ರಾಯನ ಜೊತೆ ಕಾರಿನೊಳಗಿದ್ದ ಬ್ಯೂಟಿ ಯಾರು? ಫೋಟೊ ಸಮೇತ ಗೀತು ಮೋಹನ್ ದಾಸ್ ಮಾಹಿತಿ

'ಟಾಕ್ಸಿಕ್' ಟೀಸರ್ ಆರ್ಭಟ ಮುಂದುವರೆದಿದೆ. ಜೊತೆಗೆ ಆ ಕಾರಿನಲ್ಲಿರುವ ಹಸಿಬಿಸಿ ದೃಶ್ಯದ ಬಗ್ಗೆ ಭಾರೀ ಚರ್ಚೆ ನಡೀತಿದೆ. ಆ ರಮಿಸುವ ದೃಶ್ಯದಲ್ಲಿ ನಟಿಸಿರುವ ಚೆಲುವೆ ಯಾರು ಎಂದು ಕೆಲವರು ಹುಡುಕಾಟ ನಡೆಸಿದ್ದರು. ಇದೀಗ ಸ್ವತಃ ನಿರ್ದೇಶಕಿ ಗೀತು ಮೋಹನ್ ದಾಸ್ ಆ ನಟಿಯನ್ನು ಪರಿಚಯಿಸಿದ್ದಾರೆ.

ಹಾಲಿವುಡ್ ನಟಿ ನಟಾಲಿಯಾ ಬರ್ನ್(Natalie Burn) ಟಾಕ್ಸಿಕ್ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಟೀಸರ್‌ನಲ್ಲಿ ಕಾಣಿಸಿಕೊಂಡಿರುವುದು ಆಕೆ ಅಲ್ಲ. ಅದು ನಟಾಲಿಯಾ ಬರ್ನ್ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಆದರೂ ವೀಡಿಯೋದಲ್ಲಿರುವ ಆಕೆಗೂ ನಟಾಲಿಯಾಗೂ ಹೋಲಿಕೆ ಇರಲಿಲ್ಲ. ಹಾಗಾಗಿ ಈ ಬಗ್ಗೆ ಕೆಲವರು ಮೊದಲೇ ಅನುಮಾನ ವ್ಯಕ್ತಪಡಿಸಿದ್ದರು. ಇದೀಗ ಸ್ವತಃ ನಿರ್ದೇಶಕಿ ಫೋಟೊ ಸಮೇತ ಟೀಸರ್‌ನಲ್ಲಿರುವ ನಟಿಯ ಪರಿಚಯ ಮಾಡಿಸಿದ್ದಾರೆ. ಗೀತು ಮೋಹನ್ ದಾಸ್ ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಎಲ್ಲಾ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

Yash Toxic Teaser Buzz Director Geetu Mohan Das Reveals Cemetery Girl as Beatriz Taufenbach

ಅಂದಹಾಗೆ 'ಟಾಕ್ಸಿಕ್' ಟೀಸರ್‌ನಲ್ಲಿ ಕಾರಿನ ಒಳಗೆ ಬಿಂದಾಸ್ ಆಗಿ ನಟಿಸಿರುವ ನಟಿಯ ಹೆಸರು ಬೀಟ್ರಿಜ್ ಟೌಫೆನ್‌ಬಾಚ್(Beatriz Taufenbach). ಸ್ಮಶಾನದಲ್ಲಿ ಒಂದು ಅಂತ್ಯಕ್ರಿಯೆ ನಡೆಯುತ್ತಿರುತ್ತದೆ. ಅಲ್ಲಿಗೆ ಒಂದು ಕಾರ್ ಬಂದು ನಿಲ್ಲುತ್ತದೆ. ಯಶ್ ಪಾತ್ರವು ಒಬ್ಬ ಮಹಿಳೆಯೊಂದಿಗೆ ಕಾರಿನಲ್ಲಿ ಆತ್ಮೀಯ ಕ್ಷಣದಲ್ಲಿ ತೊಡಗಿರುವುದು. ಬಳಿಕ ಬಾಂಬ್ ಬ್ಲಾಸ್ಟ ಆಗುವುದು. ನಂತರ ಕಾರಿಂದ ರಾಯ ಅನ್ನುವ ಖಡಕ್ ಪಾತ್ರದಲ್ಲಿ ಯಶ್ ಇಳಿದು ಬರುವ ಸನ್ನಿವೇಶ ಟೀಸರ್‌ನಲ್ಲಿ ನೋಡಬಹುದು.

"ಈ ಸುಂದರಿ ನನ್ನ ಸ್ಮಶಾನದ ಹುಡುಗಿ" ಎಂದು ಬರೆದು ನಿರ್ದೇಶಕಿ ಗೀತು ಮೋಹನ್ ದಾಸ್ ಇನ್‌ಸ್ಟಾಗ್ರಾಮ್‌ನಲ್ಲಿ ಬೀಟ್ರಿಜ್ ಟೌಫೆನ್‌ಬಾಚ್ ಫೋಟೊ ಹಂಚಿಕೊಂಡಿದ್ದಾರೆ. ಬ್ರೆಜಿಲಿಯನ್ ನಟಿ ಹಾಗೂ ಮಾಡೆಲ್ ಬೀಟ್ರಿಜ್ ಟೌಫೆನ್‌ಬಾಚ್. ಸದ್ಯ ಆಕೆ ತನ್ನ ಇನ್‌ಸ್ಟಾಗ್ರಾಮ್‌ ಅಕೌಂಡ್ ಪ್ರೈವೇಟ್ ಮಾಡಿಟ್ಟುಕೊಂಡಿದ್ದಾರೆ. ಹಾಗಾಗಿ ಹೆಚ್ಚಿನ ಮಾಹಿತ ಸಿಗುತ್ತಿಲ್ಲ. ಕೆಲವರು ಆಕೆಯ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಹುಡುಕಾಟ ನಡೆಸಿದ್ದಾರೆ.

Yash Toxic Teaser Buzz Director Geetu Mohan Das Reveals Cemetery Girl as Beatriz Taufenbach

ಮಾರ್ಚ್ 19ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಲಿದೆ. ಯಶ್ ಜೊತೆಗೆ ನಯನತಾರಾ, ಹುಮಾ ಖುರೇಷಿ, ಕಿಯಾರಾ ಅದ್ವಾನಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಇನ್ನು 'ಟಾಕ್ಸಿಕ್' ಟೀಸರ್‌ನಲ್ಲಿರುವ ಮಾದಕ ದೃಶ್ಯದ ಬಗ್ಗೆ ನಿರ್ದೇಶಕಿ ಗೀತು ಮೋಹನ್ ದಾಸ್ ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದಾರೆ.

24 ಗಂಟೆಗಳಲ್ಲಿ 'ಟಾಕ್ಸಿಕ್' ಟೀಸರ್ 20 ಕೋಟಿಗೂ ಅಧಿಕ ವೀವ್ಸ್, 50 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಿಟ್ಟಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಬಗ್ಗೆ ಪರ ವಿರೋಧ ಚರ್ಚೆ ಮುಂದುವರೆದಿದೆ. ಯಶ್ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಯಶ್ ಸಿನಿಮಾದಲ್ಲಿ ಇಂತಹ ದೃಶ್ಯ ಬೇಕಿರಲಿಲ್ಲ ಎನ್ನುವುದು ಕೆಲವರ ವಾದ. ಬರೀ ಟೀಸರ್ ನೋಡಿ ಏನೇನೋ ಮಾತನಾಡಬೇಡಿ, ಸಿನಿಮಾ ಬಂದ ಮೇಲೆ ನೋಡಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

300ರಿಂದ 400 ಕೋಟಿ ರೂ. ಬಜೆಟ್‌ನಲ್ಲಿ 'ಟಾಕ್ಸಿಕ್' ಸಿನಿಮಾ ನಿರ್ಮಾಣವಾಗ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಚಿತ್ರಕ್ಕೆ ಹಣ ಹೂಡಿದ್ದಾರೆ. ರವಿ ಬಸ್ರೂರು ಸಂಗೀತ, ರಾಜೀವ್ ರವಿ ಛಾಯಾಗ್ರಹಣ ಚಿತ್ರಕ್ಕಿದೆ. 'ಧುರಂಧರ್'-2 ಎದುರು ಸಿನಿಮಾ ತೆರೆಗೆ ತರಲಾಗ್ತಿದೆ. ಬಹಳ ಹಿಂದೆಯೇ ಯಶ್ ತಮ್ಮ ಸಿನಿಮಾ ರಿಲೀಸ್ ಡೇಟ್ ಘೋಷಿಸಿದ್ದರು. ಈದ್ ಸಂಭ್ರಮದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ.

'ಟಾಕ್ಸಿಕ್' ಸಿನಿಮಾ 1000 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ದೇಶ ವಿದೇಶದ ಭಾಷೆಗಳಿಗೆ ಸಿನಿಮಾ ಡಬ್ ಆಗಿ ಬಿಡುಗಡೆ ಆಗಲಿದೆ. ಇಂಗ್ಲೀಷ್ ಭಾಷೆಯಲ್ಲಿ ಕೂಡ ಸಿನಿಮಾ ತೆರೆಗೆ ಬರಲಿದೆ.

More from Filmibeat

Read more about: yash toxic actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X