'ಕೆಜಿಎಫ್ 2' ಬಳಿಕ ಮುಂದಿನ ಸಿನಿಮಾ ಯಾವುದು? ಯಶ್ ಕೊಟ್ಟರು ಉತ್ತರ

'ಕೆಜಿಎಫ್' ಸಿನಿಮಾದ 2018 ರಲ್ಲಿ ಬಿಡುಗಡೆ ಆದ ಬಳಿಕ ಈ ವರೆಗೆ ಯಶ್ ನಟನೆಯ ಇನ್ನಾವುದೇ ಸಿನಿಮಾ ಬಿಡುಗಡೆ ಆಗಿಲ್ಲ. 'ಕೆಜಿಎಫ್ 2' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆಯಾದರೂ 'ಕೆಜಿಎಫ್' ಸಿನಿಮಾ ಸರಣಿಯ ನಡುವೆ ಹಾಗೂ ಈವರೆಗೆ ಯಶ್ ಯಾವುದೇ ಸಿನಿಮಾವನ್ನು ಒಪ್ಪಿಕೊಂಡಿಲ್ಲ.

ಯಶ್‌, ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇರುವ ಬಗ್ಗೆ ಸಹಜವಾಗಿಯೇ ಅವರ ಅಭಿಮಾನಿಗಳು, ಸಿನಿಪ್ರಿಯರು ಗೊಂದಲದಲ್ಲಿದ್ದಾರೆ. ಯಶ್ ಮುಂದಿನ ಸಿನಿಮಾ ಯಾವುದಾಗಿರಲಿದೆ, ಯಾರು ನಿರ್ದೇಶಕರು, ಇನ್ನೂ ಯಾವುದೇ ಹೊಸ ಸಿನಿಮಾ ಒಪ್ಪಿಕೊಳ್ಳದೇ ಇರಲು ಕಾರಣವೇನು? ಎಂಬ ಬಗ್ಗೆ ಕುತೂಹಲಿಗಳು ಆಗಿದ್ದಾರೆ. ಈ ಬಗ್ಗೆ ಕೊನೆಗೂ ಯಶ್‌ ಮಾತನಾಡಿದ್ದಾರೆ.

ತಮ್ಮ ಗೆಳೆಯ, ಜಿಮ್ ಟ್ರೈನರ್ ಕಿಟ್ಟಿಯ ರೆಸ್ಟೊರೆಂಟ್ ಉದ್ಘಾಟನೆಗೆ ನಿನ್ನೆ (ಡಿಸೆಂಬರ್ 24) ಆಗಮಿಸಿದ್ದ ಯಶ್‌ಗೆ ಮಾಧ್ಯಮದವರು ಹಲವು ಪ್ರಶ್ನೆಗಳನ್ನು ಕೇಳಿದರು. ಯಶ್‌ ಅವರ ಮುಂದಿನ ಸಿನಿಮಾ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಯ್ತು, ಈ ಬಗ್ಗೆ ಉತ್ತರಿಸಿದ ಯಶ್, 'ಒಳ್ಳೆಯ ಕೆಲಸ ಮಾಡಬೇಕು, ಅದಕ್ಕೆ ತುಸು ಹೆಚ್ಚಿನ ಸಮಯ ಹಿಡಿಯುತ್ತದೆ' ಎಂದರು.

ಪ್ರೇಕ್ಷಕರಿಗೆ ನಾನು ಉತ್ತರದಾಯಿ: ಯಶ್

ಪ್ರೇಕ್ಷಕರಿಗೆ ನಾನು ಉತ್ತರದಾಯಿ: ಯಶ್

''ನಾನು ಮೊದಲೇ ಹೇಳಿದಂತೆ ನಾನು ನನ್ನ ಪ್ರೇಕ್ಷಕರಿಗೆ ಮಾತ್ರವೇ ಉತ್ತರದಾಯಿ. ಪುಣ್ಯಕ್ಕೆ ನನ್ನ ಕುಟುಂಬದಲ್ಲಿಯೂ ಯಾರೂ ಸಹ ನನ್ನನ್ನು ಯಾಕೆ ಸಿನಿಮಾ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡುವುದಿಲ್ಲ. ದುಡಿಯಲೇ ಬೇಕು, ಹಣಕ್ಕಾಗಿಯೇ ಕೆಲಸ ಮಾಡಬೇಕು ಎಂದೇನೂ ಇಲ್ಲ'' ಎಂದರು ಯಶ್.

ಜನರಿಗೆ ಮೆಚ್ಚುಗೆಯಾಗುವಂಥಹಾ ಕೆಲಸ ಮಾಡಬೇಕು: ಯಶ್

ಜನರಿಗೆ ಮೆಚ್ಚುಗೆಯಾಗುವಂಥಹಾ ಕೆಲಸ ಮಾಡಬೇಕು: ಯಶ್

''ಜನಗಳು ಉನ್ನತವಾದ ಸ್ಥಾನ, ಪ್ರೀತಿ ಕೊಟ್ಟಿದ್ದಾರೆ. ಅವರಿಗೆ ಮೆಚ್ಚುಗೆಯಾಗುವಂತೆ ಒಳ್ಳೆಯ ಕೆಲಸ ಮಾಡಬೇಕು. ಯಾವುದೇ ಭಾಷೆಯ ಸಿನಿಮಾ ಬಂದರು, 'ಕೆಜಿಎಫ್' ಅನ್ನು ಉದಾಹರಣೆಯಾಗಿಟ್ಟುಕೊಂಡು ಹೆಮ್ಮೆಯಿಂದ ಹೇಳಿಕೊಳ್ಳುವಂಥಹಾ ಕೆಲಸ ಆಗಿದೆ. ಮುಂದೆಯೂ ಹಾಗೇ ಆಗಬೇಕು ಅದಕ್ಕೆ ಸಮಯ ಬೇಕು'' ಎಂದರು ಯಶ್. ಆ ಮೂಲಕ ಇನ್ನೂ ಕೆಲವು ಸಮಯ ತಾವು ಹೊಸ ಸಿನಿಮಾ ಘೋಷಿಸುವುದಿಲ್ಲ ಎಂಬ ಸುಳಿವನ್ನು ಯಶ್ ನೀಡಿದರು.

ನನ್ನ ಕೆಲಸ ನನಗೆ ಸವಾಲಾಗಬೇಕು: ಯಶ್

ನನ್ನ ಕೆಲಸ ನನಗೆ ಸವಾಲಾಗಬೇಕು: ಯಶ್

''ನಮಗೆ ನಾವೇ ಸವಾಲು. 'ಕೆಜಿಎಫ್: ಚಾಪ್ಟರ್ 1' ಹೇಗಿತ್ತು ಎಂಬುದನ್ನು ನೀವೆಲ್ಲ ನೋಡಿದ್ದೀರಿ. 'ಚಾಪ್ಟರ್ 2' ಹೇಗಿದೆ ಎಂಬುದು ನನಗೆ ಗೊತ್ತು. ಈಗ ಮುಂದಿನದ್ದು ಅದಕ್ಕಿಂತಲೂ ಚೆನ್ನಾಗಿರಬೇಕು. ನಾವು ಮಾಡಿದ ಕೆಲಸವೇ ನಮಗೆ ಸವಾಲಾಗಿ ಅದನ್ನು ಮೀರಿಸುವ ಯತ್ನ ಮಾಡುತ್ತಲೇ ಇರಬೇಕು. ಆ ರೀತಿ ಒಳ್ಳೆಯ ಕೆಲಸ ಮಾಡಲು ಸಾಕಷ್ಟು ಸಮಯ ಬೇಕು'' ಎಂದರು ಯಶ್.

'ಕಿರಾತಕ 2' ಒಪ್ಪಿಕೊಂಡಿದ್ದರು ಆದರೆ ಚಿತ್ರೀಕರಣ ಆಗಲಿಲ್ಲ

'ಕಿರಾತಕ 2' ಒಪ್ಪಿಕೊಂಡಿದ್ದರು ಆದರೆ ಚಿತ್ರೀಕರಣ ಆಗಲಿಲ್ಲ

'ಕೆಜಿಎಫ್ 2' ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆ ಆಗಲಿದೆ. 'ಕೆಜಿಎಫ್: ಚಾಪ್ಟರ್ 1' ಆದ ಬಳಿಕ ಯಶ್ 'ಕಿರಾತಕರು 2' ಸಿನಿಮಾ ಒಪ್ಪಿಕೊಂಡಿದ್ದರು. ಅದಕ್ಕೆ ಫೋಟೊ ಶೂಟ್ ಸಹ ಆಗಿತ್ತು. ಆದರೆ ಸಿನಿಮಾ ಸೆಟ್ಟೇರಲಿಲ್ಲ. ಕೊನೆಗೆ ಯಶ್ ಅವರು ಬಡ್ಡಿ ಸಮೇತ ನಿರ್ಮಾಪಕರಿಗೆ ಹಣ ವಾಪಸ್ ಮಾಡಿದರು. ಅದಾದ ಬಳಿಕ ಇನ್ನಾವ ಸಿನಿಮಾವನ್ನೂ ಯಶ್ ಒಪ್ಪಿಕೊಂಡಿಲ್ಲ. ಯಶ್, ತಮಿಳಿನ ಶಂಕರ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಯ್ತು, ಆದರೆ ಆ ಸುದ್ದಿ ಸುಳ್ಳಾಯಿತು. ಇದೀಗ ತೆಲುಗಿನ ನಿರ್ಮಾಪಕ ದಿಲ್ ರಾಜು ನಿರ್ಮಾಣದ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಇದರ ನಡುವೆ ಕನ್ನಡದ ನರ್ತನ್ ನಿರ್ದೇಶನದ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಅದರ ಬಗ್ಗೆಯೂ ಸ್ಪಷ್ಟನೆ ಇಲ್ಲ. ಆ ಬಗ್ಗೆ ಯಾವುದೇ ಅಧಿಕೃತ ಸುದ್ದಿ ಹೊರಬಿದ್ದಿಲ್ಲ. ಪ್ರಸ್ತುತ ವಿವಿಧ ಜಾಹೀರಾತುಗಳಲ್ಲಿ ಅಷ್ಟೆ ಯಶ್ ನಟಿಸುತ್ತಿದ್ದಾರೆ.

More from Filmibeat

English summary
Actor Yash said he wanted to do best work so he is taking his time to announce his next movie. In last four years Yash acted in just 2 movies, only one is released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X