ಶಂಕ್ರಣ್ಣನ ಕನಸು ನನಸು ಮಾಡುತ್ತಂತೆ ಯಶ್ 'ಕೆಜಿಎಫ್'.!

Recommended Video

KGF Kannada Movie : ಯಶ್ ಕೆಜಿಎಫ್ ಸಿನಿಮಾ ಶಂಕರ್ ನಾಗ್ ಕನಸು ನನಸು ಮಾಡುತ್ತಂತೆ | FILIMIBEAT KANNADA

ರಾಕಿಂಗ್ ಸ್ಟಾರ್ ಅಭಿನಯದ 'ಕೆಜಿಎಫ್' ಸಿನಿಮಾ ಟ್ರೈಲರ್ ಅಂತಿಮವಾಗಿ ಬಿಡುಗಡೆಯಾಗಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಟ್ರೈಲರ್ ಅದ್ಧೂರಿಯಾಗಿ ತೆರೆಕಂಡಿದೆ.

ಟ್ರೈಲರ್ ನೋಡಿದ ಮೇಲೆ ಕನ್ನಡ ಚಿತ್ರರಂಗದ ಮೇಲೆ ಹೊಸ ಭರವಸೆ ಮೂಡಿದೆ. ಅಭಿಮಾನಿಗಳಲ್ಲಿ ಉತ್ಸಾಹ ಕಾಣುತ್ತಿದೆ. ಮುಂದೆ ಬರುವ ಕನ್ನಡ ಸಿನಿಮಾಗಳ ಮೇಲೆ ನಂಬಿಕೆ ಹೆಚ್ಚಾಗುತ್ತಿದೆ. ಹೀಗೆ, ಕೆಜಿಎಫ್ ಎಂಬ ಮಹಾ ಸಿನಿಮಾ ಹತ್ತು ಹಲವು ಆಸೆಗಳನ್ನ ಹುಟ್ಟುಹಾಕಿದೆ.

ಈ ಮಧ್ಯೆ ಶಂಕರ್ ನಾಗ್ ಅವರು ಕಂಡಿದ್ದ ಕನಸನ್ನು ಯಶ್ ಕೆಜಿಎಫ್ ನೆರವೇರಿಸುತ್ತೆ ಎಂಬ ಅಭಿಪ್ರಾಯವನ್ನ ಶಂಕ್ರಣ್ಣನ ಅಭಿಮಾನಿಗಳು ಹೇಳುತ್ತಿದ್ದಾರೆ. ಅಷ್ಟೇ ಅಲ್ಲ, ದರ್ಶನ್, ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕೆಜಿಎಫ್ ಟ್ರೈಲರ್ ನೋಡಿ ಖುಷಿಯಾಗಿದ್ದಾರೆ. ಹಾಗಿದ್ರೆ, ಯಾರು ಏನಂದ್ರು.? ಮುಂದೆ ಓದಿ....

ಶಂಕ್ರಣ್ಣನ ಕನಸು ನನಸು ಮಾಡಲಿದೆ ಕೆಜಿಎಫ್.!

ಶಂಕ್ರಣ್ಣನ ಕನಸು ನನಸು ಮಾಡಲಿದೆ ಕೆಜಿಎಫ್.!

''ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ನೋಡುವ ಹಾಗೆ ಚಿತ್ರ ಬರಬೇಕು ಎಂಬುದು ಶಂಕರ್ ನಾಗ್ ಅವರ ಕನಸು. ಅದನ್ನು ಈ KGF ಚಿತ್ರ ನನಸು ಮಾಡುತ್ತಿದೆ. ಎನ್ Bgm ಗುರು......super ಎಲ್ಲರೂ ಆ film ನ support ಮಾಡಿ ಶಂಕರಣ್ಣನ ಕನಸು ನಿಜ ಮಾಡ್ಬೇಕು ಇದೆ ವಿಶ್ವ ಕನ್ನಡ ಎಂದರೆ ಎಷ್ಟು ಅದ್ಭುತ ಅಂತ ಗೊತ್ತಾಗಬೇಕು'' ಎಂದು ಖುಷಿಯಾಗಿದ್ದಾರೆ.

ಡಿ ಬಾಸ್ ಅಭಿಮಾನಿ

ಡಿ ಬಾಸ್ ಅಭಿಮಾನಿ

ಮೂವತ್ತು ನಿಮಿಷದಲ್ಲಿ 33 ಸಾವಿರಕ್ಕೂ ಅಧಿಕ ಲೈಕ್ಸ್ ಕೆಜಿಎಫ್ ಚಿತ್ರಕ್ಕೆ ಸಿಕ್ಕಿದೆ. ಕನ್ನಡ ಚಿತ್ರರಂಗ ಬೆಳೆಯಬೇಕು. ಈ ಸಿನಿಮಾ ವಿಶ್ವದಲ್ಲಿ ದೊಡ್ಡ ಸದ್ದು ಮಾಡಬೇಕು ಎಂದು ದರ್ಶನ್ ಅಭಿಮಾನಿ ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಪ್ಪು ಅಭಿಮಾನಿ ಹೇಳಿದ್ದೇನು.?

ಅಪ್ಪು ಅಭಿಮಾನಿ ಹೇಳಿದ್ದೇನು.?

ಕೆಜಿಎಫ್ ಟ್ರೈಲರ್ ಅದ್ಭುತವಾಗಿದೆ. ಒಂದೊಂದು ದೃಶ್ಯವೂ ರೋಮಾಂಚನ ಉಂಟು ಮಾಡುತ್ತಿದೆ. ಈ ಸಿನಿಮಾಗೆ ಒಳ್ಳೆಯದಾಗಲಿ, ಯಶ್ ಚಿತ್ರಕ್ಕೆ ಆಲ್ ದಿ ಬೆಸ್ಟ್ ಎಂದು ಪುನೀತ್ ರಾಜ್ ಅಭಿಮಾನಿಗಳು ಶುಭಕೋರಿದ್ದಾರೆ.

ಅಕ್ಕ ಪಕ್ಕದ ರಾಜ್ಯದಲ್ಲೂ ಅಣ್ತಮ್ಮ

ಅಕ್ಕ ಪಕ್ಕದ ರಾಜ್ಯದಲ್ಲೂ ಅಣ್ತಮ್ಮ

ಕೆಜಿಎಫ್ ಸಿನಿಮಾ ಕೇವಲ ಕನ್ನಡದಲ್ಲಿ ಮಾತ್ರ ಹವಾ ಸೃಷ್ಟಿಸಿಲ್ಲ. ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂನಲ್ಲೂ ಕುತೂಹಲ ಮೂಡಿಸಿದೆ. ಹೀಗಾಗಿ, ಕೇರಳ, ಆಂಧ್ರದಿಂದಲೂ ಅಭಿಮಾನಿಗಳು ವಿಶ್ ಮಾಡಿದ್ದಾರೆ.

ಕನ್ನಡ ಚಿತ್ರರಂಗ ಮುಂದಿನ ಹಂತ

ಕನ್ನಡ ಚಿತ್ರರಂಗ ಮುಂದಿನ ಹಂತ

ಕನ್ನಡ ಚಿತ್ರರಂಗಕ್ಕೆ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿದೆ ಎಂಬ ಮಾತಿದೆ. ಆದ್ರೆ, ಕೆಜಿಎಫ್ ಸಿನಿಮಾದಿಂದ ನಮ್ ಇಂಡಸ್ಟ್ರಿ ಇನ್ನೊಂದು ಹಂತಕ್ಕೆ ಹೋಗಲಿದೆ ಎಂಬ ಅಭಿಪ್ರಾಯ ಹಲವರದ್ದು.

ಆಲ್ ಸ್ಟಾರ್ ಫ್ಯಾನ್ಸ್ ಮೆಚ್ಚಿದ ಟ್ರೈಲರ್

ಆಲ್ ಸ್ಟಾರ್ ಫ್ಯಾನ್ಸ್ ಮೆಚ್ಚಿದ ಟ್ರೈಲರ್

ಕೆಜಿಎಫ್ ಚಿತ್ರದ ಟ್ರೈಲರ್ ನ್ನ ಬರಿ ಯಶ್ ಅಭಿಮಾನಿಗಳು ಮಾತ್ರವಲ್ಲ, ದರ್ಶನ್, ಪುನೀತ್, ತಮಿಳು ನಟ ಅಜಿತ್, ತೆಲುಗು ಅಲ್ಲು ಅರ್ಜುನ್, ತಮಿಳು ನಟ ವಿಜಯ್ ಹೀಗೆ ಎಲ್ಲಾ ಭಾಷೆಯ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

More from Filmibeat

English summary
Kannada actor, rocking star yash starrer most expected movie kgf trailer has released today. here is the reaction about kgf trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X