Yash Next Movie After KGF 2: ಕೆಜಿಎಫ್ ಆಯ್ತು, ಯಶ್ ಮುಂದಿನ ನಡೆ ಏನು? ಯಾವ ಚಿತ್ರ? ಯಾವ ನಿರ್ದೇಶಕ?

ರಾಕಿಂಗ್ ಸ್ಟಾರ್ ಯಶ್‌ರನ್ನು ಸೆಲ್ಫ್ ಮೇಡ್ ಸ್ಟಾರ್ ಅಂತಲೇ ಕರೆಯುತ್ತಾರೆ. ಯಾಕೆಂದರೆ ಯಾವುದೇ ಗಾಡ್ ಫಾದರೆ ಇಲ್ಲದೆ. ಯಾರ ದೊಡ್ಡ ಮಟ್ಟದ ಸಹಾಯವೂ ಇಲ್ಲದೆ ಬೆಳೆದು ಬಂದ ನಟ ಯಶ್. ಈಗ ಕನ್ನಡ ಚಿತ್ರರಂಗದಲ್ಲಿ ಉತ್ತುಂಗದಲ್ಲಿ ಇರುವ ಸ್ಟಾರ್ ನಟ. 'ಕೆಜಿಎಫ್' ಎನ್ನುವ ಚಿತ್ರದ ಮೂಲಕ ಹೊಸ ಇತಿಹಾಸ ಹುಟ್ಟು ಹಾಕಿದ ನಟ ಯಶ್.

'ಕೆಜಿಎಫ್' ಎನ್ನುವ ಹೆಸರು ಯಶ್ ಜೀವನದಲ್ಲಿ ಅತಿ ಮುಖ್ಯ. ಯಶ್ ಯಾರು ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದು ಇದೇ 'ಕೆಜಿಎಫ್'. ಈ ಚಿತ್ರ ಶುರುವಾದಾಗಿನಂದಲೂ ಇಲ್ಲಿ ತನಕ ಒಂದಿಷ್ಟು ಕ್ರೇಜ್ ಕಡಿಮೆ ಆಗಿಲ್ಲ. ಈ ಕೆಜಿಎಫ್ 2 ಬರುತ್ತಿದೆ. ಕೆಜಿಎಫ್ ಮೊದಲ ಭಾಗ ಮಾಡಿದ ಮೋಡಿ, ಭಾಗ ಎರಡರಲ್ಲೂ ನೋಡಲೇ ಬೇಕು ಎನ್ನುವ ಕುತೂಹಲ ಹುಟ್ಟು ಹಾಕಿದೆ.

ಜೊತೆಗೆ ಯಶ್ ಬಗ್ಗೆ ಈಗ ದೊಡ್ಡದೊಂದು ಪ್ರಶ್ನೆ ಎದ್ದಿದೆ. ಎಲ್ಲೆಡೆ ಈ ಪ್ರಶ್ನೆ ಹೆಚ್ಚಾಗಿ ಚರ್ಚೆ ಆಗುತ್ತಲಿದೆ. ಅದು ಮತ್ತೇನು ಅಲ್ಲ, ನಟ ಯಶ್ ಮುಂದಿನ ನಡೆ ಏನು ಎನ್ನುವುದು. 'ಕೆಜಿಎಫ್ 1' ರಿಲೀಸ್ ವೇಳೆ, ಯಶ್ ಮುಂದಿನ ಚಿತ್ರ 'ಕೆಜಿಎಫ್ 2' ಎನ್ನುವುದು ಗೊತ್ತಾಗಿತ್ತು. ಆದರೆ ಈಗ ಯಶ್ ಮುಂದಿನ ಹೆಜ್ಜೆಯ ಬಗ್ಗೆ ಕುತೂಹಲ ಸೃಷ್ಟಿ ಆಗಿದೆ.

'ಕೆಜಿಎಫ್ 2' ಬಳಿಕ ಯಶ್ ಏನ್ ಮಾಡ್ತಾರೆ?

'ಕೆಜಿಎಫ್ 2' ಬಳಿಕ ಯಶ್ ಏನ್ ಮಾಡ್ತಾರೆ?

ನಟ ರಾಕಿಂಗ್ ಯಶ್ ಈಗ 'ಕೆಜಿಎಫ್' ಅಲೆಯಲ್ಲಿ ತೇಲುತ್ತಾ ಇದ್ದಾರೆ. ಇನ್ನೇನು ಏಪ್ರಿಲ್ 14ಕ್ಕೆ 'ಕೆಜಿಎಫ್ 2' ಚಿತ್ರ ಕೂಡ ರಿಲೀಸ್ ಆಗುತ್ತಿದೆ. ಆದರೆ ಯಶ್ ಮುಂದಿನ ಚಿತ್ರ ಇನ್ನು ಕೂಡ ಪ್ರಕಟ ಆಗಿಲ್ಲ. ಹೀಗಾಗಿ ಯಾವ ಸಿನಿಮಾ ಮಾಡುತ್ತಾರೆ? ಅವರ ಮುಂದಿನ ನಡೆ ಏನು ಎನ್ನುವ ಬಗ್ಗೆ ಎಲ್ಲೂ ಯಶ್ ಹೇಳಿಕೊಂಡಿಲ್ಲ. ಸಾಮಾನ್ಯವಾಗಿ ಸ್ಟಾರ್ ನಟರು ಒಂದು ಚಿತ್ರ ರಿಲೀಸ್ ಅಗುವ ಮುನ್ನವೇ ಮತ್ತೊಂದು ಚಿತ್ರದಲ್ಲಿ ಬ್ಯುಸಿ ಆಗಿ ಬಿಡುತ್ತಾರೆ. ಆದರೆ ಯಶ್ ಮಾತ್ರ ಈ ವಿಚಾರದಲ್ಲಿ ಸೈಲೆಂಟ್ ಆಗಿ ಬಿಟ್ಟಿದ್ದಾರೆ.

ಯಶ್‌ಗೆ ನರ್ತನ್ ಚಿತ್ರ ಮಾಡುತ್ತಾರಾ?

ಯಶ್‌ಗೆ ನರ್ತನ್ ಚಿತ್ರ ಮಾಡುತ್ತಾರಾ?

ಇನ್ನು ಇತ್ತೀಚೆಗೆ ನಟ ಯಶ್ ಮುಂದಿನ ಚಿತ್ರದ ಬಗ್ಗೆ ಒಂದಷ್ಟು ಸುದ್ದಿಗಳು ಹಬ್ಬಿದ್ದವು. ಯಶ್‌ಗೆ ನಿರ್ದೇಶಕ ನರ್ತನ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಕೂಡ ಅನುಮಾನ ಎನ್ನುವ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿದೆ. ಮಫ್ತಿ ನಿರ್ದೇಶಕ ನರ್ತನ್ ನಿರ್ದೇಶನದಲ್ಲೂ ಕೂಡ ಯಶ್ ಅಭಿನಯಿಸುತ್ತಿಲ್ಲ ಎನ್ನುವ ಸುದ್ದಿ ಹಬ್ಬಿದೆ. ಈ ಸುದ್ದಿಯನ್ನು ಯಶ್ ಅಧಿಕೃತ ಮಾಡುವ ಮೊದಲೆ, ಚಿತ್ರವನ್ನು ಕೈ ಬಿಟ್ಟದ್ದಾರೆ ಎನ್ನಲಾಗಿದೆ. ಇನ್ನು ಈ ಹಿಂದೆ 'ಕೆಜಿಎಫ್‌'ಗಾಗಿ 'ಕಿರಾತಕ 2' ಚಿತ್ರವನ್ನು ಕೂಡ ಯಶ್ ಕೈ ಬಿಟ್ಟಿದ್ದರು.

ಹೇಗಿರಲಿದೆ ಯಶ್ ಮುಂದಿನ ಚಿತ್ರ?

ಹೇಗಿರಲಿದೆ ಯಶ್ ಮುಂದಿನ ಚಿತ್ರ?

ಈಗ ಯಶ್ ಇರುವ ಜಾಗವನ್ನು ನೋಡಿದರೆ. ಒಂದು ಅವರು ಅಲ್ಲೇ ಇರಬೇಕು, ಅಥವಾ ಅದಕ್ಕಿಂತ ಮೇಲೆ ಹೋಗಬೇಕು. ಅಂದರೆ ಕೆಜಿಎಫ್ ಅಂತಹ ಬಿಗ್ ಹಿಟ್ ಕೊಟ್ಟ ಬಳಿಕ ಯಶ್, ಅದೇ ರೀತಿ ದೊಡ್ಡ ಚಿತ್ರಗಳನ್ನು ಮಾಡಬೇಕಾಗುತ್ತದೆ. ಹಾಗಾಗಿ ಯಶ್ ಮುಂದಿನ ಎಲ್ಲಾ ಚಿತ್ರಗಳು ಕೂಡ ಪ್ಯಾನ್ ಇಂಡಿಯ ಚಿತ್ರಗಳು ಆಗಲಿವೆಯಾ ಎನ್ನುವ ಪ್ರಶ್ನೆ ಮೂಡಿದೆ. ಯಾಕೆಂದರೆ ಯಶ್‌ಗೆ ಬಾಲಿವುಡ್‌ ಸೇರಿದಂತೆ ಸೌತ್ ಚಿತ್ರರಂಗದಲ್ಲೂ ಬೇಡಿಕೆ ಹೆಚ್ಚಾಗಿದೆ.

ಯಶ್ ಕನ್ನಡ ಚಿತ್ರ ಮಾಡುವುದು ಅನುಮಾನ!

ಯಶ್ ಕನ್ನಡ ಚಿತ್ರ ಮಾಡುವುದು ಅನುಮಾನ!

ಈಗ ನಟ ಯಶ್‌ಗೆ ಪ್ಯಾನ್ ಇಂಡಿಯಾ ಬಿಟ್ಟರೆ ಬೇರೆ ದಾರಿ ಇಲ್ಲ ಎಂದು ಹೇಳ ಬಹುದು. ಯಾಕೆಂದರೆ 'ಕೆಜಿಎಫ್' ಮೂಲಕ ಯಶ್ ಎಲ್ಲೆಡೆ ರೀಚ್ ಆಗಿದ್ದಾರೆ. ಅವರ ಒಂದು ಸಿನಿಮಾ ಬರುತ್ತೆ ಅಂದರೆ ಪ್ಯಾನ್ ಇಂಡಿಯಾ ಅಭಿಮಾನಿಗಳು ಕಾಯುತ್ತಾರೆ. ಹಾಗಾಗಿ ಅವರು ಕೇವಲ ಕನ್ನಡಕ್ಕೆ ಸೀಮಿತ ಆಗಿ, ಕನ್ನಡ ಚಿತ್ರವನ್ನು ಮಾತ್ರ ಮಾಡುವ ಸಾಧ್ಯತೆ ಕಡಿಮೆ. ಪ್ಯಾನ್ ಇಂಡಿಯಾ ಚಿತ್ರಗಳನ್ನು ಮಾಡುವ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ಯಶ್ ಮುಂದಿನ ಚಿತ್ರವನ್ನು ಯಾರು ನಿರ್ಮಾಣ ಮಾಡುತ್ತಾರೆ? ಯಾರು ನಿರ್ದೇಶನ ಮಾಡುತ್ತಾರೆ? ಎನ್ನುವ ಕುತೂಹಲ ಮೂಡಿದೆ. ಅದಕ್ಕೆ ಬಹುಶಃ 'ಕೆಜಿಎಫ್ 2' ಚಿತ್ರ ರಿಲೀಸ್ ಆದ ಬಳಿಕ ಉತ್ತರ ಸಿಗಲಿದೆ.

More from Filmibeat

English summary
After Kgf 2 Which Is Yash Next Movie, Who Will Produce And Direct Yash After Kgf 2
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X