ಯಶ್ 'ಟಾಕ್ಸಿಕ್' ಫ್ಯಾನ್ಸ್ ರೆಡಿನಾ? ಬರ್ತಿದೆ ಬಿಗ್ ಸರ್‌ಪ್ರೈಸ್, ಹಬ್ಬ ಮಾಡ್ಕೊಳಿ
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಟೀಸರ್‌ಗಳು ಒಂದೊಂದಾಗಿ ಬಂದು ಗಮನ ಸೆಳೆದಿವೆ. ಒಂದು ಆಡಿಯೋ ಸಾಂಗ್ ಕೂಡ ಬಂದು ಸದ್ದು ಮಾಡಿತ್ತು. ಮುಂದಿನ ಸರ್‌ಪ್ರೈಸ್ ಏನು ಎನ್ನುವ ಕುತೂಹಲ ಮೂಡಿದೆ. ಸಿನಿಮಾ ಬಿಡುಗಡೆಗೆ ಇನ್ನು 53 ದಿನ ಬಾಕಿಯಿದೆ. ಟ್ರೈಲರ್ ಯಾವಾಗ ರಿಲೀಸ್ ಎನ್ನುವ ಪ್ರಶ್ನೆ ಎದ್ದಿದೆ.
ಗ್ಲೋಬಲ್ ಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಅದಕ್ಕೆ ತಕ್ಕಂತೆ ಪ್ರಮೋಷನ್ ಮಾಡುವ ಅಗತ್ಯವಿದೆ. ಟೀಸರ್ ಬಿಟ್ಟು ಬೇರೆ ಏನಾದರೂ ಕಂಟೆಂಟ್ ಬಿಡಿ ಬಾಸ್ ಎಂದು ಅಭಿಮಾನಿಗಳು ಕೇಳಿಕೇಳಿ ಸುಸ್ತಾಗಿದ್ದಾರೆ. ಇದೀಗ 'ತಬಾಹಿ' ವೀಡಿಯೋ ಸಾಂಗ್ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಹೌದು ಬಹಳ ದಿನಗಳ ಹಿಂದೆಯೇ ಸುಳಿವು ಸಿಕ್ಕಿತ್ತು. ಇದೀಗ ಆ ಸಮಯ ಹತ್ತಿರ ಬರ್ತಿದೆ.

'ತಬಾಹಿ' ಲಿರಿಕಲ್ ವೀಡಿಯೋ ಸಾಂಗ್ ರಿಲೀಸ್ ಮಾಡಲು ಚಿತ್ರತಂಡ ವಿಫಲವಾಗಿತ್ತು. ಒಂದೇ ಒಂದು ಫೋಟೊ ಇಟ್ಟು ಲಿರಿಕಲ್ ವೀಡಿಯೋ ಹಂಚಿಕೊಂಡಿದ್ದರು. ಇನ್ನೇನು ವೀಡಿಯೋ ಸಾಂಗ್ ಬಿಡೋಣ ಎನ್ನುವಷ್ಟರಲ್ಲಿ ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಮಾಡುವಂತಾಗಿತ್ತು. ಹಾಗಾಗಿ ಇದು ಸಾಧ್ಯವಾಗಿರಲಿಲ್ಲ. 'ಲೇಡೀಸ್ & ಲೇಡೀಸ್' ಟೀಸರ್ ಬಳಿಕ ವೀಡಿಯೋ ಸಾಂಗ್ ಬರುತ್ತೆ ಎನ್ನುವ ಚರ್ಚೆ ಜೋರಾಗಿದೆ. ಅದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ವಿಶಾಲ್ ಮಿಶ್ರಾ ಟ್ಯೂನ್ ಹಾಕಿ 'ತಬಾಹಿ' ಸಾಂಗ್ ಹಾಡಿದ್ದಾರೆ. ಕನ್ನಡದಲ್ಲಿ ಯೋಗರಾಜ್ ಭಟ್ ಸಾಹಿತ್ಯ ಬರೆದಿರುವುದು ವಿಶೇಷ. ಸಾಗರ.....ಸರಸರ....ದಡವನು ದಾಟಲು ಎನ್ನುವ ಸಾಲು ಕೇಳುಗರ ಗಮನ ಸೆಳೆದಿದೆ. ಬೀಚ್‌ನಲ್ಲಿ ಯಶ್ ಹಾಗೂ ಕಿಯಾರಾ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಡಿಯಾ ಎಂಬ ಪಾತ್ರದಲ್ಲಿ ಕಿಯಾರಾ ನಟಿಸುತ್ತಿದ್ದಾರೆ, ಕಣ್ಣು ಕಾಣದ ವಿಶೇಷ ಚೇತನ ಪಾತ್ರ ಇದು ಎನ್ನಲಾಗ್ತಿದೆ. ಇತ್ತೀಚೆಗೆ ಬಂದ 'ಲೇಡೀಸ್ & ಲೇಡೀಸ್' ಟೀಸರ್‌ನಲ್ಲಿ ಕೂಡ 'ತಬಾಹಿ' ಸಾಂಗ್ ಝಲಕ್ ಇತ್ತು.
ರವಿಬಸ್ರೂರು ಒಂದು ಸಾಂಗ್ ಜೊತೆಗೆ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸುತ್ತಿದ್ದಾರೆ. ವಿಶಾಲ್ ಮಿಶ್ರಾ ಇನ್ನು 3 ಸಾಂಗ್ ಕಟ್ಟಿಕೊಡುತ್ತಿದ್ದಾರೆ. ತನಿಷ್ಕ್ ಬಾಗ್ಚಿ, ಫಹೀಮ್ ಅಬ್ದುಲ್ಲಾ ಮತ್ತು ಅರ್ಸ್ಲಾನ್ ನಿಜಾಮಿ ಮತ್ತೊಂದು ಸಾಂಗ್ ಕಂಪೋಸ್ ಮಾಡಲು ಕೈ ಜೋಡಿಸುತ್ತಿದ್ದಾರೆ. ಜೀ ಸಂಸ್ಥೆಗೆ ಆಡಿಯೋ ರೈಟ್ಸ್ ಮಾರಾಟವಾಗಿದೆ. ಆಗಸ್ಟ್ 26ಕ್ಕೆ ದೊಡ್ಡಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗಲಿದೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸಿನಿಮಾ ಚಿತ್ರೀಕರಣವಾಗಿದ್ದು ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಬರಲಿದೆ.
ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಹೀಗೆ ದೊಡ್ಡ ಕಲಾವಿದರ ದಂಡೇ 'ಟಾಕ್ಸಿಕ್' ಚಿತ್ರದಲ್ಲಿದೆ. ಬಹುಕೋಟಿ ವೆಚ್ಚದಲ್ಲಿ ಬಹಳ ಅದ್ಧೂರಿಯಾಗಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ಮಾಣ ಮಾಡಲಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ.
ಗೀತು ಮೋಹನ್ ದಾಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆಕೆಯ ಜೊತೆ ಸೇರಿ ಯಶ್ ಚಿತ್ರಕಥೆಯನ್ನು ತಿದ್ದಿ ತೀಡಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಏಕಕಾಲಕ್ಕೆ ಹಾಲಿವುಡ್ ಅಂಗಳದಲ್ಲಿ ದೊಡ್ಡದಾಗಿ ಸಿನಿಮಾ ಬಿಡುಗಡೆ ಮಾಡಬೇಕು ಎನ್ನುವ ಕಾರಣಕ್ಕೆ ಪದೇ ಪದೆ ರಿಲೀಸ್ ಮುಂದೂಡುತ್ತಾ ಬರಲಾಗ್ತಿದೆ. ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ತಡವಾದರೂ ಎಲ್ಲರೂ ಒಪ್ಪುವಂತಹ ಸಿನಿಮಾ ಕೊಡುವ ಪ್ರಯತ್ನದಲ್ಲಿದೆ ಚಿತ್ರತಂಡ.
ಸ್ಯಾಂಪಲ್‌ಗಳಲ್ಲಿ ಇರುವ ಹಸಿಬಿಸಿ ದೃಶ್ಯಗಳ ಬಗ್ಗೆ ಟೀಕೆ ವ್ಯಕ್ತವಾಗ್ತಿದೆ. ಸೆನ್ಸಾರ್ ಸಮಸ್ಯೆ ಆಗುತ್ತಾ ಎನ್ನುವ ಅನುಮಾನ ಮೂಡಿದೆ. ಎಲ್ಲವನ್ನು ಮೀರಿ 'ಟಾಕ್ಸಿಕ್' ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದ್ದು ಹೇಗೆ ಸದ್ದು ಮಾಡುತ್ತೆ ಕಾದು ನೋಡಬೇಕಿದೆ.


Click it and Unblock the Notifications