Don't Miss!
- Sports
ಮಹಾರಾಜ ಟ್ರೋಫಿ: ಟೇಬಲ್ ಟಾಪರ್ಸ್ ವಿರುದ್ಧ ಗೆದ್ದು 2 ಸ್ಥಾನ ಜಿಗಿದ ಮೈಸೂರು ವಾರಿಯರ್ಸ್!
- News
Breaking: ಕರ್ನಾಟಕದಲ್ಲಿ 2ನೇ ದಿನವೂ ಕೊರೊನಾದಿಂದ 5 ಮಂದಿ ಸಾವು!
- Lifestyle
ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ ಸ್ಪೆಷಲ್ ರೆಸಿಪಿ: ತಿರಂಗಾ ಹಲ್ವಾ
- Automobiles
ಇವಿ ಬಸ್ ಸೇವೆಗಾಗಿ 1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ
- Technology
ಬ್ಲೂ ಬೋಲ್ಡ್ N2 ಸ್ಮಾರ್ಟ್ಫೋನ್ ಬಿಡುಗಡೆ! ಏನೆಲ್ಲಾ ಫೀಚರ್ಸ್ ಲಭ್ಯ!
- Finance
ಕೇರಳ ಲಾಟರಿ: 'ಕಾರುಣ್ಯ KR 562' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ದಾಖಲೆ ಬರೆದ 'ಕೆಜಿಎಫ್ 2' ಸಿನಿಮಾ ಫೈನಲ್ ಬಾಕ್ಸಾಫೀಸ್ ಕಲೆಕ್ಷನ್ ರಿಪೋರ್ಟ್ ಎಷ್ಟು?
ಕನ್ನಡ ಚಿತ್ರರಂಗ ವಿಶ್ವಕ್ಕೆ ಚಿರಪರಿಚಿತ. ಇಲ್ಲಿವರೆಗೂ ಪ್ರಾದೇಶಿಕ ಚಿತ್ರರಂಗದ ಪಟ್ಟಿಗೆ ಸೇರಿದ್ದ ಸಿನಿಮಾ ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ. ಕೇವಲ ಕನ್ನಡಿಗರಿಗೆ, ಭಾರತೀಯರಿಗಷ್ಟೇ ಅಲ್ಲ. ವಿದೇಶಿಗರಿಗೂ ಈ ಸಿನಿಮಾ ತುಂಬಾನೇ ಇಷ್ಟ ಆಗಿದೆ. ಈ ಕಾರಣಕ್ಕೆ 'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್ನಲ್ಲೂ ಬೇಜಾನ್ ಸದ್ದು ಮಾಡಿತ್ತು.
'ಕೆಜಿಎಫ್ 2' ರಿಲೀಸ್ ಆದಲ್ಲಿಂದ ಬಾಕ್ಸಾಫೀಸ್ನಲ್ಲಿ ಅಬ್ಬರಿಸಿತ್ತು. ಬಾಕ್ಸಾಫೀಸ್ ಮೇಲೆ 'ಕೆಜಿಎಫ್ 2' ಸಿನಿಮಾ ಮಾಡಿದ ದಾಳಿಯನ್ನು ಕಂಡು ಭಾರತೀಯ ಚಿತ್ರರಂಗವೇ ಕಂಗಾಲಾಗಿತ್ತು. ದಿನದಿಂದ ದಿನಕ್ಕೆ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದ 'ಕೆಜಿಎಫ್ 2' ಈಗ ಒಟಿಟಿಗೂ ಲಗ್ಗೆ ಇಟ್ಟು ಅಬ್ಬರಿಸುತ್ತಿದೆ.
ಬಾಲಿವುಡ್ನವರು
'ಕೆಜಿಎಫ್'
ಮಾಡಿದ್ದರೆ
ಏನಾಗಿರುತ್ತಿತ್ತು?
ಕರಣ್
ಜೋಹರ್
ಕೊಟ್ಟಿದ್ದಾರೆ
ಉತ್ತರ
ರಾಕಿ ಭಾಯ್ ಹಾಗೂ ಪ್ರಶಾಂತ್ ನೀಲ್ ಮೋಡಿಯಿಂದ 'ಕೆಜಿಎಫ್ 2' ಎಲ್ಲೆಲ್ಲಿ ಬಿಡುಗಡೆಯಾಗಿತ್ತೋ ಅಲ್ಲೆಲ್ಲಾ ದಾಖಲೆ ಕಲೆಕ್ಷನ್ ಮಾಡಿದೆ. 'ಕೆಜಿಎಫ್ 2' ರಿಲೀಸ್ ಆಗಿ 10 ವಾರಗಳಾಗಿವೆ. ಒಟಿಟಿಯಲ್ಲಿ ಈ ಸಿನಿಮಾ ಪ್ರೀಮಿಯರ್ ಆಗುತ್ತಿದ್ದರೂ, ಕೆಲವು ಆಯ್ದ ಥಿಯೇಟರ್ನಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ಆದರೂ, 'ಕೆಜಿಎಫ್ 2' ಇಲ್ಲಿವರೆಗೂ ಗಳಿಸಿದ ಒಟ್ಟು ಕಲೆಕ್ಷನ್ ಬಗ್ಗೆ ಬಾಲಿವುಡ್ ಲೆಕ್ಕಾಚಾರ ಹಾಕಿ ಅಂದಾಜು ರಿಪೋರ್ಟ್ ರೆಡಿ ಮಾಡಿದೆ. ಅದರ ಡಿಟೈಲ್ಸ್ ಇಲ್ಲಿದೆ.

ಫಸ್ಟ್ ಡೇ ಕಲೆಕ್ಷನ್ ₹100 ಕೋಟಿ
'ಕೆಜಿಎಫ್ 2' ಏಪ್ರಿಲ್ 14ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. ಸಿನಿಮಾ ರಿಲೀಸ್ ಆದ ಮೊದಲ ದಿನದಿಂದಲೇ 'ಕೆಜಿಎಫ್ 2' ಅಬ್ಬರಿಸಲು ಆರಂಭಿಸಿತ್ತು. ಐದೂ ಭಾಷೆಗಳಲ್ಲೂ ಈ ಸಿನಿಮಾ ಕಲೆಕ್ಷನ್ ಅದ್ಭುತವಾಗಿತ್ತು. ಮೊದಲ ದಿನವೇ 100 ಕೋಟಿ ರೂ.ಗೂ ಅಧಿಕ ಗಳಿಸಿದ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. RRR ಸಿನಿಮಾ ಮೊದಲ ದಿನ ಗಳಿಸಿದ 90 ಕೋಟಿ ರೂ. ಗಳಿಸಿತ್ತು. ಆ ದಾಖಲೆಯನ್ನು ಮುರಿದಿತ್ತು. ಅಂತಯೇ 'ಬಾಹುಬಲಿ 2' ಮೊದಲ ದಿನದ ಗಳಿಕೆಯನ್ನು ಹಿಂದಿಕ್ಕಲು ಸೋತಿದೆ.
'ವಿಕ್ರಂ'
ಮುಂದೆ
'ಕೆಜಿಎಫ್
2'
ಬಚ್ಚಾ:
ಮತ್ತೆ
ಖ್ಯಾತೆ
ತೆಗೆದ
ಕಮಾಲ್!

'ಕೆಜಿಎಫ್ 2' ಭಾರತದ ಕಲೆಕ್ಷನ್ ಎಷ್ಟು?
'ಕೆಜಿಎಫ್ 2' ರಾಜಮೌಳಿ ನಿರ್ದೇಶಿಸಿದ RRR ಸಿನಿಮಾದ ದಾಖಲೆಯನ್ನು ಉಡೀಸ್ ಮಾಡಿದೆ. 'ಕೆಜಿಎಫ್ 2' ಎಲ್ಲಾ ಭಾಷೆಯಲ್ಲೂ, ಎಲ್ಲಾ ಪ್ರದೇಶಗಳಲ್ಲಿಯೂ ಉತ್ತಮ ಗಳಿಕೆ ಕಂಡಿದೆ. ಭಾರತದ ಮೂಲೆ ಮೂಲೆಯಲ್ಲಿ 'ಕೆಜಿಎಫ್ 2' ಸಿನಿಮಾವನ್ನು ನೋಡಿದ್ದಾರೆ. ಇದನ್ನು ಆಧಾರವಾಗಿಟ್ಟುಕೊಂಡು ಫಿಂಕ್ವಿಲ್ ವೆಬ್ಸೈಟ್ 'ಕೆಜಿಎಫ್ 2' ಫೈನಲ್ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ಪಟ್ಟಿ ಮಾಡಿದೆ.
ಕರ್ನಾಟಕ
₹171.50
ಕೋಟಿ
ಆಂಧ್ರ/
ತೆಲಂಗಾಣ
₹150
ಕೋಟಿ
ತಮಿಳುನಾಡು
₹109.70
ಕೋಟಿ
ಕೇರಳ
₹66.10
ಕೋಟಿ
ಉತ್ತರ
ಭಾರತ
₹494.30
ಕೋಟಿ
ಒಟ್ಟು ₹991.60 ಕೋಟಿ

'ಕೆಜಿಎಫ್ 2' ವರ್ಲ್ಡ್ವೈಡ್ ಕಲೆಕ್ಷನ್ ಎಷ್ಟು?
ಅತೀ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಸಿನಿಮಾ 'ಕೆಜಿಎಫ್ 2' ಹಾಗೇ ವಿದೇಶದ ಬಾಕ್ಸಾಫೀಸ್ನಲ್ಲಿ 200 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಕೂಡ ಹೌದು. 'ಕೆಜಿಎಫ್ 2' ಎಲ್ಲೆಲ್ಲಿ ಬಿಡುಗಡೆಯಾಗಿದೆಯೋ ಅಲ್ಲೆಲ್ಲಾ ಉತ್ತಮ ಕಲೆಕ್ಷನ್ ಮಾಡಿದೆ. ಅದರ ಡಿಟೈಲ್ಸ್ ಇಲ್ಲಿದೆ.
ಉತ್ತರ
ಅಮೆರಿಕಾ
$7.45
million
ಮಧ್ಯ
ಪ್ರಾಚ್ಯ
$8.13
million
ಆಸ್ಟೇಲಿಯಾ
$2.53
million
ನ್ಯೂಜಿಲ್ಯಾಂಡ್
$0.43
million
ಮಲೇಷ್ಯಾ
$2.45
million
ಸಿಂಗಾಪುರ
$0.90
million
ನೇಪಾಳ
$1.05
million
ಏಪ್ಯಾ
$0.65
million
ಯುಕೆ-
$1.46
million
ಯುರೋಪ್
$1.50
million
ಉಳಿದ
ರಾಷ್ಟ್ರ
$0.50
million
ಓವರ್ಸೀಸ್ $27.05 million / ₹206.60 ಕೋಟಿ
ಸಾಗರದ
ಕೆಳದಿ
ಅರಸರ
ಕಲ್ಯಾಣಿಯನ್ನು
ಜೀರ್ಣೋದ್ಧಾರ
ಮಾಡಿದ
ಯಶ್
'ಯಶೋಮಾರ್ಗ'

5 ಕೋಟಿ ಮಂದಿ ವೀಕ್ಷಣೆ
'ಕೆಜಿಎಫ್ 2' ಸಿನಿಮಾ ವಿಶ್ವದಾದ್ಯಂತ ₹1250 ಕೋಟಿಗೂ ಅಧಿಕ ಗಳಿಸಿದೆ ಎಂದು ವರದಿಯಾಗಿತ್ತು. ಪಿಂಕ್ ವಿಲ್ಲಾ ಕೂಡ ಈ ಮೊತ್ತದ ಆಜುಬಾಜುವಿನಲ್ಲಿಯೇ ವರದಿ ಮಾಡಿದೆ. 'ಕೆಜಿಎಫ್ 2' ಫೈನಲ್ ಬಾಕ್ಸಾಫೀಸ್ ಕಲೆಕ್ಷನ್ ₹1198.20 ಕೋಟಿ ಎಂದು ಹೇಳಿದೆ. ಈ ಸಿನಿಮಾವನ್ನು ಇದೂವರೆಗೂ ಭಾರತದಾದ್ಯಂತ ಸುಮಾರು 5 ಕೋಟಿ ಮಂದಿ ವೀಕ್ಷಿಸಿದ್ದಾರೆ ಎಂದು ಹೇಳಲಾಗಿತ್ತು. ಈಗ ಅದು 5.25 ಕೋಟಿ ಆಗಿರಬಹುದು ಎನ್ನಲಾಗಿದೆ.