'ಕಿಸ್' ಸಿನಿಮಾ ನೋಡಿ ಬೇರೆಯದ್ದೇ ಟೈಟಲ್ ಕೊಟ್ಟ ಯಶ್
Recommended Video
'ಕಿಸ್' ಸಿನಿಮಾದ ಟೈಟಲ್ ನಿಂದ ಫ್ಯಾಮಿಲಿ ಆಡಿಯನ್ಸ್ ಗಳು ಕಡಿಮೆ ಆಗುತ್ತಿದ್ದಾರೆ. 'ಕಿಸ್' ಎಂಬ ಹೆಸರು ಕುಟುಂಬ ಸಮೇತ ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಮುಜುಗರ ಉಂಟು ಮಾಡುತ್ತಿದೆ ಎನ್ನುವುದು ಚಿತ್ರತಂಡದ ಅರಿವಿಗೆ ಬಂದಿದೆ.
ಇತ್ತೀಚಿಗೆ ಸಿನಿಮಾವನ್ನು ನಟ ರಾಕಿಂಗ್ ಸ್ಟಾರ್ ಯಶ್ ವೀಕ್ಷಿಸಿದ್ದಾರೆ. ಸಿನಿಮಾವನ್ನು ಇಷ್ಟಪಟ್ಟ ಯಶ್ ಕುಟುಂಬ ಸಮೇತ ನೋಡಬಹುದಾದ ಸುಂದರ ಲವ್ ಸ್ಟೋರಿ ಎಂದು ಹೊಗಳಿದ್ದಾರೆ. ಜೊತೆಗೆ ಯಶ್ ಸಿನಿಮಾಗೆ 'ಕಿಸ್' ಟೈಟಲ್ ಏಕೆ ಇಟ್ಟಿದ್ದೀರಿ ಎಂದು ಕೇಳಿದ್ದಾರೆ. ಹಾಡಿನ ಒಂದು ಸಾಲನ್ನು ಈ ಸಿನಿಮಾಗೆ ಯಶ್ ಸೂಚಿಸಿದ್ದಾರೆ. 'ನೀನೆ ಮೊದಲು.. ನೀನೆ ಕೊನೆ..' ಎನ್ನುವುದು ಯಶ್ ಕೊಟ್ಟ ಹೆಸರಾಗಿದೆ.
'ನೀನೆ ಮೊದಲು.. ನೀನೆ ಕೊನೆ..' ಕಿಸ್ ಸಿನಿಮಾದ ಹಾಡಾಗಿದೆ. ಈ ಹಾಡು ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದೆ. ಇದೇ ಸಾಲನ್ನು ಸಿನಿಮಾಗೆ ಟೈಟಲ್ ಆಗಿ ಇಡಬಹುದಿತ್ತು ಎನ್ನುವುದು ಯಶ್ ಆಭಿಪ್ರಾಯವಾಗಿದೆ.

ಅದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕ ಎ ಪಿ ಅರ್ಜುನ್ 'ಕಿಸ್' ಸಿನಿಮಾದ ಟೈಟಲ್ 'ನೀನೆ ಮೊದಲು.. ನೀನೆ ಕೊನೆ..' ಎಂದುಕೊಂಡು ಕುಟುಂಬದ ಜೊತೆಗೆ ಸಿನಿಮಾ ಬನ್ನಿ ಎಂದು ಹೇಳಿದ್ದಾರೆ. ಇನ್ನು ಮುಂದೆ 'ಕಿಸ್' ಟೈಟಲ್ ಕೆಳಗೆ 'ನೀನೆ ಮೊದಲು.. ನೀನೆ ಕೊನೆ..' ಎಂದು ಇರುತ್ತದೆ ಎಂದು ಅರ್ಜುನ್ ತಿಳಿಸಿದ್ದಾರೆ..
'ಕಿಸ್' ಸಿನಿಮಾ 25 ದಿನಗಳನ್ನು ಪೂರೈಸಿದೆ. ವಿರಾಟ್ ಮತ್ತು ಶ್ರೀ ಲೀಲಾ ನಟನೆಗೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ. ಹರಿಕೃಷ್ಣ ಸಿನಿಮಾಗೆ ಸಂಗೀತ ನೀಡಿದ್ದಾರೆ.


Click it and Unblock the Notifications











