For Quick Alerts
  ALLOW NOTIFICATIONS  
  For Daily Alerts

  ವಿಡಿಯೋ ವೈರಲ್: ಮುದ್ದು ಮಗನಿಗೆ 'ಜಾನಿ ಜಾನಿ ಎಸ್ ಪಪ್ಪಾ' ಹೇಳಿಕೊಡುತ್ತಿರುವ ನಟ ಯಶ್

  |

  ರಾಕಿಂಗ್ ಸ್ಟಾರ್ ಯಶ್ ಮುದ್ದು ಮಗನಿಗೆ 'ಜಾನಿ ಜಾನಿ ಎಸ್ ಪಪ್ಪಾ' ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮೊನ್ನೆ ಮೊನ್ನೆಯಷ್ಟೆ ಕೆಜಿಎಫ್-2 ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಯಶ್ ಈಗ ಮಗನಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಈ ವಿಡಿಯೋವನ್ನು ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  Rocking Star Yash son, ಅಪ್ಪ-ಮಗನ ಕ್ಯೂಟ್ ವಿಡಿಯೋ ರಾಧಿಕಾ ಪಂಡಿತ್ | Filmibeat Kannada

  ಯಶ್ ಮಗನಿಗೆ 'ಜಾನಿ ಜಾನಿ ಎಸ್ ಪಪ್ಪಾ' ಹೇಳಿಕೊಡುತ್ತಿದ್ದರೆ ಮಗ ಕೂಡ ಅಪ್ಪನ ಜೊತೆ ಹಾಡುತ್ತಿದ್ದಾರೆ. ಜೊತೆಗೆ ಯಥರ್ವ್ ಆಕ್ಷನ್ ಕೂಡ ಮಾಡುತ್ತಿದ್ದಾರೆ. ಈ ಕ್ಯೂಟ್ ವಿಡಿಯೋ ಈಗ ವೈರಲ್ ಆಗಿದ್ದು ಅಭಿಮಾನಿಗಳಿಂದ ಭಾರಿ ಮೆಚ್ಚಿಗೆ ವ್ಯಕ್ತವಾಗುತ್ತಿದೆ. ರಾಧಿಕಾ ಪಂಡಿತ್ ಲಾಕ್ ಡೌನ್ ಡೈರಿಸ್ ಎಂದು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

  ಮುದ್ದು ಮಗನಿಗೆ 11 ತಿಂಗಳು ತುಂಬಿದ ಖುಷಿಯಲ್ಲಿ ಯಶ್ ದಂಪತಿ

  ಇತ್ತೀಚಿಗೆ ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಎಂಗೇಜ್ ಮೆಂಟ್ ಫೋಟೋ ನೋಡಿದ ಯಥರ್ವ್, ಆ ಫೋಟೋ ಬಳಿ ಹೋಗಿ ಅಪ್ಪ-ಅಮ್ಮನ್ನು ಗುರುತಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಯಥರ್ವ್ ನಿಗೆ ಅಕ್ಕ ಐರಾ ಸಾಥ್ ನೀಡಿದ್ದಾಳೆ. ತೊದಲು ಮಾತಿನಲ್ಲಿ ಅಪ್ಪ-ಅಮ್ಮ ಎನ್ನುವ ಪ್ರಯತ್ನ ಮಾಡುತ್ತಿರುವ ಯಥರ್ವನಿಗೆ ಸಹೋದರಿ ಐರಾ ಹೇಳಿಕೊಡುತ್ತಿರುವ ವಿಡಿಯೋ ಸಹ ವೈರಲ್ ಆಗಿದೆ.

  ಯಶ್-ರಾಧಿಕಾ ಮುದ್ದು ಮಗನಿಗೆ 11ತಿಂಗಳು ತುಂಬಿದೆ. ಒಂದು ವರ್ಷಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಮಗನಿಗೆ ವರ್ಷ ತುಂಬಿದ ಸಂಭ್ರಮವನ್ನು ಆಚರಿಸಲು ಯಶ್ ದಂಪತಿ ತಯಾರಾಗಿದ್ದಾರೆ. ಅಂದ್ಹಾಗ ಯಶ್ ಕೆಜಿಎಫ್-2 ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ಉಡುಪಿಯಲ್ಲಿ ಚಿತ್ರೀಕರಣ ಮಾಡುತ್ತಿರುವ ಸಿನಿಮಾತಂಡ ಮುಂದಿನ ಹಂತದ ಚಿತ್ರೀಕರಣವನ್ನು ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಮಾಡಲು ಸಜ್ಜಾಗಿದೆ.

  English summary
  Rocking star Yash Teaches Johny Johny Yes papa to his son Yatharv. Radhika Pandit shares cute video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X