟಿ ಕ್ಲಬ್ ಸೇರಿದ 'ಕೆಜಿಎಫ್ 2'
ರಾಕಿ ಭಾಯ್ ರಗಡ್ ಲುಕ್, ಮಾಸ್ ಡೈಲಾಗ್ ಹಾಗೂ ಪ್ರಶಾಂತ್ ನೀಲ್ ನಿರ್ದೇಶನ ಪ್ರೇಕ್ಷಕರು ಮೂಕ ವಿಸ್ಮಿತರಾಗಿರುವುದಂತೂ ನಿಜ. 33ನೇ ದಿನಕ್ಕೆ 1200 ಕೋಟಿ ಕ್ಲಬ್ ಸೇರಿರುವ 'ಕೆಜಿಎಫ್ 2' ಹೊಸ ಹೊಸ ದಾಖಲೆಗಳನ್ನು ಸೃಷ್ಟಿ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದೆ. ಸದ್ಯ 1200 ಕೋಟಿ ಸರಿದ ಭಾರತದ 3ನೇ ಸಿನಿಮಾ 'ಕೆಜಿಎಫ್ 2' ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದೂವರೆಗೂ 'ಕೆಜಿಎಫ್ 2' ಗಳಿಕೆ ಕಂಡ ಲಿಸ್ಟ್ ಇಲ್ಲಿದೆ.
'ಕೆಜಿಎಫ್ 2' ಕಲೆಕ್ಷನ್ ಲಿಸ್ಟ್ ( ವಾರ, ದಿನಗಳಲ್ಲಿ
ಮೊದಲ
ವಾರ-
₹
720.31
ಕೋಟಿ
ಎರಡನೇ
ವಾರ-
₹
223.51
ಕೋಟಿ
ಮೂರನೇ
ವಾರ-
₹
140.55
ಕೋಟಿ
ನಾಲ್ಕನೇ
ವಾರ-
₹
91.26
ಕೋಟಿ
ಐದನೇ
ವಾರ-
ಮೊದಲ
ದಿನ
₹
05.20
ಕೋಟಿ
ಎರಡನೇ
ದಿನ
₹
04.34
ಕೋಟಿ
ಮೂರನೇ
ದಿನ
₹
06.07
ಕೋಟಿ
ನಾಲ್ಕನೇ
ದಿನ
₹
09.52
ಕೋಟಿ
ಒಟ್ಟು ₹ 1200.76 ಕೋಟಿ

1200 ಕೋಟಿ ಕ್ಲಬ್ನಲ್ಲಿವೆ 3 ಸಿನಿಮಾ
'ಕೆಜಿಎಫ್ 2' ವಿಶ್ವದ ಬಾಕ್ಸಾಫೀಸ್ನಲ್ಲಿ 1200 ಕೋಟಿ ಸೇರಿದ ಭಾರತದ ಮೂರನೇ ಸಿನಿಮಾ. ಈ ಹಿಂದೆ ರಾಜಮೌಳಿ ನಿರ್ದೇಶನದ 'ಬಾಹುಬಲಿ 2' 1200 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಆಗಿತ್ತು. ಅದರಂತೆ ಆಮಿರ್ ಖಾನ್ ಅಭಿನಯದ 'ದಂಗಲ್' ಸಿನಿಮಾ ಕೂಡ ವಿಶ್ವದ ಮಾರುಕಟ್ಟೆಯಲ್ಲಿ 1200 ಕ್ಲಬ್ ಸೇರಿದ ಎರಡನೇ ಸಿನಿಮಾ ಆಗಿದೆ. ಈಗ 'ಕೆಜಿಎಫ್ 2' ಮೂರನೇ ಸಿನಿಮಾ ಆಗಿದೆ.
'ಕೆಜಿಎಫ್
3'
ಚಿತ್ರೀಕರಣ
ಆರಂಭ
ಯಾವಾಗ?
ನಿರ್ಮಾಪಕರೇ
ಕೊಟ್ಟರು
ಉತ್ತರ

'ವಿಕ್ರಾಂತ್ ರೋಣ' ಮೇಲೆ ನಿರೀಕ್ಷೆ
'ಕೆಜಿಎಫ್ 2' ಸಿನಿಮಾದ ಗಳಿಕೆ ಕಂಡು ವರ್ಲ್ಡ್ ಸಿನಿಮಾ ದಂಗಾಗಿದೆ. ಇದರೊಂದಿಗೆ ಕನ್ನಡದ ಎರಡು ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸದ್ದು ಮಾಡುವುದಕ್ಕೆ ಶುರುಮಾಡಿದೆ. ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಜೂನ್ 10ರಂದು ಬಿಡುಗಡೆಯಾಗಲಿದೆ. ಇದರೊಂದಿಗೆ ಕಿಚ್ಚನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ 'ವಿಕ್ರಾಂತ್ ರೋಣ' ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಇದೂ ಕೂಡ ಬಾಕ್ಸಾಫೀಸ್ನಲ್ಲಿ ಚಿಂದು ಉಡಾಯಿಸಿದರೆ, ಹೊಸ ಇತಿಹಾಸ ಸೃಷ್ಟಿಯಾಗುವುದು ಪಕ್ಕಾ.