'ಅಪ್ಪು' ಬಳಗವನ್ನ ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟ ಯಶ್ 'ವಾರಿಯರ್ಸ್'
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಗಂಗಾ ವಾರಿಯರ್ಸ್' ತಂಡವನ್ನ ಮಣಿಸಿ, ರಾಕಿಂಗ್ ಸ್ಟಾರ್ ಯಶ್ ಅವರ 'ರಾಷ್ಟ್ರಕೂಟ ಪ್ಯಾಂಥರ್ಸ್' ತಂಡ ಕೆಸಿಸಿ ಎರಡನೇ ಆವೃತ್ತಿಯಲ್ಲಿ ಫೈನಲ್ ಗೆ ಲಗ್ಗೆಯಿಟ್ಟಿದೆ.
ಇಂದು ರಾತ್ರಿ 8.15 ಗಂಟೆಗೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗೋಲ್ಡನ್ ಸ್ಟಾರ್ ಸಾರಥ್ಯದ 'ಒಡೆಯರ್ ಚಾರ್ಜರ್ಸ್' ತಂಡವನ್ನ ಯಶ್ ಅವರ ತಂಡ ಎದುರಿಸಲಿದೆ.
110 ರನ್ ಗಳ ಗುರಿಯನ್ನ ಬೆನ್ನತ್ತಿದ ಗಂಗಾ ವಾರಿಯರ್ಸ್ ಡಾರ್ಲಿಂಗ್ ಕೃಷ್ಣ ಮತ್ತು ಸ್ಟಾಲೀನ್ ಹುವರ್ ಅವರ ಭರ್ಜರಿ ಆಟದ ನೆರವಿನಿಂದ 9 ವಿಕೆಟ್ ಗಳ ಜಯ ಗಳಿಸಿದೆ. ಸ್ಟಾಲೀನ್ ಹುವರ್ 28 ಎಸೆತಗಳಲ್ಲಿ 72 ರನ್ನ ಬಾರಿಸಿ ಅಮೋಘ ಆಟ ಪ್ರದರ್ಶಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಟ ಡಾರ್ಲಿಂಗ್ ಕೃಷ್ಣ 23 ರನ್ ಬಾರಿಸುವ ಮೂಲಕ ಜಯದ ದಡ ಸೇರಿಸಿದರು.

ಅದಕ್ಕೂ ಮುಂಚೆ ಮೊದಲು ಬ್ಯಾಟ್ ಮಾಡಿದ್ದ ಗಂಗಾ ವಾರಿಯರ್ಸ್, ನಿಹಾಲ್ ಉಲ್ಲಾಳ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತು. ನಿಹಾಲ್ ಉಲ್ಲಾಳ್ 21 ಎಸೆತಗಳಲ್ಲಿ 47 ರನ್ ಚಚ್ಚಿದರು. ಸ್ಟಾರ್ ಆಟಗಾರ ಲ್ಯಾನ್ಸ್ ಕ್ಲೂಸ್ನರ್ ಕೇವಲ 10 ರನ್ ಗಳಿಸಿದ್ದರು.
ರಾಷ್ಟ್ರಕೂಟ ತಂಡದ ಪರವಾಗಿ ಕೆ. ಕಾಮತ್ 20 ರನ್ ನೀಡಿ 3 ವಿಕೆಟ್ ಪಡೆದರು. ಪ್ರೀತಂ ಗುಬ್ಬಿ ಮಹತ್ವದ ಎರಡು ವಿಕೆಟ್‌ಗಳನ್ನು ಪಡೆದು ಗಮನ ಸೆಳೆದರು.


Click it and Unblock the Notifications











