For Quick Alerts
  ALLOW NOTIFICATIONS  
  For Daily Alerts

  ಬೇರೆ ಭಾಷೆಯಲ್ಲಿ ಸಾಧನೆ ಮಾಡಲಿ, ಮೊದಲ ಆದ್ಯತೆ ಕನ್ನಡಕ್ಕೆ ಕೊಡಲಿ - ಯಶ್

  |
  ಎಲ್ಲಾದ್ರು ಹೋಗಿ ಸಿನಿಮಾ ಮಾಡಿ ಬೇಡ ಅನ್ನೋಲ್ಲ..! ಆದ್ರೆ..? | yash | FILMIBEAT KANNADA

  'ಕನ್ನಡದಲ್ಲಿ ನಟರ ಸಿನಿಮಾಗಳು ಘೋಷಣೆಯಾದಾಗ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ ಒಂದು ನೋಡ್ತಿದ್ದೆ. ಆ ಭಾಷೆಯ ಹೀರೋಯಿನ್ ಬರ್ತಾರೆ, ಈ ಹೀರೋಯಿನ್ ಬರ್ತಾರೆ ಅಂತ ಹೇಳ್ತಿದ್ರು. ಅವರು ಬರಲ್ಲ, ಅದು ಆಗಲ್ಲ. ಆದ್ರೂ ಒಂದು ವಾರ ಇದೇ ಸುದ್ದಿ. ಇದನ್ನ ನೋಡಿ ಕೆಟ್ಟ ಕೋಪ ಬರ್ತಿತ್ತು'. ಹೀಗಂತ ಹೇಳಿದ್ದು ರಾಕಿಂಗ್ ಸ್ಟಾರ್ ಯಶ್.

  ಎಪಿ ಅರ್ಜುನ್ ನಿರ್ದೇಶನದ 'ಕಿಸ್' ಸಿನಿಮಾ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಆಗಮನಿಸಿದ್ದ ಯಶ್, ಈ ಚಿತ್ರದ ನಾಯಕಿ ಶ್ರೀಲಿಲಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

  'ನ್ಯಾಷನಲ್ ಸ್ಟಾರ್ ಆದ್ಮೇಲೆ ಕನ್ನಡ ಮರೆತ್ರಾ?: ನೆಟ್ಟಿಗರಿಂದ ಯಶ್ ಗೆ ಕ್ಲಾಸ್ 'ನ್ಯಾಷನಲ್ ಸ್ಟಾರ್ ಆದ್ಮೇಲೆ ಕನ್ನಡ ಮರೆತ್ರಾ?: ನೆಟ್ಟಿಗರಿಂದ ಯಶ್ ಗೆ ಕ್ಲಾಸ್

  ಯಶ್ ಕುಟುಂಬಕ್ಕೆ ಆಪ್ತ ವೈದ್ಯೆಯಾಗಿರುವ ಸ್ವರ್ಣ ಅವರ ಪುತ್ರಿ ಶ್ರೀಲಿಲಾ. ಹಾಗಾಗಿ, ಬಾಲ್ಯದಿಂದಲೂ ಶ್ರೀಲಿಲಾ ರಾಕಿಂಗ್ ಸ್ಟಾರ್ ದಂಪತಿಗೆ ಪರಿಚಯವಂತೆ.

  ಈಗ ವಿಷ್ಯ ಏನಪ್ಪಾ ಅಂದ್ರೆ, ಶ್ರೀಲಿಲಾ ಅವರಿಗೆ ಒಳ್ಳೆಯ ಭವಿಷ್ಯವಿದೆ. ಅವರ ಡ್ಯಾನ್ಸ್ ನೋಡಿದೆ ತುಂಬಾ ಚೆನ್ನಾಗಿ ಮಾಡಿದ್ದಾರೆ. ಬಹುಶಃ ಶ್ರೀಲಿಲಾ ಭಾರತದ ಎಲ್ಲ ಇಂಡಸ್ಟ್ರಿಗಳನ್ನ ಒಂದು ಸುತ್ತ ನೋಡ್ಕೊಂಡು ಬರ್ತಾರೆ ಎಂದು ಭವಿಷ್ಯ ನುಡಿದರು.

  ಯಶ್ ದಂಪತಿಗೆ ಒಲವಿನ ಉಡುಗೊರೆ ನೀಡಿದ ಮೇಕಪ್ ಮ್ಯಾನ್ ಯಶ್ ದಂಪತಿಗೆ ಒಲವಿನ ಉಡುಗೊರೆ ನೀಡಿದ ಮೇಕಪ್ ಮ್ಯಾನ್

  Yash Suggestion to Kannada Actors and Actress

  'ಸಾಮಾನ್ಯವಾಗಿ ಹೊರಗಿನ ಹೀರೋಯಿನ್ ಗಳಿಗೆ ಇಲ್ಲಿ ಬೇಡಿಕೆ ಹೆಚ್ಚಿದೆ. ಆದ್ರೆ, ಇಲ್ಲಿಂದ ಪ್ರತಿಭೆಗಳು ಅಲ್ಲಿಗೆ ಹೋಗ್ಬೇಕು. ಅಲ್ಲಿರುವವರು ಸ್ವಲ್ಪ ಖಾಲಿ ಕೂರಬೇಕು. ನಮ್ ಇಂಡಸ್ಟ್ರಿ ಅಂದ್ಮೇಲೆ ಅವರು ಕೂಡ ಗೌರವದಿಂದ ಬರಬೇಕು ಎಂಬ ಆಸೆ ಇತ್ತು. ಈಗ ಆ ಟ್ರೆಂಡ್ ಸ್ವಲ್ಪ ಬದಲಾಗ್ತಿದೆ' ಎಂದು ಯಶ್ ಖುಷಿ ವ್ಯಕ್ತಪಡಿಸಿದರು.

  ''ಬೇರೆ ಭಾಷೆಯಲ್ಲಿ ಕೆಲಸ ಮಾಡು ತಪ್ಪಿಲ್ಲ, ಆದರೆ, ಮೊದಲ ಗೌರವ ಕನ್ನಡಕ್ಕೆ ಕೊಡಬೇಕು'' ಎಂದು ಹೇಳುವ ಮೂಲಕ ಕೆಲವು ನಾಯಕಿಯರಿಗೆ ಕಿವಿಮಾತು ಹೇಳಿದ್ರು.

  English summary
  Kannada actor yash praise about actress sri leela. And also he gave suggestion to kannada actors and actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X