'ಪುಷ್ಪ'- 2, 'ಅನಿಮಲ್'ಗಿಂತ 6 ನಿಮಿಷ ಚಿಕ್ಕದು 'ಟಾಕ್ಸಿಕ್'? ಅಯ್ಯೋ ರಿಸ್ಕ್ ತಗೊತ್ತಿದ್ದಾರಾ?
ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗ್ತಿದೆ. ಮಾರ್ಚ್ 19ಕ್ಕೆ ವಿಶ್ವದಾದ್ಯಂತ ಈ ಹೈವೋಲ್ಟೇಜ್ ಆಕ್ಷನ್ ಸಿನಿಮಾ ತೆರೆಗಪ್ಪಳಿಸಲಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು ಪ್ರೀ ರಿಲೀಸ್ ಬ್ಯುಸಿನೆಸ್ ಕೂಡ ಜೋರಾಗಿದೆ.
ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ 'ಟಾಕ್ಸಿಕ್' ಸಿನಿಮಾ ಬಗ್ಗೆ ಭಾರೀ ಚರ್ಚೆ ನಡೀತಿದೆ. ಇತ್ತೀಚೆಗೆ ಬಂದ ಟೀಸರ್‌ಗಳು ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿದೆ. ಸದ್ಯ ಚಿತ್ರದ ರನ್ ಟೈಮ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿವೊಂದು ವೈರಲ್ ಆಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಯಾವುದೇ ಚಿತ್ರದ ರನ್‌ಟೈಮ್ ಕೂಡ ಬಹಳ ಮುಖ್ಯ ಎನಿಸುತ್ತಿದೆ. ಪ್ರೇಕ್ಷಕರಿಗೆ 2 ಗಂಟೆಗಿಂತ ಹೆಚ್ಚು ಹೊತ್ತು ಚಿತ್ರಮಂದಿರಗಳಲ್ಲಿ ಕೂರಲು ಕಷ್ಟ ಎನ್ನುವಂತಾಗಿದೆ. ಹಾಗಾಗಿ ಬೇಗ ಕಥೆ ಹೇಳಿ ಮುಗಿಸಬೇಕು. ಕೊಂಚ ಎಡವಟ್ಟು ಆಗಿಬಿಟ್ರು ಸಿನಿಮಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು.

ಇತ್ತೀಚೆಗೆ 3 ಗಂಟೆಗೂ ಹೆಚ್ಚು ರನ್‌ಟೈಮ್ ಇರುವ ಸಿನಿಮಾಗಳು ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿವೆ. 'ಅನಿಮಲ್' ಸಿನಿಮಾ ಕಾಲಾವಧಿ 3 ಗಂಟೆ 21 ನಿಮಿಷ ಅಂದಾಗ ಸಾಕಷ್ಟು ಜನ ಹುಬ್ಬೇರಿಸಿದ್ದರು. ಆದರೆ ಸಿನಿಮಾ ನೋಡುತ್ತಿದ್ದರೆ ಸಮಯ ಹೋಗುವುದೇ ಗೊತ್ತಾಗಲ್ಲ ಎಂದು ಪ್ರೇಕ್ಷಕರು ಒಪ್ಪಿಕೊಂಡಿದ್ದರು. ಅದೇ ರೀತಿ 'ಪುಷ್ಪ- 2' ಸಿನಿಮಾ ರನ್‌ಟೈಮ್ ಕೂಡ ಹೆಚ್ಚು ಕಮ್ಮಿ 3 ಗಂಟೆ 20 ನಿಮಿಷ ಇತ್ತು. ಅಲ್ಲು ಅರ್ಜುನ್ ನಟಿಸಿದ ಆ ಸಿನಿಮಾ ಕೂಡ ಬಾಕ್ಸಾಫೀಸ್ ಶೇಕ್ ಮಾಡಿತ್ತು.
ಸೂಪರ್ ಹಿಟ್ 'ಧುರಂಧರ್' ಸಿನಿಮಾ ರನ್‌ಟೈಮ್ 3 ಗಂಟೆ 34 ನಿಮಿಷ. ಆದರೂ ಈ ಸ್ಪೈ ಥ್ರಿಲ್ಲರ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿತ್ತು. ಸದ್ಯ 'ಟಾಕ್ಸಿಕ್' ಸಿನಿಮಾ ರನ್‌ಟೈಮ್ ಬಗ್ಗೆ ಅಭಿಮಾನಿಗಳು ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಇನ್ನು ಸೆನ್ಸಾರ್ ಆಗಿಲ್ಲ. ಸೆನ್ಸಾರ್ ಬಳಿಕ ರನ್‌ಟೈಮ್ ಬಗ್ಗೆ ಖಚಿತ ಮಾಹಿತಿ ಲಭ್ಯವಾಗುತ್ತದೆ. USA ಸಿನಿಮಾ ಚೈನ್ AMC ಥಿಯೇಟರ್ಸ್ ಪ್ರಕಾರ 'ಟಾಕ್ಸಿಕ್' ಸಿನಿಮಾ ರನ್‌ಟೈನ್ 3 ಗಂಟೆ 15 ನಿಮಿಷ ಎನ್ನಲಾಗ್ತಿದೆ. ತನ್ನ ವೆಬ್‌ಸೈಟ್‌ನಲ್ಲಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ರನ್‌ಟೈಮ್ ನಮೂದಿಸಿದ್ದಾರೆ.
ದೊಡ್ಡ ಸಿನಿಮಾ ಕಥೆಗಳನ್ನು ಚಿಕ್ಕದಾಗಿ ಚೊಕ್ಕದಾಗಿ ಹೇಳಿ ಮುಗಿಸಬೇಕು. ಹಾಗಾಗಿ ರನ್‌ಟೈನ್ 2 ಗಂಟೆ 30 ನಿಮಿಷ ಇದ್ದರೆ ಉತ್ತಮ ಎನ್ನುವುದು ಕೆಲವರ ವಾದ. ಸಿನಿಮಾದಲ್ಲಿ ಧಮ್ ಇದ್ದರೆ 3 ಗಂಟೆ ಮೀರಿದ್ರು ಜನ ನೋಡುತ್ತಾರೆ ಎನ್ನುವ ಮತ್ತೊಂದು ವಾದವೂ ಇದೆ. ದೊಡ್ಡ ಸಿನಿಮಾಗಳನ್ನು ಶೂಟ್ ಮಾಡುವಾಗ ಹೆಚ್ಚು ಹೆಚ್ಚು ದೃಶ್ಯಗಳನ್ನು ಸೆರೆ ಹಿಡಿಯುತ್ತಾರೆ. ಎಲ್ಲವೂ ಚೆನ್ನಾಗಿದೆ ಎನಿಸಿ ಎಡಿಟಿಂಗ್ ವೇಳೆ ತಪ್ಪು ಮಾಡಿ ಕೆಲವರು ದಂಡ ತೆತ್ತಿರುವುದು ಇದೆ.
'ಟಾಕ್ಸಿಕ್' ಸಿನಿಮಾ ರನ್‌ಟೈಮ್ ಕೇವಲ 2 ಗಂಟೆ 20 ನಿಮಿಷ ಮಾತ್ರ ಎನ್ನುವ ಮಾತು ಕೇಳಿಬರ್ತಿದೆ. ಎರಡು ಭಾಗಗಳಾಗಿ 'ಟಾಕ್ಸಿಕ್' ಸಿನಿಮಾ ಕಟ್ಟಿಕೊಡುವ ಲೆಕ್ಕಾಚಾರ ನಡೀತಿದೆ. ಹಾಗಾಗಿ ರನ್‌ಟೈಮ್ 2 ಗಂಟೆ 20 ನಿಮಿಷ ಮೀರದಂತೆ ಚಿತ್ರತಂಡ ಎಚ್ಚರ ವಹಿಸುತ್ತಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರದ ರನ್‌ಟೈಮ್ ಬಗ್ಗೆ ಖಚಿತ ಮಾಹಿತಿ ಸಿಗಲಿದೆ.
ನಯನತಾರಾ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಾಗಣ 'ಟಾಕ್ಸಿಕ್' ಚಿತ್ರದಲ್ಲಿದೆ. ರವಿ ಬಸ್ರೂರು ಜೊತೆ 4 ಮಂದಿ ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಜೀವ್ ರವಿ ಕ್ಯಾಮರಾ ಕಣ್ಣಲ್ಲಿ ಸಿನಿಮಾ ಸೆರೆಹಿಡಿದಿದ್ದಾರೆ.


Click it and Unblock the Notifications











