ದಾಖಲೆ ಬೆಲೆಗೆ 'ಕೆ.ಜಿ.ಎಫ್' ತೆಲುಗು, ತಮಿಳು ರೈಟ್ಸ್ ಮಾರಾಟ

Recommended Video

KGF Kannada Movie : ದಾಖಲೆ ಬೆಲೆಗೆ ಮಾರಾಟವಾಯ್ತು ಕೆಜಿಎಫ್ ತಮಿಳು ತೆಲುಗು ರೈಟ್ಸ್ | FILMIBEAT KANNADA

ಗಾಂಧಿನಗರದಲ್ಲಿ ಈ ವರ್ಷ ಬಹುನಿರೀಕ್ಷೆ ಹುಟ್ಟು ಹಾಕಿರುವ ಚಿತ್ರ 'ಕೆ.ಜಿ.ಎಫ್'. ಡಿಸೆಂಬರ್ 21 ರಂದು 'ಕೆ.ಜಿ.ಎಫ್' ಚಿತ್ರ ರಾಜ್ಯಾದ್ಯಂತ ಮಾತ್ರ ಅಲ್ಲ, ರಾಷ್ಟ್ರಾದ್ಯಂತ ಬಿಡುಗಡೆ ಆಗಲಿದೆ. ಇದೇ ವಾರ 'ಕೆ.ಜಿ.ಎಫ್' ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ.

ಎಲ್ಲರ ಕಣ್ಣು 'ಕೆ.ಜಿ.ಎಫ್' ಮೇಲೆ ಇರುವಾಗಲೇ, ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ನಿಮಗೆಲ್ಲ ಗೊತ್ತಿರುವ ಹಾಗೆ, 'ಕೆ.ಜಿ.ಎಫ್' ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

ಪ್ರಶಾಂತ್ ನೀಲ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ 'ಕೆ.ಜಿ.ಎಫ್' ರಾರಾಜಿಸಲಿದೆ. ಸದ್ಯ 'ಕೆ.ಜಿ.ಎಫ್' ಅಂಗಳದಿಂದ ಬ್ರೇಕ್ ಆಗಿರುವ ಲೇಟೆಸ್ಟ್ ಸುದ್ದಿ ಪ್ರಕಾರ, ತಮಿಳು ಹಾಗೂ ತೆಲುಗು ರೈಟ್ಸ್ ದಾಖಲೆ ಬೆಲೆಗೆ ಮಾರಾಟ ಆಗಿದೆ. ಮುಂದೆ ಓದಿರಿ...

ತಮಿಳು ಹಕ್ಕು ಖರೀದಿ ಮಾಡಿದವರು ಯಾರು ಗೊತ್ತೇ.?

ತಮಿಳು ಹಕ್ಕು ಖರೀದಿ ಮಾಡಿದವರು ಯಾರು ಗೊತ್ತೇ.?

'ಕೆ.ಜಿ.ಎಫ್' ಚಿತ್ರದ ತಮಿಳು ಹಕ್ಕುಗಳ ವಿತರಣೆಯನ್ನು ಖರೀದಿ ಮಾಡಿರುವವರು ಬೇರೆ ಯಾರೂ ಅಲ್ಲ.. ತಮಿಳಿನ ಖ್ಯಾತ ನಟ ವಿಶಾಲ್ ಒಡೆತನದ 'ವಿಶಾಲ್ ಫಿಲ್ಮ್ ಫ್ಯಾಕ್ಟರಿ' ಸಂಸ್ಥೆ. ಮೂಲಗಳ ಪ್ರಕಾರ, ದಾಖಲೆ ಬೆಲೆ ನೀಡಿ 'ವಿಶಾಲ್ ಫಿಲ್ಮ್ ಫ್ಯಾಕ್ಟರಿ' ಕೆ.ಜಿ.ಎಫ್ ತಮಿಳು ಹಕ್ಕುಗಳನ್ನು ಖರೀದಿ ಮಾಡಿದೆ.

ತೆಲುಗು ಹಕ್ಕು ಖರೀದಿ ಮಾಡಿರುವವರು ಯಾರು.?

ತೆಲುಗು ಹಕ್ಕು ಖರೀದಿ ಮಾಡಿರುವವರು ಯಾರು.?

'ಕೆ.ಜಿ.ಎಫ್' ಚಿತ್ರದ ತೆಲುಗು ಹಕ್ಕುಗಳ ವಿತರಣೆಯನ್ನು 'ವಾರಾಹಿ ಚಲನ ಚಿತ್ರಂ'ಸಂಸ್ಥೆ ಖರೀದಿ ಮಾಡಿದೆ. ತೆಲುಗಿನಲ್ಲಿ 'ಈಗ', 'ಲೆಜೆಂಡ್' ಸೇರಿದಂತೆ ಹಲವಾರು ಚಿತ್ರಕ್ಕೆ ಬಂಡವಾಳ ಹಾಕಿದ್ದು ಇದೇ 'ವಾರಾಹಿ ಚಲನ ಚಿತ್ರಂ' ಸಂಸ್ಥೆ ಅನ್ನೋದು ನಿಮಗೆ ಗೊತ್ತಿರಲಿ.

ಫರ್ಹಾನ್ ಅಖ್ತರ್ ಕೈಯಲ್ಲಿ ಹಿಂದಿ ರೈಟ್ಸ್

ಫರ್ಹಾನ್ ಅಖ್ತರ್ ಕೈಯಲ್ಲಿ ಹಿಂದಿ ರೈಟ್ಸ್

ಇನ್ನೂ 'ಕೆ.ಜಿ.ಎಫ್' ಚಿತ್ರದ ಹಿಂದಿ ಹಕ್ಕುಗಳ ವಿತರಣೆಯನ್ನು ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿದ್ವಾನಿ ಒಡೆತನದ ಎಕ್ಸೆಲ್ ಎಂಟರ್ ಟೈನ್ಮೆಂಟ್ ಪಡೆದುಕೊಂಡಿದೆ.

ಗುಟ್ಟು ಬಿಟ್ಟುಕೊಟ್ಟಿಲ್ಲ.!

ಗುಟ್ಟು ಬಿಟ್ಟುಕೊಟ್ಟಿಲ್ಲ.!

ಮೂಲಗಳ ಪ್ರಕಾರ, 'ಕೆ.ಜಿ.ಎಫ್' ಚಿತ್ರದ ತಮಿಳು, ತೆಲುಗು ಹಾಗೂ ಹಿಂದಿ ಹಕ್ಕುಗಳು ದಾಖಲೆ ಬೆಲೆಗೆ ಸೇಲ್ ಆಗಿದೆ. ಆದ್ರೆ, ಆ 'ದಾಖಲೆ' ಬೆಲೆ ಎಷ್ಟು ಎಂಬ ಗುಟ್ಟು ಮಾತ್ರ ಇನ್ನೂ ರಟ್ಟಾಗಿಲ್ಲ.

ಡಿಸೆಂಬರ್ 21 ರಂದು ಬಿಡುಗಡೆ

ಡಿಸೆಂಬರ್ 21 ರಂದು ಬಿಡುಗಡೆ

70-80 ರ ದಶಕದ ಪೀರಿಯಡ್ ಡ್ರಾಮಾ ಹೊಂದಿರುವ 'ಕೆ.ಜಿ.ಎಫ್' ಚಿತ್ರದಲ್ಲಿ ಯಶ್ ಜೊತೆಗೆ ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ವಸಿಷ್ಠ.ಎನ್.ಸಿಂಹ, ರಮ್ಯಾ ಕೃಷ್ಣನ್, ಬಿ.ಸುರೇಶ ಸೇರಿದಂತೆ ದೊಡ್ಡ ತಾರಾಬಳಗ ಇದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ.

More from Filmibeat

English summary
Yash starrer Kannada Movie KGF Tamil and Telugu rights have been sold for record price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X