ಶುರುವಾಯ್ತು 'ಕೆಜಿಎಫ್ ಚಾಪ್ಟರ್-2' ಚಿತ್ರೀಕರಣ

Recommended Video

KGF 2 Movie: ಮೇ 13ರಿಂದ ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಆರಂಭ

ಇಡೀ ಭಾರತೀಯ ಚಿತ್ರರಂಗವೆ ಸ್ಯಾಂಡಲ್ ವುಡ್ ಕಡೆ ತಿರುಗಿ ನೋಡುವಂತೆ ಮಾಡಿದ್ದ ಸಿನಿಮಾ 'ಕೆಜಿಫ್'. ರಾಕಿಂಗ್ ಯಶ್ ಅಭಿನಯ, ಪ್ರಶಾಂತ್ ನೀಲ್ ನಿರ್ದೇಶನ, ಭುವನ್ ಗೌಡ ಕ್ಯಾಮರ ಕೈಚಳಕ, ಖಳನಟರ ಅಬ್ಬರ, ರವಿ ಬಸ್ರೂರ್ ಸಂಗೀತ ಹೀಗೆ ಚಿತ್ರದ ಪ್ರತಿಯೊಂದು ಅಂಶವು ಚಿತ್ರಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿಸಿತ್ತು.

ದೇಶದಾದ್ಯಂತ ಸದ್ದು ಮಾಡಿದ್ದ 'ಕೆಜಿಎಫ್' ಸಿನಿಮಾದ ಎರಡನೆ ಭಾಗದ ಚಿತ್ರೀಕರಣ ಅದ್ಧೂರಿಯಾಗಿ ಶುರುವಾಗಿದೆ. ಇಂದಿನಿಂದ(ಮೇ-13) 'ಕೆಜಿಎಫ್-2 'ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು ರಾಕಿಂಗ್ ಸ್ಟಾರ್ ಯಶ್ ಮತ್ತೆ ತಿಂಗಳುಗಳ ಬಳಿಕ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಇಡೀ 'ಕೆಜಿಫ್' ಚಿತ್ರತಂಡ ತಿಂಗಳುಗಳ ಬಳಿಕ ಮತ್ತೆ ಚಿತ್ರೀಕರಣಕ್ಕೆ ಹಾಜರಾದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ತಿಂಗಳುಗಳಿಂದ ಮಿಸ್ ಮಾಡಿಕೊಂಡಿದ್ದ ಸೆಟ್ ಅನ್ನು ಮತ್ತೆ ಸೇರಿದ್ದೇವೆ' ಎಂದು ನಿರ್ದೇಶಕ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ.

yash starrer KGF chapter-2 shooting begins

ಸಿನಿಮಾಟೋಗ್ರಾಫರ್ ಭುವನ್ ಗೌಡ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರು ಚಿತ್ರೀಕರಣಕ್ಕೆ ಹಾಜರಾದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಸಹ ಭರ್ಜರಿ ತಯಾರಿ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದಾರೆ.

ಇತ್ತೀಚಿಗಷ್ಟೆ ರಾಕಿ ಭಾಯ್ ಭಯಾನಕ ಲುಕ್ ಒಂದು ರಿವೀಲ್ ಆಗಿ ಸಂಚಲನ ಮೂಡಿಸಿತ್ತು. 'ಚಾಪ್ಟರ್-2' ಚಿತ್ರದ ಯಶ್ ಗೆಟಪ್ ನೋಡುತ್ತಿದ್ರೆ ಮೊದಲ ಭಾಗಕ್ಕಿಂತ ಚಾಪ್ಟರ್-2ನಲ್ಲಿ ರಣಭಯಂಕರನಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ 'ಕೆಜಿಎಫ್ ಪಾರ್ಟ್-2' ಮತ್ತಷ್ಟು ರೋಚಕವಾಗಿರಲಿದೆ ಎನ್ನುವ ಸೂಚನೆ ಆ ಲುಕ್ ನೀಡಿದೆ.

ಇನ್ನು ಈಗಾಗಲೆ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜನೆ ಕೆಲಸವನ್ನು ಶುರು ಮಾಡಿಕೊಂಡಿದ್ದಾರೆ. ಪಾರ್ಟ್-2ನ ಎಲ್ಲಾ ಕೆಲಸಗಳು ಭರದಿಂದ ನಡೆಯುತ್ತಿವೆ. ಸದ್ಯ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ ನಂತರ ಕರಾವಳಿ ಭಾಗದ ಕಡೆ ಪಯಣ ಬೆಳೆಸಲಿದೆ. ಭಾರಿ ಕುತೂಹಲ ಮೂಡಿಸಿರುವ 'ಕೆಜಿಎಫ್-2' ಚಿತ್ರದಲ್ಲಿ ಬಾಲಿವುಡ್ ನ ಸ್ಟಾರ್ ನಟರು ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

More from Filmibeat

English summary
Rocking yash starrer KGF chapter-2 shooting begins. This movie is directed prashanth neel. The first part of KGF has been big successful.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X