»   » ನೀವೇನೇ ಮಾಡಿದ್ರೂ ಈ ವರ್ಷ ಯಶ್ ಬರಲ್ಲ, ಅದಾಗಲ್ಲ.!

ನೀವೇನೇ ಮಾಡಿದ್ರೂ ಈ ವರ್ಷ ಯಶ್ ಬರಲ್ಲ, ಅದಾಗಲ್ಲ.!

Posted By: Pavithra
Subscribe to Filmibeat Kannada

ಬೆಳ್ಳಿ ಪರದೆ ಮೇಲೆ ರಾಕಿಂಗ್ ಸ್ಟಾರ್ ಯಶ್ ದರ್ಶನ ಆಗಿ ಹತ್ತತ್ರ ಒಂದು ವರ್ಷ ಆಗ್ತಾ ಬಂತು. ಡಿಸೆಂಬರ್ ಬಂತು ಅಂದ್ರೆ ಥಿಯೇಟರ್ ನಲ್ಲಿ ಯಶ್ ದರ್ಶನ ಭಾಗ್ಯ ಸಿಗಲೇ ಬೇಕು ಅಂತ ಆಸೆ ಇಟ್ಕೊಂಡಿದ್ದ ಅಭಿಮಾನಿಗಳಿಗೆ ಈಗ ತಣ್ಣೀರೆರಚ್ಚಿದ್ದಾರೆ ಯಶ್ ಅಂಡ್ ಟೀಂ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಿನಿಮಾ ರಿಲೀಸ್ ಆಗಿದ್ದು ಕಳೆದ ವರ್ಷದ ಡಿಸೆಂಬರ್ ನಲ್ಲಿ. ಅದಾದ ನಂತ್ರ ಯಶ್ ಅಭಿನಯದ ಚಿತ್ರಗಳು ರಿಲೀಸ್ ಆಗಿಲ್ಲ. ಇನ್ನೂ ಕೆ.ಜಿ.ಎಫ್ ಚಿತ್ರೀಕರಣ ಶುರು ಮಾಡಿ ಸಾಕಷ್ಟು ತಿಂಗಳುಗಳು ಕಳೆದಿವೆ. ಆದ್ರೆ ಅದ್ಯಾಕೋ ರಿಲೀಸ್ ಮಾತ್ರ ಲೇಟ್ ಅಂತಿದೆ ಸಿನಿಮಾ ತಂಡ. ಮುಂದೆ ಓದಿರಿ...

ಏಪ್ರಿಲ್ ನಲ್ಲಿ ಚಿತ್ರ ತೆರೆಮೇಲೆ

ಯಶ್ ಸಿನಿಮಾ ಸಾಮಾನ್ಯವಾಗಿ ಡಿಸೆಂಬರ್ ನಲ್ಲಿ ರಿಲೀಸ್ ಆಗುತ್ತೆ. ರಾಕಿಂಗ್ ಸ್ಟಾರ್ ಗೆ ಡಿಸೆಂಬರ್ ಲಕ್ಕಿ ತಿಂಗಳು ಕೂಡ. ಆದ್ರೆ ಕೆ.ಜಿ.ಎಫ್ ಏಪ್ರಿಲ್ ಅಥವಾ ಮಾರ್ಚ್ ನಲ್ಲಿ ಬಿಡುಗಡೆ ಆಗುತ್ತೆ ಅಂತಿದೆ ಚಿತ್ರತಂಡ.

ಇನ್ನೂ ಮುಗಿದಿಲ್ಲ ಚಿತ್ರೀಕರಣ

ಶೇಕಡ 80 ರಷ್ಟು ಚಿತ್ರೀಕರಣ ಮುಗಿಸಿರುವ ಕೆ.ಜಿ.ಎಫ್ ತಂಡ ಇನ್ನೂ 20ರಷ್ಟು ಭಾಗ ಶೂಟಿಂಗ್ ಮಾಡೋದು ಬಾಕಿ ಉಳಿದಿದ್ಯಂತೆ. ಹಾಡುಗಳ ಚಿತ್ರೀಕರಣ ಮುಗಿಸಿದ್ರೆ, ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಲಿದ್ದು ಮತ್ತಷ್ಟು ದಿನ ಪ್ರೇಕ್ಷಕರು ಚಿತ್ರಕ್ಕಾಗಿ ಕಾಯಬೇಕಾಗಿದೆ.

ಪಾರ್ಟ್ 2 ಈಗಲೇ ಬರುತ್ತಾ

ಸ್ಯಾಂಡಲ್ ವುಡ್ ನಲ್ಲಿ ಪಾರ್ಟ್ 1 ಜೊತೆಯಲ್ಲೇ ಪಾರ್ಟ್ 2 ಕೂಡ ಚಿತ್ರೀಕರಣ ಮಾಡೋದು ರೂಢಿಯಲ್ಲಿದೆ. ಅದಕ್ಕೆ ಚಿತ್ರತಂಡ ಎರಡನ್ನೂ ಶೂಟ್ ಮಾಡ್ತಿರೋದ್ರಿಂದ ಸಿನಿಮಾ ಲೇಟ್ ಆಗ್ತಿದ್ಯಾ.? ಅನ್ನೋದು ತುಂಬಾ ಜನರ ಅಭಿಪ್ರಾಯ...ಆದ್ರೆ ಚಿತ್ರತಂಡ ಹೇಳೋದೆ ಬೇರೆ.

ಒಮ್ಮೆಲೆ ಐದು ಭಾಷೆಯಲ್ಲಿ ಚಿತ್ರ ತೆರೆಗೆ

ಕೆ.ಜಿ.ಎಫ್ ಸಿನಿಮಾದ ಚಿತ್ರೀಕರಣಕ್ಕೆ ಎಷ್ಟು ಕಾಲ ತೆಗೆದುಕೊಳ್ತೋ ಅಷ್ಟೇ ಸಮಯ ಪೋಸ್ಟ್ ಪ್ರೊಡಕ್ಷನ್ ಗೂ ತೆಗೆದುಕೊಳ್ಳುತ್ತಂತೆ. ಅದಷ್ಟೇ ಅಲ್ಲದೆ ಐದು ಭಾಷೆಯಲ್ಲಿ ಸಿನಿಮಾವನ್ನ ರಿಲೀಸ್ ಮಾಡಲು ಮುಂದಾಗಿರೋದ್ರಿಂದ ಚಿತ್ರ ಬಿಡುಗಡೆಗೆ ತಡವಾಗ್ತಿದೆ ಅನ್ನೋದು ಸದ್ಯದ ಸುದ್ದಿ.

ರಜೆಗಳಲ್ಲಿ ಸಿನಿಮಾ ಕ್ಲಿಕ್ ಮಾಡೋ ಪ್ಲಾನ್

ಡಿಸೆಂಬರ್ ನಲ್ಲಿ ಸಿನಿಮಾ ರಿಲೀಸ್ ಮಾಡೋದಕ್ಕೆ ಸ್ಟಾರ್ ಗಳು ವಾರ್ ಮಾಡೋದಕ್ಕೆ ನಿಂತಿದ್ದಾರೆ. ಸದ್ಯ ರಾಕಿಂಗ್ ಸ್ಟಾರ್ ಬದಲು ರೋರಿಂಗ್ ಸ್ಟಾರ್ ಡಿಸೆಂಬರ್ 1 ರಂದು ಪ್ರೇಕ್ಷಕರ ಎದುರು 'ಮಫ್ತಿ' ಸ್ಟೈಲ್ ನಲ್ಲಿ ಎಂಟ್ರಿ ಕೊಡ್ತಿದ್ದಾರೆ. ಶ್ರೀಮುರಳಿ ಅಭಿನಯದ ಚಿತ್ರ ತೆರೆ ಕಂಡು ಸುಮಾರು 1 ವರ್ಷವಾಗಿದೆ. ಇದೇ ಸಮಯದಲ್ಲಿ ಮಫ್ತಿ ಚಿತ್ರವನ್ನ ರಿಲಿಸ್ ಮಾಡೋಕೆ ಟೀಂ �
��ಜ್ಜಾಗಿದೆ.

English summary
Yash starrer KGF will release in April 2018. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಚಿತ್ರ ಏಪ್ರಿಲ್ ನಲ್ಲಿ ತೆರೆಗೆ ಬರಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X