»   » ಮೇ.3ಕ್ಕೆ 'ಕೆ.ಜಿ.ಎಫ್' ಚಿತ್ರತಂಡದಿಂದ ಬ್ರೇಕಿಂಗ್ ನ್ಯೂಸ್! ಏನದು.?

ಮೇ.3ಕ್ಕೆ 'ಕೆ.ಜಿ.ಎಫ್' ಚಿತ್ರತಂಡದಿಂದ ಬ್ರೇಕಿಂಗ್ ನ್ಯೂಸ್! ಏನದು.?

Posted By: Naveen
Subscribe to Filmibeat Kannada

ಸ್ಯಾಂಡಲ್ ವುಡ್ ನ ಈ ವರ್ಷದ ಬಹು ನಿರೀಕ್ಷಿತ ಸಿನಿಮಾಗಳ ಪೈಕಿ ಅಗ್ರ ಸ್ಥಾನದಲ್ಲಿರುವುದು ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಸಿನಿಮಾ. ಈಗಾಗಲೇ ಹಲವು ವಿಶೇಷತೆಗಳಿಂದ ಬೇಜಾನ್ ಸೌಂಡ್ ಮಾಡಿರುವ 'ಕೆ.ಜಿ.ಎಫ್' ಸಿನಿಮಾ ಮತ್ತೆ ಸದ್ದು ಮಾಡುವ ಟೈಂ ಹತ್ತಿರ ಬಂದಿದೆ.['ಕೆ.ಜಿ.ಎಫ್'ಗಾಗಿ ಯಶ್ ಅವರ ಹೊಸ ಲುಕ್ ನೋಡಿ]

'ಊಗ್ರಂ' ಖ್ಯಾತಿಯ ಪ್ರಶಾಂತ್ ನೀಲ್, 'ಕೆ.ಜಿ.ಎಫ್' ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸದ್ಯ 'ರಾಜಕುಮಾರ' ಸಕ್ಸಸ್ ನಲ್ಲಿರುವ ನಿರ್ಮಾಪಕ ವಿಜಯ್ ಕಿರಗಂದೂರು ನಿರ್ಮಾಣದಲ್ಲಿ ಈ ಚಿತ್ರ ತಯಾರಾಗುತ್ತಿರುವುದು ನಿಮಗೆ ಗೊತ್ತೇ ಇದೆ. [ಕೊಪ್ಪಳದಲ್ಲಿ ಮಹತ್ವದ ಕೆಲಸಕ್ಕೆ ಚಾಲನೆ ಕೊಟ್ಟ ಯಶ್-ರಾಧಿಕಾ ದಂಪತಿ]

ಸಿಕ್ಕಾಪಟ್ಟೆ ಸ್ಪೆಷಾಲಿಟಿಗಳನ್ನು ಹೊಂದಿರುವ 'ಕೆ.ಜಿ.ಎಫ್' ಚಿತ್ರತಂಡದಿಂದ ಮೇ 3 ರಂದು ನಿಮಗಾಗಿ ಒಂದು ಸರ್ಪ್ರೈಸ್ ಕಾದಿದೆ. ಅದೇನಪ್ಪಾ ಅಂದ್ರೆ....

ಮೇ 3 ರಂದು ಫಸ್ಟ್ ಲುಕ್ ಬಿಡುಗಡೆ

ಇದೇ ಬುಧವಾರ ಅಂದ್ರೆ, ಮೇ 3ಕ್ಕೆ ಯಶ್ ಅಭಿನಯದ 'ಕೆ.ಜಿ.ಎಫ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಲಿದೆ. ಈ ಮೂಲಕ ಯಶ್ ರವರು ಸಿನಿಮಾದಲ್ಲಿ ಹೇಗೆ ಕಾಣ್ಬಹುದು ಎನ್ನುವ ಕುತೂಹಲಕ್ಕೆ ಬ್ರೇಕ್ ಬೀಳಲಿದೆ.[ಯಶ್ 'ಕೆ.ಜಿ.ಎಫ್' ಚಿತ್ರದ ಲೇಟೆಸ್ಟ್ ಸುದ್ದಿ ಕೇಳಿದ್ರಾ?]

ಟೀಸರ್ ಬಂದ್ರೂ ಬರಬಹುದು!

ಮೇ 3ರ ಸಂಜೆ 6 ಗಂಟೆಗೆ 'ಕೆ.ಜಿ.ಎಫ್' ಚಿತ್ರತಂಡ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಿದೆ. ಇನ್ನೊಂದು ವಿಷ್ಯ ಏನಪ್ಪಾ ಅಂದ್ರೆ, ಅಂದೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಜೊತೆಗೆ ಟೀಸರ್ ಸಹ ರಿಲೀಸ್ ಆಗುವ ಸಾಧ್ಯತೆ ಇದೆ.

1970ರ ಕಥೆ ಹೊಂದಿದೆ

'ಕೆ.ಜಿ.ಎಫ್' ಸಿನಿಮಾದ ಕಥೆ 1970ರ ಕಾಲಘಟ್ಟದಲ್ಲಿ ನಡೆದಿರುವ ಘಟನೆ ಎನ್ನಲಾಗಿದೆ. ಇದೇ ಕಾರಣಕ್ಕೆ ಸಿನಿಮಾದ ಚಿತ್ರೀಕರಣ ತಡವಾಗುತ್ತಿದೆ. ಅಲ್ಲದೇ, ಈ ಸಿನಿಮಾ ದೊಡ್ಡ ಬಜೆಟ್ ನಲ್ಲಿ ರೆಡಿಯಾಗುತ್ತಿದೆ.[ಮೇ 3ರಂದು ರಾಕಿಂಗ್ ಸ್ಟಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ]

'ಕೆ.ಜಿ.ಎಫ್' ಕ್ವೀನ್

'ಕೆ.ಜಿ.ಎಫ್' ಸಿನಿಮಾಗೆ ಈಗಾಗಲೇ ನಾಯಕಿಯ ಆಯ್ಕೆಯಾಗಿದೆ. ಮಾಡೆಲ್ ಶ್ರೀನಿಧಿ ಶೆಟ್ಟಿ ರಾಕಿಂಗ್ ಸ್ಟಾರ್ ಗೆ ಜೋಡಿಯಾಗಿದ್ದಾರೆ.

ಭರ್ಜರಿ ಶೂಟಿಂಗ್

ಸಿನಿಮಾದ ಶೂಟಿಂಗ್ ಮಾರ್ಚ್ 15ಕ್ಕೆ ಶುರುವಾಗಿದ್ದು, ದೊಡ್ಡ ದೊಡ್ಡ ಸೆಟ್ ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಭುವನ್ ಗೌಡ ಕ್ಯಾಮರಾ ಹಿಡಿದಿದ್ರೆ, ರವಿ ಬಸ್ರೂರ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಹೈ ಎಕ್ಸ್ ಪೆಕ್ಟೇಷನ್

'ಉಗ್ರಂ' ಸಿನಿಮಾದ ನಂತರ ಪ್ರಶಾಂತ್ ನೀಲ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ಅಂದುಕೊಂಡಂತೆ ಆದ್ರೆ, 'ಕೆ.ಜಿ.ಎಫ್' ಸಿನಿಮಾ ಡಿಸೆಂಬರ್ ಗೆ ತೆರೆಗೆ ಬರಲಿದೆ.

English summary
Kannada Actor Yash starrer 'KGF' movie first look will release on May 3rd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada