'ಪ್ರಭಾಸ್-ರಾಣಾರಂತೆ ನೀವು ಆಗ್ತೀರಾ' ಎಂದಿದ್ದಕ್ಕೆ ಯಶ್ ಏನಂದ್ರು.?

Recommended Video

KGF Kannada Movie : ಯಶ್ ಕೆಜಿಎಫ್ ಪ್ರಭಾಸ್ ಬಾಹುಬಲಿ ರೀತಿ ಮಿಂಚುತ್ತಾ | FILMIBEAT KANNADA

'ಬಾಹುಬಲಿ' ಎಂಬ ಮೆಗಾ ಸಿನಿಮಾದ ಮೂಲಕ ತೆಲುಗು ನಟ ಪ್ರಭಾಸ್ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದು ಈಗ ಇತಿಹಾಸ. ಅಲ್ಲಿಯವರೆಗೂ ಟಾಲಿವುಡ್ ಪಾಲಿಗೆ ಮಾತ್ರ ಪ್ರಭಾಸ್ ದೊಡ್ಡ ಸ್ಟಾರ್ ಆಗಿದ್ದರು. ಬಟ್, ಅದ್ಯಾವಾಗ 'ಬಾಹುಬಲಿ ದಿ ಬಿಗಿನಿಂಗ್' ಸಿನಿಮಾ ದೊಡ್ಡ ಸಕ್ಸಸ್ ಆಯ್ತೋ, ಬಳಿಕ ಪ್ರಭಾಸ್ ಅವರ ಕಾಲ್ ಶೀಟ್ ಪಡೆಯಲು ನಿರ್ಮಾಪಕರು ಕ್ಯೂನಲ್ಲಿ ನಿಂತರು.

ಅದರ ಪರಿಣಾಮ ಈಗ ಪ್ರಭಾಸ್ 'ಸಾಹೋ' ಎಂಬ ಮತ್ತೊಂದು ಬಿಗ್ ಪ್ರಾಜೆಕ್ಟ್ ಮಾಡ್ತಿದ್ದು, ಈ ಚಿತ್ರವೂ ಹಿಂದಿ ಹಾಗೂ ಸೌತ್ ಭಾಷೆಯಲ್ಲಿ ತೆರೆಕಾಣುತ್ತಿದೆ. ಈ ಮಧ್ಯೆ ಬಾಲಿವುಡ್ ನಲ್ಲಿ ಪ್ರಭಾಸ್ ಗೆ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಿದೆ. ಹೀಗೆ, ವರ್ಷಗಳ ಕಾಲ ಮಾಡಲಾಗದ ಸಾಧನೆ ಮತ್ತು ಹೆಸರನ್ನ 'ಬಾಹುಬಲಿ' ಸಿನಿಮಾ ಒಂದೇ ಸಲ ತಂದುಕೊಟ್ಟಿತ್ತು. ಹಾಗಾಗಿ, ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ಎಂಬ ಇಬ್ಬರು ಘಟಾನುಘಟಿಗಳು ಸದ್ದು ಮಾಡಿದರು.

ಇದೀಗ, ಕನ್ನಡದ ನಟ ಯಶ್ ಕೂಡ ಅದೇ ಹಾದಿಯಲ್ಲಿದ್ದಾರೆ. ಕೆಜಿಎಫ್ ಎಂಬ ಚಿನ್ನದ ಗಣಿಯನ್ನ ಹೊತ್ತು ಹೊರರಾಜ್ಯಕ್ಕೆ ಕಾಲಿಟ್ಟಿದ್ದಾರೆ. ಇಷ್ಟು ದಿನ ಸ್ಯಾಂಡಲ್ ವಡ್ ನಲ್ಲಿ ಅಬ್ಬರಿಸುತ್ತಿದ್ದ 'ರಾಜಾಹುಲಿ' ಈಗ ರಾಷ್ಟ್ರಾದ್ಯಂತ ಹವಾ ಎಬ್ಬಿಸುತ್ತಿದ್ದಾರೆ. ಇದು ಸಹಜವಾಗಿ ಪರಭಾಷಿಗರಿಗೆ ಪ್ರಶ್ನೆಯಾಗಿ ಕಾಡಿದ್ದಂತೂ ಸುಳ್ಳಲ್ಲ. ಏನಿದು, ಪ್ರಭಾಸ್ ಮತ್ತು ಯಶ್ ಕಥೆ. ಮುಂದೆ ಓದಿ....

ಕೆಜಿಎಫ್ ಹಿಟ್ ಆದ್ರೆ.....

ಕೆಜಿಎಫ್ ಹಿಟ್ ಆದ್ರೆ.....

ಸದ್ಯ 'ಕೆಜಿಎಫ್' ಸಿನಿಮಾ ಟ್ರೈಲರ್ ಮಾಡ್ತಿರುವ ಹವಾ ನೋಡಿ ಯಶ್ ಭವಿಷ್ಯದ ಬಗ್ಗೆ ಚರ್ಚೆಯಾಗ್ತಿದೆ. ಕೆಜಿಎಫ್ ಸಿನಿಮಾ ಏನಾದರೂ ಚಿತ್ರಜಗತ್ತಿನಲ್ಲಿ ದೊಡ್ಡ ಯಶಸ್ಸು ಕಂಡ್ರೆ, ರಾಕಿಂಗ್ ಸ್ಟಾರ್ ಗೆ ಪರಭಾಷೆಯಲ್ಲಿ ಆಫರ್ ಗಳು ಹುಡುಕಿಕೊಂಡು ಬರೋದು ಖಚಿತವೆನ್ನಲಾಗುತ್ತಿದೆ. ಸ್ಯಾಂಡಲ್ ವುಡ್ ಸ್ಟಾರ್ ಆಗಿದ್ದ ಯಶ್ 'ನ್ಯಾಷನಲ್ ಸ್ಟಾರ್' ಆಗೋದು ಪಕ್ಕಾ ಎನ್ನುತ್ತಿದ್ದಾರೆ.

ಯಶ್ ಅವರ ಆಸೆಯೂ ಇದೆ.!

ಯಶ್ ಅವರ ಆಸೆಯೂ ಇದೆ.!

ಇನ್ನು ಸ್ವತಃ ರಾಕಿಂಗ್ ಸ್ಟಾರ್ ಯಶ್ ಗೂ ಈ ಆಸೆ ಇದೆ. ಕೆಜಿಎಫ್ ಸಿನಿಮಾದ ಮೂಲಕ ಇಡೀ ಭಾರತವನ್ನ ತಲುಪಬೇಕು ಎಂಬ ಉದ್ದೇಶ ಹೊಂದಿದ್ದಾರೆ. ಇದನ್ನ ಹಲವು ಸಲ ಯಶ್ ಹೇಳಿಕೊಂಡಿದ್ದಾರೆ. ಹಾಗೆಯೇ, ಕೆಜಿಎಫ್ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಬಾಲಿವುಡ್ ಪತ್ರಕರ್ತರೊಬ್ಬರು ಈ ಪ್ರಶ್ನೆಯನ್ನ ಕೇಳಿದ್ದರು. ಅದಕ್ಕೆ ಯಶ್ ಉತ್ತರ ಕೂಡ ಹಾಗೆ ಇತ್ತು.

ಹಿಂದಿ ಪತ್ರಕರ್ತ ಕೇಳಿದ ಪ್ರಶ್ನೆ ಏನು.?

ಹಿಂದಿ ಪತ್ರಕರ್ತ ಕೇಳಿದ ಪ್ರಶ್ನೆ ಏನು.?

'ಬಾಹುಬಲಿ ಪೋಸ್ಟರ್ ರಿಲೀಸ್ ಅದ್ಮೇಲೆ ಪ್ರಭಾಸ್ ಮತ್ತು ರಾಣಾ ದೇಶದಲ್ಲೆಡೆ ಏಕಾಏಕಿ ಸ್ಟಾರ್ ಆಗಿಬಿಟ್ಟರು. ಬಹುಶಃ ನೀವು ಕೂಡ ಅದೇ ರೀತಿ ಪ್ರಭಾವ ಮಾಡ್ತೀರಾ' ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ ಯಶ್ ''ಹೌದು, ಖಂಡಿತಾ...ಅದು ನಮ್ಮ ಉದ್ದೇಶ'' ಎಂದು ರಾಕಿಂಗ್ ಸಮರ್ಥಿಸಿಕೊಂಡರು.

ನನಗೆ ನಂಬಿಕೆ ಇದೆ

ನನಗೆ ನಂಬಿಕೆ ಇದೆ

''ನನ್ನ ಸಿನಿಮಾಗಳು ಹಿಂದಿಗೆ ಡಬ್ ಆಗಿದೆ. ಮಿಲಿಯನ್ ಗಿಂತಲೂ ಹೆಚ್ಚು ವೀವ್ಸ್ ಬಂದಿದೆ. ನೇರವಾಗಿ ಯಾವುದು ಬಿಡುಗಡೆಯಾಗಿಲ್ಲ ಅಂದ್ರೂ ನನ್ನನ್ನ ಜನ ಗುರುತಿಸ್ತಾರೆ. ಇದು ನನಗೆ ವಿಶ್ವಾಸ ಹೆಚ್ಚಿಸಿದೆ. ನಮ್ಮ ಸಾಮರ್ಥ್ಯ ಏನು ಎಂದು ತೋರಿಸುವುದು ಮುಖ್ಯ. ನಂತರ ನಮ್ಮ ಹಣೆಬರಹವನ್ನ ಆ ದೇವರು ನಿರ್ಧರಿಸುತ್ತಾನೆ. ನೋಡೋಣ, ಎಲ್ಲಿಗೆ ಕರೆದುಕೊಂಡು ಹೋಗಿ ಬಿಡ್ತಾನೆ'' ಎಂದು ಪ್ರತಿಕ್ರಿಯಿಸಿದರು.

ಕನ್ನಡ ಚಿತ್ರರಂಗವನ್ನ ಇನ್ನೊಂದು ಹಂತಕ್ಕೆ....

ಕನ್ನಡ ಚಿತ್ರರಂಗವನ್ನ ಇನ್ನೊಂದು ಹಂತಕ್ಕೆ....

ಯಶ್ ಮೊದಲಿನಿಂದಲೂ ಹೇಳುತ್ತಿರುವುದು ಇದೇ. ಕನ್ನಡ ಚಿತ್ರರಂಗವನ್ನ ಇನ್ನೊಂದು ಹಂತಕ್ಕೆ ಕರೆದುಕೊಂಡು ಹೋಗ್ತೀನಿ ಅಂತ. ಬಹುಶಃ ಈಗ ಅದೇ ಹಾದಿಯಲ್ಲಿದ್ದಾರೆ. ಈಗಾಗಲೇ ಅರ್ಧ ದಾರಿ ತಲುಪಿದ್ದಾರೆ. ಡಿಸೆಂಬರ್ 21 ಕ್ಕೆ ಗುರಿ ಮುಟ್ಟಲಿದ್ದಾರೆ. ಆದ್ರೆ, ಅಲ್ಲಿ ಚಿನ್ನ ಸಿಗುತ್ತಾ ಇಲ್ವಾ ಎಂಬುದು ಕಾದುನೋಡಬೇಕಿದೆ.

More from Filmibeat

English summary
Kannada movie Kgf will impact like telugu movie baahubali in indian film industry? what does yash say about this?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X