For Quick Alerts
  ALLOW NOTIFICATIONS  
  For Daily Alerts

  ನಟ ಯಶ್ ಹುಟ್ಟುಹಬ್ಬ: ಪತ್ನಿಯೊಂದಿಗೆ ಸರಳವಾಗಿ ಆಚರಿಸಿದ ಯಶ್

  |

  ನಟ ಯಶ್, ಇಂದು (ಜನವರಿ 08) ತಮ್ಮ 35ನೇ ವರ್ಷದ ಹುಟ್ಟಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

  ವೈರಲ್ ಆಯ್ತು ಯಶ್, ರಾಧಿಕಾ ಕೇಕ್ ಕಟಿಂಗ್ ಪೋಟೊ | Filmibeat kannada

  ಕೊರೊನಾ ಕಾರಣಕ್ಕೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಯಶ್, ಅಭಿಮಾನಿಗಳು ಸಹ ಮನೆಯ ಬಳಿ ಬಾರದಂತೆ ಎಲ್ಲೂ ಗುಂಪುಗೂಡಿ ಹುಟ್ಟುಹಬ್ಬ ಆಚರಣೆ ಮಾಡುವುದು ಬೇಡವೆಂದು ಫೇಸ್‌ಬುಕ್ ವಿಡಿಯೋ ಮೂಲಕ ಮನವಿ ಮಾಡಿದ್ದರು.

  ಯಶ್ ಹುಟ್ಟುಹಬ್ಬ ಪ್ರಯುಕ್ತ ಕೆಜಿಎಫ್ 2 ಟೀಸರ್ ಅನ್ನು ಬಿಡುಗಡೆ ಮಾಡುವುದಾಗಿ ಈ ಮೊದಲೇ ಚಿತ್ರತಂಡ ಘೋಷಿಸಿತ್ತು. ಆದರೆ ಟೀಸರ್ ಅನ್ನು ಕಿಡಿಗೇಡಿಗಳು ಲೀಕ್ ಮಾಡಿದ ಕಾರಣ, ನಿನ್ನೆಯೇ ಟೀಸರ್ ಅನ್ನು ತರಾತುರಿಯಲ್ಲಿ ಬಿಡುಗಡೆ ಮಾಡಲಾಯಿತು.

  ನಟ ಯಶ್ ಹುಟ್ಟುಹಬ್ಬಕ್ಕೆ ಹಲವಾರು ಸ್ಟಾರ್ ನಟರು ಶುಭಾಶಯ ಕೋರಿದ್ದಾರೆ. ಕನ್ನಡ ಸೇರಿದಂತೆ ಬಾಲಿವುಡ್ ಹಾಗೂ ನೆರೆ-ಹೊರೆಯ ಚಿತ್ರರಂಗದ ನಟರೂ ಸಹ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

  ಜನವರಿ 07 ರ ಮಧ್ಯರಾತ್ರಿ ಪ್ರೀತಿಯ ಮಡದಿ ರಾಧಿಕಾ ಜೊತೆಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ ಪ್ರಾರಂಭ ಮಾಡಿದ್ದಾರೆ ನಟ ಯಶ್.

  ಕೇಕ್ ಕತ್ತರಿಸಿ ತಿನ್ನಿಸುತ್ತಿರುವ ಚಿತ್ರವನ್ನು ರಾಧಿಕಾ ಪಂಡಿತ್ ತಮ್ಮ ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದು, 'ನೀನು ಹೇಗೆ ನನಗೆ ಪರ್ಫೆಕ್ಟ್ ಜೋಡಿ ಎಂದು ಆಶ್ಚರ್ಯವಾಗುತ್ತದೆ. ನಂತರ ಅರ್ಥವಾಗುತ್ತದೆ, ನೀನು, ನಿನ್ನ ಪಾಲಿನದ್ದನ್ನೂ ನನಗೇ ಕೊಟ್ಟುಬಿಡುತ್ತೀಯವೆಂದು' ಎಂದು ಬರೆದುಕೊಂಡಿದ್ದಾರೆ ರಾಧಿಕಾ ಪಂಡಿತ್.

  ಜನವರಿ 07 ರ ಮಧ್ಯರಾತ್ರಿ ಯಶ್‌ ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ ನಟ ಪುನೀತ್ ರಾಜ್‌ಕುಮಾರ್. ಜೊತೆಗೆ ಟ್ವೀಟ್‌ನಲ್ಲಿ ಕೆಜಿಎಫ್‌ನ ಟೀಸರ್ ನ ಲಿಂಕ್ ಅನ್ನು ಹಂಚಿಕೊಂಡಿದ್ದಾರೆ.

  English summary
  Actor Yash turned 35 today. He started his birthday celebration by cutting cake with his wife Radhika Pandit.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X