'ಟಾಕ್ಸಿಕ್' ಪಯಣ ಶುರು ಎಂದ ರಾಕಿಂಗ್ ಸ್ಟಾರ್; ಏಪ್ರಿಲ್ 10ಕ್ಕೆ ಚಿತ್ರ ತೆರೆಗೆ ಬರುತ್ತಾ?

ಅಂತೂ ಇಂತೂ ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಪೂಜೆ ನೆರವೇರಿಸಿ ಚಿತ್ರೀಕರಣಕ್ಕೆ ಮುಂದಾಗಿದೆ. ಗೀತು ಮೋಹನ್ ದಾಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲೇ 'ಟಾಕ್ಸಿಕ್' ಸಿನಿಮಾ ಘೋಷಣೆ ಆಗಿತ್ತು. ಬಳಿಕ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್ ಸಿಕ್ಕಿರಲಿಲ್ಲ. ತೆರೆಮರೆಯಲ್ಲಿ ಚಿತ್ರದ ಕೆಲಸಗಳು ನಡೆಯುತ್ತಿತ್ತು. ಚಿತ್ರೀಕರಣ ಶುರುವಾಗಿದೆ ಎನ್ನುವ ಗುಸುಗುಸು ಕೂಡ ಕೇಳಿಬಂದಿತ್ತು. ಆದರೆ ಆ ಬಗ್ಗೆ ಚಿತ್ರತಂಡ ಪ್ರತಿಕ್ರಿಯಿಸಿರಲಿಲ್ಲ. ಅಂತೂ ಇದೀಗ ಚಿತ್ರೀಕರಣಕ್ಕೆ ಅಣಿಯಾಗಿದೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗಪ್ಪಳಿಸುತ್ತಾ ಕಾದು ನೋಡಬೇಕಿದೆ.

Yash starrer Toxic film shoot begins with mahurat puja

ಅಭಿಮಾನಿಗಳು ಟಾಕ್ಸಿಕ್ ಅಪ್‌ಡೇಟ್ ಕೇಳಿ ಕೇಳಿ ಸುಸ್ತಾಗಿದ್ದರು. ಇದೀಗ ಖುದ್ದು ಯಶ್ ಚಿತ್ರದ ಮುಹೂರ್ತ ಸಮಾರಂಭ ಫೋಟೊ ಹಂಚಿಕೊಂಡು 'ಟಾಕ್ಸಿಕ್' ಪಯಣ ಶುರು ಎಂದು ಬರೆದುಕೊಂಡಿದ್ದಾರೆ. ನಗರದ ಹೆಚ್‌ಎಂಟಿ ಫ್ಯಾಕ್ಟರಿ ಆವರಣದಲ್ಲಿ ಚಿತ್ರೀಕರಣಕ್ಕಾಗಿ ಭಾರೀ ಸೆಟ್ ನಿರ್ಮಾಣವಾಗಿದೆ. ಅಲ್ಲೇ ಮೊದಲ ಹಂತದ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದೆ. ಇನ್ನು ಚಿತ್ರದಲ್ಲಿ 60, 70ರ ದಶಕದ ಕಥೆ ಹೇಳಲಾಗುತ್ತಿದೆ. ಅದಕ್ಕೆ ತಕ್ಕಂತೆ ಮೇಕಿಂಗ್ ಪ್ಲ್ಲಾನ್ ಮಾಡಲಾಗಿದೆ.

ನಟ ಯಶ್ '8' ಸಂಖ್ಯೆಯನ್ನು ಅದೃಷ್ಟ ಎಂದು ನಂಬುತ್ತಾರೆ. ರಾಕಿಂಗ್ ಸ್ಟಾರ್ ಹುಟ್ಟಿದ್ದು 8ನೇ ತಾರೀಖು. ಇದೀಗ 8 ತಿಂಗಳ 8ರಂದು 'ಟಾಕ್ಸಿಕ್' ಚಿತ್ರಕ್ಕೆ ಪೂಜೆ ಮಾಡಿ ಚಾಲನೆ ಕೊಟ್ಟಿದ್ದಾರೆ. 2024ರ ಇಸವಿಯ ಅಂಕಿಗಳನ್ನು ಕೂಡಿಸಿದರೆ '8' ಬರುತ್ತದೆ. ಇನ್ನು ಸಿನಿಮಾ ಚಿತ್ರೀಕರಣಕ್ಕೂ ಮುನ್ನ ಯಶ್ ಚಿತ್ರತಂಡದ ಜೊತೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದರು.

ಇನ್ನು ಬೆಳ್ತಂಗಡಿಯ ಸುರ್ಯದಲ್ಲಿರುವ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ ನೋಡಿ ಹರಕೆ ಮಾಡಿಕೊಂಡಿದ್ದಾರೆ. ಯಶ್ ದಂಪತಿಗೆ ನಿರ್ಮಾಪಕ ವೆಂಕಟ್ ಕೊನಂಕಿ ದಂಪತಿ ಕೂಡ ಸಾಥ್ ನೀಡಿದ್ದರು. 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮ್ಮ ಉದ್ದ ಗಡ್ಡ, ಕೂದಲಿಗೆ ಕೊಂಚ ಕತ್ತರಿ ಹಾಕಿದ್ದು ಸ್ಟೈಲಿಶ್ ಲುಕ್‌ನಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಕಳೆದ ವರ್ಷ ಸಣ್ಣ ಮೋಷನ್ ಟೀಸರ್ ಜೊತೆ 'ಟಾಕ್ಸಿಕ್' ಸಿನಿಮಾ ಘೋಷಣೆ ಆಗಿತ್ತು. ಟೈಟಲ್ ಸಮೇತ ಸಿನಿಮಾ ರಿಲೀಸ್ ಡೇಟ್ ರಿವೀಲ್ ಆಗಿತ್ತು. ಮುಂದಿನ 2025ರ ಏಪ್ರಿಲ್ 10ಕ್ಕೆ ಸಿನಿಮಾ ತೆರೆಗೆ ಬರುತ್ತದೆ ಎನ್ನಲಾಗಿತ್ತು. ಆದರೆ ಇದೀಗ ಅದೇ ದಿನ ಪ್ರಭಾಸ್ ನಟನೆಯ 'ದಿ ರಾಜಾ ಸಾಬ್' ಸಿನಿಮಾ ತೆರೆಗೆ ಬರಲಿದೆ. ಹಾಗಾಗಿ ಹೇಳಿದಂತೆ 'ಟಾಕ್ಸಿಕ್' ಬಿಡುಗಡೆ ಆಗುತ್ತಾ ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ.

'ಟಾಕ್ಸಿಕ್' ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಾರೆ ಎನ್ನುವ ಬಗ್ಗೆಯೂ ಸಾಕಷ್ಟು ಅಂತೆಕಂತೆ ಸುದ್ದಿ ಹರಿದಾಡಿತ್ತು . ಕರೀನಾ ಕಪೂರ್, ನಯನತಾರಾ, ಕೈರಾ ಅದ್ವಾನಿ ಸೇರಿದಂತೆ ಹಲವರ ಹೆಸರುಗಳು ಕೇಳಿಬಂದಿತ್ತು. ಆದರೆ ಈ ಬಗ್ಗೆ ಚಿತ್ರತಂಡ ಮಾತ್ರ ಪ್ರತಿಕ್ರಿಯಿಸಲಿಲ್ಲ. ಸಿನಿಮಾ ಬಿಡುಗಡೆ ದಿನಾಂಕದ ಬಗ್ಗೆಯೂ ಇನ್ನು ಸ್ಪಷ್ಟತೆ ಇಲ್ಲ. ಪ್ರಭಾಸ್ ಸಿನಿಮಾ ಎದುರು ಬಾಕ್ಸಾಫೀಸ್ ಕ್ಲ್ಯಾಶ್ ಆಗಲ್ಲ ಎಂದೇ ಕೆಲವರು ಭಾವಿಸಿದ್ದಾರೆ.

More from Filmibeat

English summary
Yash new film Taxic launched with a pooja ceremony
Read more about: yash toxic sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X