ಶಿರಡಿಗೆ ದಿಢೀರ್ ಭೇಟಿ ನೀಡಿದ ನಟ ಯಶ್
Recommended Video

ಕನ್ನಡ ನಟ ಯಶ್ ಶಿರಡಿಗೆ ಧಿಡೀರ್ ಭೇಟಿ | FILMIBEAT KANNADA
ನಟ ಯಶ್ ಸದ್ಯ ತಮ್ಮ ಮಹಾತ್ವಾಕಾಂಕ್ಷೆಯ ಸಿನಿಮಾ 'ಕೆ ಜಿ ಎಫ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಶಿರಡಿಗೆ ಭೇಟಿ ನೀಡಿ ಸಾಯಿಬಾಬರ ದರ್ಶನ ಮಾಡಿದ್ದಾರೆ.
ಯಶ್ ಶಿರಡಿಗೆ ಹೋಗುವುದು ಯಾರಿಗೂ ತಿಳಿದಿರಲಿಲ್ಲ. ಇದೊಂದು ದಿಢೀರ್ ಭೇಟಿಯಾಗಿತ್ತು. ದೇವಸ್ಥಾನಕ್ಕೆ ಹೋಗಬೇಕು ಅಂದ್ರೆ ಒಂದು ಒಳ್ಳೆಯ ಸಮಯ ಕೂಡಿ ಬರಬೇಕು ಅಂತ್ತಾರೆ ಅದೇ ರೀತಿ ಬಹಳ ದಿನಗಳಿಂದ ಶಿರಡಿಗೆ ಹೋಗಬೇಕು ಎನ್ನುವ ಯಶ್ ಆಸೆ ಈಗ ನೆರವೇರಿದೆ.

'ಕೆ ಜಿ ಎಫ್' ಸಿನಿಮಾದ ನಿರ್ಮಾಪಕ ವಿಜಯ್ ಕಿರಂದೂರು ಹಾಗೂ ಲಕ್ಕಿ ಚಿತ್ರದ ನಿರ್ದೇಶಕ ಸೂರಿ ಇಬ್ಬರು ಯಶ್ ಅವರ ಜೊತೆಗೆ ಶಿರಡಿಗೆ ಭೇಟಿ ನೀಡಿದ್ದರು.

ಒಂದು ಕಡೆ 'ಕೆ ಜಿ ಎಫ್' ಸಿನಿಮಾ ಬಿಡುಗಡೆ ಹತ್ತಿರಕ್ಕೆ ಬರುತ್ತಿದೆ. ಮತ್ತೊಂದು ಕಡೆ ಯಶ್ ಹಾಗೂ ರಾಧಿಕಾ ದಂಪತಿ ಅಪ್ಪ, ಅಮ್ಮನಾಗುವ ಸಮಯ ಕೂಡ ಬರುತ್ತದೆ. ಈ ಶುಭ ಘಳಿಗೆಗಳ ಮುನ್ನ ಯಶ್ ಬಾಬರ ಆಶೀರ್ವಾದ ಪಡೆದಿದ್ದಾರೆ.
English summary
Kannada actor Yash visited Shirdi Sai Baba temple


Click it and Unblock the Notifications