For Quick Alerts
  ALLOW NOTIFICATIONS  
  For Daily Alerts

  'KGF-2' ಫ್ಯಾನ್ ಮೇಡ್ ಟ್ರೈಲರ್ ವೈರಲ್: ಮುಗಿಬಿದ್ದು ವೀಕ್ಷಿಸಿದ ಅಭಿಮಾನಿಗಳು

  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಭಾರಿ ನಿರೀಕ್ಷೆಯ ಕೆಜಿಎಫ್-2ದ ಅಪ್ ಡೇಟ್ ನೀಡುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಚಿತ್ರದ ಟೀಸರ್ ಅಥವಾ ಹಾಡನ್ನು ರಿಲೀಸ್ ಮಾಡಿ ಎಂದು ಚಿತ್ರ ತಂಡದ ಬೆನ್ನುಬಿದ್ದಿದ್ದಾರೆ. ಕೆಜಿಎಫ್ ತಂಡ ಸಾಮಾಜಿಕ ಜಾಲತಾಣದಲ್ಲಿ ಏನೇ ಸಂದೇಶ ನೀಡಿದ್ರು ಅಭಿಮಾನಿಗಳ ಪ್ರಶ್ನೆ ಒಂದೆ ಕೆಜಿಎಫ್ ಟೀಸರ್ ಅಥವಾ ಹಾಡು ರಿಲೀಸ್ ಮಾಡಿ ಎಂದು.

  Boycott Prabhas !! ಕನ್ನಡಿಗರು ಗರಂ | Filmibeat Kannada

  ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ, ಭಾರತೀಯ ಸಿನಿಮಾರಂಗವೆ ಕಾತರದಿಂದ ಕಾಯುತ್ತಿರುವ ಸಿನಿಮಾ. ಚಾಪ್ಟರ್-1 ನೋಡಿದ ಪ್ರೇಕ್ಷಕರು ಪಾರ್ಟ್-2 ಗಾಗಿ ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಕಾದು ಕಾದು ಸುಸ್ತಾದ ಅಭಿಮಾನಿಗಳು ತಾವೆ ಒಂದು ಟ್ರೈಲರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

  TRPಯಲ್ಲಿ ಮಹೇಶ್ ಬಾಬು 'ಸರಿಲೇರು ನೀಕೆವ್ವರು' ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡುತ್ತಾ ಯಶ್ 'ಕೆಜಿಎಫ್-1'?

   TRPಯಲ್ಲಿ ಮಹೇಶ್ ಬಾಬು 'ಸರಿಲೇರು ನೀಕೆವ್ವರು' ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡುತ್ತಾ ಯಶ್ 'ಕೆಜಿಎಫ್-1'? TRPಯಲ್ಲಿ ಮಹೇಶ್ ಬಾಬು 'ಸರಿಲೇರು ನೀಕೆವ್ವರು' ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡುತ್ತಾ ಯಶ್ 'ಕೆಜಿಎಫ್-1'?

  ಕೆಜಿಎಫ್ ಸಿನಿಮಾದ ಕೆಲವು ದೃಶ್ಯಗಳು ಮತ್ತು ಸಂಜಯ್ ಸಿನಿಮಾದ ದೃಶ್ಯಗಳನ್ನು ಸೇರಿಸಿ ಒಂದು ಟ್ರೈಲರ್ ಮಾಡಿ ರಿಲೀಸ್ ಮಾಡಿದ್ದಾರೆ. ಯೂಟ್ಯೂಬ್ ನಲ್ಲಿ ಫ್ಯಾನ್ ಮೇಡ್ ಟ್ರೈಲರ್ ಅನ್ನೆ ಜನ ಮುಗಿಬಿದ್ದು ವೀಕ್ಷಿಸಿದ್ದಾರೆ. ಲಕ್ಷಾಂತರ ವೀಕ್ಷಣೆ ಕಂಡಿದೆ. ಅಭಿಮಾನಿಗಳು ಮಾಡಿರುವ ಟ್ರೈಲರ್ ಈ ಪರಿ ನೋಡಿದ್ದಾರೆ ಅಂದ್ಮೇಲೆ ಇನ್ನ ಚಿತ್ರತಂಡ ಅಧಿಕೃತವಾಗಿ ರಿಲೀಸ್ ಮಾಡುವ ಟ್ರೈಲರ್ ಹೇಗಿರಲಿದೆ ಎನ್ನುವ ದುಪ್ಪಟ್ಟಾಗಿದೆ.

  ಅಂದ್ಹಾಗೆ ಕೆಜಿಎಫ್ ಮೊದಲ ಭಾಗಕ್ಕಿಂತ ಎರಡನೆ ಭಾಗದ ಮತ್ತಷ್ಟು ಭಯಾನಕವಾಗಿಯಂತೆ. ದೊಡ್ಡ ತಾರಾಬಳಗ ಸಹವಿದೆ. ಸಂಜಯ್ ದತ್, ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ. ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಕೊನೆಯ 20 ದಿನದ ಚಿತ್ರೀಕರಣ ಭಾಕಿಯುಳಿಸಿಕೊಂಡಿದೆ.

  ಈಗಾಗಲೆ ಸಿನಿಮಾ ಅಕ್ಟೋಬರ್ ಗೆ ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದ್ದಾರೆ. ಆದರೆ ಕೊರೊನಾ ಹಾವಳಿಯ ಪರಿಣಾಮ ಸಿನಿಮಾ ರಿಲೀಸ್ ಮುಂದ್ಕಕೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಚಿತ್ರೀಕರಣ ತಡವಾಗುವ ಸಾಧ್ಯತೆ ಇರುವ ಕಾರಣ ರಿಲೀಸ್ ಕೂಡ ಮುಂದಕ್ಕೆ ಹೋಗಲಿದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಈ ಸಿನಿಮಾತಂಡ ಯಾವುದೇ ಮಾಹಿತಿ ನೀಡಿಲ್ಲ.

  English summary
  Yash starrer Most expected KGF-2 fan made trailer goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X