ವರಮಹಾಲಕ್ಷ್ಮಿ ಹಬ್ಬಕ್ಕೆ ಸೆಟ್ಟೇರಲಿದೆ ಯಶ್ ಹೊಸ ಸಿನಿಮಾ
Recommended Video

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾವನ್ನು ತೆರೆ ಮೇಲೆ ನೋಡುವ ಅದೃಷ್ಟ ಈ ವರ್ಷ ಅಭಿಮಾನಿಗಳಿಗೆ ಇನ್ನು ಸಿಕ್ಕಿಲ್ಲ. ರಾಕಿಂಗ್ ಸ್ಟಾರ್ ಕೂಡ ಆದಷ್ಟು ಬೇಗ ಹೊಸ ಚಿತ್ರದ ಮೂಲಕ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ಅದರಂತೆ ಯಶ್ ಅಭಿನಯದ ಹೊಸ ಚಿತ್ರ ವರಮಹಾಲಕ್ಷ್ಮಿ ಹಬ್ಬದಂದು ಸೆಟ್ಟೇರಲಿದೆ. ಈಗಾಗಲೇ ಚಿತ್ರಕ್ಕೆ ಬೇಕಿರುವ ಎಲ್ಲಾ ತಯಾರಿಯನ್ನು ಮಾಡಿಕೊಳ್ಳುತ್ತಿದ್ದು, ಮುಹೂರ್ತ ಮಾಡಿದ ಎರಡನೇ ದಿನದಿಂದಲೇ ಸಿನಿಮಾತಂಡ ಚಿತ್ರೀಕರಣವನ್ನು ಆರಂಭ ಮಾಡಲಿದೆ.
ಹಾಗಾದರೆ ಯಶ್ ಅಭಿನಯದ ಹೊಸ ಚಿತ್ರ ಯಾವುದು? ಹೇಗಿರಲಿದೆ ರಾಕಿಂಗ್ ಸ್ಟಾರ್ ಹೊಸ ಚಿತ್ರದ ನ್ಯೂ ಲುಕ್. ಪ್ರೀ ಪ್ರೊಡಕ್ಷನ್ ಕೆಲಸಗಳು ಹೇಗೆ ನಡೆಯುತ್ತಿವೆ. ಚಿತ್ರೀಕರಣ ಎಲ್ಲಿ ನಡೆಯಲಿದೆ. ಇಷ್ಟೆಲ್ಲಾ ಮಾಹಿತಿ ಎಕ್ಸ್ ಕ್ಲೂಸಿವ್ ಆಗಿ ನಿಮಗಾಗಿ ಇಲ್ಲಿದೆ. ಮುಂದೆ ಓದಿ..

ವರಮಹಾಲಕ್ಷ್ಮಿ ಹಬ್ಬಕ್ಕೆ ಯಶ್ ಹೊಸ ಸಿನಿಮಾ
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹೊಸ ಚಿತ್ರದ ಮುಹೂರ್ತ ಈ ವರ್ಷದ ವರಮಹಾಲಕ್ಷ್ಮಿ ಹಬ್ಬದಂದು ನೆಡಯಲಿದೆ. 'ಕೆಜಿಎಫ್' ಸಿನಿಮಾ ನಂತರ ಯಶ್ ಈ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದು, ಚಿತ್ರಕ್ಕೆ ಇನ್ನು ಟೈಟಲ್ ಫೈನಲ್ ಆಗಿಲ್ಲ.

ಯಶ್ ಸಿನಿಮಾ ಟೈಟಲ್ ಕಿರಾತಕ 2 ?
ಯಶ್ ಅಭಿನಯದ ಹೊಸ ಸಿನಿಮಾಗೆ 'ಕಿರಾತಕ 2' ಎನ್ನುವ ಟೈಟಲ್ ಫಿಕ್ಸ್ ಆಗುವ ಸಾಧ್ಯತೆ ಹೆಚ್ಚಾಗಿದೆ. ಅನಿಲ್ ಕುಮಾರ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಈ ಹಿಂದೆ 'Rambo 2' ಹಾಗೂ ಕೃಷ್ಣ ರುಕ್ಕು ಚಿತ್ರಕ್ಕೆ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿದ್ದರು.

ಶೀಘ್ರದಲ್ಲೇ ಚಿತ್ರೀಕರಣ ಆರಂಭ
ವರಮಹಾಲಕ್ಷ್ಮಿ ಹಬ್ಬದಂದು ಮುಹೂರ್ತ ಮಾಡಲಿರುವ ಸಿನಿಮಾ ತಂಡ ಅದೇ ವಾರದಲ್ಲಿ ಚಿತ್ರೀಕರಣವನ್ನು ಶುರು ಮಾಡಲಿದೆ. ಮಂಡ್ಯ, ಮೈಸೂರು ಸುತ್ತಾ ಮುತ್ತ ಚಿತ್ರೀಕರಣ ನಡೆಯಲಿದ್ದು, ಚಿತ್ರತಂಡ ಚಿತ್ರದಲ್ಲಿ ಯಾರೆಲ್ಲಾ ಅಭಿನಯ ಮಾಡಲಿದ್ದಾರೆ ಎನ್ನುವುದನ್ನು ಸದ್ಯಕ್ಕೆ ತಿಳಿಸಿಲ್ಲ.

ಪಕ್ಕ ಹಳ್ಳಿ ಸೊಗಡಿನ ಸಿನಿಮಾ
ಯಶ್ 'ಕಿರಾತಕ' ಸಿನಿಮಾದಿಂದ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಈ ಭಾರಿಯೂ ಅದೇ ರೀತಿಯ ಕಥಾ ಹಂದರವಿರುವ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ. ಇದು ಸ್ವಮೇಕ್ ಸಿನಿಮಾ ಆಗಿರಲಿದೆ.


Click it and Unblock the Notifications











