'ಯಶ್' ಮುಂದೆ ಮಂಡಿಯೂರುತ್ತಿವೆ ಪರಭಾಷಾ ಚಿತ್ರಗಳು

By Harshitha

''ಕನ್ನಡ ಚಿತ್ರರಂಗಕ್ಕೆ ಮಾರ್ಕೆಟ್ ಕಮ್ಮಿ..! ಎಂಥ ಸೂಪರ್ ಸಿನಿಮಾ ಮಾಡಿದ್ರೂ, ಜನ ನೋಡುವುದು ಅಷ್ಟರಲ್ಲೇ ಇದೆ. ಅದರಲ್ಲೂ ಪರಭಾಷೆಯ ಬಿಗ್ ಸ್ಟಾರ್ ಸಿನಿಮಾ ರಿಲೀಸ್ ಆದರಂತೂ ಮುಗಿದೇ ಹೋಯ್ತು. ಕನ್ನಡ ಪ್ರೇಕ್ಷಕರು ಕನ್ನಡ ಚಿತ್ರಗಳ ಕಡೆ ತಿರುಗೂ ನೋಡಲ್ಲ.''

ಹೀಗಂತ ಪ್ರತಿದಿನ ಗಾಂಧಿನಗರದಲ್ಲಿ ಯಾರದರೊಬ್ಬರು ನಿರ್ಮಾಪಕರು ಅಥವಾ ವಿತರಕರು ಗೊಣಗುತ್ತಲೇ ಇರುತ್ತಾರೆ. ಸ್ಯಾಂಡಲ್ ವುಡ್ ನಲ್ಲಿ ಪರಭಾಷಾ ಚಿತ್ರಗಳ ಹಾವಳಿ ಹೆಚ್ಚಿದ್ದರೂ, ಒಳ್ಳೆ ಚಿತ್ರಗಳನ್ನ ನೀಡಿದ್ರೆ, ಕನ್ನಡ ಪ್ರೇಕ್ಷಕ ಮಹಾಪ್ರಭು ಎಂದೂ ಕೈಬಿಟ್ಟಿಲ್ಲ ಅನ್ನುವುದು ಎಷ್ಟೋ ಬಾರಿ ಸಾಬೀತಾಗಿದೆ.

ಆದ್ರೆ, ಸೂಪರ್ ಸ್ಟಾರ್ ರಜನಿಕಾಂತ್, ಕಿಂಗ್ ಖಾನ್ ಶಾರೂಖ್, ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್, ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅಭಿನಯದ ಚಿತ್ರಗಳು ರಿಲೀಸ್ ಆದ್ರೆ, ಕನ್ನಡ ಚಿತ್ರಗಳು ಕಲೆಕ್ಷನ್ ಮಾಡುವುದೆಲ್ಲಿ.? ಅವರಿಗೆ ಚಾಲೆಂಜ್ ಹಾಕುವ ಗಟ್ಟಿ ಗುಂಡಿಗೆ ಗಾಂಧಿನಗರದಲ್ಲಿ ಯಾರಿಗಿದೆ ಬಿಡಿ ಅಂತ ಮೂಗು ಮುರಿಯುವವರೇ ಹೆಚ್ಚು.

'ಇದು ಸತ್ಯ ಅಲ್ವಾ', ಅಂತ ನೀವು ಅಂತಿಮ ನಿರ್ಧಾರಕ್ಕೆ ಬರುವ ಮುನ್ನ ಒಮ್ಮೆ ಸ್ಯಾಂಡಲ್ ವುಡ್ ನ ಹೊಚ್ಚ ಹೊಸ 'ಬಾಕ್ಸ್ ಆಫೀಸ್ ಸುಲ್ತಾನ್' ಯಶ್ ಚಿತ್ರಗಳತ್ತ ಗಮನ ಹರಿಸಿ, ಯಶ್ ಚಿತ್ರಗಳ ಮುಂದೆ ಕರ್ನಾಟಕದಲ್ಲಿ ರಜನಿ, ಶಾರೂಖ್, ಆಮೀರ್ ಚಿತ್ರಗಳೂ ಪಲ್ಟಿ ಹೊಡೆದಿವೆ. ನೀವು ನಂಬಲ್ಲ ಅಂದ್ರೆ, ಆಧಾರ ಸಮೇತ ಡೀಟೇಲ್ ರಿಪೋರ್ಟ್ ನಿಮ್ಮ ಮುಂದೆ ತೆಗೆದಿಡುತ್ತೀವಿ, ಈ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ......

ಸೂಪರ್ ಹಿಟ್ ಆಗಿತ್ತು 'ಗೂಗ್ಲಿ'

ಸೂಪರ್ ಹಿಟ್ ಆಗಿತ್ತು 'ಗೂಗ್ಲಿ'

ಯಶ್ ಅಭಿನಯದ 'ಗೂಗ್ಲಿ' ಚಿತ್ರ ಶತದಿನೋತ್ಸವ ಆಚರಿಸಿರುವ ವಿಷಯವನ್ನ ನಿಮಗೆ ನಾವು ನೆನಪಿಸಬೇಕಿಲ್ಲ. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ 'ಗೂಗ್ಲಿ' ಚಿತ್ರ ಸೂಪರ್ ಕಲೆಕ್ಷನ್ ಮಾಡಿತ್ತು. ಮೂರು ವಾರಕ್ಕೆ 13 ಕ್ಕೂ ಹೆಚ್ಚು ಕೋಟಿ ಬಾಚಿ, ಅಂದಿನ ಕಾಲಕ್ಕೆ ದಾಖಲೆ ಬರೆದಿತ್ತು. ಯಶ್ 'ಗೂಗ್ಲಿ' ಸ್ಪಿನ್ ಎದುರು ಕನ್ನಡದ ಯಾವ ಚಿತ್ರ ಕೂಡ ನಿಲ್ಲಲಿಲ್ಲ ಅನ್ನೋದು ಬೇರೆ ವಿಷಯ. ಆದ್ರೆ, ಶಾರೂಖ್ ಖಾನ್ ಸ್ಪೀಡ್ ಗೆ ಯಶ್ ಬಗ್ಗಲಿಲ್ಲ ಅನ್ನೋದು ಸುಳ್ಳಲ್ಲ.

'ಗೂಗ್ಲಿ' ಬಾಲ್ ಗೆ ಶಾರೂಖ್ ಖಾನ್ ಬೌಲ್ಡ್..!

'ಗೂಗ್ಲಿ' ಬಾಲ್ ಗೆ ಶಾರೂಖ್ ಖಾನ್ ಬೌಲ್ಡ್..!

'ಗೂಗ್ಲಿ' ಬಿಡುಗಡೆಯಾದ ಕೆಲವೇ ದಿನಗಳಲ್ಲಿ ವಿಶ್ವದಾದ್ಯಂತ ರಿಲೀಸ್ ಆದ ಸಿನಿಮಾ ಶಾರೂಖ್ ಖಾನ್ ಅಭಿನಯದ 'ಚೆನ್ನೈ ಎಕ್ಸ್ ಪ್ರೆಸ್'. ಬಿಗ್ ಓಪನ್ನಿಂಗ್ ಪಡೆದುಕೊಂಡ 'ಚೆನ್ನೈ ಎಕ್ಸ್ ಪ್ರೆಸ್' ಸಿನಿಮಾ ಮೊದಲ ಮೂರು ದಿನ ಕನ್ನಡ ಪ್ರೇಕ್ಷಕರಿಂದ ಸಖತ್ತಾಗಿ ಪೈಸಾ ವಸೂಲ್ ಮಾಡ್ತು. ಆದ್ರೆ, 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರಕಥೆ 'ಚಿತ್ರಾನ್ನ' ಅಂತ ಕನ್ನಡ ಪ್ರೇಕ್ಷಕರಿಗೆ ಯಾವಾಗ ಗೊತ್ತಾಯ್ತೋ, ಚಿತ್ರಮಂದಿರಗಳು ಖಾಲಿ ಹೊಡಿಯೋಕೆ ಶುರುವಾಯ್ತು. ಇಷ್ಟಾದರೂ, 'ಗೂಗ್ಲಿ' ಮಾತ್ರ ಚಿತ್ರಮಂದಿರಗಳಿಂದ ಎತ್ತಂಗಡಿ ಆಗಲಿಲ್ಲ. ಶಾರೂಖ್ ಅಬ್ಬರ, ಯಶ್ ಮೇಲೆ ಪರಿಣಾಮ ಬೀರಲಿಲ್ಲ. 'ಗೂಗ್ಲಿ' ಚಿತ್ರ ಯಶಸ್ವಿಯಾಗಿ ಸೆಂಚುರಿ ಬಾರಿಸಿತು.

'ರಾಜಹುಲಿ' ಮುಂದೆ ಹೃತಿಕ್ ಸಪ್ಪೆ, ಅಜಿತ್ ಅಷ್ಟಕಷ್ಟೆ..!

'ರಾಜಹುಲಿ' ಮುಂದೆ ಹೃತಿಕ್ ಸಪ್ಪೆ, ಅಜಿತ್ ಅಷ್ಟಕಷ್ಟೆ..!

ನವೆಂಬರ್ 1, 2013 ರಂದು ರಾಜ್ಯಾದ್ಯಂತ ತೆರೆಕಂಡ ಸಿನಿಮಾ 'ರಾಜಾಹುಲಿ'. ಅಂದೇ ಹೃತಿಕ್ ರೋಷನ್ ಅಭಿನಯದ 'ಕ್ರಿಷ್-3' ಚಿತ್ರ ಕೂಡ ತೆರೆಗೆ ಬಂದಿತ್ತು. ಹಾಗೆ, ಒಂದು ದಿನದ ಮುಂಚಿತವಾಗಿ ಅಜಿತ್ ನಟಿಸಿದ 'ಆರಂಭಂ' ಚಿತ್ರ ಬಿಡುಗಡೆಯಾಗಿತ್ತು. ಮೂವರ ಕಲೆಕ್ಷನ್, ಕರ್ನಾಟಕದಲ್ಲಿ ಒಂದು ವಾರದಲ್ಲಿ ಎಷ್ಟು ಗೊತ್ತಾ..? ಬೆಳ್ಳಿತೆರೆ ಮೇಲೆ ಅಪ್ಪಳಿಸಿದ ಮೊದಲ ವಾರದಲ್ಲಿ 'ರಾಜಾಹುಲಿ' ಬಾಚಿದ್ದು ಬರೋಬ್ಬರಿ 7 ಕೋಟಿ. ಇನ್ನೂ 'ಕ್ರಿಷ್ 3' ವಸೂಲಿ ಮಾಡಿದ್ದು 6 ಕೋಟಿಯಾದರೆ, ಅಜಿತ್ ಬರೀ 2 ಕೋಟಿ ಕಮಾಯಿ ಮಾಡಿದ್ದರು. [ಬರ್ತಡೆ ಬಾಯ್ 'ಯಶ್' ಯಶಸ್ಸಿನ ಹಿಂದಿನ ರಹಸ್ಯ]

ಫುಲ್ ಖುಷ್ ಆಗಿದ್ದ ಕೆ.ಮಂಜು!

ಫುಲ್ ಖುಷ್ ಆಗಿದ್ದ ಕೆ.ಮಂಜು!

ಪರಭಾಷಾ ಚಿತ್ರಗಳನ್ನೇ ಮೀರಿಸಿ 'ರಾಜಾಹುಲಿ' ಅಬ್ಬರಿಸಿದ್ದನ್ನ ನೋಡಿ ನಿರ್ಮಾಪಕ ಕೆ.ಮಂಜು ಸಂತೋಷಕ್ಕೆ ಪಾರವೇ ಇರಲ್ಲಿಲ್ಲ. 'ಡ್ರಾಮಾ', 'ಜಾನು', 'ಗೂಗ್ಲಿ' ನಂತ್ರ ನಿರ್ಮಾಪಕರಿಗೆ ಯಶ್ ಬಹುಬೇಡಿಕೆ ಹುಟ್ಟಿಸಿದ್ದು 'ರಾಜಾಹುಲಿ' ಆದ್ಮೇಲೆ. ಅದು ಹೃತಿಕ್ ಮತ್ತು ಅಜಿತ್, ಕರ್ನಾಟಕದಲ್ಲಿ ಮಕಾಡೆ ಮಲಗಿದ ಮೇಲೆ. [ಇನ್ನೆರಡು ವರ್ಷ ರಾಕಿಂಗ್ ಸ್ಟಾರ್ ಯಶ್ ಫುಲ್ ಬಿಜಿ]

ಯಶ್ ಗೆ ಗಜಕೇಸರಿ ಯೋಗ..!

ಯಶ್ ಗೆ ಗಜಕೇಸರಿ ಯೋಗ..!

ಮೊದಲ ಬಾರಿಗೆ ವಿಭಿನ್ನ ಅವತಾರದಲ್ಲಿ ಯಶ್ 'ಗಜಕೇಸರಿ' ಚಿತ್ರದಲ್ಲಿ ಕಾಣಿಸಿಕೊಂಡರು. ಸಖತ್ ಹೈಪ್ ನೊಂದಿಗೆ ಚಿತ್ರ ರಿಲೀಸ್ ಆಯ್ತು. ಅದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕೊಚ್ಚಡಿಯನ್' ಚಿತ್ರದ ಎದುರು. ಇತ್ತ ತೆಲುಗಿನಿಂದ ನಾಗಾರ್ಜುನ ಅಭಿನಯದ 'ಮನಂ' ಚಿತ್ರ ಕೂಡ ಅಖಾಡಕ್ಕೆ ಇಳಿದಿತ್ತು. ಇಬ್ಬರ ಮಧ್ಯೆ ಯಶ್ ಗೆ 'ಗಜಕೇಸರಿ' ಯೋಗ ಲಭಿಸಿತು. [ಬಾಕ್ಸ್ ಆಫೀಸ್ ನಲ್ಲಿ 'ರಾಮಾಚಾರಿ' ತಕಧಿಮಿತ]

ರಜನಿ ಕಮಾಲ್ ನಡಿಯಲೇ ಇಲ್ಲ..!

ರಜನಿ ಕಮಾಲ್ ನಡಿಯಲೇ ಇಲ್ಲ..!

ವರ್ಷಗಳ ನಂತ್ರ ಸೂಪರ್ ಸ್ಟಾರ್ ರಜನಿಕಾಂತ್ ತೆರೆಗೆ ಬಂದರೂ 'ಕೊಚ್ಚಡಿಯನ್' ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯನ್ನ ನಾವು ನಿಮಗೆ ಬಿಡಿಸಿ ಹೇಳಬೇಕಾಗಿಲ್ಲ. ಮೊದಲ ದಿನ ಪ್ರೇಕ್ಷಕರು ಥಿಯೇಟರ್ ಗಳಿಗೆ ನುಗ್ಗಿದ್ದಷ್ಟೇ. ಆಮೇಲೆ 'ಕೊಚ್ಚಡಿಯನ್' ಎಲ್ಲಾ ಕಡೆಯಿಂದ ಹೇಗೆ ಎತ್ತಂಗಡಿ ಆಯ್ತೋ ದೇವರೇ ಅಲ್ಲ. ನಷ್ಟ ಅನುಭವಿಸಿದ 'ಕೊಚ್ಚಡಿಯನ್' ಚಿತ್ರದ ನಡುವೆ 'ಮನಂ' ಲೆಕ್ಕದಲ್ಲಿ ಪರ್ವಾಗಿಲ್ಲ. ಇಬ್ಬರು ಸ್ಟಾರ್ ನಟರ ಮಧ್ಯೆ ಕರ್ನಾಟಕ ಬಾಕ್ಸ್ ಆಫೀಸ್ ಸಾಮ್ರಾಜ್ಯದಲ್ಲಿ ಸಾಮ್ರಾಟನಾಗಿ ಮೆರೆದದ್ದು ಯಶ್. ಅದು ಮೊದಲ ಮೂರು ದಿನಗಳಲ್ಲಿ 6 ಕೋಟಿ ಕಲೆಕ್ಷನ್ ಮಾಡುವ ಮೂಲಕ.

'ರಾಮಾಚಾರಿ'ಗಿತ್ತು ರಜನಿ 'ಲಿಂಗಾ', ಆಮೀರ್ 'ಪಿಕೆ', 'ಐ' ಭಯ..!

'ರಾಮಾಚಾರಿ'ಗಿತ್ತು ರಜನಿ 'ಲಿಂಗಾ', ಆಮೀರ್ 'ಪಿಕೆ', 'ಐ' ಭಯ..!

ಇನ್ನೂ ಕಳೆದ ಡಿಸೆಂಬರ್ ನಲ್ಲಿ ತೆರೆಕಂಡ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರಕ್ಕೆ ಇದ್ದ ಸವಾಲ್ ಒಂದೆರಡಲ್ಲ. ಡಿಸೆಂಬರ್ 12 ಕ್ಕೆ ರಜನಿಕಾಂತ್ ಅಭಿನಯದ 'ಲಿಂಗಾ' ಚಿತ್ರ ರಿಲೀಸ್ ಆಗಿತ್ತು. ಅದಾದ 13 ದಿನಕ್ಕೆ 'ರಾಮಾಚಾರಿ' ತೆರೆಗೆ ಅಪ್ಪಳಿಸಬೇಕಿತ್ತು. 'ಲಿಂಗಾ' ಬೆನ್ನಲ್ಲೇ ರಿಲೀಸ್ ಆದ ಆಮೀರ್ ಖಾನ್ ಅಭಿನಯದ 'ಪಿಕೆ' ಚಿತ್ರದಿಂದಲೂ 'ರಾಮಾಚಾರಿ' ರೇಸ್ ಮಾಡಬೇಕಿತ್ತು. ಇದೆಲ್ಲದರ ಜೊತೆ ಶಂಕರ್ ನಿರ್ದೇಶನದ ವಿಕ್ರಮ್ ಅಭಿನಯದ 'ಐ' ಚಿತ್ರದ ಭಯ ಬೇರೆ. ಇಷ್ಟೆಲ್ಲಾ ಇದ್ದರೂ, 'ರಾಮಾಚಾರಿ' ಈಗಲೂ ನಂಬರ್ ಒನ್. [ವಿಷ್ಣು ಅಭಿಮಾನಿಗಳೇ, 'ರಾಮಾಚಾರಿ' ನೋಡಲು ಮರೆಯದಿರಿ..]

ಲೆಕ್ಕ ಇಲ್ಲಿದೆ ನೋಡಿ...

ಲೆಕ್ಕ ಇಲ್ಲಿದೆ ನೋಡಿ...

ರಿಲೀಸ್ ಆದ ಹತ್ತು ದಿನಗಳಲ್ಲಿ 'ಪಿಕೆ' ಚಿತ್ರ ಕಲೆಕ್ಟ್ ಮಾಡಿದ್ದು 16 ಕೋಟಿ. ಆದ್ರೆ, ಒಂದೇ ವಾರದಲ್ಲಿ 12 ಕೋಟಿ ಕಲೆಕ್ಟ್ ಮಾಡಿ ಬಾಕ್ಸ್ ಆಫೀಸ್ ನ ಚಿಂದಿ ಉಡಾಯಿಸಿತು 'ರಾಮಾಚಾರಿ'. ಇಡೀ ಕರ್ನಾಟಕದಲ್ಲಿ ಎಲ್ಲೇ ನೋಡಿದ್ರೂ, 'ಲಿಂಗಾ', 'ಪಿಕೆ' ಮತ್ತು 'ಐ'ಗೆ ಹೋಲಿಸದರೆ 'ರಾಮಾಚಾರಿ' ಲೀಡಿಂಗ್ ನಲ್ಲಿದ್ದಾನೆ. ರಜನಿ 'ಲಿಂಗಾ' ಲಾಸ್ ಅನ್ನುವುದಕ್ಕೆ ವಿತರಕರೇ ಸಾಕ್ಷಿ. ಇನ್ನೂ 'ಐ' ಹವಾ ಮೊದಲ ವಾರಾಂತ್ಯಕ್ಕೆ ಮಾತ್ರ ಸೀಮಿತವಾಯ್ತು. [ಯಶ್ 'ರಾಮಾಚಾರಿ' ಮುಂದೆ ಕೇಕೆ ಹಾಕಲಿಲ್ಲ ಆಮೀರ್ 'ಪಿಕೆ']

ಯಶ್ ಪ್ರಭಾವವೋ..? ಚಿತ್ರಗಳಲ್ಲಿದ್ದ ಕಿಕ್ಕೋ..?

ಯಶ್ ಪ್ರಭಾವವೋ..? ಚಿತ್ರಗಳಲ್ಲಿದ್ದ ಕಿಕ್ಕೋ..?

ಇಷ್ಟೆಲ್ಲಾ ನೋಡಿದ್ಮೇಲೆ, ಕನ್ನಡ ನಿರ್ಮಾಪಕರಿಗೆ ಯಶ್ ಮೇಲೆ ಸಿಕ್ಕಾಪಟ್ಟೆ ಭರವಸೆ ಬಂದುಬಿಟ್ಟಿದೆ. ಯಶ್ ಚಿತ್ರಗಳ ಮುಂದೆ ಪರಭಾಷೆ ಚಿತ್ರಗಳು ಮಂಡಿಯೂರುತ್ತಿವೆ ಅಂತ ಯಶ್ ಕಾಲ್ ಶೀಟ್ ಗಾಗಿ ಕ್ಯೂ ನಿಂತಿದ್ದಾರೆ. ಇದು ಯಶ್ ಮ್ಯಾಜಿಕ್ಕೋ...ಅಥವಾ ಚಿತ್ರಗಳಲ್ಲಿದ್ದ ಗಿಮಿಕ್ಕೋ...ಗೊತ್ತಿಲ್ಲ. ಒಟ್ನಲ್ಲಿ ಯಶ್ ಚಿತ್ರಗಳಿಗೆ ಪ್ರೇಕ್ಷಕರು ಜೈಕಾರ ಹಾಕಿದ ಪರಿಣಾಮ ಇದು.

ಸ್ಯಾಂಡಲ್ ವುಡ್ 'ಬಾಕ್ಸ್ ಆಫೀಸ್ ಸುಲ್ತಾನ್'

ಸ್ಯಾಂಡಲ್ ವುಡ್ 'ಬಾಕ್ಸ್ ಆಫೀಸ್ ಸುಲ್ತಾನ್'

ಸತತವಾಗಿ ಹಿಟ್ ಮೇಲೆ ಹಿಟ್ ಕೊಡುತ್ತಿರುವ ಯಶ್, ಸ್ಯಾಂಡಲ್ ವುಡ್ ನ ನೂತನ 'ಬಾಕ್ಸ್ ಆಫೀಸ್' ಸುಲ್ತಾನ್ ಆಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾಲಾಗಿದ್ದ ಈ ಬಿರುದು, ಇದೀಗ ಯಶ್ ಗೆ ಸೇರಿದೆ. ['ರಾಮಾಚಾರಿ' ನಿರ್ದೇಶಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..!]

More from Filmibeat

English summary
Rocking Star Yash is branded as Sandalwood's New Box Office Sultan. Yash movies have been affecting the collection's of Hindi, Tamil and Telugu movies. Here is the detailed report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X