For Quick Alerts
  ALLOW NOTIFICATIONS  
  For Daily Alerts

  ಅಬ್ಬಬ್ಬಾ.. ಥಿಯೇಟರ್‌ನಲ್ಲಿ ನಿಲ್ಲದ ರಾಕಿಭಾಯ್ ಆರ್ಭಟ: ಹೊರರಾಜ್ಯದಲ್ಲಿ ಇಂದಿಗೂ KGF - 2 ಹೌಸ್‌ಫುಲ್!

  |

  ಒಳ್ಳೆ ಚಿತ್ರಕ್ಕೆ ಎಂದೂ ಸೋಲಿಲ್ಲ ಎನ್ನುವುದು ಪದೇ ಪದೇ ಸಾಬೀತಾಗುತ್ತಲೇ ಇದೆ. ಏಪ್ರಿಲ್ 14ಕ್ಕೆ KGF ಚಾಪ್ಟರ್‌- 2 ಸಿನಿಮಾ ರಿಲೀಸ್ ಆಗಿದ್ದು, ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿತ್ತು. ಪರಭಾಷಿಕರು ಕೂಡ ನಮ್ಮದೇ ಸಿನಿಮಾ ಎನ್ನುವಂತೆ ಮುಗಿಬಿದ್ದು ಸಿನಿಮಾ ನೋಡಿದ್ದರು. ವಾರಗಳಗಟ್ಟಲೆ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಮಹಾರಾಷ್ಟ್ರದ ಚಿತ್ರಮಂದಿರವೊಂದರಲ್ಲಿ KGF - 2 ಸಿನಿಮಾ ಇಂದಿಗೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ ಎಂದರೆ ನಂಬಲೇಬೇಕು.

  ಹಳೇ ಸಿನಿಮಾಗಳು ಟೆಂಟ್‌ಗಳಲ್ಲಿ ರೀ ರಿಲೀಸ್ ಆಗುವ ಕಾಲವೊಂದಿತ್ತು. ಇದೇನು ಹೊಸದಲ್ಲ. ಆದರೆ ಓಟಿಟಿಗೆ ಬಂದಮೇಲೆ, ಟಿವಿಗೆ ಬಂದಮೇಲೂ ಹಿಂದಿಗೆ ಡಬ್ ಆಗಿರುವ ಕನ್ನಡ ಸಿನಿಮಾವೊಂದು 6 ತಿಂಗಳ ನಂತರವೂ ಥಿಯೇಟರ್‌ನಲ್ಲಿ ಪ್ರದರ್ಶನ ಕಾಣುತ್ತಿದೆ. ಒಂದು ಅಥವಾ ಎರಡು ಶೋ ಅಲ್ಲ, ಪ್ರತಿದಿನ 4 ಶೋ ಪ್ರದರ್ಶನ ಕಾಣುತ್ತಿರುವುದು ಅಚ್ಚರಿಯೇ ಸರಿ. ಅದಕ್ಕೆ ಹೇಳಿದ್ದು ಒಳ್ಳೆ ಚಿತ್ರಕ್ಕೆ ಎಂದಿಗೂ ಸೋಲಿಲ್ಲ ಎಂದು. ರಾಕಿಭಾಯ್ ಆರ್ಭಟವನ್ನು ಟಿವಿ, ಮೊಬೈಲ್‌ನಲ್ಲಿ ನೋಡುವುದಕ್ಕಿಂತ ಸಿಲ್ವರ್‌ ಸ್ಕ್ರೀನ್‌ ಮೇಲೆ ನೋಡುವ ಮಜಾನೇ ಬೇರೆ.

  ಮಹಾರಾಷ್ಟ್ರದ ಬಿವಂದಿ ನಜ್‌ರಾನ ಥಿಯೇಟರ್‌ನಲ್ಲಿ KGF - 2 ಸಿನಿಮಾ ಸದ್ಯ ಪ್ರದರ್ಶನ ಕಾಣುತ್ತಿದೆ. ಇನ್ನು ಒಂದು ಸಿನಿಮಾ ಪ್ರದರ್ಶನ ಮುಂದುವರೆಯಲಿದೆ. ಪ್ರೇಕ್ಷಕರು ಬುಕ್‌ಮೈ ಶೋನಲ್ಲಿ ಟಿಕೆಟ್ ಬುಕ್‌ ಮಾಡಿಕೊಂಡು ಸಿನಿಮಾ ವೀಕ್ಷಿಸುತ್ತಿದ್ದಾರೆ. 2018 ಡಿಸೆಂಬರ್ 20ರಂದು ವಿಶ್ವದಾದ್ಯಂತ ತೆರೆಗಪ್ಪಳಿಸಿದ್ದ ಈ ಪೀರಿಯಡ್ ಆಕ್ಷನ್ ಎಂಟರ್‌ಟೈನರ್‌ ಸಿನಿಮಾದ ಮೊದಲ ಭಾಗ ಸೂಪರ್ ಹಿಟ್ ಆಗಿತ್ತು. 250 ಕೋಟಿ ರೂ, ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಸರಣಿಯ 2ನೇ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿತ್ತು. ಅದಕ್ಕೆ ತಕ್ಕಂತೆ ಈ ವರ್ಷ ತೆರೆಕಂಡ ಸೀಕ್ವೆಲ್ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು.

  ಪ್ರಶಾಂತ್ ನೀಲ್ ನಿರ್ದೇಶನ, ರಾಕಿಂಗ್ ಸ್ಟಾರ್ ಯಶ್ ಪರ್ಫಾರ್ಮೆನ್ಸ್ ಸಿನಿರಸಿಕರಿಗೆ ಸಖತ್ ಕಿಕ್ ಕೊಟ್ಟಿತ್ತು. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿತ್ತು. ಸರಣಿಯ 2ನೇ ಸಿನಿಮಾದಲ್ಲಿ ಬಾಲಿವುಡ್‌ನ ಸಂಜಯ್ ದತ್, ರವೀನಾ ಟಂಡನ್‌ರಂತಹ ಕಲಾವಿದರು ನಟಿಸಿದ್ದರು. ಹಾಗಾಗಿ ಸಹಜವಾಗಿಯೇ ಬಾಲಿವುಡ್‌ನಲ್ಲೂ ಸಿನಿಮಾ ಬಗ್ಗೆ ಭಾರೀ ಕ್ರೇಜ್ ಇತ್ತು. ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ಸಖತ್ ಸದ್ದು ಮಾಡಿತ್ತು. ಇನ್ನು ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಓವರ್‌ಸೀಸ್‌ನಲ್ಲಿ ಸಿನಿಮಾ ದಾಖಲೆ ಬರೀತು.

  yash-starrer-kgf-chapter-2-film-successfully-running-now-in-bhiwandi-nazrana-cinema-theater

  ಒಂದು ಕಾಲ್ಪನಿಕ ಕಥೆಯನ್ನು ಬಹಳ ರೋಚಕವಾಗಿ ಪ್ರಶಾಂತ್ ನೀಲ್ ಕಟ್ಟಿಕೊಟ್ಟಿದ್ದರು. ಭರ್ಜರಿ ಆಕ್ಷನ್ ಜೊತೆಗೆ ಮದರ್ ಸೆಂಟಿಮೆಂಟ್ ಸೇರಿಸಿ ಸಿನಿಮಾ ಕಟ್ಟಿಕೊಟ್ಟಿದ್ದರು. ಸೆಕೆಂಡ್ ಪಾರ್ಟ್ ಮೇಕಿಂಗ್ ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಂತಿತ್ತು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಒಂದೋ ಎರಡೋ ಎಲಿವೇಷನ್ ಸೀನ್ಸ್ ಇರುತ್ತವೆ. ಆದರೆ KGF ಸರಣಿ ಸಿನಿಮಾಗಳಲ್ಲಿ ಪ್ರತಿ ಸೀನ್‌ಗೂ ಸಿಕ್ಕಾಪಟ್ಟೆ ಎಲಿವೇಷನ್ ಇತ್ತು. ಸಿನಿಮಾ ಯಾವುದೋ ಹಾಲಿವುಡ್ ಸಿನಿಮಾ ನೋಡಿದ ಫೀಲ್ ಕೊಟ್ಟಿತ್ತು. ಪರಭಾಷಿಕರು ಕೂಡ ಪ್ರಶಾಂತ್ ನೀಲ್ ಪ್ರತಿಭೆಗೆ ಬಹುಪರಾಕ್ ಹೇಳಿದ್ದರು.

  English summary
  Yash Starrer KGF Chapter 2 Film Successfully running now in Bhiwandi Nazrana Cinema Theater. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X