ಫೋಟೋಗಳು: ಮಾಲ್ಡೀವ್ಸ್ ನ ಕಡಲ ಕಿನಾರೆಯಲ್ಲಿ ರಾಕಿಂಗ್ ಸ್ಟಾರ್ ದಂಪತಿ
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಇಬ್ಬರು ಮುದ್ದಾದ ಮಕ್ಕಳ ಜೊತೆ ಮಾಲ್ಡೀವ್ಸ್ ನಲ್ಲಿ ಬೀಡು ಬಿಟ್ಟಿದ್ದಾರೆ. ಸೆಲೆಬ್ರಿಟಿಗಳ ನೆಚ್ಚಿನ ತಾಣವೆಂದೆ ಪ್ರಸಿದ್ಧಿ ಪಡೆದಿರುವ ಮಾಲ್ಡೀವ್ಸ್ ಗೆ ಸ್ಯಾಂಡಲ್ ವುಡ್ ನ ರಾಕಿಂಗ್ ದಂಪತಿ ಪ್ರವಾಸಕ್ಕೆ ತೆರಳಿದ್ದು ಮಸ್ತ್ ಮಜಾ ಮಾಡುತ್ತಿದ್ದಾರೆ.
Recommended Video
ರಜೆಯನ್ನು ಎಂಜಾಯ್ ಮಾಡುತ್ತಿರುವ ಯಶ್ ಮತ್ತು ರಾಧಿಕಾ ದಂಪತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಲಾಕ್ ಡೌನ್ ಮತ್ತು ಸತತ ಚಿತ್ರೀಕರಣದಿಂದ ಯಶ್ ದಂಪತಿ ಎಲ್ಲೂ ಪ್ರವಾಸಕ್ಕೆ ಹೋಗಿರಲಿಲ್ಲ. ಕೆಜಿಎಫ್-2 ಸಿನಿಮಾ ಚಿತ್ರೀಕರಣದಲ್ಲಿ ನಿರತರಾಗಿದ್ದ ಯಶ್ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿರಲ್ಲ. ಹಾಗಾಗಿ ಕೆಜಿಎಫ್-2 ಚಿತ್ರೀಕರಣ ಮುಗಿಸಿ ಯಶ್ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆಗೆ ಮಾಲ್ಡೀವ್ಸ್ ಗೆ ಹೋಗಿದ್ದಾರೆ.

ರೊಮ್ಯಾಂಟಿಕ್ ಮೂಡ್ ನಲ್ಲಿ ರಾಕಿಂಗ್ ದಂಪತಿ
ಮಾಲ್ಡೀವ್ಸ್ ನ ಕಡಲ ಕಿನಾರೆಯಲ್ಲಿ ರೊಮ್ಯಾಂಟಿಕ್ ಮೂಡ್ ನಲ್ಲಿರುವ ಯಶ್ ಮತ್ತು ರಾಧಿಕಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಕೆಂಪು ಬಣ್ಣದ ಉಡುಪಿನಲ್ಲಿ ರಾಧಿಕಾ ಮಿಂಚಿಂಗ್
ಕೆಂಪು ಬಣ್ಣದ ಉಡುಪಿನಲ್ಲಿ ರಾಧಿಕಾ ಕಂಗೊಳಿಸುತ್ತಿದ್ದಾರೆ. ಇಬ್ಬರು ಮಕ್ಕಳ ಜೊತೆ ಆಟವಾಡುತ್ತ, ಸೆಲ್ಫಿಗೆ ಪೋಸ್ ನೀಡುತ್ತ ರಾಕಿಂಗ್ ದಂಪತಿ ಮಾಲ್ಡೀವ್ಸ್ ಪ್ರವಾಸವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಯಶ್ ದಂಪತಿಯ ಸುಂದರ ಫೋಟೋಗಳಿಗೆ ಅಭಿಮಾನಿಗಳ ಮೆಚ್ಚುಗೆ
ರಾಕಿಂಗ್ ದಂಪತಿಯ ಸುಂದರ ಫೋಟೋಗಳನ್ನು ಯಶ್ ಅಭಿಮಾನಿಗಳು ಶೇರ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಯಶ್ ಕುಟುಂಬದ ಸುಂದರ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ಸ್ ಹರಿದುಬರುತ್ತಿದೆ.

ಮಾಲ್ಡೀವ್ಸ್ ಎಂದು ಸ್ವರ್ಗ ಎಂದ ಯಶ್
ಮಾಲ್ಡೀವ್ಸ್ ಗೆ ಎಂಟ್ರಿ ಕೊಡುತ್ತಿದ್ದಂತೆ ಯಶ್ ಸುಂದರ ಫೋಟೋಗಳನ್ನು ಶೇರ್ ಮಾಡಿ, 'ಸ್ವರ್ಗ ಯಾವುದಾದರೂ ಇದ್ದರೆ ಅದು ಮಾಲ್ಡೀವ್ಸ್ ಮಾತ್ರ' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. ಮಕ್ಕಳೊಂದಿಗೆ ಮರಳಲ್ಲಿ ಆಟವಾಡುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು.

ಸೂಪರ್ ಹಿಟ್ ಆಗಿದೆ ಕೆಜಿಎಫ್-2 ಟೀಸರ್
ಯಶ್ ಸದ್ಯ ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಯಶ್ ಹುಟ್ಟುಹಬ್ಬಕ್ಕೆ ರಿಲೀಸ್ ಆದ ಕೆಜಿಎಫ್-2 ಟೀಸರ್ ಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಕನ್ನಡ ಚಿತ್ರದ ಟೀಸರ್ ವೊಂದಕ್ಕೆ ವ್ಯಕ್ತವಾದ ಪ್ರತಿಕ್ರಿಯೆ ನೋಡಿ ಇಡೀ ಭಾರತೀಯ ಸಿನಿಮಾರಂಗ ದಂಗ್ ಆಗಿದೆ. ಇನ್ನು ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











