Don't Miss!
- Lifestyle
Today Rashi Bhavishya: ಗುರುವಾರದ ದಿನ ಭವಿಷ್ಯ: ಕರ್ಕ, ಕುಂಭ, ಮೀನ ರಾಶಿಯ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ
- News
ಉದ್ಧವ್ ಠಾಕ್ರೆ ರಾಜೀನಾಮೆ; ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ
- Sports
IND vs ENG: ಮೊದಲ ಟಿ20 ಕಳೆದುಕೊಳ್ಳಲಿದ್ದಾರೆ ಕೊಹ್ಲಿ, ಪಂತ್, ಜಸ್ಪ್ರೀತ್ ಬುಮ್ರಾ; ಕಾರಣ?
- Education
CBSE Result 2022 : 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ ಯಾವಾಗ ?
- Finance
ಜೂ.29ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಯಶ್ ಸಿನಿಮಾಗೆ ಡಿಮ್ಯಾಂಡೋ.. ಡಿಮ್ಯಾಂಡು: 'ಲಕ್ಕಿ' ತೆಲುಗಿನಲ್ಲಿ ರಿಲೀಸ್!
ರಾಕಿಂಗ್ ಸ್ಟಾರ್ ಯಶ್ ಈಗ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಾ ಇದ್ದಾರೆ. 'ಕೆಜಿಎಫ್' ಸರಣಿ ಸಿನಿಮಾಗಳ ಬಳಿಕ ಯಶ್ ಬೇಡಿಕೆ ಹೆಚ್ಚಾಗಿದೆ. ಹಾಗಾಗಿಯೇ ಅವರ ಮುಂದಿನ ಸಿನಿಮಾದ ಬಗ್ಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಈಗ ಯಶ್ ಹೊಸ ಸಿನಿಮಾ ಅಲ್ಲ ಹಳೆ ಸಿನಿಮಾ ಸುದ್ದಿ ಆಗುತ್ತಾ ಇದೆ.
ಯಶ್ ಸಿನಿಮಾಗಳಿಗೆ ಈಗ ಸಾಕಷ್ಟು ಬೇಡಿಕೆ ಹೆಚ್ಚಾಗಿದೆ. ತೆಲುಗು ಸಿನಿಮಾರಂಗದಿಂದ ಯಶ್ ಸಿನಿಮಾಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಈ ಹಿಂದೆ ಕನ್ನಡದಲ್ಲಿ ಯಶ್ ಅಭಿನಯಿಸಿದ್ದ 'ಲಕ್ಕಿ' ಸಿನಿಮಾ ಈಗ ಮತ್ತೆ ರಿಲೀಸ್ ಆಗುತ್ತಾ ಇದೆ.
'ಯಶ್'
ಮುಂದಿನ
ಸಿನಿಮಾ
'ಹೊಂಬಾಳೆ
ಫಿಲ್ಮ್ಸ್'
ನಿರ್ಮಾಣ!
10 ವರ್ಷದ ಹಿಂದೆ ಯಶ್ ಮತ್ತು ರಮ್ಯಾ ಅಭಿನಯದಲ್ಲಿ ಬಂದು ಹಿಟ್ ಲಿಸ್ಟ್ ಸೇರಿತ್ತು ಲಕ್ಕಿ. ಈಗ ತೆಲುಗಿಗೆ ಡಬ್ ಆಗಿ, ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಾ ಇದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.
'ಕೆಜಿಎಫ್
3'
ಸಿನಿಮಾಗೆ
ಹೃತಿಕ್
ರೋಷನ್
ಎಂಟ್ರಿ?
ವಿಜಯ್
ಕಿರಗಂದೂರು
ಪ್ರತಿಕ್ರಿಯೆ
ಏನು?

ತೆಲುಗಿಗೆ ಡಬ್ ಆಯ್ತು 'ಲಕ್ಕಿ' ಸಿನಿಮಾ!
'ಲಕ್ಕಿ' ಸಿನಿಮಾ ತೆಲುಗಿನಲ್ಲಿ ಡಬ್ ಆಗಿ ರಿಲೀಸ್ ಆಗಲು ಸಿದ್ಧತೆ ನಡೆಯುತ್ತಿದೆ. ಈಗಾಗಲೇ ತೆಲುಗಿಗೆ ಡಬ್ ಆಗಿ ಸೆನ್ಸಾರ್ ಕೂಡ ಆಗಿದೆ. ಸದ್ಯದಲ್ಲೆ ಚಿತ್ರದ ರಿಲೀಸ್ ದಿನಾಂಕ ಪ್ರಕಟ ಆಗಲಿದೆ. 'ಕೆಜಿಎಫ್ 2' ಸಿನಿಮಾ ಯಶಸ್ವಿ ಬೆನ್ನೆಲ್ಲೆ ಯಶ್ ನಟನೆಯ ಸಿನಿಮಾಗಳಿಗೆ ಬೇಡಿಕೆ ಬಂದಿದೆ. ಇನ್ನು ಯಶ್ ನಟನೆಯ ಹಲವು ಸಿನಿಮಾಗಳನ್ನು ಡಬ್ ಮಾಡಲು ಪರಭಾಷೆಯ ನಿರ್ಮಾಪಕರು ಕಾಯುತ್ತಿದ್ದಾರೆ.

ರಮ್ಯಾ-ಯಶ್ ಕಾಂಬಿನೇಶನ್ ಸಿನಿಮಾ!
ರಮ್ಯಾ ಮತ್ತು ಯಶ್ ಕಾಂಬಿನೇಶನ್ ಮೊದಲ ಸಿನಿಮಾ ಇದು. ಲವ್ ಸ್ಟೋರಿಯನ್ನು ಕಾಮಿಡಿ ರೂಪದಲ್ಲಿ ಹೇಳುವ ಮೂಲಕ ಭಾವನಾತ್ಮಕ ಎಳೆಯನ್ನೂ ಸಿನಿಮಾದಲ್ಲಿ ಇಡಲಾಗಿದೆ. ಯಶ್ ಈ ಸಿನಿಮಾದಲ್ಲಿ ಹಲವು ವೇಷಗಳನ್ನು ಹಾಕಿದ್ದಾರೆ ಮತ್ತು ನಾಯಕಿಯನ್ನು ತನ್ನತ್ತ ಸೆಳೆಯಲು ಹಲವು ತಂತ್ರಗಳನ್ನೂ ರೂಪಿಸುತ್ತಾರೆ. ಇಂತಹ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿ ಹತ್ತು ವರ್ಷಗಳೇ ಕಳೆದಿವೆ.

ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದ ಯಶ್!
ಯಶ್ ತಮ್ಮ ವೃತ್ತಿ ಜೀವನದಲ್ಲೇ ಹೆಚ್ಚು ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಸಿನಿಮಾ 'ಲಕ್ಕಿ'. ಹೇರ್ ಸ್ಟೈಲ್, ಗಡ್ಡದ ಸ್ಟೈಲ್, ವೇಷ ಭೂಷಣ ಎಲ್ಲದರಲ್ಲೂ ಯಶ್ ಹೊಸತನವನ್ನು ಅಳವಡಿಸಿದ್ದರು. ರಮ್ಯಾ ಮತ್ತು ಯಶ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಡಾ.ಸೂರಿ. ಈ ಸಿನಿಮಾವನ್ನು ರಾಧಿಕಾ ಕುಮಾರಸ್ವಾಮಿ ಸಿನಿಮಾ ನಿರ್ಮಾಣ ಮಾಡಿದ್ದರು.

ಯಶ್, ಸಾಧು ಕೋಕಿಲ, ಶರಣ್ ಕಾಮಿಡಿ ಪಂಚ್!
ಯಶ್, ರಮ್ಯಾ ಜೊತೆಗೆ ಸಾಧುಕೋಕಿಲ, ಶರಣ್ ಕಾಮಿಡಿ ಪಂಚ್ ಸಖತ್ತಾಗಿ ಮೂಡಿ ಬಂದಿದೆ. ಹತ್ತು ವರ್ಷ ಆದರೂ ಈಗಲೂ ಈ ಸಿನಿಮಾ ನೋಡಿದಾಗ ಅಷ್ಟೇ ಫ್ರೆಶ್ ಅಂತ ಅನಿಸುತ್ತೆ. ಹಾಗಾಗಿ ಈಗ ತೆಲುಗಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ.