twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಇಂಡಸ್ಟ್ರಿಯ ದಿಕ್ಕು ಬದಲಿಸಿದ 'ಕೆಜಿಎಫ್' ಚಿತ್ರದ '21' ಅಂಶಗಳು

    |

    'ಕೆಜಿಎಫ್' ಸಾಮಾನ್ಯವಾದ ಸಿನಿಮಾವಲ್ಲ. ಇದು ಕನ್ನಡ ಚಿತ್ರರಂಗದ ದಿಕ್ಸೂಚಿ. ಇದುವರೆಗೂ ಸ್ಯಾಂಡಲ್ ವುಡ್ ಇಂಡಸ್ಟ್ರಿ ನಡೆದು ಹೋಗುತ್ತಿದ್ದ ಮಾರ್ಗವನ್ನ ಬದಲಿಸಿದ 'ಚಿನ್ನ'ದಂತ ಸಿನಿಮಾ.

    ಕನ್ನಡ ಚಿತ್ರಗಳಿಗೆ ಹೊರರಾಜ್ಯ ಹಾಗೂ ಹೊರದೇಶಗಳಲ್ಲಿ ಹೀಗೊಂದು ಕ್ರೇಜ್ ಇದೆ, ಈ ಮಟ್ಟದ ನಿರೀಕ್ಷೆ ಇದೆ ಎಂದು ತೋರಿಸಿಕೊಟ್ಟ ಸಿನಿಮಾ. ಬಹುಶಃ ಇಲ್ಲಿಂದ ಕನ್ನಡ ಸಿನಿಮಾಗಳ ಮಾರುಕಟ್ಟೆ ವಿಸ್ತಾರವಾಗಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

    ಸಂದರ್ಶನ : 'ಕೆಜಿಎಫ್' ಎನ್ನುವುದು ಹತ್ತು ಸಿನಿಮಾಗಳಿಗೆ ಸಮ ಸಂದರ್ಶನ : 'ಕೆಜಿಎಫ್' ಎನ್ನುವುದು ಹತ್ತು ಸಿನಿಮಾಗಳಿಗೆ ಸಮ

    ಇದನ್ನೆಲ್ಲಾ ಹೊರತುಪಡಿಸಿ ಕೆಜಿಎಫ್ ಚಿತ್ರದ ಬಗ್ಗೆ ಗಮನಿಸುವುದಾದರೇ, ಎಲ್ಲವೂ ವಿಶೇಷ. ಪ್ರತಿ ಹಂತದಲ್ಲು, ಪ್ರತಿ ವಿಭಾಗದಲ್ಲು, ಪ್ರತಿ ಹೆಜ್ಜೆಯಲ್ಲೂ ದಾಖಲೆ. ಅತಿ ದೊಡ್ಡ ಬಜೆಟ್, ತುಂಬಾ ಸ್ಪೆಷಲ್ ಕಥೆ, ಮೂರು ವರ್ಷದ ಪ್ರಾಜೆಕ್ಟ್ ಹೀಗೆ ಹೇಳ್ತಾ ಹೋದ್ರೆ ಸಾಕಷ್ಟಿದೆ. ಕೆಜಿಎಫ್ ಚಿತ್ರ ಡಿಸೆಂಬರ್ 21ಕ್ಕೆ ರಿಲೀಸ್ ಆಗ್ತಿದೆ, ಹಾಗಾಗಿ, ಈ ಚಿತ್ರದ ಬಗ್ಗೆ '21' ರೋಚಕ ಕಥೆ ಇದೆ. ಮುಂದೆ ಓದಿ....

    ಕನ್ನಡದ ದೊಡ್ಡ ಬಜೆಟ್ ಸಿನಿಮಾ

    ಕನ್ನಡದ ದೊಡ್ಡ ಬಜೆಟ್ ಸಿನಿಮಾ

    ಇಲ್ಲಿಯವರೆಗೂ ಕನ್ನಡದಲ್ಲಿ ಬಂದಿರುವ ಸಿನಿಮಾಗಳ ಪೈಕಿ 'ಕೆಜಿಎಫ್' ಚಿತ್ರದ ಅತಿ ದೊಡ್ಡ ಸಿನಿಮಾ ಎಂದು ಹೇಳಲಾಗ್ತಿದೆ. ಸುಮಾರು 70-80 ಕೋಟಿ ವೆಚ್ಚದಲ್ಲಿ ಕೆಜಿಎಫ್ ಚಾಪ್ಟರ್ 1 ಆಗಿದೆಯಂತೆ. ಹಾಗಾಗಿ, ಇದು ಭಾರತದಾದ್ಯಂತ ಹೋಗಲು ಸಾಧ್ಯವಾಯಿತು ಎಂಬ ಮಾತಿದೆ. ಅತಿ ಹೆಚ್ಚು ಬಜೆಟ್ ಸಿನಿಮಾ ಎನ್ನುವುದೇ ಈ ಚಿತ್ರದ ದೊಡ್ಡ ಹೈಲೈಟ್ ಆಗಿದೆ.

    ಹೌದು ಸ್ವಾಮಿ ! ಈ ಹುಡುಗನೇ ಕೆಜಿಎಫ್ ನ ಸದ್ಯದ ಸೆನ್ಸೇಷನ್ಹೌದು ಸ್ವಾಮಿ ! ಈ ಹುಡುಗನೇ ಕೆಜಿಎಫ್ ನ ಸದ್ಯದ ಸೆನ್ಸೇಷನ್

    ಐದು ಭಾಷೆಯ ಸಿನಿಮಾ

    ಐದು ಭಾಷೆಯ ಸಿನಿಮಾ

    ಕೆಜಿಎಫ್ ಸಿನಿಮಾ ಮಾಡಬೇಕೆಂದು ಶೂಟಿಂಗ್ ಆರಂಭಿಸಿದಾಗ ಐದು ಭಾಷೆಯಲ್ಲಿ ಬಿಡುಗಡೆ ಮಾಡಬೇಕು ಎಂಬ ಉದ್ದೇಶ ಚಿತ್ರತಂಡಕ್ಕಿರಲಿಲ್ಲ. ಆದ್ರೆ, ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಐದು ಭಾಷೆಯಲ್ಲೂ ರಿಲೀಸ್ ಮಾಡಲು ಮುಂದಾದರು. ಇದರ ಪರಿಣಾಮ ಈಗ ಕೆಜಿಎಫ್ ಮತ್ತು ಯಶ್ ಇಡೀ ದೇಶದಲ್ಲೇ ದೊಡ್ಡ ಸದ್ದು ಮಾಡ್ತಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ಕೆಜಿಎಫ್ ರಿಲೀಸ್ ಆಗ್ತಿದೆ.

    ಆಡಿಯೋ ಹಕ್ಕು ಅತಿ ದೊಡ್ಡ ಬೆಲೆಗೆ ಸೇಲ್

    ಆಡಿಯೋ ಹಕ್ಕು ಅತಿ ದೊಡ್ಡ ಬೆಲೆಗೆ ಸೇಲ್

    ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಚಿತ್ರವೊಂದರ ಆಡಿಯೋ ಹಕ್ಕು ಅತಿ ದೊಡ್ಡ ಬೆಲೆಗೆ ಮಾರಾಟವಾಗಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಕೆಜಿಎಫ್. ಮೂಲಗಳ ಪ್ರಕಾರ 3.2 ಕೋಟಿ ರೂಪಾಯಿಗೆ ಕೆಜಿಎಫ್ ಆಡಿಯೋ ಲಹರಿ ಮ್ಯೂಸಿಕ್ ಪಾಲಾಗಿದೆ.

    ಅತಿ ಹೆಚ್ಚು ಚಿತ್ರಮಂದಿರದ ದಾಖಲೆ

    ಅತಿ ಹೆಚ್ಚು ಚಿತ್ರಮಂದಿರದ ದಾಖಲೆ

    ಕೆಜಿಎಫ್ ಸಿನಿಮಾ ಸುಮಾರು 2000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ತೆರೆಕಾಣುತ್ತಿದೆ. ಇದು ಕನ್ನಡದ ಮಟ್ಟಿಗೆ ಹೊಸ ದಾಖಲೆಯೇ ಸರಿ. ಐದು ಭಾಷೆಯಲ್ಲಿ ಸೇರಿ ದೇಶ ಹಾಗೂ ಹೊರದೇಶಗಳಲ್ಲಿ ಕೆಜೆಎಫ್ ಬಿಡುಗಡೆಯಾಗ್ತಿದೆ. ಕರ್ನಾಟಕದಲ್ಲೇ ಸುಮಾರು 350ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಿನಿಮಾ ತೆರೆಕಾಣ್ತಿದೆ.

    ಪ್ರಶಾಂತ್ ನೀಲ್ 2ನೇ ಹೀರೋ

    ಪ್ರಶಾಂತ್ ನೀಲ್ 2ನೇ ಹೀರೋ

    ಕೆಜಿಎಫ್ ಚಿತ್ರಕ್ಕೆ ಒಬ್ಬರ ಹೀರೋ ಯಶ್ ಆದ್ರೆ, ಇನ್ನೊಬ್ಬ ಹೀರೋ ನಿರ್ದೇಶಕ ಪ್ರಶಾಂತ್ ನೀಲ್. ಶ್ರೀಮುರಳಿ ಅಭಿನಯಿಸಿದ್ದ 'ಉಗ್ರಂ' ನಿರ್ದೇಶಕ ಪ್ರಶಾಂತ್ ನೀಲ್ ಅವರ ಮೊದಲ ಸಿನಿಮಾ. ಈ ಚಿತ್ರದಿಂದಲೇ ಶ್ರೀಮುರಳಿ ಲಕ್ ಬದಲಾಯಿತು. ಪ್ರಶಾಂತ್ ನಿರ್ದೇಶನದ ಮೇಲೆ ಭರವಸೆ ಮೂಡಿತು. ಕೆಜಿಎಫ್ ಪ್ರಶಾಂತ್ ಅವರ ಎರಡನೇ ಸಿನಿಮಾ. 'ಉಗ್ರಂ' ಚಿತ್ರಕ್ಕಿಂತ ಈಗ ಕೆಜಿಎಫ್ ಮೇಲೆ ಹೆಚ್ಚು ನಿರೀಕ್ಷೆ ಇಲ್ಲಿದೆ.

    ಹೊಂಬಾಳೆ ಫಿಲಂಸ್ ನಾಲ್ಕನೇ ಪ್ರಾಜೆಕ್ಟ್

    ಹೊಂಬಾಳೆ ಫಿಲಂಸ್ ನಾಲ್ಕನೇ ಪ್ರಾಜೆಕ್ಟ್

    ಪುನೀತ್ ರಾಜ್ ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರವನ್ನ ಮೊದಲ ಬಾರಿಗೆ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲಂಸ್, ನಂತರ 'ಮಾಸ್ಟರ್ ಪೀಸ್' ಹಾಗೂ 'ರಾಜಕುಮಾರ' ಚಿತ್ರಗಳನ್ನ ನಿರ್ಮಾಣ ಮಾಡಿ, ಕನ್ನಡದ ಅತಿ ದೊಡ್ಡ ನಿರ್ಮಾಣ ಸಂಸ್ಥೆ ಎನಿಸಿಕೊಂಡಿದೆ. ಈಗ 'ಕೆಜಿಎಫ್' ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನ ಇನ್ನೊಂದು ಹಂತಕ್ಕೆ ಕರೆದುಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕೆಜಿಎಫ್ ಹೊಂಬಾಳೆ ಬ್ಯಾನರ್ ನಲ್ಲಿ ಬರ್ತಿರುವ ನಾಲ್ಕನೇ ಚಿತ್ರ.

    ಡಿಸೆಂಬರ್ 21ಕ್ಕೆ 'ಕೆಜಿಎಫ್' ಜೊತೆ 7 ದೊಡ್ಡ ಸಿನಿಮಾಗಳು ರಿಲೀಸ್ಡಿಸೆಂಬರ್ 21ಕ್ಕೆ 'ಕೆಜಿಎಫ್' ಜೊತೆ 7 ದೊಡ್ಡ ಸಿನಿಮಾಗಳು ರಿಲೀಸ್

    ಪ್ರಶಾಂತ್-ರವಿಬಸ್ರೂರು ಕಾಂಬಿನೇಷನ್

    ಪ್ರಶಾಂತ್-ರವಿಬಸ್ರೂರು ಕಾಂಬಿನೇಷನ್

    ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಸಂಗೀತ ನಿರ್ದೇಶಕ ರವಿ ಬಸ್ರೂರು ಜೋಡಿಯ ಮೇಲೆ ಬೇರೆಯದ್ದೇ ನಿರೀಕ್ಷೆ ಇದೆ. ಯಾಕಂದ್ರೆ, ಉಗ್ರಂ ಹಿಟ್ ಆಗಲು ಇವರಿಬ್ಬರ ಜುಗಲ್ ಬಂದಿಯೇ ಮುಖ್ಯ ಕಾರಣ. ಈಗ ಅದೇ ಜೋಡಿ ಮತ್ತೊಮ್ಮೆ ಒಂದಾಗಿದ್ದು, ಕೆಜಿಎಫ್ ಮೂಲಕ ಬರ್ತಿದೆ. ಸಹಜವಾಗಿ, ಇವರಿಬ್ಬರ ಮೇಲೆ ಎಕ್ಸ್ ಪೆಕ್ಟೇಶನ್ ಹೆಚ್ಚಿದೆ.

    ಇದು ಕಾಲಘಟ್ಟದ ಚಿತ್ರ

    ಇದು ಕಾಲಘಟ್ಟದ ಚಿತ್ರ

    ಕೆಜಿಎಫ್ ಚಿತ್ರದ 70-80ರ ದಶಕದ ಸಿನಿಮಾ. ಆ ಕಾಲಘಟ್ಟಕ್ಕಾಗಿ ಯಶ್ ಲುಕ್, ಮ್ಯಾನರಿಸಂ ಎಲ್ಲವನ್ನ ಬದಲಿಸಿಕೊಂಡಿದ್ದಾರೆ. ಆ ಕಾಲಘಟ್ಟವನ್ನ ಮತ್ತೆ ರಿ-ಕ್ರಿಯೇಟ್ ಮಾಡೋಕೆ ಅಷ್ಟೇ ಅದ್ಭುತವಾಗಿ ಸೆಟ್ ನಿರ್ಮಾಣ ಮಾಡಿದ್ದಾರೆ. ಕೆಜಿಎಫ್ ಚಿತ್ರಕ್ಕಾಗಿ ಸೆಟ್ ಡೈರೆಕ್ಷನ್ ಮಾಡಿರೋದು ಶಿವಕುಮಾರ್. ಹಾಗಾಗಿ, ಯಶ್ ವೃತ್ತಿ ಜೀವನದಲ್ಲಿ ಮೊದಲ ಕಾಲಘಟ್ಟದ ಸಿನಿಮಾ. ಮುಂಬೈ ಹಾಗೂ ಕೆಜಿಎಫ್ ನಲ್ಲಿ ಕಥೆ ನಡೆಯುತ್ತೆ.

    ಈ 'ಒಬ್ಬ ವ್ಯಕ್ತಿ' ಸಹಾಯದಿಂದಲೇ ತೆಲುಗು, ಹಿಂದಿಯಲ್ಲಿ 'ಕೆಜಿಎಫ್' ಘರ್ಜಿಸುತ್ತಿದೆ.!ಈ 'ಒಬ್ಬ ವ್ಯಕ್ತಿ' ಸಹಾಯದಿಂದಲೇ ತೆಲುಗು, ಹಿಂದಿಯಲ್ಲಿ 'ಕೆಜಿಎಫ್' ಘರ್ಜಿಸುತ್ತಿದೆ.!

    ಮೂರು ವರ್ಷದ ಪ್ರಾಜೆಕ್ಟ್

    ಮೂರು ವರ್ಷದ ಪ್ರಾಜೆಕ್ಟ್

    ಕೆಜಿಎಫ್ ಸಿನಿಮಾ ಮಾಡೋಕೆ ಆಲ್ ಮೋಸ್ಟ್ ಮೂರು ವರ್ಷ ಸಮಯ ತೆಗೆದುಕೊಂಡಿದ್ದಾರೆ. ಈ ಮೂರು ವರ್ಷ ಯಶ್ ಬೇರೆ ಯಾವುದೇ ಸಿನಿಮಾ ಮಾಡಿಲ್ಲ. ನಿರ್ದೇಶಕ ಪ್ರಶಾಂತ್ ನೀಲ್ ಬೇರೆ ಯಾವ ಚಿತ್ರವನ್ನ ಕೈಗೆತ್ತಿಕೊಂಡಿಲ್ಲ. ಸೋ, ಮೂರು ವರ್ಷದ ಪ್ರಾಜೆಕ್ಟ್ ಎಂಬುದು ಬಾಹುಬಲಿ ಅಷ್ಟೇ ಕ್ರೇಜ್ ಹುಟ್ಟಿಕೊಳ್ಳಲು ಕಾರಣವಾಗಿದೆ.

    ಯೂಟ್ಯೂಬ್ 'ಕಿಂಗ್' ಎನಿಸಿಕೊಂಡ ಕೆಜಿಎಫ್

    ಯೂಟ್ಯೂಬ್ 'ಕಿಂಗ್' ಎನಿಸಿಕೊಂಡ ಕೆಜಿಎಫ್

    ಕೆಜಿಎಫ್ ಚಿತ್ರದ ಟ್ರೈಲರ್, ಹಾಡುಗಳು ಎಲ್ಲವೂ ಸೂಪರ್ ಹಿಟ್ ಆಗಿವೆ. ಅದರಲ್ಲೂ ಹಿಂದಿ ವರ್ಷನ್ ಟ್ರೈಲರ್ ಹಾಗೂ ಹಾಡುಗಳಂತೂ ಅತಿ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಕನ್ನಡ ಸಿನಿಮಾದ ಟ್ರೈಲರ್ ವೊಂದು 1.2 ಕೋಟಿ ದಾಟಿದೆ. ಅದೇ ಹಿಂದಿ ವರ್ಷನ್ ಟ್ರೈಲರ್ 1.9 ಕೋಟಿ ವೀವ್ಸ್ ಪಡೆದಿದೆ. ಕೇವಲ ಟ್ರೈಲರ್ ಮಾತ್ರವಲ್ಲ, ಕೆಜಿಎಫ್ ಚಿತ್ರದ ಎಲ್ಲ ವಿಡಿಯೋಗಳಿಗೂ ಯೂಟ್ಯೂಬ್ ನಲ್ಲಿ ಭಾರಿ ಮೆಚ್ಚುಗೆ ಗಳಿಸಿದೆ.

    'ಕೆಜಿಎಫ್' ಗಡ್ಡ ವಿಲನ್ಸ್

    'ಕೆಜಿಎಫ್' ಗಡ್ಡ ವಿಲನ್ಸ್

    ಕೆಜಿಎಫ್ ಚಿತ್ರದ ಅಪರೂಪದ ವಿಶೇಷ ಅಂದ್ರೆ ಗಡ್ಡ. ನಟ ಯಶ್ ಸೇರಿದಂತೆ ಚಿತ್ರದ ಬಹುತೇಕ ಖಳನಾಯಕರು ಗಡ್ಡ ಬಿಟ್ಟಿದ್ದಾರೆ. ಈ ಚಿತ್ರಕ್ಕಾಗಿಯೇ ಸುಮಾರು ತಿಂಗಳುಗಳು ಗಡ್ಡ ಬಿಟ್ಟು ಪಾತ್ರಕ್ಕಾಗಿ ತಯಾರಾಗಿದ್ದರು. ನಿರ್ದೇಶಕ ಪ್ರಶಾಂತ್ ನೀಲ್ ಕೂಡ ಗಡ್ಡ ಬಿಟ್ಟು ಕಾಣಿಸಿಕೊಂಡಿದ್ದರು. ಕೆಜಿಎಫ್ ಅಂದ್ರೆ ಗಡ್ಡ ಅನ್ನೋತರ ಟೈಂ ಕೂಡ ಆಗಿತ್ತು.

    ಯಶ್ 20ನೇ ಸಿನಿಮಾ

    ಯಶ್ 20ನೇ ಸಿನಿಮಾ

    'ಮೊಗ್ಗಿನ ಮನಸ್ಸು' ಚಿತ್ರದ ಮೂಲಕ ಪ್ರಮುಖ ನಟನಾಗಿ ಕಾಣಿಸಿಕೊಂಡ ಯಶ್ ಇದುವರೆಗೂ 19 ಸಿನಿಮಾದಲ್ಲಿ ನಟಿಸಿದ್ದಾರೆ. ಇದರಲ್ಲಿ ಮೂರು ಚಿತ್ರದಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಈಗ 20ನೇ ಸಿನಿಮಾ ಕೆಜಿಎಫ್. ಇದು ಕೂಡ ಯಶ್ ಪಾಲಿಗೆ ವಿಶೇಷವಾಗಲಿದೆ.

    'ಕೆಜಿಎಫ್' ಬೆನ್ನಿಗೆ ವಿಶಾಲ್ ನಿಲ್ಲಲು ಕಾರಣ ಯಶ್ ಮಾಡಿದ್ದ 'ಆ' ದೊಡ್ಡ ಸಹಾಯ.!'ಕೆಜಿಎಫ್' ಬೆನ್ನಿಗೆ ವಿಶಾಲ್ ನಿಲ್ಲಲು ಕಾರಣ ಯಶ್ ಮಾಡಿದ್ದ 'ಆ' ದೊಡ್ಡ ಸಹಾಯ.!

    ಶ್ರೀನಿಧಿ ಮೊದಲ ಸಿನಿಮಾ

    ಶ್ರೀನಿಧಿ ಮೊದಲ ಸಿನಿಮಾ

    ಕೆಜಿಎಫ್ ಸಿನಿಮಾ ಶ್ರೀನಿಧಿ ಶೆಟ್ಟಿಗೆ ಚೊಚ್ಚಲ ಚಿತ್ರ. ಮೊದಲ ಸಿನಿಮಾದಲ್ಲೇ ಕೆಜಿಎಫ್ ಎಂಬ ಮೆಗಾ ಪ್ರಾಜೆಕ್ಟ್ ನಲ್ಲಿ ಹಾಗೂ ಐದು ಭಾಷೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಖುಷಿಯ ವಿಷ್ಯ. 70-80ರ ದಶಕದ ಕಥೆ ಇದಾಗಿದ್ದು, ರಿಯಾ ಎಂಬ ಪಾತ್ರದಲ್ಲಿ ಶ್ರೀನಿಧಿ ಅಭಿನಯಿಸುತ್ತಿದ್ದಾರೆ.

    ಚಾಪ್ಟರ್-1 ಮತ್ತು ಚಾಪ್ಟರ್-2

    ಚಾಪ್ಟರ್-1 ಮತ್ತು ಚಾಪ್ಟರ್-2

    ಕನ್ನಡದಲ್ಲಿ ಭಾಗ ಒಂದು ಭಾಗ ಎರಡು ಬರುವುದು ತೀರಾ ವಿರಳ. ಟೈಟಲ್ ಚಾಪ್ಟರ್-1, ಚಾಪ್ಟರ್-2 ಅಂತ ಇದ್ರು, ಕಥೆ ಆ ಚಿತ್ರಕ್ಕೆ ಸಂಬಂಧವಿರಲ್ಲ. ಆದ್ರೆ, ಕೆಜಿಎಫ್ ವಿಚಾರದಲ್ಲಿ ಆಗಿಲ್ಲ. ಬಾಹುಬಲಿ ರೀತಿ ಇಲ್ಲಿಯೂ ಪಾರ್ಟ್ 1 ಮತ್ತು ಪಾರ್ಟ್ 2 ಇದೆ. ಬಟ್, ಮೊದಲ ಭಾಗಕ್ಕೂ ಎರಡನೇ ಭಾಗಕ್ಕೂ ಟ್ವಿಸ್ಟ್ ಏನಿದೆ ಎಂಬುದು ಸಿನಿಮಾದಲ್ಲೇ ನೋಡ್ಬೇಕು.

    ಪರಭಾಷೆ ಅಭಿಮಾನಿಗಳು ಮೆಚ್ಚಿದ ಚಿತ್ರ

    ಪರಭಾಷೆ ಅಭಿಮಾನಿಗಳು ಮೆಚ್ಚಿದ ಚಿತ್ರ

    ಕೆಜಿಎಫ್ ನೋಡಲು ಕೇವಲ ಕನ್ನಡ ಅಭಿಮಾನಿಗಳು ಮಾತ್ರವಲ್ಲ, ಪರಭಾಷೆಯಲ್ಲೂ ಅಭಿಮಾನಿಗಳು ಕಾಯ್ತಿದ್ದಾರೆ. ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯ ಅಭಿಮಾನಿಗಳು, ಹೊಸ ಹೀರೋ ಯಶ್ ಅವರನ್ನ ತಮ್ಮ ಇಂಡಸ್ಟ್ರಿಗೆ ಸ್ವಾಗತ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

    ಪರಭಾಷೆ 'ಸ್ಟಾರ್'ಗಳು ಮೆಚ್ಚಿದ ಸಿನಿಮಾ

    ಪರಭಾಷೆ 'ಸ್ಟಾರ್'ಗಳು ಮೆಚ್ಚಿದ ಸಿನಿಮಾ

    ಪರಭಾಷೆಯಲ್ಲಿ ಅಭಿಮಾನಿಗಳು ಮಾತ್ರವಲ್ಲ, ಕೆಲವು ನಟ, ನಿರ್ದೇಶಕರು ಕೂಡ ಕೆಜಿಎಫ್ ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. ತಮಿಳಿನ ಧನುಶ್, ತೆಲುಗು ನಟ ಪ್ರಭಾಸ್, ಹಿಂದಿ ನಟ ಶಾರೂಖ್ ಖಾನ್, ಎಸ್ ಎಸ್ ರಾಜಮೌಳಿ, ನಟ ವಿಶಾಲ್ ಹೀಗೆ ಹಲವು ಸ್ಟಾರ್ ಗಳು ಇಷ್ಟಪಟ್ಟಿದ್ದಾರೆ.

    ಮದುವೆ ಬಳಿಕ ಮೊದಲ ಚಿತ್ರ

    ಮದುವೆ ಬಳಿಕ ಮೊದಲ ಚಿತ್ರ

    ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ಬಳಿಕ ಇವರಿಬ್ಬರದು ಯಾವ ಸಿನಿಮಾ ಬಿಡುಗಡೆಯಾಗಿಲ್ಲ. ಮದುವೆ ಬಳಿಕ ತೆರೆಕಾಣ್ತಿರುವ ಮೊದಲ ಸಿನಿಮಾ ಕೆಜಿಎಫ್ ಎಂಬುವುದು ವಿಶೇಷ. 2016ರ ಡಿಸೆಂಬರ್ ನಲ್ಲಿ ಯಶ್ ಮದುವೆ ಆಗಿತ್ತು.

    ಯಶ್ ಗೆ ಡಿಸೆಂಬರ್ ಸ್ಪೆಷಲ್

    ಯಶ್ ಗೆ ಡಿಸೆಂಬರ್ ಸ್ಪೆಷಲ್

    ಇನ್ನೊಂದು ವಿಶೇಷ ಅಂದ್ರೆ, ಡಿಸೆಂಬರ್ ತಿಂಗಳು ಯಶ್ ಗೆ ಒಂದು ರೀತಿ ಲಕ್ಕಿ. ಯಾಕಂದ್ರೆ, ಡಿಸೆಂಬರ್ ನಲ್ಲೆ ಯಶ್-ರಾಧಿಕಾ ಮದುವೆ ಆಗಿದ್ದರು. ಡಿಸೆಂಬರ್ ತಿಂಗಳಲ್ಲೇ ಯಶ್ ದಂಪತಿಗೆ ಹೆಣ್ಣು ಮಗು ಜನಿಸಿದೆ. ಈಗ ಡಿಸೆಂಬರ್ ತಿಂಗಳಲ್ಲೇ ಕೆಜಿಎಫ್ ಬರ್ತಿದೆ. ಇದೆಲ್ಲವೂ ಸೇರಿ ಯಶ್ ಕುಟುಂಬದಲ್ಲಿ ಡಿಸೆಂಬರ್ ಸಂಭ್ರಮಕ್ಕೆ ಕಾರಣವಾಗಿದೆ.

    ಕನ್ನಡ ಮಾರುಕಟ್ಟೆ ವಿಸ್ತರಣೆ

    ಕನ್ನಡ ಮಾರುಕಟ್ಟೆ ವಿಸ್ತರಣೆ

    ಕನ್ನಡ ಸಿನಿಮಾ ಮಾರುಕಟ್ಟೆ ಚಿಕ್ಕದು, ಕನ್ನಡ ಸಿನಿಮಾಗಳ ಬಿಸಿನೆಸ್ ಕಮ್ಮಿ ಎಂಬ ಮಾತಿದೆ. ಆದ್ರೆ, ಕೆಜಿಎಫ್ ಆ ಮಾತನ್ನ ಬ್ರೇಕ್ ಮಾಡಿದೆ. ಕನ್ನಡ ಚಿತ್ರಕ್ಕೂ ದೊಡ್ಡ ಮಾರುಕಟ್ಟೆ ಇದೆ. ನಾವು ಅದನ್ನ ತಗೊಂಡು ಹೋಗ್ಬೇಕು ಎಂಬುದನ್ನ ತೋರಿಸಿಕೊಟ್ಟಿದೆ. ಈಗ ಉಳಿದ ಕನ್ನಡ ಚಿತ್ರಗಳು ಹಾಗೂ ಕನ್ನಡ ನಿರ್ಮಾಪಕರು ಕೆಜಿಎಫ್ ಚಿತ್ರದ ರೀತಿ ಪ್ರಚಾರ ಮಾಡ್ಬೇಕು, ಆ ರೀತಿ ಸಿನಿಮಾ ಮಾಡ್ಬೇಕು ಎನ್ನುವಂತಾಗಿದೆ.

    ಒಂದು ಮುಂಚೆ ವಿದೇಶದಲ್ಲಿ ರಿಲೀಸ್

    ಒಂದು ಮುಂಚೆ ವಿದೇಶದಲ್ಲಿ ರಿಲೀಸ್

    ಸಾಮಾನ್ಯವಾಗಿ ಕನ್ನಡ ಸಿನಿಮಾಗಳು ವಿದೇಶದಲ್ಲಿ ಬಿಡುಗಡೆಯಾದಾಗ, ಮೊದಲು ಭಾರತದಲ್ಲಿ ನಂತರ ವಿದೇಶದಲ್ಲಿ ತೆರೆಗೆ ಬರುತ್ತೆ. ಆದ್ರೆ, ಕೆಜಿಎಫ್ ಸಿನಿಮಾ ಒಂದು ದಿನ ಮುಂಚೆಯೇ, ಅಂದ್ರೆ, ಭಾರತದಲ್ಲಿ ರಿಲೀಸ್ ಆಗುವ ಒಂದು ದಿನ ಮುಂಚೆ ಯುಎಸ್, ಕೆನಡಾ ಸೇರಿದಂತೆ ಹಲವು ಕಡೆ ಬಿಡುಗಡೆಯಾಗ್ತಿದೆ.

    ಹೊಸ ಕಲಾವಿದರೇ ಹೆಚ್ಚು

    ಹೊಸ ಕಲಾವಿದರೇ ಹೆಚ್ಚು

    ಚಿತ್ರದ ನಿರ್ದೇಶಕರೇ ಹೇಳುವಾಗೆ, ಕೆಜಿಎಫ್ ಚಿತ್ರದಲ್ಲಿ ಶೇಕಡಾ 90 ರಷ್ಟು ಕಲಾವಿದರು ಹೊಸಬರು. ಯಶ್, ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ಅನಂತ್ ನಾಗ್, ಬಿ ಸುರೇಶ್ ಅಂತಹ ಖ್ಯಾತ ಕಲಾವಿದರಿದ್ದರು. ಇವರನ್ನ ಬಿಟ್ಟು ಹೊಸ ಕಲಾವಿದರು ಹೆಚ್ಚು ಗಮನ ಸೆಳೆಯಲಿದ್ದಾರಂತೆ.

    English summary
    Rocking star Yash starrer KGF is one of the biggest Kannada movies ever released in Kannada film industry. KGF is getting released on December 21st all over the world in five languages including Hindi, Tamil, Telugu, Malayam. Why one should see the movie? Shrinidhi Shetty is the leading female actor. The movie is directed by Prashanth Neel.
    Thursday, December 20, 2018, 16:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X