For Quick Alerts
  ALLOW NOTIFICATIONS  
  For Daily Alerts

  ಅಶ್ವತ್ ನಾರಾಯಣ ಜೊತೆ ತಮಿಳಿನಾಡಿನ ದೇವಸ್ಥಾನಕ್ಕೆ ಭೇಟಿ ನೀಡಿದ ಯಶ್

  |

  ರಾಕಿಂಗ್ ಸ್ಟಾರ್ ಯಶ್ ಮತ್ತು ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ ಇಬ್ಬರು ತಮಿಳುನಾಡಿನಲ್ಲಿರುವ ಶನೀಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

  ಇದು ಯಶ್ ರಾಜಕೀಯ ಪ್ರವೇಶದ ಸುಳಿವಾ..? | Filmibeat kannada

  ಯಶ್ ಮತ್ತು ಅಶ್ವತ್ ನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶೇಷ ಹೆಲಿಕಾಫ್ಟರ್ ಮೂಲಕ ಯಶ್ ಮತ್ತು ಡಿಸಿಎಂ ತಮಿಳುನಾಡಿನ ಕಾರೈಕಲ್ ಜಿಲ್ಲೆಯ ತಿರುನಲ್ಲೂರಿನಲ್ಲಿರುವ ಶನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

  ಕೆಜಿಎಫ್ 2 ಚಿತ್ರೀಕರಣ ಮುಗಿದರೂ ಮನೆಗೆ ಹೋಗದೆ ಹೋಟೆಲ್‌ನಲ್ಲಿ ಉಳಿದ ಯಶ್!?ಕೆಜಿಎಫ್ 2 ಚಿತ್ರೀಕರಣ ಮುಗಿದರೂ ಮನೆಗೆ ಹೋಗದೆ ಹೋಟೆಲ್‌ನಲ್ಲಿ ಉಳಿದ ಯಶ್!?

  ಡಿಸಿಎಂ ಜೊತೆ ರಾಕಿಂಗ್ ಸ್ಟಾರ್ ದಿಢೀರ್ ದೇವಸ್ಥಾನ ಪ್ರವಾಸ ಹಿನ್ನೆಲೆ ಹಲವು ರೀತಿಯ ಚರ್ಚೆಗಳು ಶುರುವಾಗಿದೆ. ಈ ಹಿಂದಿನಿಂದಲೂ ಯಶ್ ಅವರ ರಾಜಕೀಯ ಪ್ರವೇಶದ ಕುರಿತು ಸುದ್ದಿಯಾಗುತ್ತಲೇ ಇದೆ. ಯಶೋಮಾರ್ಗದ ಮೂಲಕ ಉತ್ತರ ಕರ್ನಾಟಕದ ಹಲವು ಹಳ್ಳಿಗಳಿಗೆ ನೀರು ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಶ್ ರಾಜಕೀಯ ಪ್ರವೇಶಕ್ಕೆ ಎಲ್ಲ ತಯಾರಿ ನಡೆಸುತ್ತಿದ್ದಾರೆ ಎಂಬ ಅಭಿಪ್ರಾಯವೂ ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ.

  ಭಾರತದ ಬಹುನಿರೀಕ್ಷೆಯ ಕೆಜಿಎಫ್ ಸಿನಿಮಾದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಸದ್ಯದ ಮಾಹಿತಿ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಹಾಗೂ ಸಂಜಯ್ ದತ್ ಅವರ ಭಾಗದ ಶೂಟಿಂಗ್ ಮುಗಿದಿದೆ.

  ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ತೆಲುಗು ನಟ ಬಾಲಕೃಷ್ಣ?ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ತೆಲುಗು ನಟ ಬಾಲಕೃಷ್ಣ?

  ಬಾಕಿ ಉಳಿದಿರುವ ಕೆಲವು ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ. ಜನವರಿ ತಿಂಗಳಲ್ಲಿ ಕೆಜಿಎಫ್ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯವಾಗಲಿದೆ ಎಂದು ಹೇಳಲಾಗಿದೆ. ಆದರೆ, ಬಿಡುಗಡೆ ಬಗ್ಗೆ ಯಾವುದೇ ಮಾಹಿತಿ ಇಲ್ಲ.

  English summary
  Kannada actor Yash visited tirunallar saniswaran temple with karnataka deputy chief minister Ashwath narayana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X