'ಸೂಪರ್ ಸ್ಟಾರ್'ಗೆ ರಾಕಿಂಗ್ ಸ್ಟಾರ್ ಸಾಥ್, ಆಗಸ್ಟ್ 20ಕ್ಕೆ ಸರ್ಪ್ರೈಸ್!
ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಅಭಿನಯಿಸುತ್ತಿರುವ ಚೊಚ್ಚಲ ಚಿತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಸಾಥ್ ನೀಡುತ್ತಿದ್ದಾರೆ. ನಿರಂಜನ್ ಅವರ ಸೂಪರ್ ಸ್ಟಾರ್ ಚಿತ್ರದ ಟೀಸರ್‌ಗೆ ಯಶ್ ಅವರು ಧ್ವನಿ ನೀಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
Recommended Video
ಆಗಸ್ಟ್ 14 ರಂದು ಸೂಪರ್ ಸ್ಟಾರ್ ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ನಡೆದಿತ್ತು. ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರು ಟೈಟಲ್ ರಿಲೀಸ್ ಮಾಡಿದ್ದರು.
ಇದೀಗ, ಸಿನಿಮಾದ ಅಧಿಕೃತ ಟೀಸರ್ ಗೆ ಚಿತ್ರತಂಡ ಪ್ಲಾನ್ ಮಾಡಿದ್ದು, ಆಗಸ್ಟ್ 20 ರಂದು ಸೂಪರ್ ಸ್ಟಾರ್ ಟೀಸರ್ ಹೊರತರಲು ಸಜ್ಜಾಗುತ್ತಿದೆ.

ನವ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಈ ಚಿತ್ರ ನಿರ್ದೇಶನ ಮಾಡಲಿದ್ದಾರೆ. ಆರ್ ವಿಬಿ ಮತ್ತು ಮೈಲಾರಿ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಅಂದ್ಹಾಗೆ, ಈ ಚಿತ್ರದಲ್ಲಿ ನಿರಂಜನ್ ಡ್ಯಾನ್ಸರ್ ಮಾತ್ರ ನಿಭಾಯಿಸಲಿದ್ದಾರೆ.
ಸ್ವತಃ ಚಿತ್ರತಂಡ ಹೇಳಿರುವ ಪ್ರಕಾರ ಅಕ್ಟೋಬರ್ ವೇಳೆ ಚಿತ್ರೀಕರಣ ಪ್ರಾರಂಭಿಸುವ ಯೋಜನೆ ಇದೆ. ಇನ್ನುಳಿದಂತೆ ನಾಯಕಿ ಹಾಗೂ ಇತರ ಪಾತ್ರಗಳ ಕುರಿತು ಅಂತಿಮ ಆಯ್ಕೆಯಾಗಿಲ್ಲ.


Click it and Unblock the Notifications











