ಕೋಲಾರದಿಂದ ಹೈದರಾಬಾದ್ ಗೆ ಶಿಫ್ಟ್ ಆದ 'ಕೆಜಿಎಫ್-2' ಚಿತ್ರತಂಡ

Recommended Video

KGF 2 Movie : ಕೋಲಾರದಿಂದ ಹೈದರಾಬಾದ್ ಗೆ ಶಿಫ್ಟ್ ಆದ 'ಕೆಜಿಎಫ್-2' ಚಿತ್ರತಂಡ | FILMIBEAT KANNADA

'ಕೆಜಿಫ್-2' ಕನ್ನಡ ಚಿತ್ರಾಭಿಮಾನಿಗಳು ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೆ ಕಾತುರದಿಂದ ಕಾಯುತ್ತಿರುವ ಸಿನಿಮಾ. ಕೆಜಿಎಫ್ ಚಾಪ್ಟರ್-1 ನೋಡಿದ ಅಭಿಮಾನಿಗಳಲ್ಲಿ ಚಾಪ್ಟರ್-2 ಮೇಲಿನ ನಿರೀಕ್ಷೆಯ ಮಟ್ಟ ದುಪ್ಪಟ್ಟು ಆಗಿದೆ. ಸದ್ಯ ಕೆಜಿಎಫ್-2 ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ.

ಮೈಸೂರು, ಬೆಂಗಳೂರು, ಕೋಲಾರದಲ್ಲಿ ಅದ್ಧೂರಿ ಸೆಟ್ ಹಾಕಿ ಚಿತ್ರೀಕರಣ ಮಾಡುತ್ತಿದ್ದ ಚಿತ್ರತಂಡ ಈಗ ದಿಢೀರನೆ ಹೈದರಾಬಾದ್ ಗೆ ಶಿಫ್ಟ್ ಆಗಿದೆ. ಇಂದಿನಿಂದ ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡಲಿದೆ ಚಿತ್ರತಂಡ.

ಕೆಜಿಎಫ್-2ಗಾಗಿ ಹೈದರಾಬಾದ್ ನಲ್ಲಿ ಅದ್ದೂರಿ ಸೆಟ್

ಕೆಜಿಎಫ್-2ಗಾಗಿ ಹೈದರಾಬಾದ್ ನಲ್ಲಿ ಅದ್ದೂರಿ ಸೆಟ್

ಕೆಜಿಎಫ್-2 ಚಿತ್ರಕ್ಕಾಗಿ ಈಗಾಗಲೆ ಕೋಲಾರ ಮತ್ತು ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ನಿರ್ಮಾಣ ಮಾಡಲಾಗಿತ್ತು. ಈಗ ಚಿತ್ರತಂಡ ಹೈದರಾಬಾದ್ ಕಡೆ ಪಯಣ ಬೆಳೆಸಿದೆ. ಚಿತ್ರಕ್ಕಾಗಿ ಹೈದರಾಬಾದ್ ನಲ್ಲಿ ಅದ್ದೂರಿ ಸೆಟ್ ನಿರ್ಮಾಣ ಮಾಡಲಾಗಿದೆಯಂತೆ. ಈಗಾಗಲೆ ಕೋಲಾರದಲ್ಲಿ ಚಿತ್ರದ ಪ್ರಮುಕ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆಯಂತೆ. ಮೊದಲ ಹಂತದ ಚಿತ್ರೀಕರಣ ಬೆಂಗಳೂರು, ಕೋಲಾರ ಮತ್ತು ಹೈದರಾಬಾದ್ ನಲ್ಲಿ ನಡೆಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಅದರಂತೆ ಈಗ ಹೈದರಾಬಾದ್ ಗೆ ತೆರಳಿದೆ.

ಕೆಜಿಎಫ್-2 ಚಿತ್ರೀಕರಣಕ್ಕೆ ಕೋರ್ಟ್ ತಡೆ

ಕೆಜಿಎಫ್-2 ಚಿತ್ರೀಕರಣಕ್ಕೆ ಕೋರ್ಟ್ ತಡೆ

ಕೆಜಿಎಫ್-2 ಚಿತ್ರದ ಚಿತ್ರೀಕರಣ ಕೋಲಾರದಲ್ಲಿ ನಡೆಯುತ್ತಿತ್ತು. ಸೈನೈಡ್ ಗುಡ್ಡದಲ್ಲಿ ಕೆಜಿಎಫ್-2 ಚಿತ್ರೀಕರಣ ನಡೆಯುತ್ತಿತು. ಆದ್ರೆ ಕೋಲಾರ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಅಲ್ಲಿಯ ಪರಿಸರವನ್ನು ನಾಶಮಾಡಲಾಗುತ್ತಿದೆ ಅಲ್ಲದೆ ಸ್ಥಳಿಯರಿಗೆ ತೊಂದರೆಯಾಗುತ್ತಿದೆ ಎಂದು ಶ್ರೀನಿವಾಸ್ ಕೋರ್ಟ್ ಮೆಟ್ಟಿಲೇರಿದ್ದರು. ಕೋಲಾರ ಸಿಟಿ ಸಿವಿಲ್ ಕೋರ್ಟ್ ದೂರನ್ನು ಪರಿಗಣಿಸಿ ಚಿತ್ರೀಕರಣಕ್ಕೆ ತಾತ್ಕಾಲಿಕ ತಡೆ ನೀಡಿದೆ. ಹಾಗಾಗಿ ಚಿತ್ರತಂಡ ಈಗ ಹೈದರಾಬಾದ್ ಕಡೆ ಪಯಣ ಬೆಳೆಸಿದೆ.

ಕೆಜಿಎಫ್-2 ನಲ್ಲಿ ಸಂಜಯ್ ದತ್

ಕೆಜಿಎಫ್-2 ನಲ್ಲಿ ಸಂಜಯ್ ದತ್

ಕೆಜಿಎಫ್ ಮೊದಲ ಭಾಗಕ್ಕಿಂತಲು ಚಾಪ್ಟರ್-2 ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಚಿತ್ರದಲ್ಲಿ ದೊಡ್ಡ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನ ಮುನ್ನಾಬಾಯ್ ಸಂಜಯ್ ದತ್ ಅದೀರನ ಪಾತ್ರದಲ್ಲಿ ಬಣ್ಣಹಚ್ಚುತ್ತಿದ್ದಾರೆ. ಈಗಾಗಲೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ಬಾಲಿವುಡ್ ನಟಿ ರವೀನಾ ಟಂಡನ್ ಸಹ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇನ್ನು ಮೊನ್ನೆ ಮೊನ್ನೆಯಷ್ಟೆ ತಮಿಳು ನಟ ಸರಣ್ ಚಿತ್ರತಂಡ ಸೇರಿಕೊಂಡಿದ್ದಾರೆ.

ಮುಂದಿನ ವರ್ಷ ಏಪ್ರಿಲ್ ನಲ್ಲಿ ತೆರೆಗೆ?

ಮುಂದಿನ ವರ್ಷ ಏಪ್ರಿಲ್ ನಲ್ಲಿ ತೆರೆಗೆ?

'ಕೆಜಿಎಫ್ ಚಾಪ್ಟರ್-2' ನಿಗದಿಯಾದ ಸಮಯಕ್ಕಿಂತ ಎಂಟು ತಿಂಗಳು ಮೊದಲೆ ತೆರೆಗೆ ಬರುತ್ತಿದೆಯಂತೆ. ಅಂದ್ರೆ ಚಿತ್ರತಂಡದ ಪ್ಲಾನ್ ಪ್ರಕಾರ 'ಕೆಜಿಎಫ್-2 'ಮುಂದಿನ ವರ್ಷ ಡಿಸೆಂಬರ್ ನಲ್ಲಿ ತೆರೆಗೆ ಬರಬೇಕಿತ್ತು. ಆದ್ರೀಗ ಮೂಲಗಳ ಪ್ರಕಾರ 'ಕೆಜಿಎಫ್-2' ಮುಂದಿನ ವರ್ಷ ಸಮ್ಮರ್ ನಲ್ಲಿ ಅಂದ್ರೆ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರುತ್ತಿದೆಯಂತೆ. 'ಕೆಜಿಎಫ್ ಚಾಪ್ಟರ್-2' ನಿಗದಿಯಾದ ಸಮಯಕ್ಕಿಂತ ಎಂಟು ತಿಂಗಳು ಮೊದಲೆ ತೆರೆಗೆ ಬರಲು ಸಜ್ಜಾಗಿದೆ. ಚಿತ್ರತಂಡ ಅಂದುಕೊಂಡಿದ್ದಕ್ಕಿಂತ ಮೊದಲೆ ಚಿತ್ರೀಕರಣ ಮುಕ್ತಾಯವಾಗುತ್ತಂತೆ. ಹಾಗಾಗಿ ಚಿತ್ರ ಏಪ್ರಿಲ್ ನಲ್ಲಿಯೆ ರಿಲೀಸ್ ಆಗುವ ಸಾಧ್ಯತೆ ಹೆಚ್ಚಿದೆ.

More from Filmibeat

English summary
Kannada actor Yash starrer most expected KGF-2 shooting is going on in Hyderabad. This movie is directed by Prashanth neel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X