'ಕೆ.ಜಿ.ಎಫ್' ಟ್ರೈಲರ್ ನೋಡಿ ಫಿದಾ ಆದ ವಿದೇಶಿ ಪ್ರಜೆಗಳು.!
ಕನ್ನಡ ಚಿತ್ರರಂಗದಲ್ಲಿ 'ಕೆ.ಜಿ.ಎಫ್' ಸಿನಿಮಾ ದೊಡ್ಡ ಕ್ರಾಂತಿ ಮಾಡಿದೆ ಅಂದರೂ ತಪ್ಪಾಗಲ್ಲ. ಯಾಕಂದ್ರೆ, 'ಕೆ.ಜಿ.ಎಫ್' ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆ ಆಗುವುದರ ಜೊತೆಗೆ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಪ್ರಪಂಚದ ಮೂಲೆ ಮೂಲೆಯಲ್ಲಿ ಇರುವ ಜನರೂ 'ಕೆ.ಜಿ.ಎಫ್' ಬಗ್ಗೆ ಮಾತನಾಡುವ ಹಾಗಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ 'ಕೆ.ಜಿ.ಎಫ್' ಟ್ರೈಲರ್ ಧೂಳೆಬ್ಬಿಸಿದೆ. ಕೋಟ್ಯಾಂತರ ಮಂದಿ 'ಕೆ.ಜಿ.ಎಫ್' ಟ್ರೈಲರ್ ವೀಕ್ಷಿಸಿದ್ದಾರೆ. ಅದರಲ್ಲೂ ವಿದೇಶಿಯರು 'ಕೆ.ಜಿ.ಎಫ್' ಟ್ರೈಲರ್ ನ ಕಣ್ತುಂಬಿಕೊಂಡು, ತಮ್ಮ ಅಭಿಪ್ರಾಯಗಳನ್ನ ವಿಡಿಯೋ ಮೂಲಕ ವ್ಯಕ್ತಪಡಿಸಿ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ.
ಪಾಕಿಸ್ತಾನ, ಅಮೇರಿಕಾ ಸೇರಿದಂತೆ ಹಲವು ಕಡೆಯಿಂದ 'ಕೆ.ಜಿ.ಎಫ್' ಟ್ರೈಲರ್ ಗೆ ಪ್ರತಿಕ್ರಿಯೆ ಲಭ್ಯವಾಗಿದೆ. ಭಾಷೆ ಬಾರದೇ ಇದ್ದರೂ, ಬಹುತೇಕ ವಿದೇಶಿಯರು 'ಕೆ.ಜಿ.ಎಫ್' ಟ್ರೈಲರ್ ನೋಡಿ ಫಿದಾ ಆಗಿದ್ದಾರೆ. ಅಲ್ಲದೇ, ಚಿತ್ರವನ್ನ ಖಂಡಿತ ನೋಡುತ್ತೇವೆ ಎಂದಿದ್ದಾರೆ. ಮುಂದೆ ಓದಿರಿ...

ಪಾಕಿಸ್ತಾನಿಯರು ಫಿದಾ
''ದಕ್ಷಿಣ ಭಾರತದ ಚಿತ್ರಗಳಾಗಲಿ, ಬಾಲಿವುಡ್ ಸಿನಿಮಾಗಳಾಗಲಿ, ಪಂಜಾಬಿ ಮೂವಿಗಳಾಗಲಿ... ಎಲ್ಲವೂ ಭಾರತೀಯ ಸಿನಿಮಾಗಳೇ. ಈ ಬಗ್ಗೆ ಎಲ್ಲರೂ ಹೆಮ್ಮೆ ಪಡಬೇಕು. 'ಕೆ.ಜಿ.ಎಫ್' ಟ್ರೈಲರ್ ತುಂಬಾ ಜಬರ್ದಸ್ತ್ ಆಗಿದೆ. ಇತರೆ ಟ್ರೈಲರ್ ಗಳಲ್ಲಿ ವಿ.ಎಫ್.ಎಕ್ಸ್ ಜಾಸ್ತಿ ಇದೆ. ಆದ್ರೆ, 'ಕೆ.ಜಿ.ಎಫ್' ಟ್ರೈಲರ್ ನಲ್ಲಿ ಎಲ್ಲವೂ ನೈಜವಾಗಿದೆ. ಈ ಮೂವಿ ತುಂಬಾ ದೊಡ್ಡ ಹಿಟ್ ಆಗುವ ಲಕ್ಷಣ ಕಾಣಿಸುತ್ತಿದೆ'' ಎಂದು ಪಾಕಿಸ್ತಾನ ಮಂದಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ವಿದೇಶಿ ಹುಡುಗಿಯರ ರಿಯಾಕ್ಷನ್
''ಕೆ.ಜಿ.ಎಫ್' ಟ್ರೈಲರ್ ಸಖತ್ತಾಗಿದೆ. ಛಾಯಾಗ್ರಹಣ ಚೆನ್ನಾಗಿ ಮೂಡಿಬಂದಿದೆ. ಡಿಸೆಂಬರ್ ನಲ್ಲಿ ಬಿಡುಗಡೆ ಆಗುವ ಈ ಚಿತ್ರವನ್ನ ನಾವು ಖಂಡಿತ ನೋಡುತ್ತೇವೆ'' ಎಂದಿದ್ದಾರೆ ಇಬ್ಬರು ವಿದೇಶಿ ಹುಡುಗಿಯರು.

ಅಮೇರಿಕಾದ ದಂಪತಿ ಏನಂದರು.?
''ಕೆ.ಜಿ.ಎಫ್' ಟ್ರೈಲರ್ ತುಂಬಾ ಚೆನ್ನಾಗಿದೆ. ಶಾರುಖ್ ಅಭಿನಯದ 'ಝೀರೋ' ಚಿತ್ರಕ್ಕೂ ಮೊದಲು ನಾವು 'ಕೆ.ಜಿ.ಎಫ್' ವೀಕ್ಷಿಸುತ್ತೇವೆ. ಸೂಪರ್ ಹೀರೋ ಚಿತ್ರಗಳಿಗಿಂತೂ 'ಕೆ.ಜಿ.ಎಫ್' ಉತ್ತಮವಾಗಿ ಮೂಡಿಬಂದಂತೆ ಕಾಣುತ್ತಿದೆ. ನಾವು ಇಲ್ಲಿಯವರೆಗೂ ಕನ್ನಡ ಚಿತ್ರ ನೋಡಿಲ್ಲ. ಆದ್ರೆ, 'ಕೆ.ಜಿ.ಎಫ್' ನೋಡುವ ಕುತೂಹಲ ನಮಗೆ ಇದೆ'' ಎಂದಿದ್ದಾರೆ ಅಮೇರಿಕಾದ ದಂಪತಿ.

ಚಿತ್ರ ನೋಡಲು ಕಾತರ
''ಕೆ.ಜಿ.ಎಫ್' ಟ್ರೈಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಟ್ರೈಲರ್ ನಲ್ಲಿ ತುಂಬಾ ಆಕ್ಷನ್ ಇದೆ. ಮೂವಿಯಲ್ಲಿ ಇನ್ನೂ ಇರಬಹುದು. ಡಿಸೆಂಬರ್ 21 ಯಾವಾಗ ಆಗುತ್ತೋ, ಅಂತ ನಾನು ಕಾಯುತ್ತಿದ್ದೇನೆ. ಈ ಚಿತ್ರವನ್ನ ಖಂಡಿತ ವೀಕ್ಷಿಸುವೆ'' ಅಂತ ಪಾಕಿಸ್ತಾನದ ಒಮರ್ ಹೇಳಿದ್ದಾರೆ.

ವಿದೇಶಿ ಫ್ಯಾಮಿಲಿ ಏನು ಹೇಳಿದರು.?
''ಕೆ.ಜಿ.ಎಫ್' ಟ್ರೈಲರ್ ಕುತೂಹಲ ಮೂಡಿಸುತ್ತೆ. ಆಕ್ಷನ್ ಇಷ್ಟ ಆಯ್ತು'' ಎಂದು ವಿದೇಶಿ ಫ್ಯಾಮಿಲಿ ಕೂಡ ಪ್ರತಿಕ್ರಿಯೆ ನೀಡಿದೆ

ಮುಂದಿನ ತಿಂಗಳು ರಿಲೀಸ್
ಯಶ್, ಶ್ರೀನಿಧಿ ಶೆಟ್ಟಿ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ 'ಕೆ.ಜಿ.ಎಫ್' ಚಿತ್ರ ಡಿಸೆಂಬರ್ 21 ರಂದು ಬಿಡುಗಡೆ ಆಗಲಿದೆ. ಅಂದ್ಹಾಗೆ, 'ಕೆ.ಜಿ.ಎಫ್' ಟ್ರೈಲರ್ ನ ನೀವು ನೋಡಿದ್ರಾ.? ಟ್ರೈಲರ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ.. ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.


Click it and Unblock the Notifications











