ಯಶ್ ತಂಡ ಗೆದ್ರೆ ಎಲ್ಲ ಪಕ್ಕಾ, ಸೋತ್ರೆ ಎಲ್ಲ ಉಲ್ಟಾ ಪಲ್ಟಾ.!
ಕನ್ನಡ ಚಲನಚಿತ್ರ ಕಪ್ ಟೂರ್ನಿ ಮೊದಲ ದಿನ ಯಶಸ್ವಿಯಾಗಿ ಮುಗಿದಿದೆ. ಆಡಿದ ಎರಡು ಪಂದ್ಯಗಳನ್ನ ಗೆದ್ದ ಗೋಲ್ಡನ್ ಸ್ಟಾರ್ ಗಣೇಶ್ ಸಾರಥ್ಯದ 'ಒಡೆಯರ್ ಚಾರ್ಜರ್ಸ್' ತಂಡ ಈಗಾಗಲೇ ಫಿನಾಲೆ ತಲುಪಿದೆ.
ಶಿವರಾಜ್ ಕುಮಾರ್ ಅವರ 'ವಿಜಯನಗರ ಪೆಟ್ರಿಯಾಟ್ಸ್' ಎರಡು ಪಂದ್ಯಗಳಲ್ಲಿ ಒಂದು ಪಂದ್ಯವನ್ನ ಗೆದ್ದು ಉಳಿದವರ ಫಲಿತಾಂಶಕ್ಕಾಗಿ ಕಾಯುತ್ತಿದೆ. ಇನ್ನು ಉಪೇಂದ್ರ ಮತ್ತು ಪುನೀತ್ ತಂಡಗಳು ತಲಾ ಒಂದು ಪಂದ್ಯ ಸೋತಿದ್ದು, ಇಂದು ಎರಡನೇ ಪಂದ್ಯಗಳನ್ನ ಆಡಲಿದೆ.
ಇಂದಿನ ಮೊದಲ ಪಂದ್ಯ ಪುನೀತ್ ರಾಜ್ ಕುಮಾರ್ ಅವರ 'ಗಂಗಾ ವಾರಿಯರ್ಸ್' ಮತ್ತು ಯಶ್ ಅವರ 'ರಾಷ್ಟ್ರಕೂಟ ಪ್ಯಾಂಥರ್ಸ್'. ಈ ಪಂದ್ಯದಲ್ಲಿ ರಾಕಿಂಗ್ ಸ್ಟಾರ್ ತಂಡ ಪಂದ್ಯ ಗೆದ್ದರೇ ಅಲ್ಲಿಗೆ ಫೈನಲ್ ಯಾರು ಎಂಬುದು ಅಲ್ಲೇ ನಿರ್ಣಯವಾಗಲಿದೆ. ಒಂದು ವೇಳೆ ಯಶ್ ತಂಡ ಸೋತರೆ ಉಳಿದ ತಂಡಗಳ ಫೈನಲ್ ಆಸೆ ಜೀವಂತವಾಗಲಿದೆ. ಪೂರ್ತಿ ವಿವರಣೆ ತಿಳಿಯಲು ಮುಂದೆ ಓದಿ....

ಗಣೇಶ್ ಟೀಂ ಸೇಫ್
ಗೋಲ್ಡನ್ ಸ್ಟಾರ್ ಗಣೇಶ್ ಸಾರಥ್ಯದ ಒಡೆಯರ್ ಚಾರ್ಜರ್ಸ್ ತಂಡ ಆಡಿದ ಎರಡರಲ್ಲಿ ಎರಡು ಗೆದ್ದಿದೆ. ಅಲ್ಲಿಗೆ ಗಣೇಶ್ ತಂಡ ಫೈನಲ್ ಗೆ ಎಂಟ್ರಿ ಕೊಟ್ಟಾಗಿದೆ. ಉಳಿದ ಐದು ತಂಡಗಲ್ಲಿ ಫೈನಲ್ ಗೆ ಪ್ರವೇಶ ಪಡೆಯುವ ಮತ್ತೊಂದು ಟೀಂ ಯಾವುದು ಎಂಬುದು ಈಗ ಕುತೂಹಲ.

ರಾಕಿಂಗ್ ಸ್ಟಾರ್ ಗೆ ಹೆಚ್ಚಿದ ಅವಕಾಶ
ಸದ್ಯದ ಅಂಕಪಟ್ಟಿಯನ್ನ ಗಮನಿಸಿದ್ರೆ, ರಾಕಿಂಗ್ ಸ್ಟಾರ್ ಯಶ್ ಅವರ 'ರಾಷ್ಟ್ರಕೂಟ ಪ್ಯಾಂಥರ್ಸ್' ತಂಡಕ್ಕೆ ಫೈನಲ್ ಹೋಗುವ ಹೆಚ್ಚು ಅವಕಾಶವಿದೆ. ಯಾಕಂದ್ರೆ ಆಡಿದ ಒಂದು ಪಂದ್ಯದಲ್ಲಿ ಗೆದಿದ್ದಾರೆ. ಈಗ ಎರಡನೇ ಪಂದ್ಯ ಗೆದ್ದರೇ ಸುಲಭವಾಗಿ ಫೈನಲ್ ಗೆ ಲಗ್ಗೆಯಿಡ್ತಾರೆ. ಉಳಿದ ತಂಡಗಳೆಲ್ಲವೂ ಮನೆಗೆ ಹೋಗುತ್ತೆ.

ಒಂದು ವೇಳೆ ಯಶ್ ಸೋತರೆ....
ಇಂದು ಮೊದಲ ಪಂದ್ಯ ಯಶ್ ಮತ್ತು ಪುನೀತ್ ರಾಜ್ ಕುಮಾರ್ ತಂಡಗಳ ನಡುವೆ ಇದೆ. ಯಶ್ ಗೆದ್ರೆ ಎಲ್ಲವೂ ಓಕೆ. ಒಂದು ವೇಳೆ ಯಶ್ ತಂಡ ಸೋತರೆ, ಉಳಿದ ತಂಡಗಳಿಗೆ ಫೈನಲ್ ಕನಸು ಜೀವಂತವಾಗುತ್ತೆ. ಎರಡನೇ ಪಂದ್ಯ ಸುದೀಪ್ ಮತ್ತು ಉಪೇಂದ್ರ ನಡುವೆ ನಡೆಯಲಿದೆ. ಇಲ್ಲಿ ಈ ಎರಡು ತಂಡಗಳು ಮೊದಲ ಪಂದ್ಯವನ್ನ ಸೋತಿವೆ. ಈ ಪಂದ್ಯದಲ್ಲಿ ಯಾರೇ ಗೆದ್ದರೂ ಅತಿ ಹೆಚ್ಚು ಸರಾಸರಿಯಲ್ಲಿ (ರನ್ ರೇಟ್) ಗೆಲ್ಲಬೇಕಾಗುತ್ತೆ. ಆಗ ಉಪ್ಪಿ ಅಥವಾ ಸುದೀಪ್ ತಂಡದಲ್ಲಿ ಅತಿ ಹೆಚ್ಚು ಸರಾಸರಿಯಲ್ಲಿ ಗೆದ್ದವರು ಫೈನಲ್ ಹೋಗ್ತಾರೆ.

ಉಳಿದವರಿಗೂ ಒಂದು ಆಸೆ
ಸುದೀಪ್ ಮತ್ತು ಉಪೇಂದ್ರ ಅವರ ನಡುವಿನ ಪಂದ್ಯದಲ್ಲಿ ಉತ್ತಮ ಸರಾಸರಿ ಆಟ ಪ್ರದರ್ಶನವಾಗಿಲ್ಲ ಅಂದ್ರೆ, ಅವಕಾಶ ಶಿವಣ್ಣ ಮತ್ತು ಯಶ್ ತಂಡಗಳ ಕಡೆ ಹೋಗುತ್ತೆ. (ಇದು ಅಪರೂಪ, ಬಹುತೇಕ ಅಸಾಧ್ಯ) ಆಡಿರುವ ಎರಡು ಪಂದ್ಯದಲ್ಲಿ ಒಂದು ಸೋತು, ಒಂದು ಗೆದ್ದಿರುವ ಶಿವಣ್ಣ ತಂಡಕ್ಕೂ ಒಂದು ಸಣ್ಣ ಅವಕಾಶ ಇದೆ ಎನ್ನುವುದು ಮರೆಯುವಂತಿಲ್ಲ. ಅಲ್ಲಿಗೆ ಯಶ್ ತಂಡ ಹಾಗೂ ಪುನೀತ್ ತಂಡವನ್ನ ಕಡೆಗಣಿಸುವಂತಿಲ್ಲ. ರನ್ ರೇಟ್ ಆಧಾರದ ಮೇಲೆ ಅವರಿಗೂ ಅವಕಾಶವಿರಬಹುದು.

ಮೊದಲ ಪಂದ್ಯವೇ ನಿರ್ಣಾಯಕ
ಹೀಗಾಗಿ, ಇಂದು ಮಧ್ಯಾಹ್ನ ನಡೆಯಲಿರುವ ಮೊದಲ ಪಂದ್ಯವೇ ತುಂಬಾ ನಿರ್ಣಾಯಕ. ಪುನೀತ್ ರಾಜ್ ಕುಮಾರ್ (ಗಂಗಾ ವಾರಿಯರ್ಸ್) ಮತ್ತು ರಾಕಿಂಗ್ ಸ್ಟಾರ್ ಯಶ್ (ರಾಷ್ಟ್ರಕೂಟ ಪ್ಯಾಂಥರ್ಸ್) ನಡುವೆ 2 ಗಂಟೆಗೆ ಪಂದ್ಯ ನಡೆಯಲಿದೆ.


Click it and Unblock the Notifications











