ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ರಿಲೀಸ್ ಡೇಟ್ ಪೋಸ್ಟ್‌ಪೋನ್; ಯಾರಿಗೆಲ್ಲಾ ಲಾಭ ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಈ ವಿಚಾರವನ್ನು ಅರಗಿಸಿಕೊಳ್ಳಲು ಇನ್ನು ಸಾಧ್ಯವಾಗುತ್ತಿಲ್ಲ. ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್ ಎಂದು ಕಾಯುತ್ತಿದ್ದವರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. 3 ತಿಂಗಳು ತಡವಾಗಿ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಇರಾನ್- ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಸಿನಿಮಾ ರಿಲೀಸ್ ಡೇಟ್ ಬದಲಿಸುತ್ತಿರುವುದಾಗಿ ಚಿತ್ರತಂಡ ಹೇಳಿದೆ.

'ಧುರಂಧರ್'- 2 ಹಾಗೂ 'ಟಾಕ್ಸಿಕ್' ಸಿನಿಮಾಗಳ ನಡುವೆ ದಶಕದ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯುತ್ತದೆ ಎಂದೇ ಹೇಳಲಾಗಿತ್ತು. ಒಂದು ವೇಳೆ 'ಧುರಂಧರ್'- 2 ರಿಲೀಸ್ ಡೇಟ್ ಬದಲಾಗಬಹುದು. ಆದರೆ 'ಟಾಕ್ಸಿಕ್' ಸಿನಿಮಾ ಮಾರ್ಚ್ 19ಕ್ಕೆ ತೆರೆಗಪ್ಪಳಿಸುವುದು ಗ್ಯಾರಂಟಿ ಎಂದು ಎಲ್ಲರೂ ಭಾವಿಸಿದ್ದರು. ಕಹಾನಿಯಲ್ಲಿ ಟ್ವಿಸ್ಟ್ ಏನಂದ್ರೆ ಯಶ್ ಸಿನಿಮಾ ರಿಲೀಸ್ ಮುಂದೂಡುವಂತಾಗಿದೆ. ಇದರಿಂದ 'ಧುರಂಧರ್'- 2 ಚಿತ್ರಕ್ಕೆ ಭಾರೀ ಲಾಭವಾಗುತ್ತಿದೆ.

Yash starrer Toxic Postponed Ustad Bhagath Singh and Love Mocktail 3 Eye March 19 Slot

'ಟಾಕ್ಸಿಕ್', 'ಧುರಂಧರ್-2' ರಿಲೀಸ್ ಹಿನ್ನೆಲೆಯಲ್ಲಿ ಬೇರೆ ಯಾವುದೇ ಸಿನಿಮಾ ಸಿನಿಮಾ ಮಾಡಲು ಫಿಲ್ಮ್ ಮೇಕರ್ಸ್ ಹೆದರುವಂತಾಗಿತ್ತು. ಯುಗಾದಿ, ರಂಜಾನ್ ಹಬ್ಬಗಳ ರಜೆ ಬಾಕ್ಸಾಫೀಸ್ ಕಲೆಕ್ಷನ್‌ಗೆ ಪ್ಲಸ್ ಆಗುತ್ತದೆ ಎಂದು ಕೆಲವರು ಭಾವಿಸಿದ್ದರು. ಅದೇ ಕಾರಣಕ್ಕೆ ಒಂದಷ್ಟು ಸಿನಿಮಾಗಳನ್ನು ಮಾರ್ಚ್ 19ಕ್ಕೆ ಬಿಡುಗಡೆ ಮಾಡಲು ಮುಂದಾಗಿದ್ದರು. ಬಳಿಕ ಬೇಡ ಎಂದು ರಿಲೀಸ್ ಡೇಟ್ ಮುಂದೂಡಿದ್ದರು. ಈಗ 'ಟಾಕ್ಸಿಕ್' ರಿಲೀಸ್ ತಡವಾಗುತ್ತಿರುವುದರಿಂದ ಮಾರ್ಚ್ 19ಕ್ಕೆ ತಮ್ಮ ಸಿನಿಮಾಗಳನ್ನು ತೆರೆಗೆ ತರಲು ಕೆಲವರು ಮುಂದಾಗಿದ್ದಾರೆ.

ಕನ್ನಡದ 'ಲವ್ ಮಾಕ್ಟೇಲ್'- 3 ಸಿನಿಮಾ ಮಾರ್ಚ್ 19ಕ್ಕೆ ತೆರೆಗೆ ಬರುವುದು ಖಚಿತವಾಗಿದೆ. ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ದಂಪತಿ ನಿರ್ಮಿಸಿ ನಟಿಸುತ್ತಿರುವ ಸಿನಿಮಾ ಇದು. ಏಪ್ರಿಲ್‌ನಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ಆಗಿತ್ತು. ಆದರೆ 'ಟಾಕ್ಸಿಕ್' ಬಿಡುಗಡೆ ತಡ ಎಂದು ಗೊತ್ತಾಗುತ್ತಿದ್ದಂತೆ ರಿಲೀಸ್ ಡೇಟ್ ಹಿಂದಕ್ಕೆ ಹಾಕಿಕೊಳ್ಳುತ್ತಿದ್ದಾರೆ.

Yash starrer Toxic Postponed Ustad Bhagath Singh and Love Mocktail 3 Eye March 19 Slot

ತೆಲುಗಿನ 'ಪೆದ್ದಿ' ಸಿನಿಮಾ ಮಾರ್ಚ್ 28ಕ್ಕೆ ತೆರೆಗೆ ಬರಬೇಕಿತ್ತು. ಆದರೆ 'ಟಾಕ್ಸಿಕ್', 'ಧುರಂಧರ್-2' ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ಆಗಬಹುದು ಎಂದು ಒಂದು ತಿಂಗಳು ತಡವಾಗಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ಮನಸ್ಸು ಮಾಡಿದೆ. ಬುಚ್ಚಿಬಾಬು ನಿರ್ದೇಶನದ ಈ ಚಿತ್ರದಲ್ಲಿ ರಾಮ್‌ಚರಣ್, ಜಾನ್ವಿ ಕಪೂರ್ ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಆದರೆ ಮಾರ್ಚ್ 28ಕ್ಕೆ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಬಿಡುಗಡೆ ತಯಾರಿ ನಡೀತಿದೆ.

'ಟಾಕ್ಸಿಕ್' ಸಿನಿಮಾ ರಿಲೀಸ್ ಪೋಸ್ಟ್‌ಪೋನ್ ಲಾಭ ಪಡೆಯಲು 'ಉಸ್ತಾದ್ ಭಗತ್ ಸಿಂಗ್' ಚಿತ್ರತಂಡ ಸಜ್ಜಾಗುತ್ತಿದೆ. ಮಾರ್ಚ್ 28ರ ಬದಲು ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಮಾಡುವ ಲೆಕ್ಕಾಚಾರ ಶುರುವಾಗಿದೆ. ಹರೀಶ್ ಶಂಕರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಜೂನ್ 4ರಂದು 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ತಯಾರಿ ನಡೆದಿದೆ. ಆದರೆ ಜೂನ್ 5ರಂದು ಜೂನ್ 5ರಂದು ವರುಣ್ ಧವನ್ ನಟನೆಯ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಸಿನಿಮಾ ತೆರೆಗೆ ಬರಬೇಕಿದೆ. ಈಗ ವರುಣ್ ಚಿತ್ರಕ್ಕೆ ಆತಂಕ ಶುರುವಾಗಿದೆ.

'ಟಾಕ್ಸಿಕ್', 'ಧುರಂಧರ್- 2' ಬಾಕ್ಸಾಫೀಸ್ ಕ್ಲ್ಯಾಶ್‌ಗೆ ಹೆದರಿ ರಿಲೀಸ್ ಡೇಟ್ ಮುಂದೂಡಿದ ಚಿತ್ರತಂಡಗಳು ಈಗ ಕೈಕೈ ಹಿಸುಕಿಕೊಳ್ಳುವಂತಾಗಿದೆ. ಒಟ್ಟಾರೆ ಮಾರ್ಚ್ 19ಕ್ಕೆ ಯಾವೆಲ್ಲಾ ಸಿನಿಮಾಗಳು ಬಿಡುಗಡೆ ಆಗಬಹುದು ಎನ್ನುವ ಕುತೂಹಲ ಮೂಡಿದೆ. ಅದೆಲ್ಲಾ ಏನೇ ಇದ್ದರೂ ವರ್ಷದ ಹಿಂದೆ ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದಿದ್ದ 'ಟಾಕ್ಸಿಕ್' ಚಿತ್ರತಂಡ ನಿರ್ಧಾರ ಬದಲಿಸಿರುವುದು ಅಭಿಮಾನಿಗಳಿಗೆ ಕೊಂಚ ನಿರಾಸೆ ತಂದಿರುವುದು ಸುಳ್ಳಲ್ಲ.

More from Filmibeat

Read more about: toxic yash
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X