»   » ಮೇ 3ರಂದು ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಮೇ 3ರಂದು ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಈ ಬುಧವಾರ ಸಿಹಿ ಸುದ್ದಿಯೊಂದು ಸಿಗಲಿದೆ. ಹೌದು, ಮೇ 3ನೇ ತಾರೀಖು ಸಂಜೆ 6 ಗಂಟೆಗೆ ಯಶ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ 'ಕೆ.ಜಿ.ಎಫ್' ಚಿತ್ರದ ಫಸ್ಟ್ ಲುಕ್ ಅಧಿಕೃತವಾಗಿ ಬಿಡುಗಡೆಯಾಗಲಿದೆ.[ಯಶ್ 'ಕೆ.ಜಿ.ಎಫ್' ಚಿತ್ರದ ಲೇಟೆಸ್ಟ್ ಸುದ್ದಿ ಕೇಳಿದ್ರಾ?]

ಈ ಹಿಂದೆ ಯಶ್ ಹುಟ್ಟುಹಬ್ಬದ ವಿಶೇಷವಾಗಿ ಮೊದಲ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಆದ್ರೆ, ಅಲ್ಲಿಂದ ಇಲ್ಲಿಯವರೆಗೂ ಚಿತ್ರದ ಬಗ್ಗೆ ಒಂದೇ ಒಂದು ಮಾಹಿತಿ ಕೂಡ ಬಿಟ್ಟುಕೊಟ್ಟಿಲ್ಲ. ಆದ್ರೂ ದಿನದಿಂದ ಕುತೂಹಲ, ನಿರೀಕ್ಷೆಗಳು ಹೆಚ್ಚಾಗುತ್ತಲೇ ಇದೆ. ಇದೀಗ, ಯಶ್ ಅವರ ಫಸ್ಟ್ ಲುಕ್ ಅಭಿಮಾನಿಗಳೆದುರು ತರಲು ನಿರ್ಧರಿಸಿದ್ದಾರೆ.[ಯಶ್ ಜನ್ಮದಿನದ ಪ್ರಯುಕ್ತ 'ಕೆ.ಜಿ.ಎಫ್' ಪೋಸ್ಟರ್ ರಿಲೀಸ್.!]

Yash Starrer KGF Movie First Look Release on 3rd April

ಇತ್ತೀಚೆಗೆ 'ಕೆ.ಜಿ.ಎಫ್' ಚಿತ್ರದ ಮೇಕಿಂಗ್ ಸ್ಟಿಲ್ ವೊಂದು ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿತ್ತು. ಇನ್ನು ಕೆಜಿಎಫ್' ಚಿತ್ರ 1970ರ ದಶಕದ ಚಿತ್ರಕಥೆ ಆಗಿರುವುದರಿಂದ, ಯಶ್ ಈ ಸಿನಿಮಾದಲ್ಲಿ ರೆಟ್ರೋ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ಗೆ ಚಿತ್ರದಲ್ಲಿ ನಾಯಕಿ ಆಗಿ 24 ವರ್ಷದ ಬ್ಯೂಟಿ ಕ್ವೀನ್ ಶ್ರೀನಿಧಿ ಶೆಟ್ಟಿ ನಟಿಸಲಿದ್ದಾರೆ.['ಕೆ.ಜಿ.ಎಫ್'ಗಾಗಿ ಯಶ್ ಅವರ ಹೊಸ ಲುಕ್ ನೋಡಿ]

Yash Starrer KGF Movie First Look Release on 3rd April

'ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಫಿಲ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ, ಕೆ.ಜಿ.ಎಫ್ ಕನ್ನಡದ ಮಟ್ಟಿಗೆ ಅತಿ ದೊಡ್ಡ ಬಜೆಟ್ ಚಿತ್ರವೆಂದು ಹೇಳಲಾಗ್ತಿದೆ.

English summary
Rocking Star Yash Starrer 'KGF' Movie First Look Releasing on 3rd May (Wedneshday). The Movie Directed by Prashanth Neel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada