ಯಶ್ 'ಕೆಜಿಎಫ್' ಚಿತ್ರದ ಮತ್ತೊಂದು ರಾಕಿಂಗ್ ಲುಕ್ ಬಹಿರಂಗ

By Pavithra

ಈ ವರ್ಷ ಮಾತ್ರವಲ್ಲದೇ ಮುಂದಿನ ವರ್ಷವೂ ನಿರೀಕ್ಷೆಯನ್ನು ಕಾದಿರಿಸಿಕೊಂಡಿರುವ ಸಿನಿಮಾಗಳ ಪಟ್ಟಿಯಲ್ಲಿರುವ ಚಿತ್ರ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ ಜಿ ಎಫ್'. ಇಲ್ಲಿಯವರೆಗೂ 'ಕೆ ಜಿ ಎಫ್' ಸಿನಿಮಾ ತಂಡದಿಂದ ಸಿಂಗಲ್ ಲುಕ್, ಮೇಕಿಂಗ್ ಪೋಟೋಸ್ ಮತ್ತು ಪೋಸ್ಟರ್ ಬಿಟ್ಟರೆ ಮತ್ಯಾವುದೇ ರೀತಿಯ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

ಚಿತ್ರೀಕರಣದ ಸಮಯದಲ್ಲೇ ಯಾವುದೇ ಪೋಟೋ ಕ್ಲಿಕ್ಸ್ ಮಾಡುವಂತಿಲ್ಲ. ಮೊಬೈಲ್ ಗಳಂತು ಬಳಸುವ ಹಾಗಿಯೇ ಇಲ್ಲ. ಈ ರೀತಿಯಲ್ಲಿ ನಿಯಮ ಹಾಕಿಕೊಂಡು ಚಿತ್ರೀಕರಣ ಮಾಡುತ್ತಿರುವ 'ಕೆ ಜಿ ಎಫ್' ಚಿತ್ರದ ಅಡ್ಡದಿಂದ ಒಂದು ಫೋಟೋ ಲೀಕ್ ಆಗಿದೆ. ಚಿತ್ರದಲ್ಲಿ ನಾಯಕ ರಾಕಿಯ ಫುಲ್ ಲುಕ್ ರಿವಿಲ್ ಆಗಿದೆ.

ಹೊಸ ಪೋಟೋದಲ್ಲಿರುವ ಯಶ್ ಹೇಗಿದ್ದಾರೆ? ಸುಮಾರು ಆರು ತಿಂಗಳಿಂದ ಗಡ್ಡವನ್ನು ಬಿಟ್ಟಿರುವ ರಾಕಿಂಗ್ ಸ್ಟಾರ್ ಅಭಿನಯದ 'ಕೆ ಜಿ ಎಫ್' ಚಿತ್ರೀಕರಣ ಕಂಪ್ಲೀಟ್ ಆಗುವುದು ಯಾವಾಗ? ಇವುಗಳ ಸಂಪೂರ್ಣ ಮಾಹಿತಿ ಮುಂದಿದೆ ಓದಿರಿ..

'ಕೆ ಜಿ ಎಫ್' ಅಡ್ಡದಿಂದ ಬಂತು ರಾಕಿಂಗ್ ಲುಕ್

'ಕೆ ಜಿ ಎಫ್' ಅಡ್ಡದಿಂದ ಬಂತು ರಾಕಿಂಗ್ ಲುಕ್

ಯಶ್ ಅಭಿನಯದ 'ಕೆ ಜಿ ಎಫ್' ಚಿತ್ರದ ಮತ್ತೊಂದು ಫೋಟೋ ರಿಲೀಸ್ ಆಗಿದೆ. ಡ್ರೆಸ್ ಮಾಡಿಕೊಂಡು ಯಶ್ ಚಿತ್ರೀಕರಣದಲ್ಲಿ ಭಾಗಿಯಾಗುವ ಮುಂಚೆ ಕ್ಯಾರಾವ್ಯಾನ್ ನಲ್ಲಿ ತೆಗೆಸಿಕೊಂಡಿರುವ ಫೋಟೋ ಸದ್ಯ ವೈರಲ್ ಆಗಿದೆ.

ಟ್ರೆಂಡ್ ಸೆಟ್ ಮಾಡುತ್ತಿದೆ ಯಶ್ ಸ್ಟೈಲ್

ಟ್ರೆಂಡ್ ಸೆಟ್ ಮಾಡುತ್ತಿದೆ ಯಶ್ ಸ್ಟೈಲ್

ಸದ್ಯ ರಿವಿಲ್ ಆಗಿರುವ ಯಶ್ ಲುಕ್ 80 ಹಾಗೂ 90ರ ದಶಕದಲ್ಲಿ ಚಿತ್ರಗಳಲ್ಲಿ ನಾಯಕರು ಕಾಣಿಸಿಕೊಳ್ಳುತ್ತಿದ್ದ ರೀತಿಯಲ್ಲಿದೆ. 'ಕೆ ಜಿ ಎಫ್' ಸಿನಿಮಾ ರಿಲೀಸ್ ಆದ ನಂತರ ಯಶ್ ಸ್ಟೈಲ್ ಟ್ರೆಂಡ್ ಆಗುವ ಸೂಚನೆ ಈ ಫೋಟೋ ನಲ್ಲೇ ಸಿಗುತ್ತಿದೆ.

ಹೊಸ ವರ್ಷಕ್ಕೆ ಯಶ್ ಟೀಸರ್ ರಿಲೀಸ್

ಹೊಸ ವರ್ಷಕ್ಕೆ ಯಶ್ ಟೀಸರ್ ರಿಲೀಸ್

ಯಶ್ ಹುಟ್ಟುಹಬ್ಬದ ವಿಶೇಷವಾಗಿ 'ಕೆ ಜಿ ಎಫ್' ಸಿನಿಮಾದ ಟೀಸರ್ ಬಿಡುಗಡೆ ಮಾಡಲು ಸಿನಿಮಾತಂಡ ತಯಾರಿ ನಡೆಸಿದೆ. ಜನವರಿ 8 ರಂದು 'ಕೆ ಜಿ ಎಫ್' ಸಿನಿಮಾದ ಮೊದಲ ಟೀಸರ್ ರಿಲೀಸ್ ಆಗಲಿದೆ.

ಕೊನೆಯ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ

ಕೊನೆಯ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ

ಕಳೆದವಾರವಷ್ಟೇ ವಿದೇಶದಿಂದ ವಾಪಸ್ ಆಗಿರುವ ನಟ ಯಶ್ ಗುರುವಾರದಿಂದ (ಡಿ.21) ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಶೂಟಿಂಗ್ ಮಾಡಲು ನಿರ್ದೇಶಕ ಪ್ರಶಾಂತ್ ನೀಲ್ ನಿರ್ಧರಿಸಿದ್ದಾರೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

More from Filmibeat

English summary
Kannada actor, Rocking Star Yash starring 'KGF' film new photo is Leaked. the film directed by Prashanth Neel and music composed by Ravi Basrur. Srinidhi Shetty playing female lead opposite Yash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X