For Quick Alerts
  ALLOW NOTIFICATIONS  
  For Daily Alerts

  ಮಗಳ ಹುಟ್ಟುಹಬ್ಬ ಸಡಗರದಲ್ಲಿ ಮಗುವಾಗಿ ಕುದುರೆ ಸವಾರಿ ಮಾಡಿದ ಯಶ್.!

  |

  ಯಶ್ ದೊಡ್ಡ ನಟರಾಗಿರಬಹುದು.. ರಾಕಿಂಗ್ ಸ್ಟಾರ್ ಅಂತ ಅಭಿಮಾನಿಗಳಿಂದ ಕರೆಯಿಸಿಕೊಳ್ಳಬಹುದು.. ಪ್ಯಾನ್ ಇಂಡಿಯಾ ಆಕ್ಟರ್ ಆಗಿರಬಹುದು.. ಕೋಟಿಗಟ್ಟಲೆ ಸಂಪಾದನೆ ಮಾಡಿರಬಹುದು.. ಏನೇ ಆದರೂ, ತಮ್ಮ ಮಕ್ಕಳಿಗೆ ಯಶ್ ಪ್ರೀತಿಯ ಅಪ್ಪ.!

  ಎಷ್ಟೇ ಬಿಜಿಯಿದ್ದರೂ, ತಮ್ಮ ಮಕ್ಕಳಿಗಾಗಿ ಕೊಂಚ ಬಿಡುವು ಮಾಡಿಕೊಳ್ಳುತ್ತಾರೆ ಯಶ್. ಫ್ರೀ ಇದ್ದಾಗೆಲ್ಲಾ ತಮ್ಮ ಮಕ್ಕಳ ಜೊತೆಗೆ ಕೂತು ಯಶ್ ಆಟ ಆಡುತ್ತಾರೆ. ಮಗಳು ಆಯ್ರಾಗಾಗಿ ಆಟ ಸಾಮಾನು ತರಲು ರಾಕಿಂಗ್ ದಂಪತಿ ಇತ್ತೀಚೆಗೆಷ್ಟೇ ಶಾಪಿಂಗ್ ಮಾಡಿದ್ದು ನಿಮಗೆಲ್ಲ ಗೊತ್ತಿರಬಹುದು.

  ಇದೀಗ ಆಯ್ರಾಗೆ ವರ್ಷ ತುಂಬಿದೆ. ನಿನ್ನೆಯಷ್ಟೇ ಆಯ್ರಾ ಮೊದಲ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾಳೆ. ಮಗಳು ಆಯ್ರಾಳ ಫಸ್ಟ್ ಬರ್ತಡೇಯನ್ನ ಯಶ್ ಮತ್ತು ರಾಧಿಕಾ ಪಂಡಿತ್ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ.

  ಬೆಂಗಳೂರಿನ ಫನ್ ವರ್ಲ್ಡ್ ನಲ್ಲಿ ನಿನ್ನೆ ಸಂಜೆ 6 ಗಂಟೆಯಿಂದ ಆಯ್ರಾ ಬರ್ತಡೆ ಸೆಲೆಬ್ರೇಷನ್ ನಡೆಯಿತು. ಆಯ್ರಾ ಹುಟ್ಟುಹಬ್ಬಕ್ಕೆ ಶುಭ ಕೋರಲು ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಭಾರತಿ ವಿಷ್ಣುವರ್ಧನ್, ಅಶೋಕ್ ಖೇಣಿ, ಅನಿರುದ್ಧ್ ಸೇರಿದಂತೆ ಗಣ್ಯಾತಿಗಣ್ಯರೇ ಫನ್ ವರ್ಲ್ಡ್ ನಲ್ಲಿ ನೆರೆದಿದ್ದರು.

  ಯಶ್ ಮಗಳ ಬರ್ತ್ ಡೇ ಪಾರ್ಟಿಯಲ್ಲಿ ದರ್ಶನ್, ಪುನೀತ್ಯಶ್ ಮಗಳ ಬರ್ತ್ ಡೇ ಪಾರ್ಟಿಯಲ್ಲಿ ದರ್ಶನ್, ಪುನೀತ್

  ಮಗಳ ಹುಟ್ಟುಹಬ್ಬದ ಸಡಗರದಲ್ಲಿ ಮಗುವಾಗಿ ಮೆರ್ರಿ ಗೋ ರೌಂಡ್ ಹಾರ್ಸ್ ರೈಡ್ ಮಾಡಿದ್ದಾರೆ ಯಶ್. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ದೊಡ್ಡ ಸ್ಟಾರ್ ಆಗಿದ್ದರೂ, ಫನ್ ವರ್ಲ್ಡ್ ರೈಡ್ ಗಳಲ್ಲಿ ಪಾಲ್ಗೊಂಡು ಯಶ್ ಎಂಜಾಯ್ ಮಾಡಿದ್ದಾರೆ. ಯಶ್ ರವರ ಈ ನಡೆ ಅಭಿಮಾನಿಗಳಿಗೂ ಖುಷಿ ತಂದಿದೆ.

  English summary
  Kannada Actor Yash takes merry go round horse ride at Ayra's birthday party.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X