For Quick Alerts
  ALLOW NOTIFICATIONS  
  For Daily Alerts

  'ಮಾಸ್ಟರ್ ಪೀಸ್' ನಿರ್ದೇಶಕರ ಬೆನ್ನಿಗೆ ನಿಂತ ರಾಕಿಂಗ್ ಸ್ಟಾರ್ ಯಶ್

  |

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ಮಾಸ್ಟರ್ ಪೀಸ್'. 2015ರಲ್ಲಿ ರಿಲೀಸ್ ಆದ ಮಾಸ್ಟರ್ ಚಿತ್ರ ನಿರ್ದೇಶಕ ಮಂಜು ಮಾಂಡವ್ಯ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾ. ಚೊಚ್ಚಲ ಸಿನಿಮಾದಲ್ಲೆ ಚಿತ್ರಾಭಿಮಾನಿಗಳ ಮನಗೆದಿದ್ದ ಮಂಜು ಮಾಂಡವ್ಯ ಈಗ 'ಭರತ ಬಾಹುಬಲಿ' ಜೊತೆ ಬರ್ತಿದ್ದಾರೆ. ಭರತ ಬಾಹುಬಲಿ ಮಂಜು ಮಾಂಡವ್ಯ ನಿರ್ದೇಶನದ ಮತ್ತು ನಟನೆಯ ಸಿನಿಮಾ.

  ಮಾಸ್ಟರ್ ಪೀಸ್ ಸಿನಿಮಾದ ನಂತರ ಸೆಟ್ಟೇರಿದ ಮಂಜು ಎರಡನೆ ಸಿನಿಮಾ ಭರತ ಬಾಹುಬಲಿ. ಈಗಾಗಲೆ ಚಿತ್ರೀಕರಣ ಮುಗಿಸಿ ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿರುವ ನಿರ್ದೇಶಕ ಮಂಜು ಬೆನ್ನಿಗೆ ನಿಂತಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಕೆಜಿಎಫ್ ಸಿನಿಮಾ ನಂತರ ನ್ಯಾಷನಲ್ ಸ್ಟಾರ್ ಆಗಿ ಮೆರೆಯುತ್ತಿರುವ ಯಶ್ ತನ್ನ ಜೊತೆ ಸಿನಿಮಾ ಮಾಡಿದವರನ್ನು ಮರೆತಿಲ್ಲ.

  ಕೇಕ್ ನಲ್ಲೂ ಯಶ್ ದಾಖಲೆ: ರಾಕಿ ಬರ್ತ್ ಡೇ ವಿಶ್ವದ ಅತಿ ದೊಡ್ಡ ಕೇಕ್ಕೇಕ್ ನಲ್ಲೂ ಯಶ್ ದಾಖಲೆ: ರಾಕಿ ಬರ್ತ್ ಡೇ ವಿಶ್ವದ ಅತಿ ದೊಡ್ಡ ಕೇಕ್

  ಸದ್ಯ ಮಂಜು ನಿರ್ದೇಶನದ ಭರತ ಬಾಹುಬಲಿ ಚಿತ್ರದ ಟ್ರೈಲರ್ ರಿಲೀಸ್ ಆಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಚಿತ್ರದ ಟ್ರೈಲರ್ ರಿಲೀಸ್ ಮಾಡಲಿದ್ದಾರೆ. ನಾಳೆ ಸಂಜೆ ಭರತ ಬಾಹುಬಲಿ ಚಿತ್ರದ ಟ್ರೈಲರ್ ಅದ್ದೂರಿಯಾಗಿ ರಿಲೀಸ್ ಆಗಲಿದೆ. ಈ ಕಾರ್ಯಕ್ರಮದಲ್ಲಿ ಯಶ್ ಭಾಗಿಯಾಗಿ ಟ್ರೈಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಲಿದ್ದಾರೆ.

  ಭರತ ಬಾಹುಬಲಿ ಸಿನಿಮಾದಲ್ಲಿ ಬಾಹುಬಲಿಯಾಗಿ ಕಾಮಿಡಿ ಸ್ಟಾರ್ ಚಿಕ್ಕಣ್ಣ ಕಾಣಿಸಿಕೊಂಡಿದ್ದಾರೆ. ಭರತನಾಗಿ ಮಂಜು ಮಾಂಡವ್ಯ ಮಿಂಚಿದ್ದಾರೆ. ಮಾಸ್ಟರ್ ಚಿತ್ರದಂತೆಯೆ ಈ ಸಿನಿಮಾ ಕೂಡ ಪಕ್ಕ ಕಮರ್ಷಿಯಲ್ ಸಿನಿಮಾವಾಗಿದೆ. ಐಶ್ವರ್ಯ ಫಿಲ್ಮ್ಸ್ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗುತ್ತಿದೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

  Read more about: yash ಯಶ್
  English summary
  Kannada actor Rocking star Yash support to Masterpiece director Manju Mandavya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X