twitter
    For Quick Alerts
    ALLOW NOTIFICATIONS  
    For Daily Alerts

    ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಅತಿಥಿಯಾಗಿ ಹೋಗಿದ್ದ ಯಶ್: ಆ ದಿನ ನೆನೆದ ಹಳೇ ವಿದ್ಯಾರ್ಥಿ!

    |

    ಯಶ್ ಈಗ ಕೇವಲ ಸ್ಟಾರ್ ಆಗಿ ಉಳಿದಿಲ್ಲ. ರಾಕಿಂಗ್ ಸ್ಟಾರ್ ಈಗ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್. ಇನ್ನು ಯಶ್ ಒಂದು ಭಾಷೆಗಾಗಿ ಸಿನಿಮಾ ಮಾಡಲ್ಲ. ಬಹುಭಾಷೆಯ ಸಿನಿಮಾಗಳಲ್ಲಿಯೇ ನಟಿಸುತ್ತಾರೆ. ಯಶ್ ಹಂತ ಹಂತವಾಗಿ ಬೆಳೆದು ನಿಂತ ಪರಿಗೆ ಸ್ಯಾಂಡಲ್‌ವುಡ್ ಬೆರೆಗಾಗಿದೆ. ಈ ಮಧ್ಯೆ 'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದಂತೆ ಹಳೇ ನೆನಪುಗಳು ಚಿಗುರೊಡೆಯುತ್ತಿವೆ. ಯಶ್ ಜೊತೆಗಿನ ಹಳೆಯ ದಿನಗಳನ್ನು ಕನ್ನಡಿಗರು ಮತ್ತೆ ನೆನಪಿಸಿಕೊಳ್ಳಲು ಆರಂಭಿಸಿದ್ದಾರೆ.

    'ಕೆಜಿಎಫ್ 2' ವಿಶ್ವದಾದ್ಯಂತ ಹೆಸರು ಮಾಡಿದೆ. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಸಾವಿರಾರು ಕೋಟಿ ಲೂಟಿ ಮಾಡಿ, ಇನ್ನೂ ಮುನ್ನುಗ್ಗುತ್ತಲೇ ಇದೆ. ಇದು ಯಶ್ ಅಭಿಮಾನಿಗಳ ಹರ್ಷಕ್ಕೆ ಕಾರಣವಾಗಿದ್ದರೆ, ಇನ್ನೊಂದು ಕಡೆ ಯಶ್ ಬೆಳೆದು ಬಂದ ರೀತಿ ಕಂಡು ಜನರು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ.

    ಕೆಜಿಎಫ್‌ 2 ಮತ್ತು RRR ಸಿನಿಮಾ ಒಟಿಟಿ ರಿಲೀಸ್‌ಗೂ ಮುನ್ನ ಆನ್‌ಲೈನ್‌ನಲ್ಲಿ ಲೀಕ್ಕೆಜಿಎಫ್‌ 2 ಮತ್ತು RRR ಸಿನಿಮಾ ಒಟಿಟಿ ರಿಲೀಸ್‌ಗೂ ಮುನ್ನ ಆನ್‌ಲೈನ್‌ನಲ್ಲಿ ಲೀಕ್

    ಯಶ್ ಸೂಪರ್‌ಸ್ಟಾರ್ ಆಗುತ್ತಿದ್ದಂತೆ ಅವರೊಂದಿಗೆ ಸವಿನೆನಪುಗಳನ್ನು ಹೊರಬರುತ್ತಿವೆ. ಯಶ್ ಜೊತೆ ಕಳೆದ ಹಳೆಯ ದಿನಗಳನ್ನು, ಅವರೊಂದಿಗೆ ಆಡಿದ ಮಾತನ್ನು ಮೆಲುಕು ಹಾಕಲು ಆರಂಭಿಸಿದ್ದಾರೆ. ಇಂತಹದ್ದೊಂದು ಮಧುರ ಕ್ಷಣವನ್ನು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂದೀಪ್ ಸಾಗರ್ ಎಂಬುವವರು ಫೇಸ್‌ಬುಕ್‌ನಲ್ಲಿ ಫೋಟೊ ಸಮೇತ ಹಂಚಿಕೊಂಡಿದ್ದಾರೆ.

    (Image credit: Sandeep Sagar/ facebook )

    ಸಹ್ಯಾದ್ರಿ ಕಾಲೇಜಿನಲ್ಲಿ ಯಶ್ ಅತಿಥಿ

    ಸಹ್ಯಾದ್ರಿ ಕಾಲೇಜಿನಲ್ಲಿ ಯಶ್ ಅತಿಥಿ

    ಸುಮಾರು 12 ವರ್ಷ ಹಿಂದಿನ ಸವಿನೆನಪು. ಆಗಿನ್ನೂ ಯಶ್ ಸ್ಟಾರ್ ಕೂಡ ಆಗಿರಲಿಲ್ಲ. ಧಾರಾವಾಹಿ ಹಾಗೂ ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರ ಮಾಡಿದ್ದರು. ಶಶಾಂಕ್ ನಿರ್ದೇಶನದ 'ಮೊಗ್ಗಿನ ಮನಸ್ಸು' ಸಿನಿಮಾದಲ್ಲಿ ಯಶ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅಲ್ಲಿಂದ ಸಿನಿಪ್ರಿಯರಿಗೆ ಯಶ್ ಪರಿಚಯ ಆಗಲು ಆರಂಭ ಆಗಿತ್ತು. ಇದೇ ವೇಳೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ ಮುಖಂಡರಾಗಿದ್ದ ಸಂದೀಪ್ ಸಾಗರ್ ಕಾಲೇಜಿನ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಉದ್ಘಾಟನೆಗೆ ಯಶ್ ಕರೆಸಲು ಮುಂದಾಗಿದ್ದರು. ಆ ಕ್ಷಣವನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    25ನೇ ದಿನಕ್ಕೆ ರಾಜಮೌಳಿಯ RRR ಕಲೆಕ್ಷನ್‌ಗೆ ಸೆಡ್ಡು ಹೊಡೆದ 'KGF 2': ಗಳಿಕೆ ಬೇಟೆ ಇನ್ನೂ ನಿಂತಿಲ್ಲ!25ನೇ ದಿನಕ್ಕೆ ರಾಜಮೌಳಿಯ RRR ಕಲೆಕ್ಷನ್‌ಗೆ ಸೆಡ್ಡು ಹೊಡೆದ 'KGF 2': ಗಳಿಕೆ ಬೇಟೆ ಇನ್ನೂ ನಿಂತಿಲ್ಲ!

    ಯಶ್ ಜೊತೆ ಹಳೆ ವಿದ್ಯಾರ್ಥಿಯ ನೆನಪು

    ಯಶ್ ಜೊತೆ ಹಳೆ ವಿದ್ಯಾರ್ಥಿಯ ನೆನಪು

    2010ರಲ್ಲಿ ಸಹ್ಯಾದ್ರಿ ಕಾಲೇಜಿನ ಪ್ರತಿಕೋದ್ಯಮದ ವಿದ್ಯಾರ್ಥಿಯಾಗಿದ್ದ ಸಂದೀಪ್ ಸಾಗರ್ ಕಾರ್ಯಕ್ರಮಕ್ಕೆ ಯಶ್ ಕರೆತರಲು ಮುಂದಾಗಿದ್ದರು. ಆಗ ಅವರ ಕೈಗೆ ಯಶ್ ಸಿಕ್ಕದಿದ್ದು ಹೇಗೆ ಎಂಬುದನ್ನು ಫೇಸ್‌ಬುಕ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. "ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ‌ ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಉದ್ಘಾಟನೆಗೆ ಪ್ರತಿಬಾರಿ ಒರ್ವ ಪ್ರಸಿದ್ಧ ವ್ಯಕ್ತಿ ಅಥವಾ ನಟನನ್ನು ಕರೆಸುವುದು ಪ್ರತೀತಿ. 2010 ರಲ್ಲಿ ನಾನು ಮುಖಂಡನಾಗಿ ಆಯ್ಕೆಯಾದಾಗ ಆ ಜವಾಬ್ದಾರಿ ನನ್ನ ಮೇಲೆ ಬಿದ್ದಿತ್ತು. ಯಾರನ್ನು ಕರೆಯಬೇಕು ಎಂದು ಸಾಕಷ್ಟು ಪ್ರಯತ್ನ ಮಾಡಿದ ನಂತರ ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ಪಾಲಾಕ್ಷಿ ಅವರ ಸಹಾಯದಿಂದ ನಟ ಯಶ್ ಪರಿಚಯವಾಯಿತು. ಆಗಿನ್ನು 'ಮೊಗ್ಗಿನ ಮನಸ್ಸು' ಚಿತ್ರ ಮಾಡಿದ್ದ ಯಶ್ ಅಷ್ಟೇನು ಪ್ರಸಿದ್ಧರಾಗಿರಲಿಲ್ಲ. ನಮ್ಮ‌ ಒಂದು ಕರೆಗೆ ಕಾಲೇಜಿಗೆ ಬರುವುದಾಗಿ ಒಪ್ಪಿಕೊಂಡಿದ್ದರು. ಬೆಳೆಯುತ್ತಿದ್ದ ನಟನಾಗಿದ್ದರಿಂದ ಇವೆಲ್ಲಾ ಒಳ್ಳೆಯ ಅವಕಾಶ ಎಂದಿದ್ದರು. ರಾತ್ರಿ ಎರಡು ಘಂಟೆಗೆ ಶಿವಮೊಗ್ಗಕ್ಕೆ ಬಂದಾಗ ನಾವೇ ರೂಮ್ ಮಾಡಿಕೊಟ್ಟು ಒಂದಿಷ್ಟು ಚರ್ಚೆ ಮಾಡುತ್ತಾ ಕುಳಿತಾಗ ಅವರೂ ಪತ್ರಿಕೋದ್ಯಮ ವಿದ್ಯಾರ್ಥಿ ಎನ್ನುವುದು ತಿಳಿದಿತ್ತು. ಮರುದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯಶ್ ಬಹಳ ಸಮಯ ನಮ್ಮ ಜೊತೆ ಕಳೆದು ಎಲ್ಲರನ್ನು ರಂಜಿಸಿದ್ದರು." ಎಂದು ಆ ದಿನಗಳನ್ನು ನೆನೆದಿದ್ದಾರೆ.

    ಅಂದು ಹಣ ಪಡೆದಿರಲಿಲ್ಲ ಯಶ್

    ಅಂದು ಹಣ ಪಡೆದಿರಲಿಲ್ಲ ಯಶ್

    ದೂರದೂರಿಂದ ಅತಿಥಿಯಾಗಿ ಬರುವವರಿಗೆ ಖರ್ಚನ್ನು ನೀಡುತ್ತಿದ್ದರು. ಅಂತಯೇ ಯಶ್‌ಗೂ ವಿದ್ಯಾರ್ಥಿಗಳು ಅಂದು ಹಣ ನೀಡಲು ಮುಂದಾಗಿದ್ದರು. ಆದರೆ, ಯಶ್ ಪಡೆಯಲಿಲ್ಲವಂತೆ. "ಯಾರೇ ಅತಿಥಿಯನ್ನು ಕರೆದುಕೊಂಡು ಬಂದರೂ ಅವರಿಗೆ ಟಿಎ,‌ ಡಿಎ ಕೊಡುವ ಪ್ರತೀತಿ ಇತ್ತು. ಯಶ್ ಅದನ್ನು ಸಹ ಪಡೆಯಲು ಹಿಂದೇಟು ಹಾಕಿದ್ದರು. ಆಗ ನಮ್ಮ‌ ಕಾಲೇಜಿನದ್ದ ಯಾರಿಗೂ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಶ್ ಬೆಳೆಯುತ್ತಾರೆ ಎಂದು ಊಹಿಸಿರಲಿಲ್ಲ.‌ ಯಶ್ ಅವರ ಸರಳತೆ, ಕಠಿಣ ಪರಿಶ್ರಮವೇ ಇಂದು ದೇಶ ವಿದೇಶದಲ್ಲಿ ಒಳ್ಳೆಯ ಹೆಸರನ್ನು ಗಳಿಸಲು ಸಾಧ್ಯವಾಗಿದೆ ಎನ್ನುವುದು ನನ್ನ ಅಭಿಪ್ರಾಯ." ಎಂದು ಹಳೆ ವಿದ್ಯಾರ್ಥಿ ಸಂದೀಪ್ ಸಾಗರ್ ಬರೆದುಕೊಂಡಿದ್ದಾರೆ.

    'KGF 2' 25 ದಿನಗಳ ಸಂಭ್ರಮ: ಈ 24 ದಿನಗಳಲ್ಲಿ ವಿಶ್ವದಾದ್ಯಂತ ಗಳಿಸಿದ್ದೆಷ್ಟು?'KGF 2' 25 ದಿನಗಳ ಸಂಭ್ರಮ: ಈ 24 ದಿನಗಳಲ್ಲಿ ವಿಶ್ವದಾದ್ಯಂತ ಗಳಿಸಿದ್ದೆಷ್ಟು?

    ದಶಕದಲ್ಲೇ ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದ ಯಶ್

    ದಶಕದಲ್ಲೇ ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದ ಯಶ್

    ಕಿರುತೆರೆಯಿಂದ ವೃತ್ತಿ ಆರಂಭಿಸಿದ್ದ ಯಶ್ ಈಗ ಸೂಪರ್‌ಸ್ಟಾರ್ ಆಗಿ ಬೆಳೆದಿದ್ದಾರೆ. ಅದೂ ಕರ್ನಾಟಕಕ್ಕೆ ಅಷ್ಟೇ ಅಲ್ಲ. ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿದ್ದು, ವಿಶ್ವದೆಲ್ಲಡೆ ಚರ್ಚೆಯಾಗುವಷ್ಟು ಬೆಳೆದು ನಿಂತಿದ್ದಾರೆ. 'ಕೆಜಿಎಫ್ 2' ಒಂದೇ ಒಂದು ಸಿನಿಮಾ ಯಶ್ ವೃತ್ತಿ ಬದುಕನ್ನೇ ಬದಲಾಯಿಸಿದೆ.

    English summary
    Yash Visited As Guest for Sahyadri College Shivamogga Cultural Wing inaguration Old Student shares Photos, Know More.
    Tuesday, May 10, 2022, 9:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X