ಕೆಜಿಎಫ್ ಹಿಂದಿ ಕಲೆಕ್ಷನ್ ಬಹಿರಂಗ: ಗಳಿಕೆಯ ಅಂಕಿ ಅಂಶ ಅಚ್ಚರಿಯಾಗಿದೆ.!
'ಕೆಜಿಎಫ್ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು' ಎನ್ನುವುದೇ ಈಗ ಅತಿ ದೊಡ್ಡ ಕುತೂಹಲವಾಗಿದೆ. ಕನ್ನಡದಲ್ಲಿ ಎಷ್ಟಾಗಿದೆ, ತಮಿಳಿನಲ್ಲಿ ಎಷ್ಟು ಗಳಿಕೆ ಕಂಡಿದೆ, ತೆಲುಗಿನಲ್ಲಿ ಎಷ್ಟು ಹಣ ಮಾಡಿದೆ, ಹಿಂದಿಯಲ್ಲಿ ಬಾಚಿಕೊಂಡು ಹಣವೆಷ್ಟು ಎಂಬ ಲೆಕ್ಕಾಚಾರ ಕನ್ನಡ ಚಿತ್ರರಸಿಕರು ಹಾಗೂ ಸ್ಯಾಂಡಲ್ ವುಡ್ ಮಂದಿಯನ್ನ ಕಾಡ್ತಿದೆ.
ಸದ್ಯಕ್ಕೆ, ಕೆಜಿಎಫ್ ಚಿತ್ರದ ಒಟ್ಟಾರೆ ಕಲೆಕ್ಷನ್ ಆಗಲಿ ಅಥವಾ ಪ್ರಾದೇಶಿಕ ಭಾಷೆಗಳ ಕಲೆಕ್ಷನ್ ಆಗಲಿ ಬಹಿರಂಗವಾಗಿರಲಿಲ್ಲ. ಬಟ್, ಇದೀಗ, ಕೆಜಿಎಫ್ ಹಿಂದಿ ಭಾಷೆಯ ಗಳಿಕೆಯ ಗುಟ್ಟು ರಟ್ಟಾಗಿದೆ.
ಕೆಜಿಎಫ್ ಹಿಂದಿ ಭಾಷೆಯಲ್ಲಿ ಮೊದಲ ದಿನ ಎಷ್ಟು ದುಡ್ಡ ಮಾಡಿದೆ ಎಂಬುದನ್ನ ಬಾಲಿವುಡ್ ಖ್ಯಾತ ವಿಶ್ಲೇಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಈ ಅಂಕಿ ಅಂಶಗಳನ್ನ ನೋಡಿದ್ರೆ ಖುಷಿ ಪಡಬೇಕಾ ಅಥವಾ ಅಚ್ಚರಿಯಾಗಬೇಕಾ ಗೊತ್ತಾಗ್ತಿಲ್ಲ. ಯಾಕೆ? ಮುಂದೆ ಓದಿ....

ಮೊದಲ ದಿನ ಹಿಂದಿ ಕೆಜಿಎಫ್ ಗಳಿಸಿದೆಷ್ಟು?
ತರಣ್ ಆದರ್ಶ್ ಅವರು ಹೇಳಿರುವ ಪ್ರಕಾರ, ಕೆಜಿಎಫ್ ಹಿಂದಿ ವರ್ಷನ್ ಸಿನಿಮಾ ಮೊದಲ ದಿನ 2.10 ಕೋಟಿ ಗಳಿಕೆ ಕಂಡಿದೆಯಂತೆ. ಈ ಗಳಿಕೆಯನ್ನ ಕಂಡು ಖುಷಿ ಪಡುವುದಕ್ಕಿಂತ ಅಚ್ಚರಿಯಾಗಿ ನೋಡೋರೇ ಹೆಚ್ಚಾಗಿದ್ದಾರೆ.

ಹಿಂದಿಯಲ್ಲೇ ಅತಿ ಹೆಚ್ಚು ಚಿತ್ರಮಂದಿರ.!
ಅಂದ್ಹಾಗೆ, ಕೆಜಿಎಫ್ ಚಿತ್ರದ ಹಿಂದಿ ವರ್ಷನ್ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅದೇ ತರಣ್ ಆದರ್ಶ್ ಟ್ವೀಟ್ ಪ್ರಕಾರ, 1500 ಸ್ಕ್ರೀನ್ ನಲ್ಲಿ ಹಿಂದಿ ಕೆಜಿಎಫ್ ತೆರೆಕಂಡಿದೆ. ಅಲ್ಲಿಗೆ, 1500 ಸ್ಕ್ರೀನ್ ನಲ್ಲಿ ಬಂದಿರುವ ಕೆಜಿಎಫ್ ಮೊದಲ ದಿನದ ಗಳಿಕೆ ಕೇವಲ 2.10 ಕೋಟಿನಾ? ಎಂಬ ಅಚ್ಚರಿ ಕಾಡ್ತಿದೆ. ಆದ್ರೆ, ಅದು ಚಿತ್ರಮಂದಿರ, ಟಿಕೆಟ್ ಬೆಲೆಯ ಮೇಲೆ ನಿಗದಿಯಾಗಿರುತ್ತೆ ಎಂಬುದನ್ನ ಕೂಡ ಗಮನಿಸಬೇಕಾಗಿದೆ.

ಹಾಗಿದ್ರೆ, ಕನ್ನಡ ಕಲೆಕ್ಷನ್ ಎಷ್ಟು?
1500 ಸ್ಕ್ರೀನ್ ನಲ್ಲಿ ಬಂದಿದ್ದ ಹಿಂದಿ ಕೆಲಕ್ಷನ್ 2.1 ಕೋಟಿ ಅಂದ್ರೆ, 400 ಸ್ಕ್ರೀನ್ ನಲ್ಲಿ ಬಂದಿದ್ದ ಕನ್ನಡ ಕೆಜಿಎಫ್ ಕಲೆಕ್ಷನ್ ಎಷ್ಟಿರಬಹುದು ಎಂಬ ಪ್ರಶ್ನೆ ಈಗ ಕಾಡ್ತಿದೆ. ಬಟ್, ಈ ಬಗ್ಗೆ ಎಲ್ಲಿಯೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸುಮ್ಮನೇ ಅಷ್ಟು ಕೋಟಿ, ಇಷ್ಟು ಕೋಟಿ ಅಂತ ಚರ್ಚೆ ಮಾಡ್ತಿದ್ದಾರೆ.

ಹಿಂದಿ ಸಿನಿಮಾಗೆ ಮೆಚ್ಚುಗೆ
ಹಿಂದಿ ಭಾಷೆಯ ಕೆಜಿಎಫ್ ಚಿತ್ರಕ್ಕೆ ಒಳ್ಳೆಯ ಪ್ರಶಂಸೆ ಸಿಕ್ಕಿದೆ. ಅದರಲ್ಲೂ ಮುಂಬೈ ಪ್ರಾಂತ್ಯದಲ್ಲಿ ಯಶ್ ಸಿನಿಮಾಗೆ ಒಳ್ಳೆಯ ಒಪನಿಂಗ್ ಸಿಕ್ಕಿದೆಯಂತೆ. ಹಾಗಾಗಿ, ಎರಡನೇ ದಿನ ಮತ್ತು ಮೂರನೇ ದಿನದ ಮೇಲೆ ನಿರೀಕ್ಷೆ ಹೆಚ್ಚಿದೆ.

4.5 ಸ್ಟಾರ್ ಕೊಟ್ಟಿದ್ದ ತರಣ್
ಹಿಂದಿ ಸಿನಿಮಾಗಳ ಖ್ಯಾತ ವಿಮರ್ಶಕ ತರಣ್ ಆದರ್ಶ್ ಅವರು ಕೆಜಿಎಫ್ ಚಿತ್ರಕ್ಕೆ 5ಕ್ಕೆ 4.5 ಸ್ಟಾರ್ ಕೊಟ್ಟಿದ್ದಾರೆ. ಒಂದೇ ಪದದಲ್ಲಿ ಚಿತ್ರದ ಬಗ್ಗೆ ಹೇಳಿದ್ದ ತರಣ್ 'ಔಟ್ ಸ್ಟ್ಯಾಂಡಿಂಗ್, ಇದು ಮಾಸ್ಟರ್ ಪೀಸ್' ಎಂದಿದ್ದರು. ಅಲ್ಲಿಗೆ ಕೆಜಿಎಫ್ ಸಿನಿಮಾ ಸೂಪರ್ ಎಂಬ ಅಭಿಪ್ರಾಯ ಬಾಲಿವುಡ್ ನಲ್ಲಿ ಬಂದಿದೆ.

ಜೀರೋ ಫೇಲ್, ಕೆಜಿಎಫ್ ಗೆ ಲಾಭ.!
ಮತ್ತೊಂದೆಡೆ ಕೆಜಿಎಫ್ ಜೊತೆಯಲ್ಲಿ ಶಾರೂಖ್ ಸಿನಿಮಾ ಜೀರೋ ಬಿಡುಗಡೆಯಾಗಿತ್ತು. ಆದ್ರೆ, ಜೀರೋ ಚಿತ್ರಕ್ಕೆ ಕೆಟ್ಟ ವಿಮರ್ಶೆ ಬಂದಿದೆ. ಸಿನಿಮಾ ಚೆನ್ನಾಗಿಲ್ಲ ಎಂಬ ಅಭಿಪ್ರಾಯ ಹೊರಬಿದ್ದಿದೆ. ಹಾಗಾಗಿ, ಜೀರೋ ಚಿತ್ರದ ಹಿನ್ನಡೆಯಿಂದ ಕೆಜಿಎಫ್ ಚಿತ್ರಕ್ಕೆ ಲಾಭವಾಗಬಹುದು ಎಂಬ ಲೆಕ್ಕಾಚಾರ ಈಗ ಬಾಲಿವುಡ್ ನಲ್ಲಿ ಶುರುವಾಗಿದೆ.


Click it and Unblock the Notifications











