'ಕೆಜಿಎಫ್ ಚಾಪ್ಟರ್-2' ಕಡೆಯಿಂದ ನಿರೀಕ್ಷಿಸಿ ಬಿಗ್ ಬ್ರೇಕಿಂಗ್ ನ್ಯೂಸ್
ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಸಿನಿಮಾ ಇಡೀ ದೇಶವೆ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿತ್ತು. ಮೇಕಿಂಗ್, ಕಥೆ, ಕಾಸ್ಟಿಂಗ್, ನಿರ್ದೇಶನ, ಸಂಗೀತ, ಸಿನಿಮಾಟೋಗ್ರಫಿ ಹೀಗೆ ಪ್ರತಿಯೊಂದು ವಿಭಾಗದಲ್ಲೂ ಪರ್ಫೆಕ್ಟ್ ಎನಿಸಿಕೊಂಡು ದೇಶ-ವಿದೇಶದಲ್ಲಿ ಭಾರಿ ಸದ್ದು ಮಾಡಿತ್ತು 'ಕೆಜಿಎಫ್'. ಮೊದಲ ಚಾಪ್ಟರ್ ದೊಡ್ಡ ಮಟ್ಟಿಗೆ ಯಶಸ್ಸು ಕಾಣುತ್ತಿದ್ದಂತೆ ಎರಡನೆ ಭಾಗದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.
ಅಭಿಮಾನಿಗಳ ನಿರೀಕ್ಷೆಯಂತೆ ಚಿತ್ರತಂಡ ಸಹ ಸಖತ್ ಹಾರ್ಡ್ ವರ್ಕ್ ಮಾಡಿ ಚಿತ್ರೀಕರಣ ಮಾಡುತ್ತಿದೆ. ಈಗಾಗಲೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಅದ್ಧೂರಿ ಸೆಟ್ ನಿರ್ಮಾಣವಾಗಿದೆ. ಮೈಸೂರಿನಿಂದ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ ಈಗ ದೊಡ್ಡ ಬ್ರೇಕಿಂಗ್ ಸುದ್ದಿಯೊಂದನ್ನು ನೀಡುವುದಾಗಿ ಹೇಳಿಕೊಂಡಿದೆ.
ನಾಳೆ(ಜುಲೈ 25) ಬೆಳಗ್ಗೆ 11ಗಂಟೆಗೆ ಬಿಗ್ ನ್ಯೂಸ್ ಹೇಳುತ್ತೇವೆ ಎಲ್ಲರು ಕಾಯುತ್ತಿರಿ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ. 'ಕೆಜಿಎಪ್ ಚಾಪ್ಟರ್-2' ಕಡೆಯಿಂದ ದೊಡ್ಡ ಸುದ್ದಿ ಹೊರಬೀಳುತ್ತಿದ್ದಂತೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಯಾವ ದೊಡ್ಡ ಸುದ್ದಿಯನ್ನು ಬಹಿರಂಗ ಪಡಿಸಲಿದೆ ಎಂದು ಅಭಿಮಾನಿಗಳು ಈಗಲೆ ತಲೆಗೆ ಹುಳಬಿಟ್ಟುಕೊಂಡಿದ್ದಾರೆ.

ಅಂದ್ಹಾಗೆ ಚಿತ್ರತಂಡ ಹೇಳ ಹೊರಟಿರುವ ಬಿಗ್ ಸುದ್ದಿ ಅಂದ್ರೆ ಸ್ಟಾರ್ ಕಾಸ್ಟ್ ಬಗ್ಗೆ ಇರಬಹುದಾ, ಈಗಾಗಲೆ ಚಿತ್ರದಲ್ಲಿ ಬಾಲಿವುಡ್ ನಟರೆಲ್ಲ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಹಾಗಾಗಿ ಯಾವ ಕಲಾವಿದರ ಬಗ್ಗೆ ಮಾಹಿತಿಯನ್ನು ಬಹಿರಂಗ ಪಡಿಸಲಿದೆಯ ಅಥವಾ ಚಿತ್ರದ ರಿಲೀಸ್ ಡೇಟ್ ಬಗ್ಗೆ ಹೇಳಲಿದ್ದಾರಾ ಹೀಗೆ ಹಲವು ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದೆ.
ಆದ್ರೆ ಈ ಎಲ್ಲಾ ಕುತೂಹಲಗಳಿಗೆ ನಾಳೆ ಬೆಳಗ್ಗೆ 11ಕ್ಕೆ ತೆರೆಬೀಳಲಿದೆ. ಅಲ್ಲಿವರೆಗೂ ಕಾಯಲೆ ಬೇಕು. 'ಕೆಜಿಎಫ್ ಚಾಪ್ಟರ್-2'ನಲ್ಲಿ ಬಾಲಿವುಡ್ ನ ಖ್ಯಾತ ನಟರಾದ ಸಂಜಯ್ ದತ್ ಮತ್ತು ನಟಿ ರವೀನಾ ಟಂಡನ್ ಕಾಣಿಸಿಕೊಳ್ಳಲಿದ್ದಾರಂತೆ. ಪ್ರಶಾಂತ್ ನೀಲ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ ಬಂಡವಾಳ ಹೂಡುತ್ತಿದೆ.


Click it and Unblock the Notifications











